ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಭಾರತದಲ್ಲಿ ಪ್ರತಿದಿನ ನೂರಾರು ಅಪಘಾತಗಳು ಸಂಭವಿಸುತ್ತವೆ. ಹೆಚ್ಚಿನ ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳು ಭಾಗಿಯಾಗಿರುತ್ತವೆ. ಈ ಕಾರಣಕ್ಕಾಗಿ ಭಾರತದ ಮೋಟಾರು ವಾಹನ ಕಾಯ್ದೆಯನ್ವಯ ದ್ವಿಚಕ್ರ ವಾಹನದಲ್ಲಿ ಸವಾರರಿಗೆ ಮಾತ್ರವಲ್ಲದೇ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಆದರೂ ಬಹುತೇಕ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುತ್ತಿಲ್ಲ. ಇದರಿಂದಾಗಿ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾದರೆ ಸವಾರರ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ದ್ವಿಚಕ್ರ ವಾಹನ ಸವಾರರು ನಿಗದಿತ ವೇಗಕ್ಕಿಂತ ವೇಗವಾಗಿ ಚಲಿಸುತ್ತಾರೆ. ಇದೂ ಸಹ ಅಪಘಾತಕ್ಕೆ ಕಾರಣವಾಗುತ್ತಿದೆ.

ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಇತ್ತೀಚಿಗೆ ಕೇರಳದಲ್ಲಿ ನಡೆದ ಘಟನೆಯಲ್ಲಿ ಬೈಕ್ ಸವಾರ ಇನ್ನೇನು ಸತ್ತೇ ಹೋದ ಅಂದು ಕೊಳ್ಳುವಷ್ಟರಲ್ಲಿ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ವೀಡಿಯೊದಲ್ಲಿ ಬೈಕ್ ಸವಾರ ದೊಡ್ಡ ಅಪಘಾತದಿಂದ ಪಾರಾಗುವುದನ್ನು ಕಾಣಬಹುದು. ಬಸ್ ಚಾಲಕನ ಚಾಣಾಕ್ಷತನದಿಂದ ಬೈಕ್ ಸವಾರ ಪಾರಾಗಿದ್ದಾನೆ. ಬಸ್ ಚಾಲಕ ಚಾತುರ್ಯದಿಂದ ದೊಡ್ಡ ಅಪಘಾತವು ತಪ್ಪಿದೆ.

ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಅಪಘಾತ ಸಂಭವಿಸಿದ ಪ್ರದೇಶದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿವೆ. ವೀಡಿಯೊದಲ್ಲಿ ಬೈಕ್ ಸವಾರ ಇದ್ದಕ್ಕಿದ್ದಂತೆ ಜಾರಿ ಬೀಳುತ್ತಿರುವುದನ್ನು ಕಾಣಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಬೈಕ್ ಸವಾರ ಮಳೆ ನೀರಿನಿಂದ ಒದ್ದೆಯಾಗಿದ್ದ ರಸ್ತೆಯಲ್ಲಿ ಬ್ರೇಕ್ ಹಾಕಿದ ಕಾರಣಕ್ಕೆ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಬೈಕ್ ಸವಾರನು ಸಹ ರಸ್ತೆಯ ಮೇಲೆ ಬಿದ್ದಿದ್ದಾನೆ. ಈ ವೇಳೆ ಖಾಸಗಿ ಬಸ್ ಬೈಕಿನ ಹಿಂದೆಯೇ ಬಂದಿದೆ.

ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಬಸ್ ಚಾಲಕ ತಕ್ಷಣವೇ ಬಸ್ ಅನ್ನು ಪಕ್ಕಕ್ಕೆ ತಿರುಗಿಸಿ ಬ್ರೇಕ್ ಹಾಕಿದ್ದಾನೆ. ಇದರಿಂದಾಗಿ ದೊಡ್ಡ ಅಪಘಾತವು ತಪ್ಪಿದೆ. ರಸ್ತೆ ತೇವವಾಗಿದ್ದ ಕಾರಣ ಬಸ್ಸಿನ ಮೇಲೆ ನಿಯಂತ್ರಣ ತಪ್ಪಿ, ಬಸ್ ಬೈಕ್ ಸವಾರನಿಗೆ ಗುದಿಯುವ ಸಾಧ್ಯತೆಗಳಿದ್ದವು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಆದರೆ ಬಸ್ ಚಾಲಕನು ಸಮಯಪ್ರಜ್ಞೆಯಿಂದ ಅಪಘಾತವನ್ನು ತಪ್ಪಿಸಿದ್ದಾನೆ. ಬೈಕಿಗೆ ಒಂದು ಸಣ್ಣ ಗೆರೆಯೂ ತಾಗದಂತೆ ನೋಡಿಕೊಂಡಿದ್ದಾನೆ. ಬೈಕ್ ಸವಾರ ಕೆಳಗೆ ಬಿದ್ದ ನಂತರ ಹಾಗೂ ಬಸ್ ಬ್ರೇಕ್ ಹಾಕಿ ನಿಲ್ಲಿಸಿದ ನಂತರ ಸ್ಥಳದಲ್ಲಿ ಜನ ಸೇರಿದ್ದಾರೆ.

ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಈ ಘಟನೆ ನಡೆಯುವ ಮೊದಲು ಹಲವು ವಾಹನಗಳು ಇದೇ ರಸ್ತೆಯಲ್ಲಿ ಹಾದುಹೋಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಆದರೆ ಯಾರಿಗೂ ತೊಂದರೆಯಾಗಿಲ್ಲ. ಆದರೆ ಈ ಬೈಕ್ ಸವಾರ ಏಕಾಏಕಿ ಬೈಕಿನ ಬ್ರೇಕ್ ಹಾಕಿದ ಕಾರಣ ಕೆಳಗೆ ಬಿದ್ದಿದ್ದಾನೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸ್ಥಳದಲ್ಲಿದ್ದವರು ತಕ್ಷಣವೇ ಬೈಕಿನೊಂದಿಗೆ ಬೈಕ್ ಸವಾರನನ್ನು ಸಹ ಪಕ್ಕಕ್ಕೆ ಕರೆದೊಯ್ದಿದ್ದಾರೆ. ಒದ್ದೆಯಾದ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ವೇಗವಾಗಿ ಹೋಗಬಾರದು ಎಂಬುದನ್ನು ಈ ಘಟನೆಯ ಮೂಲಕ ತಿಳಿಯಬಹುದು.

ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ

ಒದ್ದೆ ರಸ್ತೆಗಳಲ್ಲಿ ವಾಹನಗಳ ಟ್ರಾಕ್ಷನ್ ಹಾಗೂ ಸ್ಟೆಬಿಲಿಟಿ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಹೀಗಾಗಿ ವಾಹನವು ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ. ಈ ಪರಿಸ್ಥಿತಿಯೇ ದೊಡ್ಡ ಅಪಘಾತಗಳಿಗೆ ಕಾರಣವಾಗುತ್ತದೆ. ಇದಕ್ಕಾಗಿ ಮಳೆ ಬಂದಾಗ ನಿಧಾನವಾಗಿ ಚಲಿಸುವುದು ಸೂಕ್ತ.

Most Read Articles

Kannada
English summary
Private bus driver saves bike riders life in kerala. Read in Kannada.
Story first published: Monday, October 19, 2020, 20:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X