ಲಾಕ್‌ಡೌನ್ ಅವಧಿಯಲ್ಲಿ ಮದುವೆಯಾದ ನವ ದಂಪತಿಗಳಿಗೆ ಹಣ ನೀಡಿ ಹರಸಿದ ಪೊಲೀಸರು

ಕಳೆದ ಒಂದು ವರ್ಷದಿಂದ ಕರೋನಾ ವೈರಸ್ ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ಅಟ್ಟಹಾಸ ಮೆರೆಯುತ್ತಿದೆ. ಕರೋನಾ ವೈರಸ್ ಹರಡಬಾರದು ಎಂಬ ಕಾರಣಕ್ಕೆ ಕಳೆದ ವರ್ಷ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು.

ಲಾಕ್‌ಡೌನ್ ಅವಧಿಯಲ್ಲಿ ಮದುವೆಯಾದ ನವ ದಂಪತಿಗೆ ಹಣ ನೀಡಿ ಹರಸಿದ ಪೊಲೀಸರು

ಈಗ ದೇಶಾದ್ಯಂತೆ ಕರೋನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿರುವುದರಿಂದ ಮತ್ತೊಮ್ಮೆ ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ. ಮದುವೆ ಸಮಾರಂಭಗಳಿಗೆ ಸೀಮಿತ ಸಂಖ್ಯೆಯ ಜನರು ಮಾತ್ರ ಸೇರಬಹುದೆಂಬ ಷರತ್ತು ವಿಧಿಸಿ ಅನುಮತಿ ನೀಡಲಾಗಿದೆ.

ಲಾಕ್‌ಡೌನ್ ಅವಧಿಯಲ್ಲಿ ಮದುವೆಯಾದ ನವ ದಂಪತಿಗೆ ಹಣ ನೀಡಿ ಹರಸಿದ ಪೊಲೀಸರು

ಲಾಕ್‌ಡೌನ್ ಅವಧಿಯಲ್ಲಿ ಪೊಲೀಸರ ನಾನಾ ಮುಖಗಳು ಅನಾವರಣಗೊಳ್ಳುತ್ತಿವೆ. ಕೆಲವೆಡೆ ಪೊಲೀಸರು ಸಾಮಾನ್ಯ ಜನರೊಂದಿಗೆ ಮಾನವೀಯತೆಯಿಂದ ನಡೆದುಕೊಂಡು ಅವರಿಗೆ ನೆರವಾಗುತ್ತಿದ್ದಾರೆ. ಇನ್ನು ಕೆಲವೆಡೆ ಜನರ ಮೇಲೆ ಲಾಠಿ ಬೀಸಿ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಲಾಕ್‌ಡೌನ್ ಅವಧಿಯಲ್ಲಿ ಮದುವೆಯಾದ ನವ ದಂಪತಿಗೆ ಹಣ ನೀಡಿ ಹರಸಿದ ಪೊಲೀಸರು

ಈಗ ಐಪಿಎಸ್ ಅಧಿಕಾರಿ ದೀಪನ್ಶು ಕಬ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಪಂಜಾಬ್ ಪೊಲೀಸರು ಹೊಸದಾಗಿ ಮದುವೆಯಾದ ದಂಪತಿಗೆ ಶುಭ ಕೋರುತ್ತಿರುವುದನ್ನು ಕಾಣಬಹುದು.

ಲಾಕ್‌ಡೌನ್ ಅವಧಿಯಲ್ಲಿ ಮದುವೆಯಾದ ನವ ದಂಪತಿಗೆ ಹಣ ನೀಡಿ ಹರಸಿದ ಪೊಲೀಸರು

ಈ ವೀಡಿಯೊದಲ್ಲಿ ಇಬ್ಬರು ಪೊಲೀಸರು ಬೈಕಿನಲ್ಲಿ ಹೋಗುತ್ತಿದ್ದ ನವ ದಂಪತಿಗಳನ್ನು ತಡೆದು ನಿಲ್ಲಿಸಿರುವುದನ್ನು ಕಾಣಬಹುದು. ನವ ವಿವಾಹಿತರಿಗೆ ಶುಭ ಕೋರುವ ಪೊಲೀಸರು ಅವರಿಗೆ ಹೂವಿನ ಹಾರ ಹಾಕುತ್ತಾರೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಲಾಕ್‌ಡೌನ್ ಅವಧಿಯಲ್ಲಿ ಮದುವೆಯಾದ ನವ ದಂಪತಿಗೆ ಹಣ ನೀಡಿ ಹರಸಿದ ಪೊಲೀಸರು

ನಂತರ ಆ ಇಬ್ಬರೂ ಪೊಲೀಸ್ ಅಧಿಕಾರಿಗಳು ನೂತನ ವಧು ವರರಿಗೆ ಹಣ ನೀಡುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಲಾಕ್‌ಡೌನ್ ಅವಧಿಯಲ್ಲಿ ಮದುವೆಯಾದ ನವ ದಂಪತಿಗೆ ಹಣ ನೀಡಿ ಹರಸಿದ ಪೊಲೀಸರು

ನವವಿವಾಹಿತರು ಕೋವಿಡ್ ನಿಯಮಗಳನ್ನು ಅನುಸರಿಸಿ ಬೈಕಿನಲ್ಲಿ ಮನೆಗೆ ಹೋಗುತ್ತಿದ್ದರು. ಪೊಲೀಸರು ಮನೆಯ ಹಿರಿಯರಂತೆ ಶುಭಾಶಯ ಕೋರಿ, ಹರಸಿದ್ದಾರೆ. ಪೊಲೀಸರ ನಡುವಳಿಕೆ ಅದ್ಭುತ ಎಂದು ದೀಪನ್ಶು ಕಬ್ರಾ ಹೇಳಿದ್ದಾರೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಲಾಕ್‌ಡೌನ್ ಅವಧಿಯಲ್ಲಿ ಮದುವೆಯಾದ ನವ ದಂಪತಿಗೆ ಹಣ ನೀಡಿ ಹರಸಿದ ಪೊಲೀಸರು

ದೀಪನ್ಶು ಕಬ್ರಾ ಅವರ ಈ ಟ್ವೀಟ್‌ಗೆ ಇದುವರೆಗೂ 6 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಇದೇ ವೇಳೆ ಅವರ ಟ್ವೀಟ್ ಅನ್ನು 837 ಬಾರಿ ರಿಟ್ವೀಟ್ ಮಾಡಲಾಗಿದ್ದು, 56 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ವಿವಿಧ ರಾಜ್ಯಗಳ ಪೊಲೀಸರು ಲಾಕ್‌ಡೌನ್ ಅವಧಿಯಲ್ಲಿ ಜನರಿಗೆ ನಾನಾ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಹರಿಯಾಣ ಪೊಲೀಸರು ಆಂಬ್ಯುಲೆನ್ಸ್'ಗಳ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಎಸ್‌ಯು‌ವಿ ಆಂಬ್ಯುಲೆನ್ಸ್'ಗಳಿಗೆ ಚಾಲನೆ ನೀಡಿದ್ದರು.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಲಾಕ್‌ಡೌನ್ ಅವಧಿಯಲ್ಲಿ ಮದುವೆಯಾದ ನವ ದಂಪತಿಗೆ ಹಣ ನೀಡಿ ಹರಸಿದ ಪೊಲೀಸರು

ಇನ್ನು ರಾಜಸ್ಥಾನದ ಜೋಧ್ ಪುರದ ಪೊಲೀಸರು ವಿನಾ ಕಾರಣ ರಸ್ತೆಯಲ್ಲಿ ತಿರುಗಾಡುವವರನ್ನು ಸಮೀಪದಲ್ಲಿ ನಿಲ್ಲಿಸಿದ್ದ ಆಂಬ್ಯುಲೆನ್ಸ್'ನೊಳಕ್ಕೆ ತಳ್ಳಿ ವಿನೂತನ ರೀತಿಯಲ್ಲಿ ಶಿಕ್ಷೆ ನೀಡುತ್ತಿದ್ದರು.

Most Read Articles

Kannada
English summary
Punjab police bless newly married couple. Read in Kannada.
Story first published: Saturday, May 15, 2021, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X