India
YouTube

ಸೆಕೆಂಡ್ ಹ್ಯಾಂಡ್ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿಸಿದ ಜನಪ್ರಿಯ ನಟ

ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಪೃಥ್ವಿರಾಜ್ ಸುಕುಮಾರನ್ ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರುಗಳ ಮೇಲೆ ಹೆಚ್ಚು ಕ್ರೇಜ್ ಹೊಂದಿದ್ದಾರೆ. ನಟ ಪೃಥ್ವಿರಾಜ್ ಅವರ ಬಳಿ ಐಷಾರಾಮಿ ಮತ್ತು ಮತ್ತು ಎಸ್‌ಯುವಿ ಕಾರುಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ.

ಸೆಕೆಂಡ್ ಹ್ಯಾಂಡ್ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿಸಿದ ಜನಪ್ರಿಯ ನಟ

ಇದೀಗ ಪೃಥ್ವಿರಾಜ್ ಕಾರು ಕಲೆಕ್ಷನ್ಗೆ ಮತ್ತೊಂದು ಐಷಾರಾಮಿ ಕಾರು ಸೇರ್ಪಡೆಯಾಗಿದೆ. ಪೃಥ್ವಿರಾಜ್ ಅವರು ಲ್ಯಾಂಬೊರ್ಗಿನಿ ಉರುಸ್ ಎಸ್‌ಯುವಿಯನ್ನು ಖರೀದಿಸಿದ್ದಾರೆ. ಆದರೆ ಇದು ಸೆಕೆಂಡ್ ಹ್ಯಾಂಡ್ ವಾಹನ ಎಂಬುದು ವಿಶೇಷ. 2018 ರಲ್ಲಿ ಪೃಥ್ವಿರಾಜ್ ಖರೀದಿಸಿದ ಲ್ಯಾಂಬೊರ್ಗಿನಿ ಹುರಾಕಾನ್ ಕಾರನ್ನು ನೀಡಿ ಉರುಸ್ ಅನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಮಿನಿಮಯ ಮಾಡಿದ ಇವರ ಹುರಾಕಾನ್ ಕೇವಲ 2,000 ಕಿ.ಮೀ ಚಲಿಸಿದೆ. ಇವರು ಖರೀದಿಸಿದ ಉರುಸ್ 2,000 ಕಿ.ಮೀ ಚಲಿಸಿದೆ. ಉರುಸ್ 2019 ರಲ್ಲಿ ನೋಂದಣಿಯಾದ ವಾಹನವಾಗಿದೆ.

ಸೆಕೆಂಡ್ ಹ್ಯಾಂಡ್ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿಸಿದ ಜನಪ್ರಿಯ ನಟ

ಪ್ರೀಮಿಯಂ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಮ್ ಆದ ರಾಯಲ್ ಡ್ರೈವ್‌ನಿಂದ ಲ್ಯಾಂಬೊರ್ಗಿನಿ ಉರುಸ್ ಎಸ್‌ಯುವಿಯನ್ನು ಖರೀದಿಸಿದ್ದಾರೆ. ಕೇರಳ-ನೋಂದಾಯಿತ 2019 ಮಾಡೆಲ್ ಐಷಾರಾಮಿ ಎಸ್‍ಯುವಿಯ ಅಂದಿನ ಆನ್-ರೋಡ್ ಬೆಲೆಯು ಸುಮಾರು ರೂ.4.35 ಕೋಟಿಯಾಗಿದೆ.

ಸೆಕೆಂಡ್ ಹ್ಯಾಂಡ್ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿಸಿದ ಜನಪ್ರಿಯ ನಟ

ವರದಿಗಳ ಪ್ರಕಾರ, ಲ್ಯಾಂಬೊರ್ಗಿನಿ ಉರುಸ್ ಎಸ್‌ಯುವಿಯನ್ನು ಪಡೆಯಲು ಬುಕ್ಕಿಂಗ್ ಮಾಡಿ ಸುಮಾರು ಒಂದು ವರ್ಷ ಕಾಯಬೇಕಾಗಿದೆ. ಇದರಿಂದ ನಟ ಪೃಥ್ವಿರಾಜ್ ಸುಕುಮಾರನ್ ಅವರು ಸೆಕೆಂಡ್ ಹ್ಯಾಂಡ್ ಲಂಬೋರ್ಗಿನಿ ಉರುಸ್ ಅನ್ನು ಆರಿಸಿಕೊಂಡಿದ್ದಾರೆ.

ಸೆಕೆಂಡ್ ಹ್ಯಾಂಡ್ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿಸಿದ ಜನಪ್ರಿಯ ನಟ

ನಟ ಪೃಥ್ವಿರಾಜ್ ಹೊಸ ಮಿನಿ ಕೂಪರ್ ಜೆಸಿಡಬ್ಲ್ಯೂ ಕಾರನ್ನು ಕಳೆದ ವರ್ಷ ಖರೀದಿಸಿದ್ದರು. ಮಿನಿ ಕೂಪರ್ ಜೆಸಿಡಬ್ಲ್ಯೂ ಅಥವಾ ಜಾನ್ ಕೂಪರ್ ವರ್ಕ್ಸ್ ಮೂಲತಃ ಸಾಮಾನ್ಯ ಮಿನಿ ಕೂಪರ್ ಹ್ಯಾಚ್‌ಬ್ಯಾಕ್‌ನ ಹೆಚ್ಚಿನ ಪರ್ಫಾಮೆನ್ಸ್ ಮಾದರಿಯಾಗಿದೆ.

ಸೆಕೆಂಡ್ ಹ್ಯಾಂಡ್ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿಸಿದ ಜನಪ್ರಿಯ ನಟ

ನಟ ಪೃಥ್ವಿರಾಜ್ ಎಸ್‌ಯುವಿ ಮತ್ತು ಸ್ಪೋರ್ಟ್ಸ್ ಕಾರ್ ಸಂಗ್ರಹವಿದೆ. ಅವರು ಕೇರಳದಲ್ಲಿ ನೋಂದಾಯಿಸಲ್ಪಟ್ಟ ಲ್ಯಾಂಬೊರ್ಗಿನಿ ಹುರಾಕಾನ್ ಸ್ಪೋರ್ಟ್ಸ್ ಕಾರಿನ ಮೊದಲ ಮಾಲೀಕರಾಗಿದ್ದರು. ಅವರು ರೇಂಜ್ ರೋವರ್ ವೋಗ್, ಪೋರ್ಷೆ ಕಯೆನ್ನೆ ಮತ್ತು ಇತರ ಐಷಾರಾಮಿ ಬ್ರಾಂಡ್‌ಗಳ ಕಾರುಗಳಂತಹ ಎಸ್‌ಯುವಿಗಳನ್ನು ಹೊಂದಿದ್ದಾರೆ. ಕಳೆದ ವರ್ಷದ ಆರಂಭದಲ್ಲಿ, ಪೃಥ್ವಿರಾಜ್ ಅವರ ಪತ್ನಿ ಸುಪ್ರಿಯಾ ಕೂಡ ಹೊಸ ಟಾಟಾ ಸಫಾರಿ ಅಡ್ವೆಂಚರ್ ಎಡಿಷನ್ ಅನ್ನು ಖರೀದಿಸಿದ್ದರು

ಸೆಕೆಂಡ್ ಹ್ಯಾಂಡ್ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿಸಿದ ಜನಪ್ರಿಯ ನಟ

ಹುರಾಕಾನ್ ಗಿಂತ ಉರುಸ್ ಹೆಚ್ಚು ಪ್ರಾಯೋಗಿಕವಾಗಿ ವಾಹನವಾಗಿದೆ ಎಂದು ಗಮನಿಸಬೇಕಾದ ಅಂಶವಾಗಿದೆ. ಉರುಸ್ ಲ್ಯಾಂಬೊರ್ಗಿನಿ ಸರಣಿಯ ಮೊದಲ ಎಸ್‍ಯುವಿಯಾಗಿದೆ. ಮಾಡೆಲ್ ಸೂಪರ್ ಎಸ್‌ಯುವಿ ಮಾರುಕಟ್ಟೆಗೆ ಬರುವ ಅತ್ಯಂತ ವೇಗದ ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಲ್ಲಿ ಒಂದಾಗಿದೆ. ಲಂಬೋರ್ಗಿನಿಯ ಮೊದಲ ಉರುಸ್ ಮಾದರಿ ಉರುಸ್ ಅನ್ನು 2018 ರ ಜನವರಿಯಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾಗುವುದು.

ಸೆಕೆಂಡ್ ಹ್ಯಾಂಡ್ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿಸಿದ ಜನಪ್ರಿಯ ನಟ

ಉರುಸ್, ಲ್ಯಾಂಬೊರ್ಗಿನಿ ಕಂಪನಿಯ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಅನೇಕ ಫೀಚರ್'ಗಳನ್ನು ಹೊಂದಿದೆ. ಉರುಸ್ ಎಸ್‌ಯುವಿಯಲ್ಲಿ 4.0 ಲೀಟರ್, 8-ಸಿಲಿಂಡರ್ ಟ್ವಿನ್-ಟರ್ಬೊ ವಿ 8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 641 ಬಿಹೆಚ್‌ಪಿ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಲ್ಯಾಂಬೊರ್ಗಿನಿ ಕಂಪನಿಯ ಅತ್ಯಂತ ಶಕ್ತಿಶಾಲಿಯಾದ ಎಂಜಿನ್ ಆಗಿದೆ.

ಸೆಕೆಂಡ್ ಹ್ಯಾಂಡ್ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿಸಿದ ಜನಪ್ರಿಯ ನಟ

ಉರುಸ್ ಎಸ್‌ಯುವಿಯು ಕೇವಲ 3.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಈ ಎಸ್‌ಯುವಿಯು ಆಫ್-ರೋಡ್'ಗಾಗಿ ವಿಭಿನ್ನ ಚಾಲನಾ ವಿಧಾನಗಳನ್ನು ಹೊಂದಿದೆ. ಲ್ಯಾಂಬೊರ್ಗಿನಿ ಉರುಸ್ ಫೋಕ್ಸ್‌ವ್ಯಾಗನ್ ಗ್ರೂಪ್‌ನ ಎಂಎಲ್‌ಬಿ ಇವೊ ಪ್ಲಾಟ್‌ಫಾರಂನ ಮೇಲೆ ನಿರ್ಮಾಣವಾಗಿದೆ. ಈ ಪ್ಲಾಟ್‌ಫಾರಂನಲ್ಲಿಯೇ ಆಡಿ ಕ್ಯೂ 7 ಹಾಗೂ ಪೋರ್ಷೆ ಕೇನ್ ಕಾರುಗಳನ್ನು ನಿರ್ಮಿಸಲಾಗಿದೆ.

ಸೆಕೆಂಡ್ ಹ್ಯಾಂಡ್ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿಸಿದ ಜನಪ್ರಿಯ ನಟ

ಲ್ಯಾಂಬೊರ್ಗಿನಿ ಉರುಸ್ ಎಸ್‌ಯುವಿಯು ಸ್ಲಿಮ್ ಆದ ಎಲ್‌ಇಡಿ ಹೆಡ್‌ಲೈಟ್ ಹಾಗೂ ಟೇಲ್ ಲೈಟ್‌ಗಳನ್ನು ಹೊಂದಿದೆ. ಈ ಎಸ್‌ಯುವಿಯ ವಿನ್ಯಾಸವು ಲ್ಯಾಂಬೊರ್ಗಿನಿ ಹುರಾಕನ್ ಸೂಪರ್ ಕಾರಿನಿಂದ ಸ್ಫೂರ್ತಿ ಪಡೆದಿದೆ.

ಸೆಕೆಂಡ್ ಹ್ಯಾಂಡ್ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿಸಿದ ಜನಪ್ರಿಯ ನಟ

ಲ್ಯಾಂಬೊರ್ಗಿನಿ ಉರುಸ್ 21 ಇಂಚಿನ ಅಲಾಯ್ ವ್ಹೀಲ್'ಗಳನ್ನು ಹೊಂದಿದೆ. ಈ ಎಸ್‌ಯುವಿಯಲ್ಲಿ 22 ಹಾಗೂ 23 ಇಂಚಿನ ಅಲಾಯ್ ವ್ಹೀಲ್'ಗಳನ್ನು ಅಳವಡಿಸಬಹುದು. ಉರುಸ್, ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಲ್ಯಾಂಬೊರ್ಗಿನಿ ಕಂಪನಿಯ ಕಾರ್ ಆಗಿದೆ.

ಸೆಕೆಂಡ್ ಹ್ಯಾಂಡ್ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿಸಿದ ಜನಪ್ರಿಯ ನಟ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಪೃಥ್ವಿರಾಜ್ ಕಾರು ಕಲೆಕ್ಷನ್ಗೆ ಮತ್ತೊಂದು ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರು ಹೊಸ ಸೇರ್ಪಡೆಯಾಗಿದೆ. ಭಾರತದಲ್ಲಿ ಉದ್ಯಮಿ ಮುಖೇಶ್ ಅಂಬಾನಿ, ನಟ ಕಾರ್ತಿಕ್ ಆರ್ಯನ್, ನಟ ಜೂನಿಯರ್ ಎನ್​ಟಿಆರ್ ಮತ್ತು ನಟ ರಣವೀರ್ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಹೊಂದಿದ್ದಾರೆ. ಈ ದುಬಾರಿ ಬೆಲೆಯ ಐಷಾರಾಮಿ ಲ್ಯಾಂಬೊರ್ಗಿನಿ ಉರುಸ್ ಕಾರು ಸೆಲಬ್ರಿಟಿಗಳ ಮೆಚ್ಚಿನ ಆಯ್ಕೆಯಾಗಿದೆ.

Most Read Articles

Kannada
English summary
Prithviraj sukumaran exchanges lamborghini huracan with urus suv details
Story first published: Wednesday, June 22, 2022, 15:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X