ಮಾಡಿಫೈ ವಾಹನಗಳನ್ನು ಉಳಿಸುವಂತೆ ಬೀದಿಗಿಳಿದು ಪ್ರತಿಭಟಿಸಿದ ಯುವಕರು..!

ಮಾಡಿಫೈಗೊಂಡ ವಾಹನಗಳಿಂದ ಮಾಲೀಕರಿಗೆ ಏನೇ ಅನುಕೂಲಕಲತೆಗಳಿದ್ದರೂ, ಅದು ಇತರರಿಗೆ ಕಿರಿಕಿರಿ ಅಂದ್ರೆ ತಪ್ಪಾಗುವುದಿಲ್ಲ. ಕಾರು ಮತ್ತು ಬೈಕ್‌ಗಳಲ್ಲಿ ಜೋರಾಗಿ ಸದ್ದು ಬರಲಿಸಲು ಬಹುತೇಕ ಮಾಡಿಫೈ ಪ್ರಿಯರು ಎಕ್ಸಾಸ್ಟ್ ಬದಲಿಸುತ್ತಿದ್ದು, ಇದರಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿರುವುದಲ್ಲದೇ ಅತಿಯಾದ ಶಬ್ದದಿಂದಾಗಿ ಸಾರ್ವಜನಿಕರು ಕೂಡಾ ತೊಂದರೆ ಅನುಭವಿಸುವಂತಾಗಿದೆ.

ಮಾಡಿಫೈ ವಾಹನಗಳನ್ನು ಉಳಿಸುವಂತೆ ಬೀದಿಗಿಳಿದು ಪ್ರತಿಭಟಿಸಿದ ಯುವಕರು..!

ಈಗಿನ ಯುವಕರಿಗೆ ಮಾಡಿಫೈ ಇಲ್ಲದ ಬೈಕ್‌ಗಳನ್ನು ರೈಡ್ ಮಾಡುವುದು ಅಂದ್ರೆ ಒಂದು ಥರಾ ಅಲರ್ಜಿ ಇದ್ದಂತೆ. ಇದೇ ಕಾರಣಕ್ಕೆ ಇರೋ ಬರೋ ಬೈಕ್ ಮಾದರಿಗಳಲ್ಲೇ ಒಂದೊಳ್ಳೆ ಮಾಡಿಫೈ ಡಿಸೈನ್ ಮಾಡಿಸಿಕೊಂಡು ಪೋಸ್ ಕೊಡೊದು ಅಂದ್ರೆ ಅವರಿಗೆ ಎಲ್ಲಿಲ್ಲದ ಹೆಮ್ಮೆ ಅಂದ್ರೆ ತಪ್ಪಾಗುವುದಿಲ್ಲ. ಆದ್ರೆ ಇದಕ್ಕೆ ಬ್ರೇಕ್ ಹಾಕುತ್ತಿರುವ ಪೊಲೀಸರು ಯುವಕರ ಕನಸಿನ ಬೈಕ್‌‌ಗಳನ್ನು ಮೂಲೆಗುಂಪಾಗುವಂತೆ ಮಾಡುತ್ತಿದ್ದು, ಪೊಲೀಸರ ಕ್ರಮವನ್ನು ಖಂಡಿಸಿ ಬೀದಿಗಿಳಿದು ಪ್ರತಿಭಟಿಸುವಂತಹ ಪರಿಸ್ಥಿತಿ ಎದುರಾಗಿದೆ.

ಮಾಡಿಫೈ ವಾಹನಗಳನ್ನು ಉಳಿಸುವಂತೆ ಬೀದಿಗಿಳಿದು ಪ್ರತಿಭಟಿಸಿದ ಯುವಕರು..!

ದೇಶದ ಪ್ರಮುಖ ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಹೆಚ್ಚು ಟ್ರೆಂಡ್ ಸೃಷ್ಠಿಸುತ್ತಿರುವ ಕಾರ್ ಮತ್ತು ಬೈಕ್‌ ಮಾಡಿಫಿಕೇಷನ್ ಹಾವಳಿಯಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದ್ದು, ಪೊಲೀಸರು ಎಷ್ಟೇ ಕಠಿಣ ಕ್ರಮಕೈಗೊಂಡರು ಕೂಡಾ ಮಾಡಿಫೈ ವಾಹನಗಳು ಮಾತ್ರ ಕಡಿಮೆಯಾಗುತ್ತಿಲ್ಲ.

ಮಾಡಿಫೈ ವಾಹನಗಳನ್ನು ಉಳಿಸುವಂತೆ ಬೀದಿಗಿಳಿದು ಪ್ರತಿಭಟಿಸಿದ ಯುವಕರು..!

ಹೀಗಾಗಿ ಇದರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಟ್ರಾಫಿಕ್ ಪೊಲೀಸರು ಮಾರುವೇಷದಲ್ಲಿ ಮಾಡಿಫೈ ಪ್ರಿಯರ ಹಾವಳಿಗೆ ಬ್ರೇಕ್ ಹಾಕುತ್ತಿದ್ದು, ಇದನ್ನು ಅರಿಗಿಸಿಕೊಳ್ಳಲು ಸಾಧ್ಯವಾಗದ ಯುವಕರ ಪಡೆಯೊಂದು ಸೇವ್ ಮಾಡಿಫಿಕೇಷನ್ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ಮಾಡಿರುವ ಘಟನೆ ನಡೆದಿದೆ.

ಮಾಡಿಫೈ ವಾಹನಗಳನ್ನು ಉಳಿಸುವಂತೆ ಬೀದಿಗಿಳಿದು ಪ್ರತಿಭಟಿಸಿದ ಯುವಕರು..!

ಹೌದು, ಮಾಡಿಫೈ ವಾಹನಗಳ ತವರು ಎಂದೇ ಖ್ಯಾತಿಯಾಗಿರುವ ಕೇರಳದಲ್ಲಿ ಯುವಕರು ಪೊಲೀಸರ ವಿರುದ್ಧ ತಿರುಗಿಬಿದ್ದಿದ್ದಾರೆ. ಮಾಡಿಫೈ ವಾಹನಗಳ ವಿರುದ್ಧ ಕೈಗೊಳ್ಳಲಾಗುತ್ತಿರುವ ಕ್ರಮ ವಿರೋಧಿಸಿ ಪ್ರತಿಭಟಿಸುತ್ತಿದ್ದು, ಪೊಲೀಸರ ಜೊತೆ ವಾಗ್ವಾದಗಳು ಕೂಡಾ ನಡೆದಿವೆ.

ಮಾಡಿಫೈ ವಾಹನಗಳನ್ನು ಉಳಿಸುವಂತೆ ಬೀದಿಗಿಳಿದು ಪ್ರತಿಭಟಿಸಿದ ಯುವಕರು..!

ಕೇರಳದಲ್ಲಿಯೇ ಅತಿಹೆಚ್ಚು ಮಾಡಿಫೈ ವಾಹನಗಳು ಕಂಡುಬರುವ ಕೊಚ್ಚಿಯಲ್ಲಿನ ಯುವಕರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಸೇವ್ ಮಾಡಿಫಿಕೇಷನ್ ಅಂತಾ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

MOST READ: ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಮಾಡಿಫೈ ವಾಹನಗಳನ್ನು ಉಳಿಸುವಂತೆ ಬೀದಿಗಿಳಿದು ಪ್ರತಿಭಟಿಸಿದ ಯುವಕರು..!

ಈ ವೇಳೆ ಮಾಡಿಫೈ ವಾಹನ ಸವಾರರ ವಿರುದ್ಧ ಕುಪಿತಗೊಂಡ ಸ್ಥಳೀಯ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದು, ಯಾವುದೇ ಕಾರಣಕ್ಕೂ ಮಾಡಿಫೈ ವಾಹನಗಳ ವಿರುದ್ಧದ ನಡೆಸಲಾಗುತ್ತಿರುವ ವಿಶೇಷ ಕಾರ್ಯಾಚರಣೆಯನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಡಿಫೈ ವಾಹನಗಳನ್ನು ಉಳಿಸುವಂತೆ ಬೀದಿಗಿಳಿದು ಪ್ರತಿಭಟಿಸಿದ ಯುವಕರು..!

ಜೊತೆಗೆ ಪ್ರತಿಭಟನೆ ನಡೆಸುತ್ತಿದ್ದ ಗುಂಪಿನ 15ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರತಿಭಟನಾಕಾರರಿಗೆ ಲಾಠಿ ರುಚಿ ತೊರಿಸಿದ್ದು, ಮತ್ತೆ ಪ್ರತಿಭಟನೆ ನಡೆಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಮಾಡಿಫೈ ವಾಹನಗಳನ್ನು ಉಳಿಸುವಂತೆ ಬೀದಿಗಿಳಿದು ಪ್ರತಿಭಟಿಸಿದ ಯುವಕರು..!

ಸದ್ಯ ಕೇರಳದಲ್ಲಿ ಮಾಡಿಫೈ ವಾಹನಗಳಿಗೆ ಭಾರೀ ಬೇಡಿಕೆಯಿದ್ದು, ಶೇ.50ರಷ್ಟು ವಾಹನಗಳು ಒಂದಿಲ್ಲಾ ಒಂದು ರೀತಿಯಲ್ಲಿ ಮಾಡಿಫೈಗೊಂಡಿರುವುದು ಅಲ್ಲಿನ ಮತ್ತೊಂದು ವಿಶೇಷ. ಆದ್ರೆ ಅದರಿಂದ ಲಾಭಕ್ಕಿಂತ ಅಪಾಯವೇ ಹೆಚ್ಚಾಗುತ್ತಿದ್ದು, ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ಮಾಡಿಫೈ ವಾಹನಗಳ ವಿರುದ್ಧ ವಿಶೇಷ ಕಾರ್ಯಚರಣೆ ನಡೆಸಿ ಭರ್ಜರಿ ದಂಡ ವಿಧಿಸಲಾಗುತ್ತಿದೆ.

ಇದು ಅಲ್ಲಿನ ಮಾಡಿಫೈ ಪ್ರಿಯರಿಗೆ ಒಂದು ರೀತಿ ಬಿಸಿತುಪ್ಪವಾಗಿ ಪರಿಣಮಿಸಿದ್ದು, ಸಾವಿರಾರು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಡಿಸಲಾಗಿರುವ ದುಬಾರಿ ವಾಹನಗಳನ್ನು ಪೊಲೀಸರು ಸೀಜ್ ಮಾಡುತ್ತಿರುವುದು ಒಂದು ರೀತಿಯಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ.

Most Read Articles

Kannada
English summary
Kerala Police arrests 15 youth for protesting action against MODIFIED cars & motorcycles.Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X