ಪರಿಸರ ಸ್ನೇಹಕ್ಕೆ ಸಲಾಂ ಅಂದ ದುಬೈ ಪೊಲೀಸ್

By Nagaraja

ಈಗ ದುಬೈ ಪೊಲೀಸ್ ಸಹ ಹೆಚ್ಚೆಚ್ಚು ಪರಿಸರ ಸ್ನೇಹಿ ವಾಹನಗಳ ಖರೀದಿಯತ್ತ ಹೆಚ್ಚಿನ ಗಮನ ಕೊಡುತ್ತಿದೆ. ಇತ್ತೀಚೆಗಷ್ಟೇ ಐಕಾನಿಕ್ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರನ್ನು ತಮ್ಮದಾಗಿಸಿಕೊಂಡಿದ್ದ ವಿಶ್ವದ ಅತಿ ಶ್ರೀಮಂತ ದುಬೈ ಪೊಲೀಸ್ ಈಗ ಪೋರ್ಷೆ ಪನಮೆರಾ ವಾಹನವನ್ನು ತನ್ನ ತೆಕ್ಕೆಗೆ ಸೇರಿಕೊಂಡಿದೆ.

ಈಗಾಗಲೇ ಗಸ್ತು ನಿರ್ವಹಣೆಗೆ ಸಾಲು ಸಾಲು ಹೈ ಎಂಡ್ ವಾಹನಗಳನ್ನು ತನ್ನ ಸಾಲಿನಲ್ಲಿ ಸೇರಿಸಿಕೊಂಡಿರುವ ದುಬೈ ಪೊಲೀಸ್ ಪಾಲಿಗಿದು ಹೊಸ ಅನುಭವವಾಗಲಿದೆ. ಅಂದ ಹಾಗೆ ಹೊಚ್ಚ ಹೊಸತಾದ ಮೂರು ಪನಮೆರಾ ಎಸ್ ಇ ಹೈಬ್ರಿಡ್ ಮಾದರಿಗಳು ದುಬೈ ಪೊಲೀಸ್ ಬಳಿ ಸೇರಿವೆ.

ಪರಿಸರ ಸ್ನೇಹಕ್ಕೆ ಒಗ್ಗಿದ ದುಬೈ ಪೊಲೀಸ್

ಪರಿಸರ ಸ್ನೇಹಿ ವಾಹನಗಳನ್ನು ಪ್ರೋತ್ಸಾಹಿಸಲಾಗುವುದು ಎಂಬ ದುಬೈ ಸರಕಾರದ ಘೋಷಣೆಯ ಬೆನ್ನಲ್ಲೇ ದುಬೈ ಪೊಲೀಸ್ ನಿಂದ ಇಂತಹದೊಂದು ಪೂರಕವಾದ ಬೆಳವಣಿಗೆ ಕಂಡುಬಂದಿದೆ.

ಪರಿಸರ ಸ್ನೇಹಕ್ಕೆ ಒಗ್ಗಿದ ದುಬೈ ಪೊಲೀಸ್

ಪೋರ್ಷೆ ಹೈಬ್ರಿಡ್ ಕಾರು ಬರೋಬ್ಬರಿ 416 ಅಶ್ವಶಕ್ತಿ ಉತ್ಪಾದಿಸಲಿದೆ. ಅಲ್ಲದೆ 5.5 ಸೆಕೆಂಡುಗಳಲ್ಲಿ ಗಂಟೆಗೆ ಗರಿಷ್ಠ 270 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದರಲ್ಲಿ ಪೆಟ್ರೋಲ್ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಜೋಡಣೆ ಮಾಡಲಾಗಿರುತ್ತದೆ.

ಪರಿಸರ ಸ್ನೇಹಕ್ಕೆ ಒಗ್ಗಿದ ದುಬೈ ಪೊಲೀಸ್

ಅಷ್ಟೇ ಯಾಕೆ ವಿಶೇಷ ನಂಬರ್ ಪ್ಲೇಟ್ ಸಹ ಪೋರ್ಷೆ ಪನಮೆರಾ ಹೈಬ್ರಿಡ್ ಕಾರುಗಳಿಗೆ ಜೋಡಣೆ ಮಾಡಲಾಗಿದೆ. ಎರಡು ಕಾರುಗಳು ಅನುಕ್ರಮವಾಗಿ '444' ಹಾಗೂ '888' ಫ್ಯಾನ್ಸಿ ನಂಬರ್ ಪಡೆದುಕೊಂಡಿದೆ (ಚಿತ್ರದಲ್ಲಿ ಕಾಣಬಹುದು).

ಪರಿಸರ ಸ್ನೇಹಕ್ಕೆ ಒಗ್ಗಿದ ದುಬೈ ಪೊಲೀಸ್

ನೂತನ ಪೋರ್ಷೆ ಪನಮೆರಾ ಹೈಬ್ರಿಡ್ ಕಾರುಗಳು ದುಬೈ ಪೊಲೀಸ್ ಗೆ ಇನ್ನಷ್ಟು ಶಕ್ತಿ ತುಂಬಿದೆ. ಇದರೊಂದಿಗೆ ಜಗತ್ತಿನ ಬಲಾಢ್ಯ ರಕ್ಷಣಾ ವಿಭಾಗ ಎಂಬ ಪಟ್ಟವನ್ನು ಭದ್ರವಾಗಿಸಿದೆ.

ಪರಿಸರ ಸ್ನೇಹಕ್ಕೆ ಒಗ್ಗಿದ ದುಬೈ ಪೊಲೀಸ್

ಅಂದ ಹಾಗೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು. ದೇಶದಲ್ಲಿ ಇದರ ಬೆಲೆ 2.29 ಕೋಟಿ ರು.ಗಳಾಗಿದೆ.

ಪರಿಸರ ಸ್ನೇಹಕ್ಕೆ ಒಗ್ಗಿದ ದುಬೈ ಪೊಲೀಸ್

ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರು 1499 ಸಿಸಿ, 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಎಲೆಕ್ಟ್ರಿಕ್ ಮೋಟಾರು ಕೂಡಾ ಹೊಂದಿರುತ್ತದೆ. ಇವೆರಡು ಜೊತೆ ಸೇರಿ ಗರಿಷ್ಠ 357 ಅಶ್ವಶಕ್ತಿ (570 ತಿರುಗುಬಲ) ಉತ್ಪಾದಿಸಲಿದೆ.

ಮುಂದಕ್ಕೆ ಓದಿ - ದುಬೈ ಪೊಲೀಸ್ ತೆಕ್ಕೆಗೆ ಬಿಎಂಡಬ್ಲ್ಯು ಐ8

ಪರಿಸರ ಸ್ನೇಹಕ್ಕೆ ಒಗ್ಗಿದ ದುಬೈ ಪೊಲೀಸ್

ಇದಕ್ಕೂ ಮೊದಲು ಜಗತ್ತಿನ ಶ್ರೀಮಂತ ರಕ್ಷಣಾ ವಿಭಾಗವಾಗಿರುವ ದುಬೈ ಪೊಲೀಸ್, ಟೊಯೊಟಾ ಲ್ಯಾಂಡ್ ಕ್ರೂಸರ್ ಹಾಗೂ ಲೆಕ್ಸಸ್ ಸೂಪರ್ ಕಾರುಗಳನ್ನು ಖರೀದಿಸಿತ್ತು.

ಮುಂದಕ್ಕೆ ಓದಿ - ಜಗತ್ತಿನ ಶ್ರೀಮಂತ ರಕ್ಷಣಾ ಇಲಾಖೆ

Most Read Articles

Kannada
English summary
Porsche‬ Panamera eco-friendly joins ‪Dubai‬ Police's fleet of patrol cars.
Story first published: Tuesday, April 14, 2015, 16:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X