ವಿಮಾನ - ಪಕ್ಷಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳಿವು

By Manoj Bk

ವಸ್ತುಗಳು ಚಿಕ್ಕದಾಗಿದ್ದರೂ ದೊಡ್ಡ ದೊಡ್ಡ ಅಪಾಯಗಳನ್ನು ಉಂಟು ಮಾಡಬಲ್ಲವು. ಈ ಮಾತಿಗೆ ನಾವು ಹಲವು ಉದಾಹರಣೆಗಳನ್ನು ನೀಡಬಹುದು. ಸಣ್ಣ ಇರುವೆ ದೊಡ್ಡ ಆನೆಯನ್ನು ನೆಲಕ್ಕೆ ಉರುಳಿಸಬಹುದು.

ವಿಮಾನ - ಪಕ್ಷಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳಿವು

ಅದೇ ರೀತಿ ಸಣ್ಣ ಸಣ್ಣ ಪಕ್ಷಿಗಳು ದೊಡ್ಡ ವಿಮಾನಗಳನ್ನು ನೆಲಕ್ಕೆ ಉರುಳಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಪಕ್ಷಿಗಳನ್ನು ಪ್ರಪಂಚದಾದ್ಯಂತ ವಾಯುಯಾನದ ಬೆದರಿಕೆಗಳಲ್ಲಿ ಒಂದಾಗಿ ನೋಡಲಾಗುತ್ತದೆ. ಇದಕ್ಕೆ ಪುಷ್ಟಿ ನೀಡುವಂತ ಹಲವಾರು ಘಟನೆಗಳು ಈ ಹಿಂದೆ ನಡೆದಿವೆ.

ವಿಮಾನ - ಪಕ್ಷಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳಿವು

ಕೆಲವು ತಿಂಗಳುಗಳ ಹಿಂದೆ ಅಮೆರಿಕಾದ ನಾಗರಿಕ ವಿಮಾನಯಾನ ಇಲಾಖೆಗೆ ಸೇರಿದ ವಿಮಾನವೊಂದು ವಿಮಾನ ನಿಲ್ದಾಣದಲ್ಲಿ ಇಳಿಯುವ ಬದಲು ಹಡ್ಸನ್ ನದಿ ಬಳಿ ಲ್ಯಾಂಡಿಂಗ್ ಆಗಿತ್ತು. ವಿಮಾನದ ಎಂಜಿನ್ ಪ್ರದೇಶಕ್ಕೆ ಎರಡು ಬಾತುಕೋಳಿಗಳು ಡಿಕ್ಕಿ ಹೊಡೆದಿದ್ದೇ ಇದಕ್ಕೆ ಕಾರಣ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವಿಮಾನ - ಪಕ್ಷಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳಿವು

ಈ ರೀತಿಯ ಹಲವು ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಪೈಲಟ್‌ಗಳು ಪಕ್ಷಿಗಳು ವಿಮಾನಗಳಿಗೆ ಡಿಕ್ಕಿ ಹೊಡೆಯುವುದನ್ನು ಹೇಗೆ ತಪ್ಪಿಸುತ್ತಾರೆ, ಪಕ್ಷಿಗಳ ಹಠಾತ್ ಡಿಕ್ಕಿಯಿಂದ ವಿಮಾನಗಳ ಮೇಲೆ ಉಂಟಾಗುವ ಪರಿಣಾಮಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವಿಮಾನ - ಪಕ್ಷಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳಿವು

ಪಕ್ಷಿಗಳ ಹಠಾತ್ ದಾಳಿಯಿಂದ ಎದುರಾಗುವ ಅಪಾಯಗಳು

ಸಾಮಾನ್ಯವಾಗಿ ಒಂದು ಜಾತಿಯ ಪಕ್ಷಿಗಳು ತಮ್ಮ ಪ್ರದೇಶವನ್ನು ಇತರ ಜಾತಿಯ ಪಕ್ಷಿಗಳೊಂದಿಗೆ ಹಂಚಿಕೊಳ್ಳುವುದಿಲ್ಲ. ಅವುಗಳಿಂದ ಹಾನಿಯಾಗಬಹುದು ಎಂಬ ಕಾರಣಕ್ಕೆ ಅವುಗಳನ್ನು ತಮ್ಮ ಪ್ರದೇಶದಿಂದ ಓಡಿಸಲು ಪ್ರಯತ್ನಿಸುತ್ತವೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವಿಮಾನ - ಪಕ್ಷಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳಿವು

ಉದಾಹರಣೆಗೆ ಕಾಗೆಗಳ ಹಿಂಡು ಬೇರೆ ಪಕ್ಷಿಗಳನ್ನು ಒಟ್ಟಿಗೆ ಬೆನ್ನಟ್ಟುವುದನ್ನು ಗಮನಿಸಬಹುದು. ಕೆಲವೊಮ್ಮೆ ಪಕ್ಷಿಗಳ ನಡುವೆ ಸಂಘರ್ಷ ಏರ್ಪಡುತ್ತದೆ. ಇದರಿಂದ ವಿಮಾನಗಳೊಂದಿಗೆ ಘರ್ಷಣೆ ನಡೆಸುತ್ತವೆ.

ವಿಮಾನ - ಪಕ್ಷಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳಿವು

ವಿಮಾನ-ಪಕ್ಷಿಗಳ ನಡುವಿನ ಘರ್ಷಣೆಯಿಂದ ಪ್ರತಿ ವರ್ಷ 1 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟವುಂಟಾಗುತ್ತಿದೆ ಎಂದು ಅಂಕಿಅಂಶಗಳು ತಿಳಿಸಿವೆ. 91 ದೇಶಗಳಲ್ಲಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಐಸಿಎಒ ಈ ಮಾಹಿತಿಯನ್ನು ಬಿಡುಗಡೆಗೊಳಿಸಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಿಮಾನ - ಪಕ್ಷಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳಿವು

ವಿಮಾನ-ಪಕ್ಷಿಗಳ ನಡುವೆ ಯಾವಾಗಲೋ ಒಮ್ಮೆ ಮಾತ್ರ ಸಂಘರ್ಷ ಸಂಭವಿಸಬಹುದು ಎಂಬುದು ಕೆಲವರ ಅಭಿಪ್ರಾಯ. ಆದರೆ ವಿಶ್ವಾದ್ಯಂತ ದಿನಕ್ಕೆ ಕನಿಷ್ಠ 34 ವಿಮಾನ-ಪಕ್ಷಿ ಸಂಘರ್ಷ ಸಂಭವಿಸುತ್ತದೆ ಎಂದು ಐಸಿಎಒ ಮಾಹಿತಿ ನೀಡಿದೆ.

ವಿಮಾನ - ಪಕ್ಷಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳಿವು

ಎಲ್ಲಾ ಘರ್ಷಣೆಗಳಿಂದ ಅನಾಹುತ ಸಂಭವಿಸುವುದಿಲ್ಲ ಎಂದು ಐಸಿಎಒ ಹೇಳಿದೆ. 92% ಘರ್ಷಣೆಗಳಿಂದ ಯಾವುದೇ ಸಾವುನೋವುಗಳು ಸಂಭವಿಸುವುದಿಲ್ಲ. ಇನ್ನು ಕೇವಲ 8%ನಷ್ಟು ಘರ್ಷಣೆಗಳಿಂದ ಅನಾಹುತ ಸಂಭವಿಸುತ್ತದೆ ಎಂದು ಹೇಳಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಿಮಾನ - ಪಕ್ಷಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳಿವು

ಸಂಘರ್ಷವನ್ನು ತಪ್ಪಿಸುವ ಕ್ರಮಗಳು

ವಿಮಾನ ಎಂಜಿನ್‌ಗೆ ಪಕ್ಷಿಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಿಮಾನಯಾನ ಕಂಪನಿಗಳು ಕೆಲವು ವಿಶಿಷ್ಟ ತಂತ್ರಗಳನ್ನು ರೂಪಿಸಿವೆ. ಅವುಗಳಲ್ಲಿ ಎಂಜಿನ್ ಪ್ರದೇಶದಲ್ಲಿ ಬಲೆ ಅಳವಡಿಸುವುದು, ವಿಚಿತ್ರವಾದ ಶಬ್ದ ಮಾಡುವಂತಹ ಕ್ರಮಗಳು ಸೇರಿವೆ.

ವಿಮಾನ - ಪಕ್ಷಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳಿವು

ಆದರೂ ಈ ಕ್ರಮಗಳಿಂದಲೂ ಅಪಘಾತಗಳು ಸಂಭವಿಸಬಹುದು. ಎಂಜಿನ್ ಪ್ರದೇಶದಲ್ಲಿ ಬಲೆ ಅಳವಡಿಸಿದರೂ ದೊಡ್ಡ ಗಾತ್ರದ ಹಕ್ಕಿ ಡಿಕ್ಕಿ ಹೊಡೆದಾಗ ಬಲೆಗೆ ಹಾನಿಯಾಗುತ್ತದೆ ಎಂದು ಪೈಲಟ್‌ಗಳು ಹೇಳುತ್ತಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಿಮಾನ - ಪಕ್ಷಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳಿವು

ಇದರ ಜೊತೆಗೆ ಹಕ್ಕಿಗಳನ್ನು ಆಕರ್ಷಿಸುವ ಗಾಢ ಬಣ್ಣಗಳ ಬದಲು ಆಕಾಶಕ್ಕೆ ಸರಿಹೊಂದುವಂತಹ ಬಣ್ಣಗಳನ್ನು ವಿಮಾನಯಾನ ಕಂಪನಿಗಳು ಬಳಸುತ್ತವೆ. ಇದರಿಂದ ವಿಮಾನಗಳು ಹಾರಾಟ ನಡೆಸುವಾಗ ಪಕ್ಷಿಗಳ ಕಣ್ಣಿನಿಂದ ಪಾರಾಗಬಹುದು.

ವಿಮಾನ - ಪಕ್ಷಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳಿವು

ಇದಲ್ಲದೆ ವಿಮಾನಗಳಲ್ಲಿ ಹಾರುವ ಪಕ್ಷಿಗಳನ್ನು ಹಿಮ್ಮೆಟ್ಟಿಸಲು ಕೃತಕ ಪಕ್ಷಿಗಳನ್ನು ಬಳಸಲಾಗುತ್ತದೆ. ಈ ವಿಧಾನವನ್ನು ವಿಶ್ವದ ಹಲವು ವಿಮಾನಯಾನ ಕಂಪನಿಗಳುಅನುಸರಿಸುತ್ತಿವೆ. ಕೆಲವು ಕಂಪನಿಗಳು ಈ ವಿಧಾನದಲ್ಲಿ ಯಶಸ್ವಿಯಾಗಿವೆ.

Most Read Articles

Kannada
English summary
Reasons for birds planes clash. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X