ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್‌

ಕರೋನಾ ವೈರಸ್ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕರೋನಾ ವೈರಸ್ ಸಾರ್ವಜನಿಕ ಶೌಚಾಲಯಗಳ ಮೂಲಕವೂ ಹರಡಬಹುದೆಂಬ ಭಯದಿಂದ ಜನರು ದೂರ ಪ್ರಯಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್‌

ದೂರ ಪ್ರಯಾಣಕ್ಕೆ ಹೋಗಲು ಬಯಸುವವರಿಗಾಗಿ ಮಹೀಂದ್ರಾ ಬೊಲೆರೊ ಎಸ್‌ಯುವಿಯಲ್ಲಿ ಪೋರ್ಟಬಲ್ ಶೌಚಾಲಯವನ್ನು ಅಳವಡಿಸಲಾಗಿದೆ.ಕರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಹೊಸ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಕೇರಳದ ಓಜಸ್ ಆಟೋಮೊಬೈಲ್ಸ್, ಟಾಯ್ಲೆಟ್ ಸೀಟ್ ಅನ್ನು ಮಹೀಂದ್ರಾ ಬೊಲೆರೊದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದೆ. ಇದಕ್ಕಾಗಿ ಹಿಂಭಾಗದಲ್ಲಿರುವ ಸೀಟನ್ನು ತೆಗೆದುಹಾಕಲಾಗಿದೆ. ಇದರಿಂದ ಬೂಟ್ ಸ್ಪೇಸ್ ಸಹ ಕಡಿಮೆಯಾಗಿದೆ.

ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್‌

ಸೀಟು ಬೇಕೆಂದೆನಿಸಿದರೆ ಪುನಃ ಅಳವಡಿಸಿಕೊಳ್ಳಬಹುದು. ಇದಕ್ಕೆ ಹೆಚ್ಚಿನ ಶ್ರಮ ಪಡುವ ಅಗತ್ಯವಿರುವುದಿಲ್ಲ. ಈ ಶೌಚಾಲಯವು ಫ್ಲಶ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ. ಸೋಂಕಿನ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ಟಚ್‌ನಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್‌

ಫ್ಲಶ್ ಚಾಲನೆ ಮಾಡಲು 12 ವೋಲ್ಟ್ ಮೋಟರ್ ಅನ್ನು ಅಳವಡಿಸಲಾಗಿದೆ. ಫ್ಲಶ್ ಮಾಡಲು ಈ ಮೋಟರ್ ಕಾರಿನ ಬ್ಯಾಟರಿಯಿಂದ ಪವರ್ ಪಡೆಯುತ್ತದೆ. ಎರಡು ಅಲ್ಯೂಮಿನಿಯಂ ಟ್ಯಾಂಕ್‌ಗಳನ್ನು ನೀಡಲಾಗಿದ್ದು, ಒಂದರಲ್ಲಿ ಬಳಸಲು ಯೋಗ್ಯವಾದ ನೀರಿದ್ದರೆ, ಮತ್ತೊಂದರಲ್ಲಿ ಬಳಕೆಗೆ ಯೋಗ್ಯವಲ್ಲದ ನೀರಿದೆ.

ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್‌

ಹೆಚ್ಚು ಕಾಲ ಬಾಳಿಕೆ ಬರಲಿ ಎಂಬ ಕಾರಣಕ್ಕೆ ಈ ಟ್ಯಾಂಕ್ ಅನ್ನು ಜಿಆರ್‌ಪಿ ಕೋಟೆಡ್ ಅಲ್ಯೂಮಿನಿಯಂನೊಂದಿಗೆ ತಯಾರಿಸಲಾಗಿದೆ. ಈ ಟಾಯ್ಲೆಟ್, ಪ್ಲೇನ್‌ಗಳಲ್ಲಿ ಬಳಸಲಾಗುವ ಪೋರ್ಟಬಲ್ ಟಾಯ್ಲೆಟ್‌ನಂತಿದೆ. ಸೋಪ್, ಟವೆಲ್ ಹಾಗೂ ಹ್ಯಾಂಡ್ ಸ್ಯಾನಿಟೈಜರ್‌ಗಳನ್ನಿಡಲು ಸ್ಥಳಾವಕಾಶ ನೀಡಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್‌

ಮಹೀಂದ್ರಾ ಬೊಲೆರೊದಲ್ಲಿ ಅಳವಡಿಸಲಾಗಿರುವ ಈ ಪೋರ್ಟಬಲ್ ಟಾಯ್ಲೆಟ್ ಬೆಲೆ ಸುಮಾರು ರೂ.65,000ಗಳಾಗುತ್ತದೆ. ಕೊನೆಯ ಸೀಟಿನ ಬಳಿಯಿರುವ ವಿಂಡೊಗಳು ಸ್ಕ್ರೀನ್‌ಗಳನ್ನು ಹೊಂದಿವೆ. ಈ ಪೋರ್ಟಬಲ್ ಟಾಯ್ಲೆಟ್ ಅನ್ನು ಮಹೀಂದ್ರಾ ಬೊಲೆರೊದಲ್ಲಿ ಮಾತ್ರವಲ್ಲದೇ ಫ್ಲೋರ್‌ನಿಂದ ರೂಫ್‌ವರೆಗೆ 40 ಇಂಚುಗಳಷ್ಟು ಗಾತ್ರ ಹೊಂದಿರುವ ಯಾವುದೇ ಕಾರಿನಲ್ಲಿ ಅಳವಡಿಸಬಹುದು.

ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್‌

ಮಹೀಂದ್ರಾ ಬೊಲೆರೊ ಕಾರಿನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡದೇ ಈ ಟಾಯ್ಲೆಟ್ ಅನ್ನು ಅಳವಡಿಸಲಾಗಿದೆ. ವಿಭಿನ್ನವಾಗಿರುವ ಈ ಯೋಜನೆಯನ್ನು ಆನಂದ್ ಮಹೀಂದ್ರಾ ಕೂಡ ಶ್ಲಾಘಿಸಿದ್ದಾರೆ. ಓಜಸ್ ಆಟೋಮೊಬೈಲ್ ಕಾರುಗಳನ್ನು ಮಾಡಿಫೈಗೊಳಿಸುವ ಜನಪ್ರಿಯ ಕಂಪನಿಯಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್‌

ಕರೋನಾ ಬಿಕ್ಕಟ್ಟಿನ ಈ ಸಂಕಷ್ಟದ ಸಂದರ್ಭದಲ್ಲಿ ದೂರ ಪ್ರಯಾಣ ಮಾಡಲು ಬಯಸುವವರಿಗೆ ಈ ಪೋರ್ಟಬಲ್ ಟಾಯ್ಲೆಟ್‌ನಿಂದ ಅನುಕೂಲವಾಗಲಿದೆ.

ಚಿತ್ರಕೃಪೆ: ಮನೋರಮಾ ಆನ್‌ಲೈನ್

Most Read Articles

Kannada
English summary
Portable toilet seat fitted in Mahindra Bolero boot. Read in Kannada.
Story first published: Thursday, June 25, 2020, 20:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X