ಗಣರಾಜ್ಯೋತ್ಸವ ಪೆರೇಡ್'ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿವೆ ರಫೇಲ್ ಯುದ್ದ ವಿಮಾನಗಳು

ಕಳೆದ ವರ್ಷ ರಫೇಲ್ ಜೆಟ್ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಗಿತ್ತು. ಈ ವಿಮಾನಗಳನ್ನು ಗಣರಾಜ್ಯೋತ್ಸವ ಪೆರೇಡ್'ನಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಗುತ್ತದೆ. ಈ ರಫೇಲ್ ಜೆಟ್ ವಿಮಾನಗಳು ವರ್ಟಿಕಲ್ ಚಾರ್ಲಿ ಫೋರಂ ಹಾಗೂ ಫ್ಲೈಪಾಸ್ಟ್ ಪ್ರದರ್ಶನ ನೀಡಲಿವೆ.

ಗಣರಾಜ್ಯೋತ್ಸವ ಪೆರೇಡ್'ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿವೆ ರಫೇಲ್ ಯುದ್ದ ವಿಮಾನಗಳು

ಜನವರಿ 26ರ ಪೆರೇಡ್'ನಲ್ಲಿ ಒಟ್ಟು 38 ಏರ್ ಕ್ರಾಫ್ಟ್ ಹಾಗೂ 4 ವಿಮಾನಗಳು ಭಾಗವಹಿಸಲಿವೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಐದು ರಫೇಲ್ ಜೆಟ್‌ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಯಿತು. ಈ ವಿಮಾನಗಳನ್ನು ಫ್ರಾನ್ಸ್‌ನಿಂದ ಭಾರತಕ್ಕೆ ತಂದು ಅಂಬಾಲಾ ವಾಯುನೆಲೆಯಲ್ಲಿ ಇರಿಸಲಾಗಿತ್ತು.

ಗಣರಾಜ್ಯೋತ್ಸವ ಪೆರೇಡ್'ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿವೆ ರಫೇಲ್ ಯುದ್ದ ವಿಮಾನಗಳು

ಈಗ ಮೊದಲ ಬಾರಿಗೆ ಪೆರೇಡ್'ನಲ್ಲಿ ಸಾರ್ವಜನಿಕರ ಮುಂದೆ ಪ್ರದರ್ಶಿಸಲಾಗುತ್ತಿದೆ. ವಿಮಾನವು ಕಡಿಮೆ ಎತ್ತರಕ್ಕೆ ಹಾರಿ ಲಂಬವಾಗಿ ಮಾರ್ಪಟ್ಟು, ಹೆಚ್ಚಿನ ಎತ್ತರಕ್ಕೆ ಚಲಿಸುವ ಮೊದಲು ಹಲವಾರು ಬಾರಿ ತಿರುಗಿದಾಗ, ಅವುಗಳನ್ನು ವರ್ಟಿಕಲ್ ಚಾರ್ಲಿ ಫೋರಂ ಎಂದು ಕರೆಯಲಾಗುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಗಣರಾಜ್ಯೋತ್ಸವ ಪೆರೇಡ್'ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿವೆ ರಫೇಲ್ ಯುದ್ದ ವಿಮಾನಗಳು

ಈ ರೀತಿಯ ಫೋರಂಗಳು ತುಂಬಾ ಅಪಾಯಕಾರಿ. ಈ ಹಿಂದೆ ಹಲವು ಬಾರಿ ಈ ರೀತಿ ಮಾಡಲಾಗಿದೆ. ಇದರ ಬಗ್ಗೆ ದೆಹಲಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಎಎಫ್ ವಕ್ತಾರ ವಿಂಗ್ ಕಮಾಂಡರ್ ಇಂದ್ರಾಣಿ ನಂದಿ, ವರ್ಟಿಕಲ್ ಚಾರ್ಲಿ ಫೋರಂ ಜೊತೆಗೆ ಅದೇ ರಾಫೆಲ್ ವಿಮಾನಗಳಿಂದ ಫ್ಲೈಪಾಸ್ಟ್ ಇರಲಿದೆ ಎಂದು ಹೇಳಿದರು.

ಗಣರಾಜ್ಯೋತ್ಸವ ಪೆರೇಡ್'ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿವೆ ರಫೇಲ್ ಯುದ್ದ ವಿಮಾನಗಳು

ಈ ಫ್ಲೈಪಾಸ್ಟ್ ಅನ್ನು ಎರಡು ಬ್ಲಾಕ್'ಗಳಾಗಿ ವಿಂಗಡಿಸಲಾಗುತ್ತದೆ. ಈ ಪೆರೇಡ್'ನಲ್ಲಿ ಮೊದಲ ಬ್ಲಾಕ್ 10.04ರಿಂದ 10.20ರವರೆಗೆ ಹಾಗೂ ಎರಡನೇಯ ಬ್ಲಾಕ್ 11.20ರಿಂದ 11.45ರವರೆಗೆ ಇರಲಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಗಣರಾಜ್ಯೋತ್ಸವ ಪೆರೇಡ್'ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿವೆ ರಫೇಲ್ ಯುದ್ದ ವಿಮಾನಗಳು

ಮೊದಲ ಬ್ಲಾಕ್‌ನಲ್ಲಿ ಮೂರು ಫೋರಂಗಳನ್ನು ಮಾಡಲಾಗುವುದು. ಮೊದಲನೆಯ ನಿಶಾನ್ ಫೋರಂನಲ್ಲಿ ನಾಲ್ಕು ಮಿ 17 ವಿ 5 ವಿಮಾನಗಳು ಭಾಗವಹಿಸಲಿವೆ. ಇದರ ನಂತರ ಧ್ರುವ್ ಫೋರಂ ನಡೆಯಲಿದೆ.

ಗಣರಾಜ್ಯೋತ್ಸವ ಪೆರೇಡ್'ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿವೆ ರಫೇಲ್ ಯುದ್ದ ವಿಮಾನಗಳು

ಇದರಲ್ಲಿ ಸೇನಾ ವಿಮಾನಯಾನ ದಳದ ನಾಲ್ಕು ಹೆಲಿಕಾಪ್ಟರ್‌ಗಳು ಭಾಗವಹಿಸಲಿವೆ. ಇದರ ನಂತರ ಮೂರನೇಯದಾದ ರುದ್ರ ಫೋರಂ ನಡೆಯಲಿದೆ. ಈ ಫೋರಂ ಅನ್ನು ಭಾರತದ 1971ರ ಯುದ್ಧದ 50ನೇ ವಾರ್ಷಿಕೋತ್ಸವಕ್ಕೆ ಸಮರ್ಪಿಸಲಾಗುವುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಗಣರಾಜ್ಯೋತ್ಸವ ಪೆರೇಡ್'ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿವೆ ರಫೇಲ್ ಯುದ್ದ ವಿಮಾನಗಳು

ನಂತರ ಎರಡನೇ ಬ್ಲಾಕ್‌ನಲ್ಲಿ ಒಟ್ಟು ಒಂಬತ್ತು ಫೋರಂಗಳು ನಡೆಯಲಿವೆ. ಇದರಲ್ಲಿ ಸುದರ್ಶನ್, ರಕ್ಷಕ್, ಭೀಮಾ, ನೇತ್ರ, ಗರುಡ, ಏಕಲವ್ಯ, ತ್ರಿನೇತ್ರ, ವಿಜಯ್, ಬ್ರಹ್ಮಾಸ್ತ್ರಗಳು ಸೇರಿವೆ. ಇದರ ಮುಖ್ಯಸ್ಥರಾದ ಲೆಫ್ಟಿನೆಂಟ್ ತಾನಿಕ್ ಶರ್ಮಾ ಪೆರೇಡ್'ನಲ್ಲಿ ಸಾಗಲಿದ್ದಾರೆ.

ಗಣರಾಜ್ಯೋತ್ಸವ ಪೆರೇಡ್'ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿವೆ ರಫೇಲ್ ಯುದ್ದ ವಿಮಾನಗಳು

ರಕ್ಷಣಾ ಒಪ್ಪಂದದಡಿಯಲ್ಲಿ 36 ರಫೇಲ್ ವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿಸಲಾಗಿದೆ. ಈ ಪೈಕಿ ಜುಲೈ 29ರಂದು 5 ವಿಮಾನಗಳ ವಿತರಣೆಯನ್ನು ಪಡೆಯಲಾಗಿದೆ. ರಫೇಲ್ ಯುದ್ಧ ವಿಮಾನವು ಹಲವು ಯುದ್ಧಗಳಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

Most Read Articles

Kannada
English summary
Rafale jets to be seen first time in republic day parade. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X