ಮಿಡತೆ ದಾಳಿ ಎದುರಿಸಲು ಬರಲಿವೆ 100 ಹೊಸ ವಾಹನಗಳು

ಮರುಭೂಮಿ ಮಿಡತೆಗಳ ದಾಳಿಯಿಂದ ಉತ್ತರ ಭಾರತದ ಹಲವು ರಾಜ್ಯಗಳು ತೀವ್ರ ತೊಂದರೆಗೀಡಾಗಿವೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ ಮಿಡತೆಗಳು ಕೃಷಿ ಭೂಮಿಗಳಿಗೆ ದಾಳಿ ಮಾಡಿ ಬೆಳೆಗಳನ್ನು ನಾಶಪಡಿಸುತ್ತಿವೆ. 21 ವರ್ಷಗಳ ನಂತರ ಭಾರತವು ಮರುಭೂಮಿ ಮಿಡತೆಗಳಿಂದ ತೊಂದರೆಯನ್ನು ಅನುಭವಿಸುತ್ತಿದೆ.

ಮಿಡತೆ ದಾಳಿ ಎದುರಿಸಲು ಬರಲಿವೆ 100 ಹೊಸ ವಾಹನಗಳು

ಮರುಭೂಮಿ ಮಿಡತೆಗಳ ಗುಂಪು ಪಾಕಿಸ್ತಾನದ ಮೂಲಕ ರಾಜಸ್ಥಾನವನ್ನು ಪ್ರವೇಶಿಸಿ, ನಂತರ ಪಂಜಾಬ್, ಗುಜರಾತ್, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಉಪಟಳವನ್ನುಂಟು ಮಾಡುತ್ತಿವೆ. ಹೋದ ಕಡೆಯಲ್ಲೆಲ್ಲಾ ಮಿಡತೆಗಳು ಬೆಳೆಗಳನ್ನು ನಾಶಪಡಿಸುತ್ತಿವೆ. ಮಿಡತೆ ದಾಳಿಯನ್ನು ಎದುರಿಸಲು ರಾಜಸ್ಥಾನ ಸರ್ಕಾರವು 100 ಅಗ್ನಿಶಾಮಕ ವಾಹನಗಳನ್ನು ಖರೀದಿಸುತ್ತಿದೆ. ಮಿಡತೆಗಳನ್ನು ಕೊಲ್ಲಲು ಈ ಅಗ್ನಿಶಾಮಕ ವಾಹನಗಳಲ್ಲಿ ಕೀಟನಾಶಕ ಸಿಂಪಡಿಸುವ ಯಂತ್ರಗಳನ್ನು ಅಳವಡಿಸಲಾಗಿದೆ.

ಮಿಡತೆ ದಾಳಿ ಎದುರಿಸಲು ಬರಲಿವೆ 100 ಹೊಸ ವಾಹನಗಳು

ಈ ಯಂತ್ರಗಳು ಮಿಡತೆಗಳ ಮೇಲೆ ಕೀಟನಾಶಕವನ್ನು ಸಿಂಪಡಿಸುತ್ತವೆ. ವೀಡಿಯೊ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ರವರು ಮಿಡತೆ ನಿಯಂತ್ರಣಕ್ಕಾಗಿ ಹಣಕಾಸಿನ ಕೊರತೆ ಎದುರಾಗಿಲ್ಲವೆಂದು ಹೇಳಿದರು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಮಿಡತೆ ದಾಳಿ ಎದುರಿಸಲು ಬರಲಿವೆ 100 ಹೊಸ ವಾಹನಗಳು

ಮಿಡತೆ ನಿಯಂತ್ರಣಕ್ಕಾಗಿ ಸಹಾಯಕ ನಿಯಂತ್ರಣ ಅಧಿಕಾರಿ ಹಾಗೂ ಕೃಷಿ ಮೇಲ್ವಿಚಾರಕರ ನೇಮಕಾತಿಯನ್ನು ಪೂರ್ಣಗೊಳಿಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮಿಡತೆಗಳು ಇತರ ಪ್ರದೇಶಗಳಲ್ಲೂ ದಾಳಿ ನಡೆಸಬಹುದು. ಆದ್ದರಿಂದ ನಾವು ಜಿಲ್ಲಾ ಮಟ್ಟದಲ್ಲಿ ಕಾರ್ಯತಂತ್ರ ರೂಪಿಸಬೇಕಾಗಿದೆ ಎಂದು ರಾಜಸ್ತಾನದ ಕೃಷಿ ಸಚಿವರು ಹೇಳಿದ್ದಾರೆ.

ಮಿಡತೆ ದಾಳಿ ಎದುರಿಸಲು ಬರಲಿವೆ 100 ಹೊಸ ವಾಹನಗಳು

ದೇಶದ ಅನೇಕ ರಾಜ್ಯಗಳಲ್ಲಿ ಮಿಡತೆಗಳ ಹಾವಳಿ ಹೆಚ್ಚಾಗಿದೆ. ಈ ಕಾರಣಕ್ಕೆ ವಿಮಾನ ಪೈಲಟ್‌ಗಳಿಗೆ ಹಾಗೂ ಎಂಜಿನಿಯರ್‌ಗಳಿಗೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ)ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದು, ಮಿಡತೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮಿಡತೆ ದಾಳಿ ಎದುರಿಸಲು ಬರಲಿವೆ 100 ಹೊಸ ವಾಹನಗಳು

ಮಿಡತೆಗಳ ಗುಂಪು ವಿಮಾನಗಳಿಗೆ ಅಪಾಯಕಾರಿಯಾಗಿರಲಿದೆ ಎಂದು ಡಿಜಿಸಿಎ ಹೇಳಿದೆ. ಮಿಡತೆಗಳು ಕೆಳಗಿನಿಂದ ಮೇಲಕ್ಕೆ ಹಾರುತ್ತವೆ. ಇದರಿಂದ ವಿಮಾನಗಳ ಟೇಕ್-ಆಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ.

ಮಿಡತೆ ದಾಳಿ ಎದುರಿಸಲು ಬರಲಿವೆ 100 ಹೊಸ ವಾಹನಗಳು

ಟೇಕ್-ಆಫ್ ಸಂದರ್ಭದಲ್ಲಿ ಮಿಡತೆಗಳ ಗುಂಪಿನ ಕಾರಣದಿಂದಾಗಿ ಪೈಲಟ್‌ಗಳಿಗೆ ಏನೂ ಕಾಣದಂತಾಗುತ್ತದೆ. ಈ ಪರಿಸ್ಥಿತಿಯಲ್ಲಿ ಅಪಘಾತಗಳು ಸಂಭವಿಸಬಹುದು. ಮಿಡತೆಗಳ ಗುಂಪು ವಿಮಾನದ ವೈರ್‌ಲೆಸ್ ಸಂವಹನಕ್ಕೆ ಅಡ್ಡಿಪಡಿಸುವುದರ ಜೊತೆಗೆ ಗಾಳಿಯ ವೇಗ ಹಾಗೂ ದಿಕ್ಕನ್ನು ಪತ್ತೆ ಮಾಡುವ ಸಾಧನಗಳಿಗೆ ಹಾನಿಯನ್ನುಂಟು ಮಾಡುತ್ತವೆ ಎಂದು ಡಿಜಿಸಿಎ ವರದಿ ಹೇಳಿದೆ.

Most Read Articles

Kannada
English summary
Rajasthan govt buys 100 fire brigade trucks to fight locusts attack in state. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X