ಹಡಗುಗಳ ಕೆಳಭಾಗ ಕೆಂಪು ಬಣ್ಣ ಹೊಂದಿರಲು ಕಾರಣಗಳಿವು

ಕ್ರೂಸ್ ಹಡಗುಗಳಲ್ಲಿ ಪ್ರಯಾಣಿಸುವವರಿಗೆ ಪ್ರತಿ ಕ್ರೂಸ್ ಹಡಗು ಹೊಂದಿರುವ ವಿಶಿಷ್ಟ ಫೀಚರ್'ಗಳ ಬಗ್ಗೆ ತಿಳಿದಿರುತ್ತದೆ. ಒಂದು ಕ್ರೂಸ್ ಹಡಗಿಗೂ ಮತ್ತೊಂದು ಕ್ರೂಸ್ ಹಡಗಿಗೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ.

ಹಡಗುಗಳ ಕೆಳಭಾಗ ಕೆಂಪು ಬಣ್ಣ ಹೊಂದಿರಲು ಕಾರಣಗಳಿವು

ಆದರೆ ಎಲ್ಲಾ ಕ್ರೂಸ್ ಹಡಗುಗಳು ಒಂದು ವಿಷಯದಲ್ಲಿ ಸಾಮ್ಯತೆಯನ್ನು ಹೊಂದಿರುತ್ತವೆ. ಕ್ರೂಸ್ ಹಡಗುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರ ಕೆಳಭಾಗದಲ್ಲಿ ಕೆಂಪು ಬಣ್ಣವಿರುವುದನ್ನು ಗಮನಿಸಬಹುದು. ಹೆಚ್ಚಿನ ಕ್ರೂಸ್ ಹಡಗುಗಳು ಕೆಂಪು ಬಣ್ಣವನ್ನು ಹೊಂದಿರುತ್ತವೆ.

ಹಡಗುಗಳ ಕೆಳಭಾಗ ಕೆಂಪು ಬಣ್ಣ ಹೊಂದಿರಲು ಕಾರಣಗಳಿವು

ಕ್ರೂಸ್ ಹಡಗುಗಳು ಮಾತ್ರವಲ್ಲ, ಕಂಟೈನರ್‌ಗಳನ್ನು ಸಾಗಿಸುವ ಸರಕು ಹಡಗುಗಳು ಸಹ ಕೆಂಪು ಬಣ್ಣವನ್ನು ಹೊಂದಿರುತ್ತವೆ. ಹಡಗುಗಳ ಕೆಳಭಾಗದಲ್ಲಿ ಕೆಂಪು ಬಣ್ಣವನ್ನು ಏಕೆ ನೀಡಲಾಗಿರುತ್ತದೆ ಎಂಬ ಬಗ್ಗೆ ಕುತೂಹಲ ಮೂಡುವುದು ಸಹಜ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹಡಗುಗಳ ಕೆಳಭಾಗ ಕೆಂಪು ಬಣ್ಣ ಹೊಂದಿರಲು ಕಾರಣಗಳಿವು

ಇದಕ್ಕೆ ಸಂಬಂಧಿಸಿದ ವಿವರಗಳನ್ನು ಈ ಲೇಖನದಲ್ಲಿ ನೋಡೋಣ. ಆರಂಭಿಕ ದಿನಗಳಲ್ಲಿ ಹಡಗುಗಳನ್ನು ರಕ್ಷಿಸಲು ಕೆಂಪು ಬಣ್ಣವನ್ನು ಬಳಸಲಾಗುತ್ತಿತ್ತು. ಆದರೆ ಈಗ ಕೆಂಪು ಬಣ್ಣವನ್ನು ಸಂಪ್ರದಾಯವನ್ನು ಗೌರವಿಸುವ ಕಾರಣಕ್ಕೆ ಬಳಸಲಾಗುತ್ತದೆ.

ಹಡಗುಗಳ ಕೆಳಭಾಗ ಕೆಂಪು ಬಣ್ಣ ಹೊಂದಿರಲು ಕಾರಣಗಳಿವು

ಆರಂಭಿಕ ದಿನಗಳಲ್ಲಿ ಹಡಗುಗಳನ್ನು ಮರಗಳನ್ನು ಬಳಸಿ ತಯಾರಿಸಲಾಗುತ್ತಿತ್ತು. ಕಬ್ಬಿಣ ಹಾಗೂ ಉಕ್ಕಿನಿಂದ ನಿರ್ಮಿಸಲಾದ ಹಡಗುಗಳನ್ನು 1800ರ ಆರಂಭದಲ್ಲಿಪರಿಚಯಿಸಲಾಯಿತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹಡಗುಗಳ ಕೆಳಭಾಗ ಕೆಂಪು ಬಣ್ಣ ಹೊಂದಿರಲು ಕಾರಣಗಳಿವು

ಅದಕ್ಕೂ ಮೊದಲು ಮರದಿಂದ ತಯಾರಾದ ಹಡಗುಗಳನ್ನು ಮರ ತಿನ್ನುವ ಹುಳುಗಳಿಂದ, ಕಣಜಗಳಿಂದ ಹಾಗೂ ಸ್ಪಂಜುಗಳಿಂದ ರಕ್ಷಿಸಬೇಕಾಗಿತ್ತು. ಈ ಕಾರಣಕ್ಕೆ ನಾವಿಕರು ತಮ್ಮ ಹಡಗುಗಳ ಹಲ್‌ಗಳನ್ನು ತಾಮ್ರದಿಂದ ರಕ್ಷಿಸಿದರು.

ಹಡಗುಗಳ ಕೆಳಭಾಗ ಕೆಂಪು ಬಣ್ಣ ಹೊಂದಿರಲು ಕಾರಣಗಳಿವು

ಈ ತಾಮ್ರಕ್ಕೆ ಕೆಂಪು ಬಣ್ಣವನ್ನು ನೀಡಲಾಯಿತು. ಹಡಗಿನ ರಕ್ಷಣಾತ್ಮಕ ಪದರವು ತಾಮ್ರದಿಂದ ಮಾಡಲ್ಪಟ್ಟಿರುವುದರಿಂದ ಯಾವುದೇ ಜೀವಿಗಳು ಹಲ್‌ಗೆ ಪ್ರವೇಶಿಸಲು ಸಾಧ್ಯವಿಲ್ಲ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹಡಗುಗಳ ಕೆಳಭಾಗ ಕೆಂಪು ಬಣ್ಣ ಹೊಂದಿರಲು ಕಾರಣಗಳಿವು

ಇಲ್ಲದಿದ್ದರೆ ಅವು ಹಡಗಿನ ಎಳೆತವನ್ನು ಹೆಚ್ಚಿಸಿ ಹಡಗುಗಳು ನಿಧಾನವಾಗಿ ಚಲಿಸುವಂತೆ ಮಾಡುತ್ತವೆ. ಇದರಿಂದಾಗಿ ಹೆಚ್ಚಿನ ಇಂಧನ ಬೇಕಾಗುತ್ತದೆ. ಕೆಲವು ಜೀವಿಗಳು ಹಡಗುಗಳಲ್ಲಿ ವಾಸಿಸುತ್ತವೆ ಎಂಬುದು ಗಮನಾರ್ಹ.

ಹಡಗುಗಳ ಕೆಳಭಾಗ ಕೆಂಪು ಬಣ್ಣ ಹೊಂದಿರಲು ಕಾರಣಗಳಿವು

ಆದರೆ ಈಗಿನ ಕಾಲಕ್ಕೆ ಹಡಗುಗಳ ಕೆಳಭಾಗವು ಕೆಂಪು ಬಣ್ಣವನ್ನು ಹೊಂದುವುದು ಅನಿವಾರ್ಯವಲ್ಲ. ಹಡಗುಗಳ ಕೆಳಭಾಗವು ಯಾವುದೇ ಬಣ್ಣವನ್ನು ಹೊಂದಿದ್ದರೂ ಅವುಗಳನ್ನು ರಕ್ಷಿಸಲು ಸಾಕಷ್ಟು ತಂತ್ರಜ್ಞಾನಗಳಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹಡಗುಗಳ ಕೆಳಭಾಗ ಕೆಂಪು ಬಣ್ಣ ಹೊಂದಿರಲು ಕಾರಣಗಳಿವು

ಆದರೆ ಆರಂಭದ ದಿನಗಳಲ್ಲಿ ನಡೆದುಕೊಂಡು ಬಂದ ಸಂಪ್ರದಾಯವನ್ನು ಗೌರವಿಸುವ ಸಲುವಾಗಿ ಈಗಲೂ ಸಹ ಹಡಗುಗಳ ಕೆಳಭಾಗದಲ್ಲಿ ಕೆಂಪು ಬಣ್ಣವನ್ನು ಬಳಸಲಾಗುತ್ತದೆ.

Most Read Articles

Kannada
English summary
Reasons for cruise ships having red color in bottom. Read in Kannada.
Story first published: Tuesday, March 2, 2021, 10:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X