ಮಹೀಂದ್ರಾ ಕಾರಿನ ಸುರಕ್ಷತೆ ಬಗ್ಗೆ ಸಂದೇಹ ಮೂಡಿಸಿದ ವಿಕಾಸ್ ದುಬೆ ಎನ್‌ಕೌಂಟರ್

ನಟೋರಿಯಸ್ ಕ್ರಿಮಿನಲ್ ವಿಕಾಸ್ ದುಬೆಯನ್ನು ನಿನ್ನೆ ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ಬಂಧಿಸಲಾಗಿತ್ತು. ಇಂದು ಆತನನ್ನು ಉತ್ತರ ಪ್ರದೇಶ ಪೊಲೀಸರು ಕಾನ್ಪುರಕ್ಕೆ ಕರೆದೊಯ್ಯುತ್ತಿದ್ದರು. ಮಾರ್ಗಮಧ್ಯೆ ವಿಕಾಸ್ ದುಬೆಯಿದ್ದ ಕಾರು ಪಲ್ಟಿಯಾಗಿದೆ.

ಮಹೀಂದ್ರಾ ಕಾರಿನ ಸುರಕ್ಷತೆ ಬಗ್ಗೆ ಸಂದೇಹ ಮೂಡಿಸಿದ ವಿಕಾಸ್ ದುಬೆ ಎನ್ ಕೌಂಟರ್

ಕಾರು ಪಲ್ಟಿಯಾದ ನಂತರ ಪೊಲೀಸರ ಬಳಿಯಿದ್ದ ಗನ್ ಕಸಿದು ಪರಾರಿಯಾಗಲು ಯತ್ನಿಸಿದ ವಿಕಾಸ್ ದುಬೆ ಪೊಲೀಸರು ನಡೆಸಿದ ಎನ್ ಕೌಂಟರಿನಲ್ಲಿ ಹತನಾಗಿದ್ದಾನೆ. ಘಟನಾ ಸ್ಥಳದಲ್ಲಿ ಮಹೀಂದ್ರಾ ಟಿಯುವಿ 300 ಉರುಳಿಬಿದ್ದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮಹೀಂದ್ರಾ ಟಿಯುವಿ 300 ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಏಕೆಂದರೆ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಹೊಂಡಗಳಾಗಲಿ ಅಥವಾ ಸ್ಪೀಡ್ ಬ್ರೇಕರ್‌ಗಳಾಗಲಿ ಇರಲಿಲ್ಲ. ಆದರೂ ಮಹೀಂದ್ರಾ ಟಿಯುವಿ 300 ಪಲ್ಟಿಯಾಗಿದೆ.

ಮಹೀಂದ್ರಾ ಕಾರಿನ ಸುರಕ್ಷತೆ ಬಗ್ಗೆ ಸಂದೇಹ ಮೂಡಿಸಿದ ವಿಕಾಸ್ ದುಬೆ ಎನ್ ಕೌಂಟರ್

ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಹೀಂದ್ರಾ ಟಿಯುವಿ 300 ಸುರಕ್ಷತೆಯನ್ನು ಪ್ರಶ್ನಿಸಲಾಗುತ್ತಿದೆ. ಸಮತಟ್ಟಾದ ಹಾಗೂ ಅಗಲವಾದ ರಸ್ತೆಗಳಲ್ಲಿ ನಿಮ್ಮ ವಾಹನ ಹೇಗೆ ಪಲ್ಟಿಯಾಗುತ್ತದೆ ಎಂದು ಅನೇಕ ಮಂದಿ ಮಹೀಂದ್ರಾ ಕಂಪನಿಯನ್ನು ಪ್ರಶ್ನಿಸುತ್ತಿದ್ದಾರೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಮಹೀಂದ್ರಾ ಕಾರಿನ ಸುರಕ್ಷತೆ ಬಗ್ಗೆ ಸಂದೇಹ ಮೂಡಿಸಿದ ವಿಕಾಸ್ ದುಬೆ ಎನ್ ಕೌಂಟರ್

ಮಹೀಂದ್ರಾ ಅಂಡ್ ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ ಕೂಡ ಇದೇ ಕಾರನ್ನು ಹೊಂದಿದ್ದಾರೆ. ಸರಿಯಾಗಿರುವ ರಸ್ತೆಗಳಲ್ಲಿಯೂ ಸಹ ಈ ಕಾರು ಪಲ್ಟಿಯಾಗುವುದರಿಂದ ಈ ಕಾರ್ ಅನ್ನು ಬಳಸದಂತೆ ಅವರಿಗೆ ಸಲಹೆ ನೀಡಲಾಗುತ್ತಿದೆ.

ಮಹೀಂದ್ರಾ ಕಾರಿನ ಸುರಕ್ಷತೆ ಬಗ್ಗೆ ಸಂದೇಹ ಮೂಡಿಸಿದ ವಿಕಾಸ್ ದುಬೆ ಎನ್ ಕೌಂಟರ್

ಈ ಘಟನೆಯು ಮಹೀಂದ್ರಾ ಟಿಯುವಿ 300 ಮಾರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಟ್ವಿಟರ್ ಗ್ರಾಹಕರೊಬ್ಬರು ತಾನು ಮಹೀಂದ್ರಾ ಟಿಯುವಿ 300 ಖರೀದಿಸಲು ಮುಂದಾಗಿದ್ದೆ. ಆದರೆ ಸಮತಟ್ಟಾದ ರಸ್ತೆಯಲ್ಲೂ ಈ ಕಾರು ಪಲ್ಟಿಯಾಗಿ ಬಿದ್ದಿರುವುದರಿಂದ ನಾನು ನನ್ನ ನಿರ್ಧಾರವನ್ನು ಬದಲಾಯಿಸಿದ್ದೇನೆ ಎಂದು ಹೇಳಿದ್ದಾರೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಮಹೀಂದ್ರಾ ಕಾರಿನ ಸುರಕ್ಷತೆ ಬಗ್ಗೆ ಸಂದೇಹ ಮೂಡಿಸಿದ ವಿಕಾಸ್ ದುಬೆ ಎನ್ ಕೌಂಟರ್

ಈ ರೀತಿಯ ಕಾರುಗಳನ್ನು ನಂಬಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಮಹೀಂದ್ರಾ ಅಂಡ್ ಮಹೀಂದ್ರಾ ಎಂಡಿ ಪವನ್ ಗೋಯೆಂಕಾರವರು ಈ ಹಿಂದೆ ಮಹೀಂದ್ರಾ ಕಾರುಗಳ ಸುರಕ್ಷತೆಯನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದರು.

ಮಹೀಂದ್ರಾ ಕಾರಿನ ಸುರಕ್ಷತೆ ಬಗ್ಗೆ ಸಂದೇಹ ಮೂಡಿಸಿದ ವಿಕಾಸ್ ದುಬೆ ಎನ್ ಕೌಂಟರ್

ಮಹೀಂದ್ರಾ ಎಕ್ಸ್‌ಯುವಿ 300 ದೇಶದ ಸುರಕ್ಷಿತ ಕಾರುಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ತಮ್ಮ ಕಂಪನಿಯ ಎಸ್ ಯುವಿಯನ್ನು ಆನಂದ್ ಮಹೀಂದ್ರಾರವರು ಶ್ಲಾಘಿಸಿದ್ದರು. ಸಾಮಾನ್ಯವಾಗಿ ಮಹೀಂದ್ರಾ ಕಂಪನಿಯ ಕಾರುಗಳನ್ನು ಬಲಶಾಲಿ ಕಾರುಗಳೆಂದು ಪರಿಗಣಿಸಲಾಗುತ್ತದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಮಹೀಂದ್ರಾ ಕಾರಿನ ಸುರಕ್ಷತೆ ಬಗ್ಗೆ ಸಂದೇಹ ಮೂಡಿಸಿದ ವಿಕಾಸ್ ದುಬೆ ಎನ್ ಕೌಂಟರ್

ಕಂಪನಿಯು ತನ್ನ ವಾಹನಗಳಲ್ಲಿ ಸಾಕಷ್ಟು ಸುರಕ್ಷತಾ ಫೀಚರ್ ಹಾಗೂ ಎಕ್ವಿಪ್ ಮೆಂಟ್ ಗಳನ್ನು ನೀಡುತ್ತದೆ. ಇವು ಭಾರತೀಯ ರಸ್ತೆಗಳಿಗೆ ಹೇಳಿ ಮಾಡಿಸಿದಂತಿವೆ. ಇನ್ನೂ ಮಹೀಂದ್ರಾ ಟಿಯುವಿ 300 ಕಾರಿನ ಸುರಕ್ಷತಾ ಫೀಚರ್ ಗಳ ಬಗ್ಗೆ ಹೇಳುವುದಾದರೆ ಈ ಕಾರು ಎರಡು ಏರ್‌ಬ್ಯಾಗ್‌ಗಳನ್ನು ಹೊಂದಿದೆ.

ಮಹೀಂದ್ರಾ ಕಾರಿನ ಸುರಕ್ಷತೆ ಬಗ್ಗೆ ಸಂದೇಹ ಮೂಡಿಸಿದ ವಿಕಾಸ್ ದುಬೆ ಎನ್ ಕೌಂಟರ್

ಇದರ ಜೊತೆಗೆ ಇಬಿಡಿ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ಹೈ ಸ್ಟ್ರೆಂತ್ ಸ್ಟೀಲ್, ಕಾರ್ನರಿಂಗ್ ಬ್ರೇಕಿಂಗ್ ಕಂಟ್ರೋಲ್, ಡಿಜಿಟಲ್ ಇಮೊಬೈಲೈಸರ್, ಆಟೋಮ್ಯಾಟಿಕ್ ಡೋರ್ ಲಾಕ್ ಗಳನ್ನು ಹೊಂದಿದೆ. ಈ ಕಾರಿನಲ್ಲಿರುವ ಚಾಸಿಸ್ ಅನ್ನು ಸ್ಕಾರ್ಪಿಯೋದಿಂದ ಪಡೆಯಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮಹೀಂದ್ರಾ ಕಾರಿನ ಸುರಕ್ಷತೆ ಬಗ್ಗೆ ಸಂದೇಹ ಮೂಡಿಸಿದ ವಿಕಾಸ್ ದುಬೆ ಎನ್ ಕೌಂಟರ್

ಇಷ್ಟೆಲ್ಲಾ ಫೀಚರ್ ಹಾಗೂ ಎಕ್ವಿಪ್ ಮೆಂಟ್ ಗಳನ್ನು ಹೊಂದಿದ್ದರೂ, ಸಮತಟ್ಟಾದ ಹಾಗೂ ಅಗಲವಾದ ರಸ್ತೆಯಲ್ಲಿ ಮಹೀಂದ್ರಾ ಟಿಯುವಿ 300 ಪಲ್ಟಿಯಾಗಿದೆ. ಈ ಕಾರಣಕ್ಕೆ ಸಾರ್ವಜನಿಕರು, ಗಣ್ಯರು ಸೇರಿದಂತೆ ಹಲವಾರು ಜನರು ಮಹೀಂದ್ರಾ ಕಂಪನಿಯ ಈ ಕಾರ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ.

ಮಹೀಂದ್ರಾ ಕಾರಿನ ಸುರಕ್ಷತೆ ಬಗ್ಗೆ ಸಂದೇಹ ಮೂಡಿಸಿದ ವಿಕಾಸ್ ದುಬೆ ಎನ್ ಕೌಂಟರ್

ಇನ್ನೂ ವಿಕಾಸ್ ದುಬೆಗೆ ಸೇರಿದ್ದ ಕಾರುಗಳನ್ನು ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶ ಪೊಲೀಸರು ಜೆಸಿಬಿ ಬಳಸಿ ನಾಶಪಡಿಸಿದ್ದರು. ಆತನಿಗೆ ಸೇರಿದ್ದ ಮನೆಯನ್ನು ಧ್ವಂಸಗೊಳಿಸುವ ಸಂದರ್ಭದಲ್ಲಿ ಕಾರುಗಳನ್ನೂ ನಾಶಪಡಿಸಲಾಗಿತ್ತು.

Most Read Articles

Kannada
English summary
Question arises about Mahindra TUV300 safety after vikas dubey encounter. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X