Just In
- 5 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 6 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 6 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 6 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿವಿಐಪಿ ಸೌಲಭ್ಯವುಳ್ಳ ಏರ್ ಇಂಡಿಯಾ ಒನ್-ಬಿ 777 ವಿಮಾನಯಾನಕ್ಕೆ ಅಧಿಕೃತ ಚಾಲನೆ
ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯವರ ಅಧಿಕೃತ ಪ್ರವಾಸಗಳಿಗಾಗಿ ವಿಶೇಷವಾಗಿ ತಯಾರಿಸಲ್ಪಟ್ಟ ಏರ್ ಇಂಡಿಯಾ ಒನ್-ಬಿ 777 ವಿಮಾನಯಾನಕ್ಕೆ ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಅವರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಗರಿಷ್ಠ ಸುರಕ್ಷತೆ ಹೊಂದಿರುವ ಏರ್ ಇಂಡಿಯಾ ಒನ್-ಬಿ 777 ವಿಮಾನವು ಅಮೆರಿಕಾ ಅಧ್ಯಕ್ಷರು ಅಧಿಕೃತವಾಗಿ ಬಳಸುವ ಏರ್ ಫೋರ್ಸ್ ಒನ್ ಮಾದರಿಯಲ್ಲಿಯೇ ನಿರ್ಮಾಣಗೊಂಡಿದ್ದು, ಹೊಸ ವಿಮಾನವನ್ನು ಕಳೆದ ಅಕ್ಟೋಬರ್ ಮೊದಲ ವಾರದಲ್ಲೇ ಭಾರತಕ್ಕೆ ಹಸ್ತಾಂತರಗೊಂಡಿತ್ತು. ಇದೀಗ ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಅವರು ದೆಹಲಿಯಿಂದ ತಿರುಪತಿಗೆ ಪ್ರಯಾಣ ಬೆಳೆಸುವ ಮೂಲಕ ಏರ್ ಇಂಡಿಯಾ ಒನ್-ಬಿ 777 ವಿಮಾನಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯವರ ಅಧಿಕೃತ ಪ್ರವಾಸಗಳಿಗೆ ಇದುವರೆಗೆ ಬೋಯಿಂಗ್-747 ವಿಮಾನವನ್ನು ಬಳಕೆ ಮಾಡುತ್ತಿದ್ದ ಏರ್ ಇಂಡಿಯಾ ಕಂಪನಿಯು ಇದೀಗ ಅತ್ಯಾಧುನಿಕ ಸೌಲಭ್ಯವುಳ್ಳ ಏರ್ ಇಂಡಿಯಾ ಒನ್-ಬಿ 777 ವಿಮಾನ ಬಳಕೆಗೆ ಚಾಲನೆ ನೀಡಿದೆ.

ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ (ಎಐಇಎಸ್ಎಲ್) ವಿಭಾಗವು ಏರ್ ಇಂಡಿಯಾ ಒನ್-ಬಿ 777 ವಿಮಾನವನ್ನು ನಿರ್ವಹಣೆ ಮಾಡಲಿದ್ದು, ಬರೋಬ್ಬರಿ ರೂ. 1300 ಕೋಟಿ ವೆಚ್ಚದಲ್ಲಿ ಈ ಅಲ್ಟ್ರಾ ಸೂಪರ್ ವಿಮಾನವನ್ನು ಸಿದ್ದಪಡಿಸಲಾಗಿದೆ.

ಕೇಂದ್ರ ಸರ್ಕಾರವು ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯವರ ಅಧಿಕೃತ ಪ್ರವಾಸಗಳಿಗೆ ಒಟ್ಟು ಎರಡು ಏರ್ ಇಂಡಿಯಾ ಒನ್-ಬಿ 777 ವಿಮಾನವನ್ನು ಖರೀದಿ ಮಾಡಿದ್ದು, ಸದ್ಯ ಒಂದನ್ನು ಮಾತ್ರ ಹಸ್ತಾಂತರ ಮಾಡಲಾಗಿದೆ. ಮತ್ತೊಂದು ಬೋಯಿಂಗ್ 777 ವಿಮಾನವು ಮುಂದಿನ ಕೆಲವೇ ದಿನಗಳಲ್ಲಿ ಭಾರತಕ್ಕೆ ತಲುಪಲಿದ್ದು, ಎರಡೂ ಬೋಯಿಂಗ್ 777 ವಿಮಾನಗಳಲ್ಲೂ ಎಸ್ಪಿಎಸ್ (ಸೆಲ್ಫ್ ಪ್ರೊಟೇಕ್ಷನ್ ಸೂಟ್) ಸೌಲಭ್ಯಗಳನ್ನು ಹೊಂದಿವೆ.

ಎರಡೂ ವಿಮಾನಗಳು ಎಲ್ಎಐಆರ್ ಸಿಎಂ(ಲೈಟ್ ಏರ್ ಕ್ರಾಫ್ಟ್ ಇನ್ಫ್ರಾರೆಡ್ ಕೌಂಟರ್ ಮೆಶರ್) ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದು, ವಿವಿಐಪಿಗಳು ಪ್ರಯಾಣಿಸುವ ಈ ಎರಡು ಬೋಯಿಂಗ್ 777 ವಿಮಾನಗಳನ್ನು ಏರ್ ಇಂಡಿಯಾ ಪೈಲಟ್ಗಳ ಬದಲಿಗೆ ಭಾರತೀಯ ವಾಯುಪಡೆಯ ಪೈಲಟ್ಗಳು ಚಾಲನೆ ಮಾಡುತ್ತಾರೆ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣವೇನು?

ಬೋಯಿಂಗ್ 777 ವಿಮಾನಗಳಲ್ಲಿ ವಿವಿಐಪಿಗಳು ಕಚೇರಿ ರೀತಿಯಲ್ಲಿ ಬಳಸುವಂತಹ ಸೌಲಭ್ಯಗಳನ್ನು ನೀಡಲಾಗಿದ್ದು, ಈ ವಿಮಾನವು ಮೀಟಿಂಗ್ ರೂಂ ಹಾಗೂ ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆಗಳನ್ನು ಸಹ ಹೊಂದಿದೆ.

ಹಾಗೆಯೇ ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ಪ್ರತ್ಯೇಕ ಘಟಕವನ್ನು ಜೋಡಣೆ ಮಾಡಲಾಗಿದ್ದು, ಬ್ಯುಸಿನೆಸ್ ಕ್ಲಾಸ್ ಆಸನಗಳು, ವಿಡಿಯೋ ಮತ್ತು ಆಡಿಯೋ ಸಂವಹನ ವ್ಯವಸ್ಥೆ ಸೇರಿದಂತೆ ಹಲವಾರು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳನ್ನು ಬಳಕೆ ಮಾಡಲಾಗಿದೆ.
MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ್ಯಾಪ್ ಸಿಂಗರ್

ಮತ್ತೊಂದು ವಿಶೇಷತೆಯೆಂದರೆ ಏರ್ ಇಂಡಿಯಾ ಒನ್-ಬಿ 777 ವಿಮಾನವು ನಿರಂತರವಾಗಿ ಯಾವುದೇ ನಿಲುಗಡೆಯಿಲ್ಲದೆ 17 ಗಂಟೆಗಳ ಕಾಲ ಹಾರಾಡುವ ಸಾಮಥ್ಯ ಹೊಂದಿದ್ದು, ಬೋಯಿಂಗ್-747 ವಿಮಾನವನ್ನು ವಾಣಿಜ್ಯ ಕಾರ್ಯಾಚರಣೆಗಾಗಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
Image Source: PresidentOfIndia/Twitter