ಹೆಲ್ಮೆಟ್ ವಿಷಯಕ್ಕೆ ಪರಸ್ಪರ ಕಾಲೆಳೆದುಕೊಂಡ ಸಿ‍ಎಂ ಹಾಗೂ ಗವರ್ನರ್

ತಿದ್ದುಪಡಿ ಮಾಡಿದ ಮೋಟಾರು ವಾಹನ ಕಾಯ್ದೆಯನ್ನು ಈ ವರ್ಷದ ಸೆಪ್ಟೆಂಬರ್‌ ತಿಂಗಳಿನಿಂದ ದೇಶಾದ್ಯಂತ ಜಾರಿಗೊಳಿಸಲಾಗಿದೆ. ಅಂದಿನಿಂದ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ಇದು ದೇಶಾದ್ಯಂತ ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ.

ಹೆಲ್ಮೆಟ್ ವಿಷಯಕ್ಕೆ ಪರಸ್ಪರ ಕಾಲೆಳೆದುಕೊಂಡ ಸಿ‍ಎಂ ಹಾಗೂ ಗವರ್ನರ್

ಸೆಲೆಬ್ರಿಟಿಗಳು, ರಾಜಕೀಯ ವ್ಯಕ್ತಿಗಳು ಸೇರಿದಂತೆ ಸಂಚಾರಿ ನಿಯಮಗಳನ್ನು ಉಲ್ಲಂಘಸಿದ ಗಣ್ಯ ವ್ಯಕ್ತಿಗಳಿಗೆ ದಂಡವನ್ನು ವಿಧಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿರುವ ಪೊಲೀಸರಿಗೂ ಸಹ ದಂಡ ವಿಧಿಸಲಾಗಿದೆ.

ಹೆಲ್ಮೆಟ್ ವಿಷಯಕ್ಕೆ ಪರಸ್ಪರ ಕಾಲೆಳೆದುಕೊಂಡ ಸಿ‍ಎಂ ಹಾಗೂ ಗವರ್ನರ್

ಇದು ಈವರೆಗಿನ ಬೆಳವಣಿಗೆಯಾದರೆ, ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವಾಗ ಹೆಲ್ಮೆಟ್ ಬಳಸದಿರುವ ಬಗ್ಗೆ ಸಿಎಂ ಹಾಗೂ ಲೆಫ್ಟಿನೆಂಟ್ ಗವರ್ನರ್ ಮಧ್ಯೆ ಪುದುಚೇರಿಯಲ್ಲಿ ವಾಗ್ವಾದ ನಡೆಯುತ್ತಿದೆ. ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸಾಮಿ ಹಾಗೂ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ನಡುವೆ ಟ್ವಿಟರ್ ನಲ್ಲಿ ಮಾತಿನ ಚಕಮಕಿ ನಡೆಯುತ್ತಿದೆ.

ಹೆಲ್ಮೆಟ್ ವಿಷಯಕ್ಕೆ ಪರಸ್ಪರ ಕಾಲೆಳೆದುಕೊಂಡ ಸಿ‍ಎಂ ಹಾಗೂ ಗವರ್ನರ್

ಕಿರಣ್ ಬೇಡಿಯವರು ಪ್ರಚಾರದ ರ್‍ಯಾಲಿಯಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದ ಸಿ‍ಎಂ ಫೋಟೊವನ್ನು ಟ್ವಿಟರ್‍‍ನಲ್ಲಿ ಶೇರ್ ಮಾಡಿ, ಆ ಫೋಟೊಗೆ ಪುದುಚೇರಿಯ ಡಿಜಿಪಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿರವರನ್ನು ಟ್ಯಾಗ್ ಮಾಡಿದ್ದಾರೆ.

ಹೆಲ್ಮೆಟ್ ವಿಷಯಕ್ಕೆ ಪರಸ್ಪರ ಕಾಲೆಳೆದುಕೊಂಡ ಸಿ‍ಎಂ ಹಾಗೂ ಗವರ್ನರ್

ಈ ಬಗ್ಗೆ ಟ್ವೀಟ್ ಮಾಡಿ ಮೋಟಾರು ವಾಹನ ಕಾಯ್ದೆ ಹಾಗೂ ಮದ್ರಾಸ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ. ಆದರೆ ಕೊನೆಗೆ ಕಾನೂನು ಗೆಲ್ಲಲಿದೆ. ಪುದುಚೇರಿಯ ಡಿಜಿಪಿ ಬಾಲಾಜಿ ಶ್ರೀವಾಸ್ತವರವರು ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದಾರೆ ಎಂದು ಹೇಳಿದ್ದಾರೆ.

ಹೆಲ್ಮೆಟ್ ವಿಷಯಕ್ಕೆ ಪರಸ್ಪರ ಕಾಲೆಳೆದುಕೊಂಡ ಸಿ‍ಎಂ ಹಾಗೂ ಗವರ್ನರ್

ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸಾಮಿ ಹಾಗೂ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿರವರು ಈ ಹಿಂದೆಯೂ ಸಹ ಹಲವಾರು ವಿಷಯಗಳ ಬಗ್ಗೆ ಈ ರೀತಿಯಾಗಿ ಟ್ವಿಟರ್‍‍ನಲ್ಲಿ ಮಾತಿನ ಚಕಮಕಿ ನಡೆಸಿದ್ದರು.

ಹೆಲ್ಮೆಟ್ ವಿಷಯಕ್ಕೆ ಪರಸ್ಪರ ಕಾಲೆಳೆದುಕೊಂಡ ಸಿ‍ಎಂ ಹಾಗೂ ಗವರ್ನರ್

ಈ ವರ್ಷದ ಫೆಬ್ರವರಿಯಲ್ಲಿ ಪುದುಚೇರಿಯ ಸಿಎಂರವರು, ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ಆದೇಶದ ವಿರುದ್ಧ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಸರ್ಕಾರಿ ನಿವಾಸದ ಮುಂದೆ ತಮ್ಮ ಸಚಿವರೊಂದಿಗೆ ಸೇರಿ ಪ್ರತಿಭಟನೆ ನಡೆಸಿದ್ದರು.

ಹೆಲ್ಮೆಟ್ ವಿಷಯಕ್ಕೆ ಪರಸ್ಪರ ಕಾಲೆಳೆದುಕೊಂಡ ಸಿ‍ಎಂ ಹಾಗೂ ಗವರ್ನರ್

ಈ ಟ್ವೀಟ್‍‍ಗೆ ಪ್ರತಿಯಾಗಿ ವಿ.ನಾರಾಯಣಸ್ವಾಮಿರವರು ಸಹ ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಿಂದ ಹೆಲ್ಮೆಟ್ ಧರಿಸದೆ ಸ್ಕೂಟರ್‍‍ನ ಹಿಂಬದಿಯಲ್ಲಿ ಸವಾರಿ ಮಾಡುತ್ತಿರುವ ಕಿರಣ್ ಬೇಡಿಯವರ ಫೋಟೊವನ್ನು ಶೇರ್ ಮಾಡಿದ್ದಾರೆ. ಆದರೆ ಈ ಫೋಟೊ ಸಾಕಷ್ಟು ಹಳೆಯದಾಗಿದ್ದು, ಈ ಫೋಟೊವನ್ನು 2017ರ ಆಗಸ್ಟ್ 19ರಂದು ತೆಗೆಯಲಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಹೆಲ್ಮೆಟ್ ವಿಷಯಕ್ಕೆ ಪರಸ್ಪರ ಕಾಲೆಳೆದುಕೊಂಡ ಸಿ‍ಎಂ ಹಾಗೂ ಗವರ್ನರ್

ಈ ಬಗ್ಗೆ ಮಾತನಾಡಿದ ಪುದುಚೇರಿಯ ಸಿ‍ಎಂ ವಿ.ನಾರಾಯಣ ಸ್ವಾಮಿರವರು, ಚುನಾವಣೆಗಳು ನಡೆಯುತ್ತಿವೆ ಎಂಬುದನ್ನು ಕಿರಣ್ ಬೇಡಿರವರು ಅರಿತುಕೊಳ್ಳಬೇಕು. ಚುನಾವಣಾ ಆಯೋಗವು ಚುನಾವಣೆಯು ಶಾಂತಿಯುತವಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೆಲ್ಮೆಟ್ ವಿಷಯಕ್ಕೆ ಪರಸ್ಪರ ಕಾಲೆಳೆದುಕೊಂಡ ಸಿ‍ಎಂ ಹಾಗೂ ಗವರ್ನರ್

ನಿನ್ನೆ ಪ್ರಚಾರದ ಕೊನೆಯ ದಿನವಾದ ಕಾರಣ ಬೈಕ್ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ನಾನು ಕಾರ್ಯಕರ್ತರ ಜೊತೆಗೆ ಹೋಗಿದ್ದೆ. ನಾನು ಹೆಲ್ಮೆಟ್ ಧರಿಸಿದ್ದರೆ, ಮುಖ್ಯಮಂತ್ರಿಗಳು ಬರುತ್ತಾರೋ ಇಲ್ಲವೋ ಎಂದು ಜನರಿಗೆ ಹೇಗೆ ತಿಳಿಯುತ್ತದೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಹೆಲ್ಮೆಟ್ ವಿಷಯಕ್ಕೆ ಪರಸ್ಪರ ಕಾಲೆಳೆದುಕೊಂಡ ಸಿ‍ಎಂ ಹಾಗೂ ಗವರ್ನರ್

ಇದರ ಬಗ್ಗೆ ಡಿಜಿಪಿಗೆ ಟ್ವೀಟ್ ಮಾಡುವುದು ಮದ್ರಾಸ್ ಹೈಕೋರ್ಟ್‌ನ ತೀರ್ಪಿಗೆ ವಿರುದ್ಧವಾಗಿದೆ ಎಂಬುದನ್ನು ಕಿರಣ್ ಬೇಡಿಯವರು ನೆನಪಿಟ್ಟು ಕೊಳ್ಳಬೇಕು. ಆ ತೀರ್ಪಿನಲ್ಲಿ ಸಿಎಂ, ಗವರ್ನರ್ ಹಾಗೂ ಮುಂತಾದವರು ಅಧಿಕೃತ ಸಂವಹನಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಬಾರದು ಎಂದು ನ್ಯಾಯಾಲಯವು ಸ್ಪಷ್ಟವಾಗಿ ಹೇಳಿದೆ ಎಂದು ಹೇಳಿದರು.

ಹೆಲ್ಮೆಟ್ ವಿಷಯಕ್ಕೆ ಪರಸ್ಪರ ಕಾಲೆಳೆದುಕೊಂಡ ಸಿ‍ಎಂ ಹಾಗೂ ಗವರ್ನರ್

ನಮ್ಮ ಜನ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ಅದರಲ್ಲೂ ಟ್ವಿಟರ್‍‍ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸದಿರುವ ಬಗ್ಗೆ ಹೇಳುವುದಾದರೆ, ಹೊಸ ಮೋಟಾರು ವಾಹನ ಕಾಯ್ದೆಯನ್ವಯ ದಂಡವನ್ನು ರೂ.100ರಿಂದ ರೂ. 1,000ಗಳಿಗೆ ಏರಿಸಲಾಗಿದೆ.

ಹೆಲ್ಮೆಟ್ ವಿಷಯಕ್ಕೆ ಪರಸ್ಪರ ಕಾಲೆಳೆದುಕೊಂಡ ಸಿ‍ಎಂ ಹಾಗೂ ಗವರ್ನರ್

ಹೆಲ್ಮೆಟ್ ಧರಿಸುವುದರಿಂದ ಅಪಘಾತವಾದಾಗ ಮಾರಣಾಂತಿಕ ಗಾಯಗಳನ್ನು ತಪ್ಪಿಸಬಹುದು. ಹೆಚ್ಚು ಬಿಸಿಲಿರುವಾಗ ಇದರಿಂದ ಕೆಲವರಿಗೆ ಕಿರಿಕಿರಿಯಾಗಬಹುದು. ಆದರೆ ಹೆಲ್ಮೆಟ್ ಅಪಘಾತವಾದಾಗ ಅಥವಾ ಕೆಳಗೆ ಬಿದ್ದಾಗ ತಲೆಗೆ ಪೆಟ್ಟು ಬೀಳುವುದನ್ನು ತಡೆಯುತ್ತದೆ. ಆದ್ದರಿಂದ, ಗುಣಮಟ್ಟದ ಹೆಲ್ಮೆಟ್‌ ಖರೀದಿಸಿ ದ್ವಿಚಕ್ರ ವಾಹನಗಳಲ್ಲಿ ಹೊರಟಾಗಲೆಲ್ಲಾ ಅದನ್ನು ಧರಿಸುವಂತೆ ಕೋರುತ್ತೇವೆ.

Most Read Articles

Kannada
English summary
Governor trolls Chief Minister for not wearing a helmet - Read in Kannada
Story first published: Tuesday, October 22, 2019, 13:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X