ಆಧುನಿಕ ಕಾರುಗಳು ರೇರ್ ವಿಂಡ್‌ಶೀಲ್ಡ್‌ ಮಿರರ್‌ ಹೊಂದದೆ ಇರಲು ಕಾರಣಗಳಿವು

By Manoj Bk

ಕಾರುಗಳಲ್ಲಿ ಸುರಕ್ಷತೆಯ ಕಾರಣಕ್ಕೆ ವಿವಿಧ ಬಗೆಯ ಮಿರರ್‌ಗಳನ್ನು ನೀಡಲಾಗುತ್ತದೆ. ಕಾರಿನ ಒಳಭಾಗದಲ್ಲಿ ರೇರ್ ವೀವ್ ಮಿರರ್ ಹಾಗೂ ಎರಡೂ ಬದಿಯಲ್ಲಿ ಸೈಡ್ ವೀವ್ ಮಿರರ್‌ಗಳನ್ನು ನೀಡಲಾಗುತ್ತದೆ. ಸೈಡ್ ವೀವ್ ಮಿರರ್‌ಗಳ ಒಳಗೆ ಮತ್ತೊಂದು ಸಣ್ಣ ಮಿರರ್ ನೀಡಲಾಗಿರುತ್ತದೆ.

ಆಧುನಿಕ ಕಾರುಗಳು ರೇರ್ ವಿಂಡ್‌ಶೀಲ್ಡ್‌ ಮಿರರ್‌ ಹೊಂದದೆ ಇರಲು ಕಾರಣಗಳಿವು

ಸೈಡ್ ವೀವ್ ಮಿರರ್‌ಗಳ ಒಳಗೆ ನೀಡಲಾಗುವ ಮಿರರ್‌ಗಳಿಗೆ ಬ್ಲೈಂಡ್‌ಸ್ಪಾಟ್ ಮಿರರ್‌ಗಳೆಂದು ಕರೆಯಲಾಗುತ್ತದೆ. ಕಾರಿನ ಬ್ಲೈಂಡ್ ಸ್ಪಾಟ್ ಪ್ರದೇಶದಲ್ಲಿ ಬರುವ ವಾಹನಗಳನ್ನು ಚಾಲಕನಿಗೆ ರೇರ್ ವೀವ್ ಮಿರರ್ ಹಾಗೂ ಸೈಡ್ ವೀವ್ ಮಿರರ್‌ಗಳ ಮೂಲಕ ನೋಡಲು ಸಾಧ್ಯವಿಲ್ಲ. ಇದರಿಂದ ರಸ್ತೆ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಬ್ಲೈಂಡ್ ಸ್ಪಾಟ್ ಮಿರರ್‌ಗಳು ಈ ಸಮಸ್ಯೆಯನ್ನು ಸರಿಪಡಿಸಲು ನೆರವಾಗುತ್ತವೆ.

ಆಧುನಿಕ ಕಾರುಗಳು ರೇರ್ ವಿಂಡ್‌ಶೀಲ್ಡ್‌ ಮಿರರ್‌ ಹೊಂದದೆ ಇರಲು ಕಾರಣಗಳಿವು

ಕಾರುಗಳ ಬ್ಲೈಂಡ್ ಸ್ಪಾಟ್ ಪ್ರದೇಶಗಳಲ್ಲಿ ಬರುವ ವಾಹನಗಳನ್ನು ಈ ಮಿರರ್‌ಗಳ ಮೂಲಕ ನೋಡಬಹುದು. ಕೆಲವು ಹಳೆಯ ಕಾರುಗಳಲ್ಲಿ ರೇರ್ ವಿಂಡ್‌ಶೀಲ್ಡ್‌ನಲ್ಲಿಮಿರರ್‌ಗಳನ್ನು ನೀಡಲಾಗುತ್ತಿತ್ತು. ಆದರೆ ಈ ಮಿರರ್‌ಗಳನ್ನು ಹೊಸ ಕಾರುಗಳಲ್ಲಿ ನೀಡಲಾಗುವುದಿಲ್ಲ.

ಆಧುನಿಕ ಕಾರುಗಳು ರೇರ್ ವಿಂಡ್‌ಶೀಲ್ಡ್‌ ಮಿರರ್‌ ಹೊಂದದೆ ಇರಲು ಕಾರಣಗಳಿವು

ಈ ಮಿರರ್‌ಗಳನ್ನು ಹಳೆಯ ಕಾರುಗಳಲ್ಲಿ ಮಾತ್ರ ಏಕೆ ನೀಡಲಾಗುತ್ತಿತ್ತು. ಈಗ ಮಾರಾಟವಾಗುತ್ತಿರುವ ಕಾರುಗಳಲ್ಲಿ ಏಕೆ ನೀಡುತ್ತಿಲ್ಲ ಎಂಬ ವಿವರಗಳನ್ನು ಈ ಲೇಖನದಲ್ಲಿ ನೋಡೋಣ. ಈ ಎಲ್ಲಾ ವಿವರಗಳು ನಿಮಗೆ ಉಪಯುಕ್ತವಾಗುತ್ತವೆ ಎಂಬುದು ನಮ್ಮ ಅಭಿಪ್ರಾಯ.

ಆಧುನಿಕ ಕಾರುಗಳು ರೇರ್ ವಿಂಡ್‌ಶೀಲ್ಡ್‌ ಮಿರರ್‌ ಹೊಂದದೆ ಇರಲು ಕಾರಣಗಳಿವು

ಹಿಂದೆ ಬಿಡುಗಡೆಯಾಗುತ್ತಿದ್ದ ಬೃಹದಾಕಾರದ ಎಸ್‌ಯುವಿಗಳ ರೇರ್ ವಿಂಡ್ ಶೀಲ್ಡ್ ಮೇಲೆ ಮಿರರ್‌ಗಳನ್ನು ನೀಡಲಾಗುತ್ತಿತ್ತು. ಸಾಮಾನ್ಯವಾಗಿ ಎಸ್‌ಯುವಿಗಳು ಹೆಚ್ಚು ಉದ್ದವಾಗಿರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.

ಆಧುನಿಕ ಕಾರುಗಳು ರೇರ್ ವಿಂಡ್‌ಶೀಲ್ಡ್‌ ಮಿರರ್‌ ಹೊಂದದೆ ಇರಲು ಕಾರಣಗಳಿವು

ಕಾರಿನ ಒಳಭಾಗದಲ್ಲಿರುವ ರೇರ್ ವೀವ್ ಮಿರರ್'ಗಳಿಂದ ಕಾರುಗಳ ಹಿಂಭಾಗವನ್ನು ಅಷ್ಟು ಸ್ಪಷ್ಟವಾಗಿ ನೋಡಲಾಗುವುದಿಲ್ಲ. ಕಾರುಗಳ ಹಿಂಭಾಗದ ಕೆಳಗೆ ಯಾವುದೇ ವಸ್ತುಗಳು ಇದ್ದರೆ ಅವುಗಳನ್ನು ರೇರ್ ವೀವ್ ಮಿರರ್‌ಗಳ ಮೂಲಕ ನೋಡಲು ಸಾಧ್ಯವಿಲ್ಲ.

ಆಧುನಿಕ ಕಾರುಗಳು ರೇರ್ ವಿಂಡ್‌ಶೀಲ್ಡ್‌ ಮಿರರ್‌ ಹೊಂದದೆ ಇರಲು ಕಾರಣಗಳಿವು

ಇದರಿಂದ ಕಾರನ್ನು ರಿವರ್ಸ್ ತೆಗೆಯುವಾಗ ಹಾಗೂ ಪಾರ್ಕಿಂಗ್ ಮಾಡುವಾಗ ಸಮಸ್ಯೆಗಳು ಉಂಟಾಗಬಹುದು. ಕಾರುಗಳ ಹಿಂಭಾಗದಲ್ಲಿ ಏನಿದೆ ಎಂದು ಕಾಣದ ಕಾರಣ ಅಲ್ಲಿರುವ ವಸ್ತುಗಳಿಗೆ ಕಾರು ಡಿಕ್ಕಿ ಹೊಡೆಯುವ ಸಾಧ್ಯತೆಗಳಿರುತ್ತವೆ.

ಆಧುನಿಕ ಕಾರುಗಳು ರೇರ್ ವಿಂಡ್‌ಶೀಲ್ಡ್‌ ಮಿರರ್‌ ಹೊಂದದೆ ಇರಲು ಕಾರಣಗಳಿವು

ಈ ವೇಳೆ ಮಕ್ಕಳು ಕಾರಿನ ಹಿಂಬದಿಯಲ್ಲಿ ಆಟವಾಡುತ್ತಿದ್ದರೆ ಪರಿಸ್ಥಿತಿ ಹೆಚ್ಚು ಗಂಭೀರವಾಗುತ್ತದೆ. ಇಂತಹ ಸಮಸ್ಯೆಗಳನ್ನು ತಪ್ಪಿಸಲು ಕಾರುಗಳ ರೇರ್ ವಿಂಡ್ ಶೀಲ್ಡ್ ಮೇಲೆ ರೇರ್ ಮಿರರ್‌ಗಳನ್ನು ನೀಡಲಾಗುತ್ತಿತ್ತು. ಈ ಮಿರರ್‌ಗಳು ಕಾರುಗಳ ಟೇಲ್ ಗೇಟ್ ಕೆಳಗೆ ಇರುವ ಸಂಪೂರ್ಣ ಪ್ರದೇಶವನ್ನು ಕಾಣುವಂತೆ ಮಾಡುತ್ತವೆ.

ಆಧುನಿಕ ಕಾರುಗಳು ರೇರ್ ವಿಂಡ್‌ಶೀಲ್ಡ್‌ ಮಿರರ್‌ ಹೊಂದದೆ ಇರಲು ಕಾರಣಗಳಿವು

ಇದರಿಂದ ಕಾರು ಚಾಲಕ ಕಾರಿನ ಹಿಂದೆ ಏನಿದೆ ಎಂಬುದನ್ನು ಸ್ಪಷ್ಟವಾಗಿ ನೋಡಬಹುದು. ಜೊತೆಗೆ ಕಾರನ್ನು ರಿವರ್ಸ್ ತೆಗೆಯುವಾಗ ಹಾಗೂ ಪಾರ್ಕಿಂಗ್ ಮಾಡುವಾಗ ಸುರಕ್ಷಿತವಾಗಿ ಕಾರ್ಯ ನಿರ್ವಹಿಸಬಹುದು. ಈ ಕಾರಣಕ್ಕೆ ಹಳೆಯ ಎಸ್‌ಯುವಿಗಳಲ್ಲಿ ಈ ಮಿರರ್‌ಗಳನ್ನು ನೀಡಲಾಗುತ್ತಿತ್ತು.

ಆಧುನಿಕ ಕಾರುಗಳು ರೇರ್ ವಿಂಡ್‌ಶೀಲ್ಡ್‌ ಮಿರರ್‌ ಹೊಂದದೆ ಇರಲು ಕಾರಣಗಳಿವು

ಈ ಮಿರರ್‌ಗಳನ್ನು ಈಗ ಮಾರಾಟವಾಗುತ್ತಿರುವ ಎಸ್‌ಯುವಿಗಳಲ್ಲಿ ಏಕೆ ನೀಡುತ್ತಿಲ್ಲ ಎಂಬ ಪ್ರಶ್ನೆ ಮೂಢ ಬಹುದು. ಈಗ ಮಾರಾಟವಾಗುತ್ತಿರುವ ಕಾರುಗಳು ಅತ್ಯಾಧುನಿಕವಾಗಿವೆ. ಈ ಕಾರುಗಳಲ್ಲಿ ಪ್ರಯಾಣಿಸುವವರ ಸುರಕ್ಷತೆಗಾಗಿ ಹಲವಾರು ಫೀಚರ್'ಗಳನ್ನು ನೀಡಲಾಗುತ್ತದೆ.

ಆಧುನಿಕ ಕಾರುಗಳು ರೇರ್ ವಿಂಡ್‌ಶೀಲ್ಡ್‌ ಮಿರರ್‌ ಹೊಂದದೆ ಇರಲು ಕಾರಣಗಳಿವು

ಈಗ ಮಾರಾಟವಾಗುತ್ತಿರುವ ಬಹುತೇಕ ಎಸ್‌ಯುವಿಗಳಲ್ಲಿ ರೇರ್ ವೀವ್ ಕ್ಯಾಮೆರಾಗಳನ್ನು ನೀಡಲಾಗುತ್ತದೆ. ಈ ರೇರ್ ವೀವ್ ಕ್ಯಾಮೆರಾಗಳು, ರೇರ್ ವಿಂಡ್ ಶೀಲ್ಡ್ ಮೇಲಿರುವ ಮಿರರ್‌ಗಳನ್ನು ಬಳಕೆಯಲ್ಲಿಲ್ಲದಂತೆ ಮಾಡಿವೆ.

ಆಧುನಿಕ ಕಾರುಗಳು ರೇರ್ ವಿಂಡ್‌ಶೀಲ್ಡ್‌ ಮಿರರ್‌ ಹೊಂದದೆ ಇರಲು ಕಾರಣಗಳಿವು

ಈಗ ಮಾರಾಟವಾಗುವ ಕಾರುಗಳ ಹಿಂಭಾಗದಲ್ಲಿ ಕ್ಯಾಮೆರಾ ನೀಡಲಾಗುತ್ತದೆ. ಇದರಿಂದ ಕಾರಿನ ಹಿಂಭಾಗದಲ್ಲಿ ಏನು ನಡೆಯುತ್ತಿದೆ, ಯಾವ ವಸ್ತುಗಳಿವೆ ಎಂಬುದು ಈ ಕ್ಯಾಮೆರಾಗಳಿಂದ ಸ್ಪಷ್ಟವಾಗಿ ಕಾಣುತ್ತದೆ. ಕಾರ್ ಕ್ಯಾಬಿನ್‌ನಲ್ಲಿರುವ ಸ್ಕ್ರೀನ್ ಮೇಲೆ ಈ ಎಲ್ಲಾ ದೃಶ್ಯಗಳನ್ನು ನೋಡ ಬಹುದು.

ಆಧುನಿಕ ಕಾರುಗಳು ರೇರ್ ವಿಂಡ್‌ಶೀಲ್ಡ್‌ ಮಿರರ್‌ ಹೊಂದದೆ ಇರಲು ಕಾರಣಗಳಿವು

ಈ ಕ್ಯಾಮೆರಾಗಳ ಸಹಾಯದಿಂದ ರಿವರ್ಸ್ ಹಾಕುವುದು ಹಾಗೂ ಪಾರ್ಕಿಂಗ್ ಮಾಡುವುದು ಸುಲಭವಾಗುತ್ತದೆ. ರೇರ್ ವೀವ್ ಕ್ಯಾಮೆರಾಗಳನ್ನು ಒದಗಿಸುವುದರಿಂದ ಹೊಸ ಎಸ್‌ಯುವಿಗಳ ರೇರ್ ವಿಂಡ್ ಶೀಲ್ಡ್ ಮೇಲೆ ಮಿರರ್‌ಗಳನ್ನು ಅಳವಡಿಸುವ ಅಗತ್ಯವಿಲ್ಲದಂತಾಗಿದೆ. ಹಳೆಯ ಎಸ್‌ಯುವಿಗಳಿಗೆ ಈ ಮಿರರ್‌ಗಳು ಆಕರ್ಷಕ ಲುಕ್ ನೀಡುತ್ತಿದ್ದವು.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Reasons for modern suvs not having mirrors on rear windshield details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X