ಕ್ರಿಮಿನಲ್ ವ್ಯಕ್ತಿಯ ಅಂತ್ಯಕ್ರಿಯೆಗಾಗಿ ಲಾಕ್‌ಡೌನ್ ನಡುವೆಯೂ ಬೃಹತ್ ಬೈಕ್ ರ‍್ಯಾಲಿ ಆಯೋಜಿಸಿದ ಸಹಚರರು

ಕರೋನಾ ವೈರಸ್ ಎರಡನೇ ಅಲೆಯಿಂದ ಹೆಚ್ಚು ಬಾಧಿತವಾಗಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರವು ಸಹ ಸೇರಿದೆ. ಈ ಕಾರಣಕ್ಕೆ ಮಹಾರಾಷ್ಟ್ರದಲ್ಲಿ ಕಳೆದ ತಿಂಗಳಿನಿಂದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಜನರ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಕ್ರಿಮಿನಲ್ ವ್ಯಕ್ತಿಯ ಅಂತ್ಯಕ್ರಿಯೆಗಾಗಿ ಲಾಕ್‌ಡೌನ್ ನಡುವೆಯೂ ಬೃಹತ್ ಬೈಕ್ ರ‍್ಯಾಲಿ ಆಯೋಜಿಸಿದ ಸಹಚರರು

ಆದರೂ ಇತ್ತೀಚಿಗೆ ಪುಣೆಯಲ್ಲಿ ಸುಮಾರು 200 ಜನರು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಯೊಬ್ಬನ ಅಂತ್ಯಕ್ರಿಯೆಯಲ್ಲಿ ಬೈಕ್ ರ‍್ಯಾಲಿ ನಡೆಸಿದ್ದರು. ಈ ರ‍್ಯಾಲಿ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬಳಿಕ ಎಚ್ಚೆತ್ತ ಪುಣೆ ಪೊಲೀಸರು ಅವರನ್ನು ಬಂಧಿಸಲು ಮುಂದಾಗಿದ್ದಾರೆ. ಇದುವರೆಗೂ ಸುಮಾರು 80 ಜನರನ್ನು ಬಂಧಿಸಲಾಗಿದ್ದು, 40 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕ್ರಿಮಿನಲ್ ವ್ಯಕ್ತಿಯ ಅಂತ್ಯಕ್ರಿಯೆಗಾಗಿ ಲಾಕ್‌ಡೌನ್ ನಡುವೆಯೂ ಬೃಹತ್ ಬೈಕ್ ರ‍್ಯಾಲಿ ಆಯೋಜಿಸಿದ ಸಹಚರರು

ಇತರ ಆರೋಪಿಗಳನ್ನು ಬಂಧಿಸಲು ಪೊಲೀಸರು 15 ತಂಡಗಳನ್ನು ರಚಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಪುಣೆ ವಲಯ 2ರ ಡಿಸಿಪಿ ಸಾಗರ್ ಪಾಟೀಲ್, ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ 80 ಜನರನ್ನು ಬಂಧಿಸಲಾಗಿದ್ದು, 40 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕ್ರಿಮಿನಲ್ ವ್ಯಕ್ತಿಯ ಅಂತ್ಯಕ್ರಿಯೆಗಾಗಿ ಲಾಕ್‌ಡೌನ್ ನಡುವೆಯೂ ಬೃಹತ್ ಬೈಕ್ ರ‍್ಯಾಲಿ ಆಯೋಜಿಸಿದ ಸಹಚರರು

ಈ 15 ಪೊಲೀಸ್ ತಂಡಗಳು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದು, ಘಟನೆಯಲ್ಲಿ ಭಾಗಿಯಾಗಿದ್ದವರನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ. ಶನಿವಾರ ಹತ್ಯೆಯಾದ ಮಾಧವ್ ವಾಘಟೆ ಎಂಬಾತನ ಅಂತ್ಯಕ್ರಿಯೆ ವೇಳೆ ಈ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು.

ಕ್ರಿಮಿನಲ್ ವ್ಯಕ್ತಿಯ ಅಂತ್ಯಕ್ರಿಯೆಗಾಗಿ ಲಾಕ್‌ಡೌನ್ ನಡುವೆಯೂ ಬೃಹತ್ ಬೈಕ್ ರ‍್ಯಾಲಿ ಆಯೋಜಿಸಿದ ಸಹಚರರು

ಮಾಧವ್ ವಾಘಟೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಲಾಕ್‌ಡೌನ್ ಜಾರಿಯಲ್ಲಿದ್ದರೂ ಸಹ ಮಧ್ಯಾಹ್ನ 1ರ ಸುಮಾರಿಗೆ ಈ ಬೈಕ್ ರ‍್ಯಾಲಿಯನ್ನು ಆಯೋಜಿಸಲಾಗಿತ್ತು.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕ್ರಿಮಿನಲ್ ವ್ಯಕ್ತಿಯ ಅಂತ್ಯಕ್ರಿಯೆಗಾಗಿ ಲಾಕ್‌ಡೌನ್ ನಡುವೆಯೂ ಬೃಹತ್ ಬೈಕ್ ರ‍್ಯಾಲಿ ಆಯೋಜಿಸಿದ ಸಹಚರರು

ವರದಿಗಳ ಪ್ರಕಾರ ಈ ರ‍್ಯಾಲಿಯಲ್ಲಿ ಸುಮಾರು 125 ದ್ವಿಚಕ್ರ ವಾಹನಗಳು ಭಾಗವಹಿಸಿದ್ದವು. ಈ ಘಟನೆಯ ಸಂಬಂಧ ಪುಣೆ ಪೊಲೀಸರು ಸುಮಾರು 150ರಿಂದ 200 ಜನರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

ಕ್ರಿಮಿನಲ್ ವ್ಯಕ್ತಿಯ ಅಂತ್ಯಕ್ರಿಯೆಗಾಗಿ ಲಾಕ್‌ಡೌನ್ ನಡುವೆಯೂ ಬೃಹತ್ ಬೈಕ್ ರ‍್ಯಾಲಿ ಆಯೋಜಿಸಿದ ಸಹಚರರು

ಮಹಾರಾಷ್ಟ್ರದ ಪುಣೆ ನಗರವು ಕೋವಿಡ್‌ 19ನಿಂದ ತತ್ತರಿಸಿ ಹೋಗಿದೆ. ಈ ಕಾರಣಕ್ಕೆ ಪುಣೆಯಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಜನರು ಅನಗತ್ಯವಾಗಿ ಮನೆಯಿಂದ ಹೊರ ಬರುವುದನ್ನು ನಿಷೇಧಿಸಲಾಗಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕ್ರಿಮಿನಲ್ ವ್ಯಕ್ತಿಯ ಅಂತ್ಯಕ್ರಿಯೆಗಾಗಿ ಲಾಕ್‌ಡೌನ್ ನಡುವೆಯೂ ಬೃಹತ್ ಬೈಕ್ ರ‍್ಯಾಲಿ ಆಯೋಜಿಸಿದ ಸಹಚರರು

ಆದರೂ ಈ ರ‍್ಯಾಲಿಯಲ್ಲಿ ಭಾಗವಹಿಸುವ ಮೂಲಕ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಪುಣೆ ನಗರದಲ್ಲಿ ಕರೋನಾ ಸೋಂಕಿತರಿಗೆ ನೆರವಾಗಲು ಹಲವಾರು ಜನರು ಮುಂದೆ ಬರುತ್ತಿದ್ದಾರೆ.

ಕ್ರಿಮಿನಲ್ ವ್ಯಕ್ತಿಯ ಅಂತ್ಯಕ್ರಿಯೆಗಾಗಿ ಲಾಕ್‌ಡೌನ್ ನಡುವೆಯೂ ಬೃಹತ್ ಬೈಕ್ ರ‍್ಯಾಲಿ ಆಯೋಜಿಸಿದ ಸಹಚರರು

ಪುಣೆ ನಗರದಲ್ಲಿರುವ ಆಟೋ ಚಾಲಕರು ತಮ್ಮ ಆಟೋ ರಿಕ್ಷಾಗಳನ್ನು ಆಟೋ ಆಂಬ್ಯುಲೆನ್ಸ್'ಗಳಾಗಿ ಬದಲಿಸಿದ್ದಾರೆ. ಈ ಆಟೋ ರಿಕ್ಶಾಗಳಲ್ಲಿ ಆಕ್ಸಿಜನ್ ಸಿಲಿಂಡರ್ ಹೊಂದುವ ಮೂಲಕ ಕರೋನಾ ಸೋಂಕಿತರಿಗೆ ನೆರವಾಗುತ್ತಿದ್ದಾರೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಕ್ರಿಮಿನಲ್ ವ್ಯಕ್ತಿಯ ಅಂತ್ಯಕ್ರಿಯೆಗಾಗಿ ಲಾಕ್‌ಡೌನ್ ನಡುವೆಯೂ ಬೃಹತ್ ಬೈಕ್ ರ‍್ಯಾಲಿ ಆಯೋಜಿಸಿದ ಸಹಚರರು

ಈ ರಿಕ್ಷಾಗಳಲ್ಲಿರುವ ಆಕ್ಸಿಜನ್ ಸಿಲಿಂಡರ್'ಗಳು ಸುಮಾರು ಆರರಿಂದ ಏಳು ಗಂಟೆಗಳ ಕಾಲ ಸೋಂಕಿತರಿಗೆ ಆಸರೆಯಾಗಬಲ್ಲವು. ಈ ಆಟೋ ಆಂಬ್ಯುಲೆನ್ಸ್ ಅಗತ್ಯವಿರುವವರಿಗಾಗಿ ಕರೋನಾ ಸಹಾಯವಾಣಿ ಸಂಖ್ಯೆಯನ್ನು ಸಹ ಬಿಡುಗಡೆ ಮಾಡಲಾಗಿದೆ.

ಸೋಂಕಿತರು ಹಾಗೂ ಅವರ ಕುಟುಂಬದವರು ಈ ಸಹಾಯವಾಣಿಗೆ ಕರೆ ಮಾಡಿ ಈ ಸೌಲಭ್ಯವನ್ನು ಪಡೆಯಬಹುದು. ಮಹಾರಾಷ್ಟ್ರದಲ್ಲಿ ವರದಿಯಾಗುತ್ತಿರುವ ಹೊಸ ಪ್ರಕರಣಗಳಲ್ಲಿ ಹೆಚ್ಚು ಸೋಂಕಿತರು ಪುಣೆಯಲ್ಲಿ ಕಂಡು ಬರುತ್ತಿದ್ದಾರೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಕ್ರಿಮಿನಲ್ ವ್ಯಕ್ತಿಯ ಅಂತ್ಯಕ್ರಿಯೆಗಾಗಿ ಲಾಕ್‌ಡೌನ್ ನಡುವೆಯೂ ಬೃಹತ್ ಬೈಕ್ ರ‍್ಯಾಲಿ ಆಯೋಜಿಸಿದ ಸಹಚರರು

ಇಂತಹ ಸಂಕಷ್ಟದ ಸಂದರ್ಭದಲ್ಲಿ ಆಟೋ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುತ್ತಿರುವ ಪುಣೆಯ ಆಟೋ ರಿಕ್ಷಾ ಚಾಲಕರ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ರೀತಿಯ ಕಾರ್ಯಗಳು ಸೋಂಕಿತರ ಪ್ರಾಣ ಉಳಿಸಲು ನೆರವಾಗುತ್ತವೆ.

Most Read Articles

Kannada
English summary
Pune Police arrests 80 people for participating in bike rally. Read in Kannada.
Story first published: Monday, May 17, 2021, 20:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X