2ನೇ ಹಂತದಲ್ಲಿ ಮತ್ತೆ ನಾಲ್ಕು ಹೊಸ ರೆಫೇಲ್ ಯುದ್ದವಿಮಾನಗಳನ್ನು ಪಡೆದುಕೊಳ್ಳಲಿದೆ ಭಾರತೀಯ ಸೇನಾಪಡೆ

ಭಾರತೀಯ ಸೇನಾಪಡೆಯಲ್ಲಿ ಅತ್ಯಾಧುನಿಕ ಯುದ್ದವಿಮಾನಗಳಾದ ರಫೇಲ್ ಜೆಟ್ ಸೇರ್ಪಡೆಯೊಂದಿಗೆ ಹೊಸ ಯುಗಾಂಭವಾಗಿದೆ ಎಂದರೆ ತಪ್ಪಾಗುವುದಿಲ್ಲ. ರಫೇಲ್ ಯುದ್ದವಿಮಾನಗಳು ಭಾರತಕ್ಕೆ ಬಂದಿಳಿಯುವ ಮೂಲಕ ಸೇನೆಗೆ ಆತ್ಮವಿಶ್ವಾಸ ಹೆಚ್ಚಿಸಿದ್ದು, ಇದೀಗ 2ನೇ ಹಂತದಲ್ಲಿ ಮತ್ತೆ ನಾಲ್ಕು ರಫೇಲ್ ಜೆಟ್ ವಿತರಣೆಗೆ ಸಜ್ಜುಗೊಂಡಿವೆ.

4 ಹೊಸ ರೆಫೇಲ್ ಯುದ್ದವಿಮಾನಗಳನ್ನು ಪಡೆದುಕೊಳ್ಳಲಿದೆ ಭಾರತೀಯ ಸೇನಾಪಡೆ

ಕೇಂದ್ರ ಸರ್ಕಾರವು ಬೇಡಿಕೆ ಸಲ್ಲಿಸಿದ್ದ ಒಟ್ಟು 36 ರಫೇಲ್ ಯುದ್ದ ವಿಮಾನಗಳಲ್ಲಿ ಸದ್ಯಕ್ಕೆ 5 ಯುದ್ದವಿಮಾನಗಳನ್ನು ಭಾರತೀಯ ವಾಯುಪಡೆಗೆ ಹಸ್ತಾಂತರ ಮಾಡಲಾಗಿದ್ದು, ಇದೇ ತಿಂಗಳು 10ರಂದು ಮೊದಲ ಬ್ಯಾಚ್‌ನ ರಫೇಲ್ ಯುದ್ದವಿಮಾನಗಳು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿವೆ. ಇದರ ಬೆನ್ನಲ್ಲೇ 2ನೇ ಬ್ಯಾಚ್‌ನಲ್ಲಿ 4 ಯುದ್ದವಿಮಾನಗಳು ವಿತರಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಅಕ್ಟೋಬರ್ ಮೊದಲ ವಾರದಲ್ಲಿ ಎರಡನೇ ಹಂತದ ರಫೇಲ್ ಜೆಟ್‌ಗಳು ಸೇನಾಪಡೆಗೆ ವಿತರಣೆಯಾಗಲಿವೆ. ಇದು ಭಾರತ ಮತ್ತು ಫ್ರಾನ್ಸ್ ನಡುವಿನ ಅತಿದೊಡ್ಡ ಭದ್ರತಾ ಒಪ್ಪಂದವಾಗಿದ್ದು, ಹೊಸ ಯುದ್ದವಿಮಾನಗಳ ಖರೀದಿದಾಗಿ ಒಟ್ಟು ರೂ. 59 ಸಾವಿರ ಕೋಟಿ ಖರ್ಚುಮಾಡಲಾಗುತ್ತಿದೆ.

4 ಹೊಸ ರೆಫೇಲ್ ಯುದ್ದವಿಮಾನಗಳನ್ನು ಪಡೆದುಕೊಳ್ಳಲಿದೆ ಭಾರತೀಯ ಸೇನಾಪಡೆ

ಗಡಿ ಪ್ರದೇಶಗಳಲ್ಲಿ ಶತ್ರು ರಾಷ್ಟ್ರಗಳ ಉಪಟಳ ಹೆಚ್ಚಾಗುತ್ತಿರುವ ಸಂದರ್ಭದದಲ್ಲೇ ಹೊಸ ಫೈಟರ್ ಜೆಟ್‌ಗಳು ಭಾರತೀಯ ಸೇನೆಯಲ್ಲಿ ಸೇರ್ಪಡೆಯಾಗಿರುವುದು ಮತ್ತಷ್ಟು ಬಲತುಂಬಿದ್ದು, ಅತ್ಯಾಧುನಿಕ ಯುದ್ದತಂತ್ರಗಳನ್ನು ಹೊಂದಿರುವ ಹೊಸ ಫೈಟರ್ ಜೆಟ್‌ಗಳು ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ಮಹತ್ವದ ಪಾತ್ರವಹಿಸಲಿವೆ.

4 ಹೊಸ ರೆಫೇಲ್ ಯುದ್ದವಿಮಾನಗಳನ್ನು ಪಡೆದುಕೊಳ್ಳಲಿದೆ ಭಾರತೀಯ ಸೇನಾಪಡೆ

ಭಾರತೀಯ ವಾಯುಸೇನಾ ಪಡೆಯನ್ನು ಸೇರ್ಪಡೆಗೊಂಡಿರುವ ರಫೆಲ್ ಯುದ್ದವಿಮಾನಗಳು ಭಾರತದ ವಾಯುಪಡೆಯ ಶಕ್ತಿಯನ್ನು ಹೆಚ್ಚಿಸಿದ್ದು, ಶತ್ರು ರಾಷ್ಟ್ರಗಳ ಬಳಿಯಿರುವ ಯುದ್ದವಿಮಾನಗಳಿಂತಲೂ ರಫೇಲ್ ಯುದ್ದವಿಮಾನಗಳು ಹೊಸ ವೈಶಿಷ್ಟ್ಯತೆಗಳೊಂದಿಗೆ ಕಾರ್ಯಾಚರಣೆ ತಂತ್ರಹೊಂದಿವೆ.

4 ಹೊಸ ರೆಫೇಲ್ ಯುದ್ದವಿಮಾನಗಳನ್ನು ಪಡೆದುಕೊಳ್ಳಲಿದೆ ಭಾರತೀಯ ಸೇನಾಪಡೆ

ಶತ್ರು ರಾಷ್ಟ್ರಗಳ ಬಳಿಯಿರುವ ಎಫ್-16 ಯುದ್ದವಿಮಾನಕ್ಕಿಂತಲೂ ಹೆಚ್ಚು ಉದ್ದಳತೆ ಹೊಂದಿರುವ ರಫೆಲ್ ಯುದ್ದವಿಮಾನವು ಸರಿಸುಮಾರು 50 ಅಡಿ ಉದ್ದಳತೆ ಹೊಂದಿದ್ದು, ಒಂದೇ ಬಾರಿಗೆ 17 ಟನ್ ಶಸ್ತಾಸ್ತ್ರ ಹೊತ್ತೊಯ್ಯುವ ಸಾಮಾರ್ಥ್ಯ ಹೊಂದಿದೆ.

4 ಹೊಸ ರೆಫೇಲ್ ಯುದ್ದವಿಮಾನಗಳನ್ನು ಪಡೆದುಕೊಳ್ಳಲಿದೆ ಭಾರತೀಯ ಸೇನಾಪಡೆ

ಹಾಗೆಯೇ ಇತರೆ ಯುದ್ದವಿಮಾನಗಳಿಂತಲೂ ವೇಗವಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುವ ರಫೆಟ್ ಫೈಟರ್ ಜೆಟ್‌ಗಳು ಪ್ರತಿ ಗಂಟೆಗೆ 2,200 ಕಿ.ಮೀ ವೇಗದಲ್ಲಿ ಚಲಿಸಲಿದ್ದು, ಕೇವಲ 1 ನಿಮಿಷದಲ್ಲಿ 18 ಸಾವಿರ ಮೀಟರ್ ಎತ್ತರಕ್ಕೆ ಹಾರಬಲ್ಲ ವೈಶಿಷ್ಟ್ಯತೆ ಹೊಂದಿದೆ.

MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

4 ಹೊಸ ರೆಫೇಲ್ ಯುದ್ದವಿಮಾನಗಳನ್ನು ಪಡೆದುಕೊಳ್ಳಲಿದೆ ಭಾರತೀಯ ಸೇನಾಪಡೆ

ಈ ಎಲ್ಲಾ ಅಂಶಗಳು ಶತ್ರು ರಾಷ್ಟ್ರಗಳ ಬತ್ತಳಿಕೆಯಲ್ಲಿರುವ ಎಫ್-16 ಯುದ್ದವಿಮಾನಗಳಿಗೆ ಪ್ರಬಲ ಪೈಪೋಟಿ ನೀಡುವ ಎಲ್ಲಾ ಗುಣವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಇದು ಸೇನಾಪಡೆಯಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

4 ಹೊಸ ರೆಫೇಲ್ ಯುದ್ದವಿಮಾನಗಳನ್ನು ಪಡೆದುಕೊಳ್ಳಲಿದೆ ಭಾರತೀಯ ಸೇನಾಪಡೆ

ಇನ್ನು ಫ್ರೆಂಚ್ ಯುದ್ದ ವಿಮಾನ ತಯಾರಿಕಾ ಕಂಪನಿಯಾದ ಡಸಾಲ್ಟ್ ಏವಿಯೇಷನ್ ಭಾರತಕ್ಕೆ ರೂ.59 ಸಾವಿರ ಕೋಟಿ ವೆಚ್ಚದಲ್ಲಿ ಒಟ್ಟು 36 ಫೈಟರ್ ಜೆಟ್ ಪೂರೈಕೆಮಾಡುವ ಹೊಣೆಹೊತ್ತಿದ್ದು, ಸದ್ಯ 5 ಯುದ್ದ ವಿಮಾನಗಳನ್ನು ಮಾತ್ರ ವಿತರಣೆ ಮಾಡಿದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣವೇನು?

4 ಹೊಸ ರೆಫೇಲ್ ಯುದ್ದವಿಮಾನಗಳನ್ನು ಪಡೆದುಕೊಳ್ಳಲಿದೆ ಭಾರತೀಯ ಸೇನಾಪಡೆ

ಇನ್ನುಳಿದ 31 ಫೈಟರ್ ಜೆಟ್‌ಗಳಲ್ಲಿ 4 ರಫೇಲ್ ಜೆಟ್‌ಗಳು ಅಕ್ಟೋಬರ್‌ನಲ್ಲಿ ತಲುಪಲಿದ್ದು, ಇನ್ನುಳಿದ ರಫೇಲ್ ಜೆಟ್‌ಗಳು ಹಂತ-ಹಂತವಾಗಿ ವಿತರಣೆಯಾಗಲಿವೆ. ಕಳೆದ ಮೇ ನಲ್ಲಿಯೇ ವಿತರಣೆಯಾಗಬೇಕಿದ್ದ ಹೊಸ ಯುದ್ದವಿಮಾನಗಳು ಕರೋನಾ ವೈರಸ್ ಪರಿಣಾಮ ವಿಳಂಬವಾಗಿ ಭಾರತೀಯ ವಾಯುಪಡೆಗೆ ಎಂಟ್ರಿ ನೀಡುತ್ತಿವೆ.

Source: The Print

Most Read Articles

Kannada
English summary
Rafale Jets IAF Induction On 10th September. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X