ಫುಟ್‍‍‍ಪಾತ್‍ ಮೇಲೆ ಬೈಕ್ ಓಡಿಸುತ್ತಿದ್ದವರನ್ನು ಬೆಂಡ್ ಎತ್ತಿದ ದಿಟ್ಟ ಮಹಿಳೆ..!

ಭಾರತದಲ್ಲಿ ವಾಹನಗಳ ಸಂಖ್ಯೆ ವಿಪರೀತವಾಗಿ ಏರಿಕೆಯಾಗಿದೆ. ಈ ಕಾರಣಕ್ಕೆ ಟ್ರಾಫಿಕ್ ಸಮಸ್ಯೆಯು ಹೆಚ್ಚಾಗಿದೆ. ಸಿಗ್ನಲ್‍‍ಗಳಲ್ಲಿ ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಯಾವುದಾದರೂ ಒಂದು ರಸ್ತೆಯಲ್ಲಿ ಚಲಿಸಿದರೆ ಆ ರಸ್ತೆಯಲ್ಲಿ ಮೂರರಿಂದ ನಾಲ್ಕು ಸಿಗ್ನಲ್‍‍ಗಳಿರುತ್ತವೆ.

ಫುಟ್‍‍‍ಪಾತ್‍ ಮೇಲೆ ಬೈಕ್ ಓಡಿಸುತ್ತಿದ್ದವರನ್ನು ಬೆಂಡ್ ಎತ್ತಿದ ದಿಟ್ಟ ಮಹಿಳೆ..!

ಇನ್ನು ಫುಟ್‍‍ಪಾತ್‍‍ಗಳ ಸ್ಥಿತಿಯನ್ನು ಹೇಳುವುದೇ ಬೇಡ. ಹಲವೆಡೆ ಫುಟ್‍‍ಪಾತ್ ಮೇಲೆ ಹಾಕಲಾಗಿರುವ ಕಲ್ಲುಗಳು ಎದ್ದು ಬಂದಿರುತ್ತವೆ. ಪಾದಚಾರಿಗಳು ಇವುಗಳ ಮೇಲೆ ನಡೆಯಲು ಪರದಾಡುವಂತಹ ಸ್ಥಿತಿ ಎದುರಾಗಿದೆ.

ಫುಟ್‍‍‍ಪಾತ್‍ ಮೇಲೆ ಬೈಕ್ ಓಡಿಸುತ್ತಿದ್ದವರನ್ನು ಬೆಂಡ್ ಎತ್ತಿದ ದಿಟ್ಟ ಮಹಿಳೆ..!

ಟ್ರಾಫಿಕ್‍‍ನಲ್ಲಿ ನಿಂತು ಮತ್ತೊಂದು ಸಿಗ್ನಲ್‍‍ನಿಂದ ಪಾರಾಗಲು ಬೈಕ್/ಸ್ಕೂಟರ್ ಸವಾರರು ಕಂಡು ಕೊಂಡಿರುವ ಸುಲಭದ ಮಾರ್ಗವೆಂದರೆ ಫುಟ್‍‍ಪಾತ್‍‍ಗಳ ಮೇಲೆ ತಮ್ಮ ವಾಹನಗಳಲ್ಲಿ ಹೋಗುವುದು. ಇದರಿಂದ ಅವರಿಗೆ ಅನುಕೂಲವಾದರೂ, ಪಾದಚಾರಿಗಳ ಸ್ಥಿತಿಯ ಬಗ್ಗೆ ಯೋಚಿಸುವುದೇ ಇಲ್ಲ.

ಫುಟ್‍‍‍ಪಾತ್‍ ಮೇಲೆ ಬೈಕ್ ಓಡಿಸುತ್ತಿದ್ದವರನ್ನು ಬೆಂಡ್ ಎತ್ತಿದ ದಿಟ್ಟ ಮಹಿಳೆ..!

ಪಾದಚಾರಿಗಳು ಈ ಬಗ್ಗೆ ಪ್ರಶ್ನೆ ಮಾಡದೇ ಇರುತ್ತಾರೆ. ಯಾರೊಬ್ಬರೂ ಪ್ರಶ್ನಿಸದ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ದ್ವಿಚಕ್ರ ವಾಹನ ಸವಾರರು ಪದೇ ಪದೇ ಫುಟ್‍‍ಪಾತ್ ಮೇಲೆ ವಾಹನಗಳನ್ನು ಓಡಿಸುತ್ತಲೇ ಇರುತ್ತಾರೆ.

ಫುಟ್‍‍‍ಪಾತ್‍ ಮೇಲೆ ಬೈಕ್ ಓಡಿಸುತ್ತಿದ್ದವರನ್ನು ಬೆಂಡ್ ಎತ್ತಿದ ದಿಟ್ಟ ಮಹಿಳೆ..!

ಆದರೆ ಇಲ್ಲೊಬ್ಬರು ಮಹಿಳೆ ದಿಟ್ಟತನದಿಂದ ಫುಟ್‍‍‍ಪಾತ್ ಮೇಲೆ ವಾಹನ ಚಾಲನೆ ಮಾಡುವವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪುಣೆಯ ನಿರ್ಮಲಾ ಗೋಖಲೆರವರೇ ಈ ರೀತಿ ಫುಟ್‍‍ಪಾತ್ ಮೇಲೆ ಬೈಕ್/ಸ್ಕೂಟರ್ ಓಡಿಸುವವರ ವಿರುದ್ಧ ತಿರುಗಿ ಬಿದ್ದು ಅವರಿಗೆ ನಾಗರಿಕ ಪ್ರಜ್ಞೆ ಕಲಿಸಿರುವ ದಿಟ್ಟ ಮಹಿಳೆ.

ಫುಟ್‍‍‍ಪಾತ್‍ ಮೇಲೆ ಬೈಕ್ ಓಡಿಸುತ್ತಿದ್ದವರನ್ನು ಬೆಂಡ್ ಎತ್ತಿದ ದಿಟ್ಟ ಮಹಿಳೆ..!

ಪುಣೆಯಲ್ಲಿನ ಎಸ್‍ಎನ್‍‍ಡಿಟಿ ಕಾಲೇಜ್ ಬಳಿಯಿರುವ ಬಿಜಿ ರಸ್ತೆಯಾದ ಕಾನಲ್‍‍ನಲ್ಲಿ ದ್ವಿಚಕ್ರ ವಾಹನ ಸವಾರರು ವಿಪರೀತವಾಗಿ ಫುಟ್‍‍ಪಾತ್ ಮೇಲೆ ವಾಹನಗಳನ್ನು ಚಾಲನೆ ಮಾಡುತ್ತಿದ್ದರು. ಟ್ರಾಫಿಕ್ ಪೊಲೀಸರಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಫುಟ್‍‍‍ಪಾತ್‍ ಮೇಲೆ ಬೈಕ್ ಓಡಿಸುತ್ತಿದ್ದವರನ್ನು ಬೆಂಡ್ ಎತ್ತಿದ ದಿಟ್ಟ ಮಹಿಳೆ..!

ಕೊನೆಗೆ ತಾವೇ ಇದಕ್ಕೆ ಪರಿಹಾರ ನೀಡಬೇಕೆಂದು ತೀರ್ಮಾನಿಸಿದರು. ಯಾವುದೇ ಬೈಕ್‍‍ಗಳು ಫುಟ್‍‍ಪಾತ್ ಮೇಲೆ ಬರುವುದು ಕಂಡು ಬಂದರೆ ತಕ್ಷಣವೇ ಅಡ್ಡ ನಿಂತು ಅವುಗಳು ಕೆಳಗಿಳಿಯುವಂತೆ ಮಾಡುತ್ತಿದ್ದಾರೆ.

ನಿರ್ಮಲಾ ಗೋಖಲೆರವರ ಈ ಕಾರ್ಯವು ಸಾಮಾಜಿಕ ಜಾಲತಾಲದಲ್ಲಿ ವೈರಲ್ ಆಗಿದೆ. ಸಾರ್ವಜನಿಕರು ನಿರ್ಮಲಾರವರ ಈ ಕಾರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಪುಣೆ ಪೊಲೀಸರೂ ಸಹ ಟ್ವೀಟ್ ಮಾಡಿದ್ದು, ಫುಟ್‍‍ಪಾತ್ ಮೇಲೆ ವಾಹನ ಚಾಲನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಫುಟ್‍‍‍ಪಾತ್‍ ಮೇಲೆ ಬೈಕ್ ಓಡಿಸುತ್ತಿದ್ದವರನ್ನು ಬೆಂಡ್ ಎತ್ತಿದ ದಿಟ್ಟ ಮಹಿಳೆ..!

ಯಾರೂ ಹೇಗಾದರೂ ಮಾಡಿಕೊಳ್ಳಲಿ ನನಗ್ಯಾಕೆ ಎಂಬುದನ್ನು ಬಿಟ್ಟು, ಬೇರೆಯವರಿಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ದಿಟ್ಟತನ ತೋರಿದ ನಿರ್ಮಲಾ ಗೋಖಲೆರವರು ನಿಜಕ್ಕೂ ಅಭಿನಂದನಾರ್ಹರು.

Most Read Articles

Kannada
English summary
Pune woman teaching civic sense to footpath riders. Read in Kannada.
Story first published: Saturday, February 22, 2020, 18:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X