ಟ್ರಾಫಿಕ್ ಪೊಲೀಸರನ್ನು ಕೆಣಕಿ ದಂಡ ವಿಧಿಸಿಕೊಂಡ ರಾಮ್ ಗೋಪಾಲ್ ವರ್ಮಾ

ಆರ್‍‍ಜಿ‍‍ವಿಯೆಂದೇ ಖ್ಯಾತರಾಗಿರುವ ಹೆಸರಾಂತ ಚಿತ್ರ ನಿರ್ಮಾಪಕ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇತ್ತೀಚಿಗೆ ವೀಡಿಯೊವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ ಹೈದರಾಬಾದ್‍ನ ರಸ್ತೆಗಳಲ್ಲಿ ರಾಯಲ್ ಎನ್‍‍ಫೀಲ್ಡ್ ಬೈಕಿನಲ್ಲಿ ತ್ರಿಬಲ್ ರೈಡ್ ಹೋಗುತ್ತಿದ್ದಾರೆ. ಈ ಟ್ವೀಟ್ ಅನ್ನು ಗಮನಿಸಿದ ಟ್ರಾಫಿಕ್ ಪೊಲೀಸರು, ದಂಡ ವಿಧಿಸಿದ್ದಾರೆ. ರಾಮ್ ಗೋಪಾಲ್ ವರ್ಮಾರವರು ಶೇರ್‍‍ಮಾಡಿರುವ ವೀಡಿಯೊವನ್ನು ಮತ್ತೊಂದು ಬೈಕ್‍‍ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಚಿತ್ರೀಕರಿಸಿದ್ದಾನೆ.

ಟ್ರಾಫಿಕ್ ಪೊಲೀಸರನ್ನು ಕೆಣಕಿ ದಂಡ ವಿಧಿಸಿಕೊಂಡ ರಾಮ್ ಗೋಪಾಲ್ ವರ್ಮಾ

ರಾಮ್ ಗೋಪಾಲ್ ವರ್ಮಾ ಅವರು ಟ್ವೀಟರ್‍‍ನಲ್ಲಿ ಶೇರ್‍‍ಮಾಡಿರುವ ವೀಡಿಯೊದಲ್ಲಿ, ಅವರು ಹಾಗೂ ಅಜಯ್ ಭೂಪತಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್‌ ಬೈಕಿನಲ್ಲಿ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದಾರೆ. ಮತ್ತೊಬ್ಬ ನಿರ್ದೇಶಕರಾದ ಅಗಸ್ತ್ಯರವರು ಹೈದರಾಬಾದ್‌ನ ಜನನಿಬಿಡ ರಸ್ತೆಗಳಲ್ಲಿ ಬೈಕ್ ಚಾಲನೆ ಮಾಡಿದ್ದಾರೆ. ವರದಿಗಳ ಪ್ರಕಾರ, ಈ ಮೂವರೂ ಹೊಸ ತೆಲುಗು ಚಲನಚಿತ್ರ, ಐಸ್ಮಾರ್ಟ್ ಶಂಕರ್, ವೀಕ್ಷಿಸಲು ಮೂಸಾಪೇಟ್‍‍ನಲ್ಲಿರುವ ಥಿಯೇಟರ್‍‍ಗೆ ಹೋಗಿದ್ದಾರೆ.

ಟ್ರಾಫಿಕ್ ಪೊಲೀಸರನ್ನು ಕೆಣಕಿ ದಂಡ ವಿಧಿಸಿಕೊಂಡ ರಾಮ್ ಗೋಪಾಲ್ ವರ್ಮಾ

ಪೊಲೀಸರು ಎಲ್ಲಿದ್ದಾರೆ? ಅವರೆಲ್ಲರೂ ಥಿಯೇಟರ್ ಒಳಗೆ ಐಸ್ಮಾರ್ಟ್ ಶಂಕರ್ ಚಿತ್ರವನ್ನು ನೋಡುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ ಎಂದು, ತ್ರಿಬಲ್ ರೈಡಿಂಗ್ ವೀಡಿಯೊವನ್ನು ಶೇರ್ ಮಾಡಿ ರಾಮ್ ಗೋಪಾಲ್ ವರ್ಮಾರವರು ಹೇಳಿದ್ದಾರೆ. ಆರ್‌ಜಿವಿ ಪೊಲೀಸರನ್ನು ಟ್ಯಾಗ್ ಮಾಡದಿದ್ದರೂ, ಸೈಬರಾಬಾದ್ ಟ್ರಾಫಿಕ್ ಪೊಲೀಸರ ಅಧಿಕೃತ ಖಾತೆಯು ವೀಡಿಯೊವನ್ನು ಗಮನಿಸಿ, ಸಂಚಾರ ಉಲ್ಲಂಘನೆಗಳನ್ನು ವರದಿ ಮಾಡಿದ್ದಕ್ಕಾಗಿ ಧನ್ಯವಾದಗಳು ಆರ್‍‍ಜಿ‍‍ವಿ, ಸಂಚಾರ ನಿಯಮಗಳನ್ನು ಅನುಸರಿಸುವಾಗಲೂ ಇದೇ ಜವಾಬ್ದಾರಿಯನ್ನು ನಾವು ನಿರೀಕ್ಷಿಸುತ್ತೇವೆ.

ಟ್ರಾಫಿಕ್ ಪೊಲೀಸರನ್ನು ಕೆಣಕಿ ದಂಡ ವಿಧಿಸಿಕೊಂಡ ರಾಮ್ ಗೋಪಾಲ್ ವರ್ಮಾ

ಅಂದಹಾಗೆ, ಚಿತ್ರಮಂದಿರಗಳು ಮಾತ್ರ ಏಕೆ? ಟ್ರಾಫಿಕ್ ಪೊಲೀಸರು ಪ್ರತಿ ನಿಮಿಷ ರಸ್ತೆಗಳಲ್ಲಿ ಸಾಕಷ್ಟು ನಾಟಕ, ಸರ್ಕಸ್ ಅನ್ನು ನೋಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. ಪೊಲೀಸರು ಈ ಬೈಕ್ ಅನ್ನು ರಿಜಿಸ್ಟರ್ ಮಾಡಿಸಿಕೊಂಡಿರುವ ಬಿ.ದಿಲೀಪ್ ಕುಮಾರ್ ಅವರಿಗೆ ರೂ.1,335 ದಂಡ ವಿಧಿಸಿದ್ದಾರೆ. ವಾಹನದ ಅಸಲಿ ಮಾಲೀಕರು ಯಾರು ಎಂಬುದು ತಿಳಿದು ಬಂದಿಲ್ಲ. ಸೈಬರಾಬಾದ್ ಪೊಲೀಸರ ಟ್ವೀಟ್‍‍ಗೆ ಪ್ರತಿಕ್ರಿಯೆ ನೀಡಿರುವ ಆರ್‍‍ಜಿ‍‍ವಿ ನಾನು ನಿನ್ನನ್ನು ಪ್ರೀತಿಸುತ್ತೇನೆ.

ಟ್ರಾಫಿಕ್ ಪೊಲೀಸರನ್ನು ಕೆಣಕಿ ದಂಡ ವಿಧಿಸಿಕೊಂಡ ರಾಮ್ ಗೋಪಾಲ್ ವರ್ಮಾ

ನೀವು ಮಾಡುತ್ತಿರುವ ಅದ್ಭುತ ಕೆಲಸಕ್ಕಾಗಿ ನಾನು ನಿಮ್ಮನ್ನು 39 ದಿನಗಳ ಕಾಲ ಸತತವಾಗಿ ಚುಂಬಿಸಲು ಬಯಸುತ್ತೇನೆ. ನಾನು ಎರಡನೇ ಮಗಳನ್ನು ಹೊಂದಿದ್ದರೆ ನಿನ್ನನ್ನು ಅಳಿಯ ಆಗಬೇಕೆಂದು ವಿನಂತಿಸುತ್ತಿದ್ದೆ ಎಂದು ಹೇಳಿದ್ದಾರೆ. ತ್ರಿಬಲ್ ರೈಡಿಂಗ್ ಸಮಯದಲ್ಲಿ ಬೈಕಿನ ಮಾಲೀಕರು ಸವಾರಿ ಮಾಡದ ಕಾರಣ, ಸಂಚಾರ ಪೊಲೀಸರು ನೀಡಿರುವ ಇ-ಚಲನ್‍‍ನಲ್ಲಿರುವ ದಂಡವನ್ನು ಯಾರು ಪಾವತಿಸುತ್ತಾರೆ ಎಂಬುದು ತಿಳಿದು ಬಂದಿಲ್ಲ. ಇ-ಚಲನ್‌ಗಳನ್ನು ವಾಹನ ಮಾಲೀಕರಿಗೆ ಮಾತ್ರ ನೀಡಲಾಗುತ್ತದೆ.

ಟ್ರಾಫಿಕ್ ಪೊಲೀಸರನ್ನು ಕೆಣಕಿ ದಂಡ ವಿಧಿಸಿಕೊಂಡ ರಾಮ್ ಗೋಪಾಲ್ ವರ್ಮಾ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ನಿಯಮಗಳ ಪ್ರಕಾರ ವಾಹನ ಚಲಾಯಿಸುವ ವ್ಯಕ್ತಿಗೆ ಇ-ಚಲನ್‍‍ಗಳನ್ನು ಕಳುಹಿಸಲಾಗುವುದಿಲ್ಲ. ಇದಕ್ಕಾಗಿಯೇ ವಾಹನವನ್ನು ಮಾರಾಟ ಮಾಡಿದ ನಂತರ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍‍ನಲ್ಲಿ ಹೆಸರನ್ನು ವರ್ಗಾಯಿಸಿ ಕೊಳ್ಳಬೇಕು. ಈ ಹಿಂದೆ, ವಾಹನವನ್ನು ಮಾರಾಟ ಮಾಡಿದ್ದ ಮಾಲೀಕರು ವಾಹನವನ್ನು ಹೊಸ ಮಾಲೀಕ ಹೆಸರಿಗೆ ವರ್ಗಾಯಿಸದ ಕಾರಣ, ದಂಡವನ್ನು ಹಳೆ ಮಾಲೀಕರ ಹೆಸರಿಗೆ ಕಳುಹಿಸಿರುವ ಹಲವಾರು ಪ್ರಕರಣಗಳಿವೆ.

ಟ್ರಾಫಿಕ್ ಪೊಲೀಸರನ್ನು ಕೆಣಕಿ ದಂಡ ವಿಧಿಸಿಕೊಂಡ ರಾಮ್ ಗೋಪಾಲ್ ವರ್ಮಾ

ಅಧಿಕೃತ ಟ್ರಾಫಿಕ್ ಪೇಜ್‍‍ಗಳಲ್ಲಿ ದಂಡದ ಬಗ್ಗೆ ಹಾಗೂ ಇ-ಚಲನ್‌ಗಳ ಬಗ್ಗೆ ಆಗಾಗ ಪರಿಶೀಲಿಸುತ್ತಿರಬೇಕು. ಈ ದಂಡಗಳು ಸಂಗ್ರಹವಾಗುತ್ತಲೇ ಇರುತ್ತವೆ. ಕ್ರಮೇಣವಾಗಿ ದಂಡದ ಮೊತ್ತವು ಜಾಸ್ತಿಯಾಗಬಹುದು. ಈ ಹಿಂದೆ, ಜನರು ಈ ರೀತಿಯಾಗಿ ಸಾವಿರಾರು ರೂಪಾಯಿಗಳನ್ನು ಪಾವತಿಸಿದ್ದಾರೆ.

ಟ್ರಾಫಿಕ್ ಪೊಲೀಸರನ್ನು ಕೆಣಕಿ ದಂಡ ವಿಧಿಸಿಕೊಂಡ ರಾಮ್ ಗೋಪಾಲ್ ವರ್ಮಾ

ಕೆಲವೊಮ್ಮೆ ವಾಹನದ ಬೆಲೆಗಿಂತ ದಂಡವನ್ನೇ ಹೆಚ್ಚು ಪಾವತಿಸಿದ್ದಾರೆ. ಒಂದು ವೇಳೆ, ದಂಡ ಪಾವತಿಸದಿದ್ದರೆ, ಹಣವನ್ನು ವಸೂಲಿ ಮಾಡಲು ವಾಹನವನ್ನು ಪೊಲೀಸರು ವಶಪಡಿಸಿಕೊಳ್ಳುತ್ತಾರೆ. ಭಾರತದಲ್ಲಿ ಇದು ಕಾನೂನುಬಾಹಿರವಾಗಿದ್ದರೂ, ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ಮಾಡುವುದು ಕಾನೂನುಬಾಹಿರ ಮಾತ್ರವಲ್ಲದೇ ಅಪಾಯಕಾರಿಯೂ ಹೌದು.

Most Read Articles

Kannada
English summary
Ram Gopal Verma shares video of him triple riding on a Royal Enfield - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X