ಕಾಡಾನೆ ದಾಳಿ ಸಂಭವಿಸುವುದರಿಂದ ಪಾರಾದ ಜನಪ್ರಿಯ ಗಾಯಕ

ಜನರು ಪ್ರತಿದಿನ ವಾಹನಗಳಲ್ಲಿ ಸಂಚರಿಸುತ್ತಾರೆ. ಹೀಗೆ ಸಂಚರಿಸುವಾಗ ಯಾವುದೇ ಪ್ರಾಣಿಗಳು ಕಣ್ಣಿಗೆ ಬೀಳುವುದಿಲ್ಲ. ಎಲ್ಲಿಗಾದರೂ ಪ್ರವಾಸಕ್ಕೆ ತೆರಳಿದಾಗ ಅದರಲ್ಲೂ ಅರಣ್ಯ ವ್ಯಾಪ್ತಿಯಲ್ಲಿ ಸಂಚರಿಸುವಾಗ ಕಾಡು ಪ್ರಾಣಿಗಳು ಎದುರಾಗಬಹುದು.

ಕಾಡಾನೆ ದಾಳಿ ಸಂಭವಿಸುವುದರಿಂದ ಪಾರಾದ ಜನಪ್ರಿಯ ಗಾಯಕ

ಕಾಡು ಪ್ರಾಣಿಗಳು ಎದುರಾದಾಗ ಹೆದರಿಕೆಯುಂಟಾಗುವುದು ಸಹಜ. ಇದೇ ರೀತಿಯ ಸನ್ನಿವೇಶ ಜನಪ್ರಿಯ ಗಾಯಕ ಹಾಗೂ ನಟ ವಿಜಯ್ ಯೇಸುದಾಸ್ ಹಾಗೂ ಅವರ ಕೆಲವು ಸ್ನೇಹಿತರಿಗೂ ಎದುರಾಗಿದೆ. ವಿಜಯ್ ಯೇಸುದಾಸ್ ಹಾಗೂ ಅವರ ಸ್ನೇಹಿತರು ಕಾಡಿನಲ್ಲಿ ಸಾಗುವಾಗ ಆನೆಯೊಂದು ಎದುರಾಗಿದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಾಡಾನೆ ದಾಳಿ ಸಂಭವಿಸುವುದರಿಂದ ಪಾರಾದ ಜನಪ್ರಿಯ ಗಾಯಕ

ಈ ವೀಡಿಯೊದಲ್ಲಿ ಕಾರಿನೊಳಗಿರುವವರು ಭಯಭೀತರಾಗಿರುವುದನ್ನು ಕಾಣಬಹುದು. ಕಾರಿನೊಳಗಿರುವ ವಿಜಯ್ ಯೇಸುದಾಸ್ ಹಾಗೂ ಅವರ ಸ್ನೇಹಿತರು ಈ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಾಡಾನೆ ದಾಳಿ ಸಂಭವಿಸುವುದರಿಂದ ಪಾರಾದ ಜನಪ್ರಿಯ ಗಾಯಕ

ಕಾಡು ಆನೆ ಎದುರಾದಾಗ ಯಾರೊಬ್ಬರು ಕಾರಿನಿಂದ ಕೆಳಕ್ಕೆ ಇಳಿದಿಲ್ಲ. ಕಾಡಿನ ಹಾದಿ ತುಂಬಾ ಕಿರಿದಾಗಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ವಿಜಯ್ ಯೇಸುದಾಸ್ ಹಾಗೂ ಅವರ ಸ್ನೇಹಿತರು ಚಾಲನೆ ಮಾಡುತ್ತಿದ್ದ ಕೆಂಪು ಕಾರನ್ನು ಕಚ್ಚಾ ರಸ್ತೆಯ ಮಧ್ಯದಲ್ಲಿ ನಿಲ್ಲಿಸಲಾಗಿದೆ.

ಕಾಡಾನೆ ದಾಳಿ ಸಂಭವಿಸುವುದರಿಂದ ಪಾರಾದ ಜನಪ್ರಿಯ ಗಾಯಕ

ಇದು ಯಾವ ಮಾದರಿಯ ಕಾರು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ಕಾರು ಹೊಸ ತಲೆಮಾರಿನ ಮಹೀಂದ್ರಾ ಥಾರ್ ಎಸ್‌ಯುವಿಯಂತೆ ಕಾಣಿಸುತ್ತದೆ. ಈ ಎಸ್‌ಯುವಿಯು ಆಫ್ ರೋಡ್ ಪ್ರಯಾಣಕ್ಕೆ ಸೂಕ್ತವಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಾಡಾನೆ ದಾಳಿ ಸಂಭವಿಸುವುದರಿಂದ ಪಾರಾದ ಜನಪ್ರಿಯ ಗಾಯಕ

ಈ ಎಸ್‌ಯುವಿಯಲ್ಲಿದ್ದವರು ಕಾಡು ಆನೆಯನ್ನು ನೋಡಿದ ತಕ್ಷಣ ಕಾರನ್ನು ನಿಲ್ಲಿಸಿದ್ದಾರೆ. ಕಾರಿಗೆ ತುಂಬಾ ಹತ್ತಿರದಲ್ಲಿದ್ದ ಆನೆ ಕೆಲ ಕಾಲ ಕಾರನ್ನೇ ನೋಡುತ್ತಾ ತಾನು ಬಂದ ದಾರಿಯಲ್ಲಿಯೇ ಹಿಂತಿರುಗಿದೆ.

ಕಾಡಾನೆ ದಾಳಿ ಸಂಭವಿಸುವುದರಿಂದ ಪಾರಾದ ಜನಪ್ರಿಯ ಗಾಯಕ

ಸ್ವಲ್ಪ ದೂರ ಸಾಗಿ ನಿಂತು ಕೊಂಡಿದೆ. ಈ ಕಾರಿನಿಂದ ಯಾವುದೇ ಅಪಾಯವಿಲ್ಲವೆಂದು ಅರಿತ ಕಾಡು ಆನೆ ಮತ್ತೆ ಕಾರಿನತ್ತ ಧಾವಿಸಿದೆ. ಮತ್ತೆ ಕಾರಿನ ಮುಂಭಾಗಕ್ಕೆ ಬಂದು ನಿಲ್ಲುತ್ತದೆ. ಆ ಕಾಡು ಆನೆ ಕಾರನ್ನು ದಾಟಿ ಮುಂದೆ ಸಾಗಲು ದಾರಿ ಹುಡುಕುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾಡಾನೆ ದಾಳಿ ಸಂಭವಿಸುವುದರಿಂದ ಪಾರಾದ ಜನಪ್ರಿಯ ಗಾಯಕ

ಕಾರು ಕಚ್ಚಾ ರಸ್ತೆಯ ಮಧ್ಯದಲ್ಲಿ ನಿಂತಿದ್ದರಿಂದ ಆನೆಗೆ ಮುಂದೆ ಸಾಗಲು ಸಾಧ್ಯವಾಗಿಲ್ಲ. ಕಾರಿನ ಪಕ್ಕದಲ್ಲಿ ಮುಂದೆ ಸಾಗುವಷ್ಟು ಸ್ಥಳವಿದೆ ಎಂಬುದನ್ನು ಅರಿತ ಆನೆ ಕಾರಿನ ಪಕ್ಕದಲ್ಲಿ ಹಾದು ಹೋಗಿದೆ.

ಕಾಡಾನೆ ದಾಳಿ ಸಂಭವಿಸುವುದರಿಂದ ಪಾರಾದ ಜನಪ್ರಿಯ ಗಾಯಕ

ಆಗ ಕಾರಿನೊಳಗಿದ್ದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಾಡು ಆನೆ ಎದುರಾದಾಗ ವಿಜಯ್ ಯೇಸುದಾಸ್ ಹಾಗೂ ಅವರ ಸ್ನೇಹಿತರು ಕಾರಿನಿಂದ ಇಳಿಯಲಿಲ್ಲ. ಜೊತೆಗೆ ಕಾರನ್ನು ಮುಂದಕ್ಕೆ ಚಲಿಸಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಾಡಾನೆ ದಾಳಿ ಸಂಭವಿಸುವುದರಿಂದ ಪಾರಾದ ಜನಪ್ರಿಯ ಗಾಯಕ

ಈ ಕಾರಣಕ್ಕೆ ಆನೆ ಶಾಂತವಾಗಿ ಮುಂದೆ ಸಾಗಿದೆ. ಒಂದು ವೇಳೆ ಹಾರ್ನ್ ಮಾಡುವುದು, ಆಕ್ಸೆಲರೇಟರ್ ಒತ್ತುವುದು ಮಾಡಿದ್ದರೆ, ಆನೆ ರೊಚ್ಚಿಗೇಳುವ ಸಾಧ್ಯತೆಗಳಿದ್ದವು. ಇದರಿಂದ ಭಾರೀ ಅನಾಹುತಗಳಾಗುತ್ತಿದ್ದವು.

ಕಾಡಾನೆ ದಾಳಿ ಸಂಭವಿಸುವುದರಿಂದ ಪಾರಾದ ಜನಪ್ರಿಯ ಗಾಯಕ

ಆನೆಗಳು ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಕಾರಿನ ಮೇಲೆ ದಾಳಿ ಮಾಡಬಹುದು. ಈ ಕಾರಣಕ್ಕೆ ಕಾಡಿನಲ್ಲಿ ಚಾಲನೆ ಮಾಡುವಾಗ ಬಹಳ ಜಾಗರೂಕರಾಗಿ, ತಾಳ್ಮೆಯಿಂದ ಇರಬೇಕು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಆನೆಗಳಂತಹ ಪ್ರಾಣಿಗಳು ಬಲಿಷ್ಟವಾಗಿರುತ್ತವೆ. ಅವುಗಳು ಕಾರುಗಳನ್ನು ಸುಲಭವಾಗಿ ಧ್ವಂಸ ಮಾಡುತ್ತವೆ. ಅವುಗಳನ್ನು ಎದುರಿಸುವ ಉತ್ತಮ ಮಾರ್ಗವೆಂದರೆ ಅವುಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡದೇ ಇರುವುದು.

ಕಾಡಾನೆ ದಾಳಿ ಸಂಭವಿಸುವುದರಿಂದ ಪಾರಾದ ಜನಪ್ರಿಯ ಗಾಯಕ

ಜೊತೆಗೆ ಯಾವುದೇ ಶಬ್ದ ಮಾಡದೇ ಇರುವುದು. ನಾವು ಭಯದಿಂದ ಮಾಡುವ ಕೆಲಸಗಳು ಕಾಡು ಪ್ರಾಣಿಗಳಿಗೆ ಕೋಪ ಅಥವಾ ಭಯವನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಇದರಿಂದಾಗಿ ಅವುಗಳು ಜನರ ಮೇಲೆ ದಾಳಿ ಮಾಡುತ್ತವೆ. ಈ ಕಾರಣಕ್ಕೆ ಗಾಬರಿಯಾಗದೇ ಶಾಂತರಾಗಿದ್ದರೆ ಒಳ್ಳೆಯದು.

Most Read Articles

Kannada
English summary
Popular singer Vijay Yesudas escapes from elephant attack. Read in Kannada.
Story first published: Wednesday, March 3, 2021, 19:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X