Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ
ಭಾರತದಲ್ಲಿ ಕರೋನಾ ವೈರಸ್ ಹರಡುವುದನ್ನು ತಡೆಯಲು ಮಾರ್ಚ್ 24ರಂದು ಜಾರಿಗೊಳಿಸಲಾದ ಲಾಕ್‌ಡೌನ್ ಜನರನ್ನು ಸಂಕಷ್ಟಕ್ಕೆದೂಡಿತ್ತು. ಲಾಕ್‌ಡೌನ್ ನಿಂದಾಗಿ ಲಕ್ಷಾಂತರ ಜನರು ಕೆಲಸ ಕಳೆದು ಕೊಳ್ಳುವಂತಾಯಿತು.

ಹೀಗೆ ಕೆಲಸ ಕಳೆದುಕೊಂಡವರಲ್ಲಿ ಪಂಜಾಬ್‌ನ ಜಿರಾಕ್‌ಪುರ ಮೂಲದ 40 ವರ್ಷ ವಯಸ್ಸಿನ ಧನಿ ರಾಮ್ ಸಾಗು ಸಹ ಒಬ್ಬರು. ಅವರು ವೃತ್ತಿಯಲ್ಲಿ ಕಾರ್ಪೆಂಟರ್. ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡ ನಂತರ ಅವರ ಜೀವನವು ಸಂಕಷ್ಟಕ್ಕೀಡಾಯಿತು. ಆದರೆ ಧನಿ ರಾಮ್ ಮಾತ್ರ ಭರವಸೆಯನ್ನು ಕಳೆದುಕೊಳ್ಳಲಿಲ್ಲ. ಧನಿ ರಾಮ್ ಸಾಗು ಲಾಕ್‌ಡೌನ್ ಅವಧಿಯಲ್ಲಿ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಿದರು.

ಜೊತೆಗೆ ಹೊಸ ವಿಷಯಗಳನ್ನು ಕಲಿಯಲು ನಿರ್ಧರಿಸಿದರು. ಧನಿ ರಾಮ್ ಸಾಗು ತಮಗಾಗಿ ಸೈಕಲ್ ಅನ್ನು ತಯಾರಿಸಿಕೊಳ್ಳಲು ನಿರ್ಧರಿಸಿದರು. ಧನಿ ರಾಮ್ ಸಾಗು ಬಾಲ್ಯದಿಂದಲೂ ಸೈಕಲ್ ತಯಾರಿಸಬೇಕೆಂಬ ಕನಸು ಹೊಂದಿದ್ದರು.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಹದಗೆಟ್ಟಿದ್ದ ಅವರ ಆರ್ಥಿಕ ಪರಿಸ್ಥಿತಿ ಅವರಿಗೆ ಸೈಕಲ್ ಖರೀದಿಸಲು ಸಹಕರಿಸಲಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿಯೇ ಇದ್ದ ಕಾರಣ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಿರ್ಧರಿಸಿ ಸ್ವಂತ ಸೈಕಲ್ ತಯಾರಿಸಲು ಮುಂದಾದರು.

ಧನಿ ರಾಮ್ ಸಾಗು ತಾವು ತಯಾರಿಸುವ ಸೈಕಲ್ ವಿಭಿನ್ನವಾಗಿರಬೇಕೆಂದು ತೀರ್ಮಾನಿಸಿದರು. ಅವರು ಅಭಿವೃದ್ಧಿಪಡಿಸುತ್ತಿರುವ ಸೈಕಲ್ ಎಲ್ಲರ ಗಮನ ಸೆಳೆದಿದೆ. ಧನಿ ರಾಮ್ ಸಾಗು ಅಭಿವೃದ್ಧಿಪಡಿಸಿರುವ ಸೈಕಲ್ ಭಾರತ ಮಾತ್ರವಲ್ಲದೆ ವಿಶ್ವದ ವಿವಿಧ ಭಾಗಗಳ ಜನರ ಗಮನವನ್ನು ಸೆಳೆದಿದೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಈ ಸೈಕಲ್ ಅನ್ನು ಮರದಿಂದ ತಯಾರಿಸಲಾಗಿದೆ. ಮರದಿಂದ ತಯಾರಾಗಿರುವ ಈ ಸೈಕಲ್ಲಿನ ಫೋಟೋಗಳು ಇಂಟರ್ ನೆಟ್ ನಲ್ಲಿ ವೈರಲ್ ಆಗಿವೆ. ಮರದ ಸೈಕಲ್ ನೋಡಿರುವ ಅನೇಕ ಜನರು ಈ ಸೈಕಲ್ ಸವಾರಿ ಮಾಡಲು ಬಯಸಿದ್ದಾರೆ. ಇಷ್ಟು ಮಾತ್ರವಲ್ಲದೇ ಧನಿ ರಾಮ್ ಈ ಸೈಕಲ್ ಗಳಿಗಾಗಿ ಕೆನಡಾ ಹಾಗೂ ದಕ್ಷಿಣ ಆಫ್ರಿಕಾ ಸೇರಿದಂತೆ ಹಲವಾರು ದೇಶಗಳಿಂದ ಆರ್ಡರ್ ಗಳನ್ನು ಪಡೆದಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಕೆಲಸ ಕಳೆದು ಕೊಂಡರೂ ಜೀವನೋತ್ಸಾಹ ಕಳೆದು ಕೊಳ್ಳದ ವ್ಯಕ್ತಿ ಇಂದು ತಮ್ಮ ಉತ್ಸಾಹ ಹಾಗೂ ಕಠಿಣ ಪರಿಶ್ರಮದಿಂದ ವಿಶ್ವ ವಿಖ್ಯಾತಿ ಪಡೆದಿದ್ದಾರೆ. ಮರದಿಂದ ಸೈಕಲ್‌ಗಳನ್ನು ತಯಾರಿಸುತ್ತಿರುವ ಧನಿ ರಾಮ್ ಸಾಗುರವರನ್ನು ಭಾರತದ ಪ್ರಮುಖ ಸೈಕಲ್ ತಯಾರಕ ಕಂಪನಿಗಳು ಸಹ ಸಂಪರ್ಕಿಸಿವೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಭಾರತದ ಪ್ರತಿ ಮನೆಯಲ್ಲಿಯೂ ಕನಿಷ್ಠ ಒಂದಾದರೂ ವಾಹನಗಳಿವೆ. ವಾಹನಗಳಲ್ಲಿ ಪ್ರಯಾಣಿಸುವುದರಿಂದ ನಮ್ಮ ಸಮಯ ಉಳಿತಾಯವಾದರೂ, ಈ ಪ್ರಯಾಣವು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಈ ಕಾರಣಕ್ಕೆ ಜನರು ಈಗ ಸೈಕ್ಲಿಂಗ್‌ನತ್ತ ಒಲವು ತೋರುತ್ತಿದ್ದಾರೆ. ಲಾಕ್‌ಡೌನ್ ನಿಂದಾಗಿ ಮನೆಯಲ್ಲಿಯೇ ಬಂಧಿಯಾಗಿದ್ದ ಜನರು ಈಗ ಸೈಕ್ಲಿಂಗ್ ಸವಾರಿಯನ್ನು ಆರಂಭಿಸಿದ್ದಾರೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕರೋನಾ ವೈರಸ್ ಹಾಗೂ ಲಾಕ್‌ಡೌನ್ ನಿಯಮಗಳು ಜನರ ಆರೋಗ್ಯವನ್ನು ಹದಗೆಡಿಸಿವೆ. ಹಲವೆಡೆ ಜಿಮ್‌ಗಳು ಪುನರಾರಂಭಗೊಂಡಿದ್ದರೂ ಜನರು ವೈರಸ್ ಹರಡಬಹುದೆಂಬ ಭೀತಿಯಲ್ಲಿ ಜಿಮ್‌ಗಳಿಗೆ ತೆರಳುತ್ತಿಲ್ಲ. ಇದರ ಜೊತೆಗೆ ಉದ್ಯಾನವನಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಜನರು ಲಾಕ್‌ಡೌನ್ ನಂತರ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಕೆಲವರು ತಮ್ಮ ಅನುಮಾನಗಳಿಗೆ ಗೂಗಲ್ ಮೂಲಕ ಪರಿಹಾರ ಹುಡುಕುತ್ತಿದ್ದಾರೆ. ಗೂಗಲ್ ಸರ್ಚ್ ಡೇಟಾ ಇದನ್ನು ಖಚಿತಪಡಿಸಿದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಜನರು ಜಿಮ್‌ಗಳಿಗೆ ಹೋಗುವ ಬದಲು ಸೈಕ್ಲಿಂಗ್ ಮಾಡುವುದೇ ಸುರಕ್ಷಿತವೆಂದು ಕಂಡು ಕೊಂಡಿದ್ದಾರೆ. ಈ ಸಂದರ್ಭದಲ್ಲಿ ಧನಿ ರಾಮ್ ಸಾಗು ಅಭಿವೃದ್ಧಿಪಡಿಸಿರುವ ಮರದ ಸೈಕಲ್ ಜನರ ಗಮನ ಸೆಳೆದಿದೆ.