ಯಮ ಸ್ವರೂಪಿಯಾದ ರಸ್ತೆ ಗುಂಡಿಗಳು - ಜನಸಾಮಾನ್ಯರ ಜೀವಕ್ಕಿಲ್ಲವೇ ಬೆಲೆ.?

ಮಳೆಗಾಲ ಕೆಲವರಿಗೆ ಸಂತೋಷವನ್ನು ತಂದರೆ, ಇನ್ನು ಕೆಲವರಿಗೆ ಭಾರಿ ನಷ್ಟವನ್ನು ತರುತ್ತದೆ. ಸಾಧಾರಣವಾಗಿ ಮಳೆಗಾಲದಲ್ಲಿ ನೆಂದ ರೋಡುಗಳ ಮೇಲೆ ವಾಹನಗಳ ಸವಾರಿ ಎಂದರೆ ನಿಜವಾಗಿಯು ಸಾಹವೆ ಎನ್ನಬಹುದು.

By Rahul Ts

ಮಳೆಗಾಲವು ಕೆಲವರಿಗೆ ಸಂತೋಷವನ್ನು ತಂದ್ರೆ ಇನ್ನು ಕೆಲವರಿಗೆ ಭಾರೀ ನಷ್ಟವನ್ನು ತರುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಕೆಸರು ಗದ್ದೆಗಳಾಗಿ ಪರಿವರ್ತನೆಯಾಗುವ ರಸ್ತೆಗಳಲ್ಲಿ ವಾಹನಗಳ ಸವಾರಿಯೂ ನಿಜವಾಗಿಯೂ ಹರಸಾಹಸವೇ ಎನ್ನಬಹುದು. ಅದರಲ್ಲಿಯೂ ಗುಂಡಿಗಳಿರುವ ಭಾರತೀಯ ರಸ್ತೆಗಳಲ್ಲಿ ಪ್ರಯಾಣಿಸುವುದೆಂದರೇ ಜೀವ ಕೈಯಲ್ಲಿ ಹಿಡಿದು ಮುಂದೆ ಸಾಗುವ ಪರಿಸ್ಥಿತಿಯಿದೆ.

ಯಮ ಸ್ವರೂಪಿಯಾದ ರಸ್ತೆ ಗುಂಡಿಗಳು - ಜನಸಾಮಾನ್ಯರ ಜೀವಕ್ಕಿಲ್ಲವೇ ಬೆಲೆ.?

ದೇಶವ್ಯಾಪ್ತಿಯಲ್ಲಿನ ಎಲ್ಲಾ ನಗರ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಹಲವು ನಗರಗಳಲ್ಲಿನ ರೋಡಿನಲ್ಲಿರುವ ಗುಂಡಿಗಳು ಎಷ್ಟೋ ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ರೋಡಿನ ಮೇಲಿರುವ ಗುಂಡಿಗಳ ಕಾರಣದಿಂದಾಗಿ ಪ್ರಾಣ ಕಳೆದುಕೊಂಡವರ ಕುರಿತಾತ ವೀಡಿಯೊಗಳು ದಿನಕ್ಕೊಂದು ಬಹಿರಂಗಗೊಳ್ಳುತ್ತಲೇ ಇದೆ.

ಯಮ ಸ್ವರೂಪಿಯಾದ ರಸ್ತೆ ಗುಂಡಿಗಳು - ಜನಸಾಮಾನ್ಯರ ಜೀವಕ್ಕಿಲ್ಲವೇ ಬೆಲೆ.?

ಮಾಡದ ತಪ್ಪಿಗೆ ವಾಹನ ಚಾಲಕರು ರೋಡಿನ ಮೇಲೆ ತಮ್ಮ ಪ್ರಾಣ ಬಿಡುತ್ತಿದ್ದಾರೆ. ಕೆಲ ವಾರಗಳ ಹಿಂದೆ ಒಂದು ಜೋಡಿಯು ಬೈಕ್‍‍ನ ಮೇಲೆ ಹೋಗುತ್ತಿರುವಾಗ , ರಸ್ತೆಯಲ್ಲಿ ಗುಂಡಿ ಇರುವ ಕಾರಣ ಕಂಟ್ರೋಲ್ ತಪ್ಪಿ ಕೆಳಕ್ಕೆ ಬಿದ್ದು, ಬೈಕ್‍‍ನಲ್ಲಿದ್ದ ಮಹಿಳೆ ಮೇಲೆ ಬಸ್ ಹಾಯ್ದುಹೋದ ಪರಿಣಾಮ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ.

ಯಮ ಸ್ವರೂಪಿಯಾದ ರಸ್ತೆ ಗುಂಡಿಗಳು - ಜನಸಾಮಾನ್ಯರ ಜೀವಕ್ಕಿಲ್ಲವೇ ಬೆಲೆ.?

ಇದೊಂದೆ ಅಲ್ಲ, ಈ ಘಟನೆಯು ನಡೆದ ಒಂದೇ ವಾರದ ಅಂತರದಲ್ಲಿ ಈ ಮಾದರಿಯಲ್ಲೆ ಮೂವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಬೆಳಕಿಗೆ ಬಾರದ ಇಂತಹ ಸಂಘಟನೆಗಳು ಅದೇಷ್ಟೊ ಇದೆ. ದೇಶವ್ಯಾಪ್ತಿಯಲ್ಲಿನ ಎಲ್ಲಾ ಪ್ರಧಾನ ನಗರಗಳಲ್ಲಿರುವ ಗುಂಡಿಗಳು ಅಧಿಕ ಸಂಖ್ಯೆಯಲ್ಲಿ ಪ್ರಾಣವನ್ನು ತೆಗೆದುಕೊಂಡಿದೆ.

ಯಮ ಸ್ವರೂಪಿಯಾದ ರಸ್ತೆ ಗುಂಡಿಗಳು - ಜನಸಾಮಾನ್ಯರ ಜೀವಕ್ಕಿಲ್ಲವೇ ಬೆಲೆ.?

ಭಾರತದಲ್ಲಿ ಕೇವಲ ರಸ್ತೆಯ ಮೇಲಿರುವ ಗುಂಡಿಗಳ ಕಾರಣದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯನ್ನ ಪರಿಶೀಲಿಸಿದರೆ, ಕಳೆದ ವರ್ಷ ಭಾರತದಲ್ಲಿ ಸುಮಾರು 3,597 ಮಂದಿ ಜೀವ ಕಳೆದುಕೊಂಡಿದ್ದಾರೆ. ಅಂದ್ರೆ ದಿನಕ್ಕೆ ಸುಮಾರು 10 ಮಂದಿ ರಸ್ತೆಯಲ್ಲಿನ ಗುಂಡಿಯ ಕಾರಣದಿಂದಲೇ ಪ್ರಾಣ ಬಿಡುತ್ತಿದ್ದಾರೆ.

ಯಮ ಸ್ವರೂಪಿಯಾದ ರಸ್ತೆ ಗುಂಡಿಗಳು - ಜನಸಾಮಾನ್ಯರ ಜೀವಕ್ಕಿಲ್ಲವೇ ಬೆಲೆ.?

ಗುಂಡಿ ಇರುವ ರಸ್ತೆಗಳ ಕಾರಣದಿಂದಾಗಿ 2016ರಲ್ಲಿ ಮರಣ ಹೊಂದಿರುವ ಸಂಖ್ಯೆಯನ್ನು ಹೋಲಿಸಿದರೆ, 2017ರಲ್ಲಿ ಎರಡರಷ್ಟು ಅಧಿಕಗೊಂಡಿದೆ. ಮತ್ತೆ 2018ರಲ್ಲಿ ಈ ಸಂಖ್ಯೆಯು ಎಷ್ಟು ಇರುತ್ತೆ ಎಂದು ಊಹಿಸಲು ಅಸಾಧ್ಯ. ದೇಶವ್ಯಾಪ್ತಿಯಲ್ಲಿ ಬೀಳುತ್ತಿರುವ ಧಾರಕಾರ ಮಳೆಯಿಂದಾಗಿ ಈಗಾಗಲೇ ಹಲವರು ತಮ್ಮ ಪ್ರಾಣಕಳೆದುಕೊಂಡಿದ್ದಾರೆ.

ಯಮ ಸ್ವರೂಪಿಯಾದ ರಸ್ತೆ ಗುಂಡಿಗಳು - ಜನಸಾಮಾನ್ಯರ ಜೀವಕ್ಕಿಲ್ಲವೇ ಬೆಲೆ.?

ಗುಂಡಿಗಳಿರುವ ರಸ್ತೆಗಳ ಕಾರಣದಿಂದಾಗಿ ವರ್ಷಕ್ಕೆ ಸಾವಿರದ ಸಂಖ್ಯೆಯಲ್ಲಿ ಜನ ಸಾವನ್ನಪ್ಪುತ್ತಿರುವುದು ಅರಗಿಸಿಕೊಳ್ಳಲಾದ ಕಹಿ ಸತ್ಯ. ಇದಲ್ಲದೇ ಪ್ರಪಂಚದ ಅಂಕಿಅಂಶಗಳೊಂದಿಗೆ ಹೋಲಿಕೆ ಮಾಡಿದ್ರೆ ಗುಂಡಿಯಿರುವ ರಸ್ತೆಯ ಕಾರಣದಿಂದಾಗಿಯೇ ಜೀವ ಕಳೆದುಕೊಂಡವರ ಸಂಖ್ಯೆ ಅಧಿಕವಾಗಿಯೇ ಇದೆ ಎನ್ನಬಹುದು.

ಯಮ ಸ್ವರೂಪಿಯಾದ ರಸ್ತೆ ಗುಂಡಿಗಳು - ಜನಸಾಮಾನ್ಯರ ಜೀವಕ್ಕಿಲ್ಲವೇ ಬೆಲೆ.?

ಡ್ರೈನೇಜ್ ಸಿಸ್ಟಮ್, ರಸ್ತೆ ನಿರ್ಮಾಣದ ಗುಣಮಟ್ಟ, ಸರಿಯಾದ ವ್ಯವಸ್ಥೆ ಇಲ್ಲದೆಯೇ ರಸ್ತೆ ನಿರ್ಮಿಸಲಾಗುತ್ತಿರುವ ಕಾರಣದಿಂದಾಗಿ ರಹದಾರಿಗಳು ಕಳಪೆಯಾಗುತ್ತಿವೆ. ಇದರೊಂದಿಗೆ ಪ್ರತೀ ವರ್ಷ ಮಳೆಗಾಲವನ್ನು ಎದುರುಗೊಳ್ಳಲೂ ನಗರ ಪಾಲಿಕೆಯವರು ಮತ್ತು ನಗರ ಅಭಿವೃದ್ಧಿ ಇಲಾಖೆಯ ಅಧಿಕಾರುಗಳು ಸೋಲುತ್ತಲೇ ಇದ್ದಾರೆ.

ಯಮ ಸ್ವರೂಪಿಯಾದ ರಸ್ತೆ ಗುಂಡಿಗಳು - ಜನಸಾಮಾನ್ಯರ ಜೀವಕ್ಕಿಲ್ಲವೇ ಬೆಲೆ.?

ಮಳೆಗಾಲದಲ್ಲಿ ವಾಹನ ಚಾಲಕರು ಹೆಚ್ಚು ಜಾಗರೂಕತೆಯ ಅಂಶಗಳನ್ನು ಅನುಸರಿಸಬೇಕಾಗುತ್ತದೆ. ನೀರಿನಿಂದ ತುಂಬಿದ ರಸ್ತೆಯ ಮೇಲೆ ಹೋಗುವುದು, ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್ ಮಾಡುವುದು ಇಂತಹ ಕಾರ್ಯಗಳನ್ನು ಮಾಡದಿರಿ ಮತ್ತು ಓವರ್‍‍ಟೇಕಿಂಗ್ ಮಾಡುವಾಗ ಜಾಗರೂಕತೆಯಿಂದ ಮಾಡಿದ್ದಲ್ಲಿ ಸುರಕ್ಷಿತವಾಗಿ ನಿಮ್ಮ ಗಮ್ಯವನ್ನು ತಲುಪಬಹುದು.

ಯಮ ಸ್ವರೂಪಿಯಾದ ರಸ್ತೆ ಗುಂಡಿಗಳು - ಜನಸಾಮಾನ್ಯರ ಜೀವಕ್ಕಿಲ್ಲವೇ ಬೆಲೆ.?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಮಳೆಗಾಲದಲ್ಲಿ ವಾಹನ ಚಾಲನೆಗೂ ಮುನ್ನ ಈ ಎಚ್ಚರಿಕೆ ಕ್ರಮಗಳನ್ನ ತಪ್ಪದೇ ಪಾಲಿಸಿ..!

ಮಳೆಗಾಲದಲ್ಲಿ ಘಾಟ್ ರಸ್ತೆಯಲ್ಲಿ ಸುರಕ್ಷಿತ ಚಾಲನೆಗಾಗಿ ಅಮೂಲ್ಯ ಟಿಪ್ಸ್..

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಲಿಯಾದ ಮತ್ತೊಂದು ಜೀವ..!?

Most Read Articles

Kannada
Read more on off beat traffic
English summary
Potholes on indian roads resulted in 3597 deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X