ಕನಸಿನ ಕಾರು ಖರೀದಿಯನ್ನು ನನಸು ಮಾಡಿಕೊಂಡ ಪೈಲಟ್

ಪ್ರತಿಯೊಬ್ಬರಿಗೂ ತಮ್ಮದೇ ಆದ ಕಾರು ಖರೀದಿಸಬೇಕೆಂಬ ಕನಸಿರುತ್ತದೆ. ಬಹುತೇಕ ಜನರು ಬಹುಬೇಗನೆ ಈ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ತಮ್ಮ ಕಠಿಣ ಪರಿಶ್ರಮ ಹಾಗೂ ಸಮರ್ಪಣೆಯೊಂದಿಗೆ ತಮ್ಮ ಕನಸುಗಳನ್ನು ಈಡೇರಿಸಿ ಕೊಳ್ಳುತ್ತಾರೆ.

ಕನಸಿನ ಕಾರು ಖರೀದಿಯನ್ನು ನನಸು ಮಾಡಿಕೊಂಡ ಪೈಲಟ್

ತಮ್ಮ ಬಾಲ್ಯದಿಂದಲೂ ಖರೀದಿಸಬೇಕೆಂದಿದ್ದ ಐಷಾರಾಮಿ ಕಾರನ್ನು ಖರೀದಿಸಿದ ಸಾಮಾನ್ಯ ಕುಟುಂಬದ ಯುವಕನ ಕಥೆಯನ್ನು ಈ ಲೇಖನದಲ್ಲಿ ನೋಡೋಣ. ಸಾಮಾನ್ಯ ಕುಟುಂಬಕ್ಕೆ ಸೇರಿದ ತಪೇಶ್ ಕುಮಾರ್ ಏರ್‌ಲೈನ್ಸ್ ಕಂಪನಿಯೊಂದರ ಪೈಲಟ್. ಬಾಲ್ಯದಿಂದಲೂ ಅವರು ಜಾಗ್ವಾರ್ ಐಷಾರಾಮಿ ಕಾರು ಖರೀದಿಸಬೇಕೆಂದು ಕನಸು ಕಂಡಿದ್ದರು.

ಕನಸಿನ ಕಾರು ಖರೀದಿಯನ್ನು ನನಸು ಮಾಡಿಕೊಂಡ ಪೈಲಟ್

ತಮ್ಮ ಕುಟುಂಬವು ಸಾಮಾನ್ಯವಾಗಿದ್ದರಿಂದ ತಮ್ಮ ಬಳಿ ಬೈಕ್ ಕೂಡ ಇರಲಿಲ್ಲ. ಇನ್ನು ಐಷಾರಾಮಿ ಕಾರು ಖರೀದಿಸುವುದು ಕೇವಲ ಕನಸಾಗಿತ್ತು ಎಂದು ತಪೇಶ್ ಹೇಳುತ್ತಾರೆ. ತಪೇಶ್‌ರವರಿಗೆ ಪೈಲಟ್‌ ಕೆಲಸ ಸಿಕ್ಕಿತು. ಕೆಲಸಕ್ಕೆ ಸೇರಿದ ನಂತರ ತಮ್ಮ ಕನಸಿನ ಕಾರ್ ಅನ್ನು ಖರೀದಿಸಲು ಹಣ ಕೂಡಿಟ್ಟರು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕನಸಿನ ಕಾರು ಖರೀದಿಯನ್ನು ನನಸು ಮಾಡಿಕೊಂಡ ಪೈಲಟ್

ಹಲವು ವರ್ಷಗಳ ಕಾಲ ಹಣವನ್ನು ಉಳಿಸಿದ ನಂತರ, ತಮ್ಮ ಕನಸಿನ ಜಾಗ್ವಾರ್ ಎಕ್ಸ್‌ಜೆ-ಎಲ್ ಕಾರನ್ನು ಖರೀದಿಸಿದರು. ಅವರು ಸೆಕೆಂಡ್ ಹ್ಯಾಂಡ್ ಕಾರ್ ಅನ್ನು ಖರೀದಿಸಿದ್ದರೂ ಜಾಗ್ವಾರ್‌ನಂತಹ ಐಷಾರಾಮಿ ಕಾರು ಖರೀದಿಸುವುದು ಸಾಮಾನ್ಯ ಭಾರತೀಯನಿಗೆ ದೊಡ್ಡ ವಿಷಯವಾಗಿದೆ.

ಕನಸಿನ ಕಾರು ಖರೀದಿಯನ್ನು ನನಸು ಮಾಡಿಕೊಂಡ ಪೈಲಟ್

ಜಾಗ್ವಾರ್ ಎಕ್ಸ್‌ಜೆ-ಎಲ್ ಐಷಾರಾಮಿ ಸೆಡಾನ್ ಕಾರ್ ಆಗಿದ್ದು, ಈ ಕಾರಿನ ಬೆಲೆ ರೂ.1 ಕೋಟಿಗಿಂತ ಹೆಚ್ಚಾಗಿದೆ. ವರ್ಷಗಳು ಕಳೆದಂತೆ ಐಷಾರಾಮಿ ಕಾರುಗಳ ಬೆಲೆ ಸಾಮಾನ್ಯ ಕಾರುಗಳಿಗಿಂತ ಹೆಚ್ಚು ಕುಸಿಯುತ್ತದೆ. ಒಂದು ಅಂದಾಜಿನ ಪ್ರಕಾರ, ಈ ಕಾರುಗಳ ಬೆಲೆ ರೂ.20 ಲಕ್ಷ ಅಥವಾ ಅದಕ್ಕಿಂತ ಕಡಿಮೆಯಾಗುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಜಾಗ್ವಾರ್ ಎಕ್ಸ್‌ಜೆ-ಎಲ್ ಮಾದರಿ ಕಾರ್ ಅನ್ನು ಈಗ ಭಾರತದಲ್ಲಿ ಸ್ಥಗಿತಗೊಳಿಸಲಾಗಿದೆ. ಈ ಕಾರಿನಲ್ಲಿ 5.0-ಲೀಟರ್ ವಿ 8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 385 ಬಿಹೆಚ್‌ಪಿ ಪವರ್ ಹಾಗೂ 625 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಐಷಾರಾಮಿ ಇಂಟಿರಿಯರ್ ಸೇರಿದಂತೆ ಹಲವಾರು ಫೀಚರ್‌ಗಳನ್ನು ಹೊಂದಿದೆ.

ಕನಸಿನ ಕಾರು ಖರೀದಿಯನ್ನು ನನಸು ಮಾಡಿಕೊಂಡ ಪೈಲಟ್

ಹೊಸ ಅಥವಾ ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರುಗಳನ್ನು ಖರೀದಿಸುವಾಗ, ಅವುಗಳ ಮೆಂಟೆನೆನ್ಸ್ ಖರ್ಚು ಸಾಮಾನ್ಯ ಕಾರುಗಳಿಗಿಂತ ಹೆಚ್ಚಾಗಿರುತ್ತದೆ ಎಂಬುದನ್ನು ಗಮನಿಸಬೇಕು. ಈ ಕಾರುಗಳಲ್ಲಿರುವ ಐಷಾರಾಮಿ ಕಾರಿನ ಉಪಕರಣಗಳ ಬೆಲೆ ಲಕ್ಷಾಂತರ ರೂಪಾಯಿಗಳಾಗುತ್ತವೆ. ಇದನ್ನು ನಿರ್ವಹಿಸಲು ಹೆಚ್ಚು ಖರ್ಚಾಗುತ್ತದೆ.

Most Read Articles

Kannada
English summary
Pilot purchases his dream car. Read in Kannada.
Story first published: Monday, May 25, 2020, 16:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X