ವಿವಿಐಪಿ ಸೌಲಭ್ಯವುಳ್ಳ ಏರ್ ಇಂಡಿಯಾ ಒನ್-ಬಿ 777 ವಿಮಾನಯಾನಕ್ಕೆ ಅಧಿಕೃತ ಚಾಲನೆ

ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯವರ ಅಧಿಕೃತ ಪ್ರವಾಸಗಳಿಗಾಗಿ ವಿಶೇಷವಾಗಿ ತಯಾರಿಸಲ್ಪಟ್ಟ ಏರ್ ಇಂಡಿಯಾ ಒನ್-ಬಿ 777 ವಿಮಾನಯಾನಕ್ಕೆ ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಅವರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ವಿವಿಐಪಿ ಸೌಲಭ್ಯವುಳ್ಳ ಏರ್ ಇಂಡಿಯಾ ಒನ್-ಬಿ 777 ವಿಮಾನಯಾನಕ್ಕೆ ಚಾಲನೆ

ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಗರಿಷ್ಠ ಸುರಕ್ಷತೆ ಹೊಂದಿರುವ ಏರ್ ಇಂಡಿಯಾ ಒನ್-ಬಿ 777 ವಿಮಾನವು ಅಮೆರಿಕಾ ಅಧ್ಯಕ್ಷರು ಅಧಿಕೃತವಾಗಿ ಬಳಸುವ ಏರ್ ಫೋರ್ಸ್ ಒನ್ ಮಾದರಿಯಲ್ಲಿಯೇ ನಿರ್ಮಾಣಗೊಂಡಿದ್ದು, ಹೊಸ ವಿಮಾನವನ್ನು ಕಳೆದ ಅಕ್ಟೋಬರ್‌ ಮೊದಲ ವಾರದಲ್ಲೇ ಭಾರತಕ್ಕೆ ಹಸ್ತಾಂತರಗೊಂಡಿತ್ತು. ಇದೀಗ ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಅವರು ದೆಹಲಿಯಿಂದ ತಿರುಪತಿಗೆ ಪ್ರಯಾಣ ಬೆಳೆಸುವ ಮೂಲಕ ಏರ್ ಇಂಡಿಯಾ ಒನ್-ಬಿ 777 ವಿಮಾನಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ವಿವಿಐಪಿ ಸೌಲಭ್ಯವುಳ್ಳ ಏರ್ ಇಂಡಿಯಾ ಒನ್-ಬಿ 777 ವಿಮಾನಯಾನಕ್ಕೆ ಚಾಲನೆ

ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯವರ ಅಧಿಕೃತ ಪ್ರವಾಸಗಳಿಗೆ ಇದುವರೆಗೆ ಬೋಯಿಂಗ್-747 ವಿಮಾನವನ್ನು ಬಳಕೆ ಮಾಡುತ್ತಿದ್ದ ಏರ್ ಇಂಡಿಯಾ ಕಂಪನಿಯು ಇದೀಗ ಅತ್ಯಾಧುನಿಕ ಸೌಲಭ್ಯವುಳ್ಳ ಏರ್ ಇಂಡಿಯಾ ಒನ್-ಬಿ 777 ವಿಮಾನ ಬಳಕೆಗೆ ಚಾಲನೆ ನೀಡಿದೆ.

ವಿವಿಐಪಿ ಸೌಲಭ್ಯವುಳ್ಳ ಏರ್ ಇಂಡಿಯಾ ಒನ್-ಬಿ 777 ವಿಮಾನಯಾನಕ್ಕೆ ಚಾಲನೆ

ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ (ಎಐಇಎಸ್ಎಲ್) ವಿಭಾಗವು ಏರ್ ಇಂಡಿಯಾ ಒನ್-ಬಿ 777 ವಿಮಾನವನ್ನು ನಿರ್ವಹಣೆ ಮಾಡಲಿದ್ದು, ಬರೋಬ್ಬರಿ ರೂ. 1300 ಕೋಟಿ ವೆಚ್ಚದಲ್ಲಿ ಈ ಅಲ್ಟ್ರಾ ಸೂಪರ್ ವಿಮಾನವನ್ನು ಸಿದ್ದಪಡಿಸಲಾಗಿದೆ.

ವಿವಿಐಪಿ ಸೌಲಭ್ಯವುಳ್ಳ ಏರ್ ಇಂಡಿಯಾ ಒನ್-ಬಿ 777 ವಿಮಾನಯಾನಕ್ಕೆ ಚಾಲನೆ

ಕೇಂದ್ರ ಸರ್ಕಾರವು ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯವರ ಅಧಿಕೃತ ಪ್ರವಾಸಗಳಿಗೆ ಒಟ್ಟು ಎರಡು ಏರ್ ಇಂಡಿಯಾ ಒನ್-ಬಿ 777 ವಿಮಾನವನ್ನು ಖರೀದಿ ಮಾಡಿದ್ದು, ಸದ್ಯ ಒಂದನ್ನು ಮಾತ್ರ ಹಸ್ತಾಂತರ ಮಾಡಲಾಗಿದೆ. ಮತ್ತೊಂದು ಬೋಯಿಂಗ್ 777 ವಿಮಾನವು ಮುಂದಿನ ಕೆಲವೇ ದಿನಗಳಲ್ಲಿ ಭಾರತಕ್ಕೆ ತಲುಪಲಿದ್ದು, ಎರಡೂ ಬೋಯಿಂಗ್ 777 ವಿಮಾನಗಳಲ್ಲೂ ಎಸ್‌ಪಿಎಸ್ (ಸೆಲ್ಫ್ ಪ್ರೊಟೇಕ್ಷನ್ ಸೂಟ್‌) ಸೌಲಭ್ಯಗಳನ್ನು ಹೊಂದಿವೆ.

ವಿವಿಐಪಿ ಸೌಲಭ್ಯವುಳ್ಳ ಏರ್ ಇಂಡಿಯಾ ಒನ್-ಬಿ 777 ವಿಮಾನಯಾನಕ್ಕೆ ಚಾಲನೆ

ಎರಡೂ ವಿಮಾನಗಳು ಎಲ್ಎಐಆರ್ ಸಿಎಂ(ಲೈಟ್ ಏರ್ ಕ್ರಾಫ್ಟ್ ಇನ್ಫ್ರಾರೆಡ್ ಕೌಂಟರ್‌ ಮೆಶರ್) ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದು, ವಿವಿಐಪಿಗಳು ಪ್ರಯಾಣಿಸುವ ಈ ಎರಡು ಬೋಯಿಂಗ್ 777 ವಿಮಾನಗಳನ್ನು ಏರ್ ಇಂಡಿಯಾ ಪೈಲಟ್‌‌ಗಳ ಬದಲಿಗೆ ಭಾರತೀಯ ವಾಯುಪಡೆಯ ಪೈಲಟ್‌ಗಳು ಚಾಲನೆ ಮಾಡುತ್ತಾರೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣವೇನು?

ವಿವಿಐಪಿ ಸೌಲಭ್ಯವುಳ್ಳ ಏರ್ ಇಂಡಿಯಾ ಒನ್-ಬಿ 777 ವಿಮಾನಯಾನಕ್ಕೆ ಚಾಲನೆ

ಬೋಯಿಂಗ್ 777 ವಿಮಾನಗಳಲ್ಲಿ ವಿವಿಐಪಿಗಳು ಕಚೇರಿ ರೀತಿಯಲ್ಲಿ ಬಳಸುವಂತಹ ಸೌಲಭ್ಯಗಳನ್ನು ನೀಡಲಾಗಿದ್ದು, ಈ ವಿಮಾನವು ಮೀಟಿಂಗ್ ರೂಂ ಹಾಗೂ ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆಗಳನ್ನು ಸಹ ಹೊಂದಿದೆ.

ವಿವಿಐಪಿ ಸೌಲಭ್ಯವುಳ್ಳ ಏರ್ ಇಂಡಿಯಾ ಒನ್-ಬಿ 777 ವಿಮಾನಯಾನಕ್ಕೆ ಚಾಲನೆ

ಹಾಗೆಯೇ ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ಪ್ರತ್ಯೇಕ ಘಟಕವನ್ನು ಜೋಡಣೆ ಮಾಡಲಾಗಿದ್ದು, ಬ್ಯುಸಿನೆಸ್ ಕ್ಲಾಸ್ ಆಸನಗಳು, ವಿಡಿಯೋ ಮತ್ತು ಆಡಿಯೋ ಸಂವಹನ ವ್ಯವಸ್ಥೆ ಸೇರಿದಂತೆ ಹಲವಾರು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳನ್ನು ಬಳಕೆ ಮಾಡಲಾಗಿದೆ.

MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ವಿವಿಐಪಿ ಸೌಲಭ್ಯವುಳ್ಳ ಏರ್ ಇಂಡಿಯಾ ಒನ್-ಬಿ 777 ವಿಮಾನಯಾನಕ್ಕೆ ಚಾಲನೆ

ಮತ್ತೊಂದು ವಿಶೇಷತೆಯೆಂದರೆ ಏರ್ ಇಂಡಿಯಾ ಒನ್-ಬಿ 777 ವಿಮಾನವು ನಿರಂತರವಾಗಿ ಯಾವುದೇ ನಿಲುಗಡೆಯಿಲ್ಲದೆ 17 ಗಂಟೆಗಳ ಕಾಲ ಹಾರಾಡುವ ಸಾಮಥ್ಯ ಹೊಂದಿದ್ದು, ಬೋಯಿಂಗ್-747 ವಿಮಾನವನ್ನು ವಾಣಿಜ್ಯ ಕಾರ್ಯಾಚರಣೆಗಾಗಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

Image Source: PresidentOfIndia/Twitter

Most Read Articles

Kannada
Read more on ವಿಮಾನ plane
English summary
President Ram Nath Kovind Boards Inaugural Air India One – B777. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X