ಕಾರು ಪಾರ್ಕಿಂಗ್ ವೇಳೆ ವಿಂಡ್‌ಶೀಲ್ಡ್ ವೈಪರ್‌ಗಳನ್ನು ಮೇಲಕ್ಕೆ ಎತ್ತಲು ಕಾರಣಗಳಿವು

By Manoj Bk

ವಿಂಡ್‌ಶೀಲ್ಡ್ ವೈಪರ್‌ಗಳು ಕಾರಿನ ಪ್ರಮುಖ ಭಾಗಗಳಲ್ಲಿ ಒಂದಾಗಿವೆ. ವಿಂಡ್‌ಶೀಲ್ಡ್ ವೈಪರ್‌ಗಳು ಮಳೆಗಾಲ ಹಾಗೂ ಮಂಜು ಬೀಳುವ ಸಮಯದಲ್ಲಿ ಹಾಳಾಗದಿದ್ದರೆ ಸಾಕು ಎಂಬುದು ಕಾರು ಚಾಲಕರ ಅಭಿಪ್ರಾಯ.

ಕಾರು ಪಾರ್ಕಿಂಗ್ ವೇಳೆ ವಿಂಡ್‌ಶೀಲ್ಡ್ ವೈಪರ್‌ಗಳನ್ನು ಮೇಲಕ್ಕೆ ಎತ್ತಲು ಕಾರಣಗಳಿವು

ಒಂದು ವೇಳೆ ವಿಂಡ್‌ಶೀಲ್ಡ್ ವೈಪರ್‌ಗಳು ಕೆಟ್ಟು ಹೋದರೆ ಮಳೆಗಾಲದಲ್ಲಿ ಹಾಗೂ ಮಂಜು ಬೀಳುವ ಸಮಯದಲ್ಲಿ ಕಾರ್ ಅನ್ನು ಸುರಕ್ಷಿತವಾಗಿ ಚಾಲನೆ ಮಾಡುವುದು ಕಷ್ಟವಾಗುತ್ತದೆ. ಈ ಕಾರಣಕ್ಕೆ ವಿಂಡ್‌ಶೀಲ್ಡ್ ವೈಪರ್‌ಗಳನ್ನು ಸರಿಯಾಗಿ ನಿರ್ವಹಿಸುವುದು ಬಹಳ ಮುಖ್ಯ.

ಕಾರು ಪಾರ್ಕಿಂಗ್ ವೇಳೆ ವಿಂಡ್‌ಶೀಲ್ಡ್ ವೈಪರ್‌ಗಳನ್ನು ಮೇಲಕ್ಕೆ ಎತ್ತಲು ಕಾರಣಗಳಿವು

ಕಾರುಗಳನ್ನು ಪಾರ್ಕ್ ಮಾಡುವ ಸಮಯದಲ್ಲಿ ಕೆಲವರು ವಿಂಡ್‌ಶೀಲ್ಡ್ ವೈಪರ್‌ಗಳನ್ನು ಮೇಲಕ್ಕೆ ಎತ್ತುಸುವುದನ್ನು ಕಾಣಬಹುದು. ವಾಹನ ನಿಲುಗಡೆ ಮಾಡುವಾಗ ವೈಪರ್ ಅನ್ನು ಮೇಲಕ್ಕೆ ಎತ್ತುವುದರಿಂದ ಅದರಲ್ಲಿರುವ ರಬ್ಬರ್‌ನ ಜೀವಿತಾವಧಿ ಹೆಚ್ಚಾಗುತ್ತದೆ ಎಂಬುದು ಅವರ ಅಭಿಪ್ರಾಯ.

ಕಾರು ಪಾರ್ಕಿಂಗ್ ವೇಳೆ ವಿಂಡ್‌ಶೀಲ್ಡ್ ವೈಪರ್‌ಗಳನ್ನು ಮೇಲಕ್ಕೆ ಎತ್ತಲು ಕಾರಣಗಳಿವು

ಪಾರ್ಕಿಂಗ್ ಸಮಯದಲ್ಲಿ ವೈಪರ್ ಅನ್ನು ಮೇಲಕ್ಕೆ ಎತ್ತುವುದರಿಂದ ರಬ್ಬರ್ ಮೇಲಿನ ಹಾನಿಯ ಪರಿಣಾಮವು ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ. ಆದರೆಪದೇ ಪದೇ ಮೇಲಕ್ಕೆ ಎತ್ತುವುದರಿಂದ ಹಾಗೂ ಮಡಚುವುದರಿಂದ ವೈಪರ್‌ನ ಭಾಗಗಳು ಹಾನಿಯಾಗುವ ಸಾಧ್ಯತೆಗಳಿರುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಕಾರು ಪಾರ್ಕಿಂಗ್ ವೇಳೆ ವಿಂಡ್‌ಶೀಲ್ಡ್ ವೈಪರ್‌ಗಳನ್ನು ಮೇಲಕ್ಕೆ ಎತ್ತಲು ಕಾರಣಗಳಿವು

ವೈಪರ್ ಫ್ರೇಮ್‌ನ ರಚನೆಯನ್ನು ಅಜಾಗರೂಕತೆಯಿಂದ ಅಥವಾ ತುರ್ತಾಗಿ ಮೇಲಕ್ಕೆತ್ತಿ ಹಿಮ್ಮುಖವಾಗಿ ಮಡಚಿದರೆ ವೈಪರ್‌ನ ಭಾಗಗಳಿಗೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ ಎಂಬುದನ್ನು ಗಮನಿಸಬೇಕು.

ಕಾರು ಪಾರ್ಕಿಂಗ್ ವೇಳೆ ವಿಂಡ್‌ಶೀಲ್ಡ್ ವೈಪರ್‌ಗಳನ್ನು ಮೇಲಕ್ಕೆ ಎತ್ತಲು ಕಾರಣಗಳಿವು

ಕಾರುಗಳನ್ನು ಪಾರ್ಕ್ ಮಾಡಿರುವಾಗ ವೈಪರ್‌ಗಳನ್ನು ಮೇಲಕ್ಕೆ ಎತ್ತಲಾಗಿದೆಯೆ ಅಥವಾ ಮಡಿಸಲಾಗಿದೆಯೆ ಎಂಬುದು ವೈಪರ್‌ಗಳ ಜೀವಿತಾವಧಿಯಲ್ಲಿ ದೊಡ್ಡಪರಿಣಾಮವನ್ನುಂಟು ಮಾಡುವುದಿಲ್ಲವೆಂದು ಹೇಳಲಾಗುತ್ತದೆ.

ಕಾರು ಪಾರ್ಕಿಂಗ್ ವೇಳೆ ವಿಂಡ್‌ಶೀಲ್ಡ್ ವೈಪರ್‌ಗಳನ್ನು ಮೇಲಕ್ಕೆ ಎತ್ತಲು ಕಾರಣಗಳಿವು

ಆದರೆ ವಿಂಡ್‌ಶೀಲ್ಡ್ ವೈಪರ್‌ಗಳನ್ನು ಪದೇ ಪದೇ ಮೇಲಕ್ಕೆ ಎತ್ತುವುದರಿಂದ ಸಮಸ್ಯೆಗಳು ಉಂಟಾಗುತ್ತವೆ. ಕಾರು ನಿಲುಗಡೆ ಮಾಡುವಾಗ ವೈಪರ್‌ಗಳನ್ನು ಫೋಲ್ಡ್ ಮಾಡಿದರೆ ವಿಂಡ್‌ಶೀಲ್ಡ್ ಶಾಖವು ವೈಪರ್ ರಬ್ಬರ್‌ನ ಸ್ಥಿತಿಸ್ಥಾಪಕತ್ವವನ್ನು ಕಡಿಮೆ ಮಾಡುತ್ತದೆ.

ಕಾರು ಪಾರ್ಕಿಂಗ್ ವೇಳೆ ವಿಂಡ್‌ಶೀಲ್ಡ್ ವೈಪರ್‌ಗಳನ್ನು ಮೇಲಕ್ಕೆ ಎತ್ತಲು ಕಾರಣಗಳಿವು

ವೈಪರ್‌ಗಳನ್ನು ಹೆಚ್ಚು ಬಾರಿ ಮೇಲಕ್ಕೆ ಎತ್ತುವುದರಿಂದ ಅನುಕೂಲಗಳಿಗಿಂತ ಅನಾನುಕೂಲಗಳೇ ಉಂಟಾಗಬಹುದು. ಈ ಕಾರಣಕ್ಕೆ ಕಾರನ್ನು ಕಾಲ ಕಾಲಕ್ಕೆಪರಿಶೀಲಿಸಬೇಕು.

ಕಾರು ಪಾರ್ಕಿಂಗ್ ವೇಳೆ ವಿಂಡ್‌ಶೀಲ್ಡ್ ವೈಪರ್‌ಗಳನ್ನು ಮೇಲಕ್ಕೆ ಎತ್ತಲು ಕಾರಣಗಳಿವು

ಅದರಲ್ಲೂ ವೈಪರ್‌ಗಳ ಬಗ್ಗೆ ಹೆಚ್ಚು ಗಮನ ಹರಿಸುವುದು ಅವಶ್ಯಕ. ವೈಪರ್‌ನಲ್ಲಿ ಯಾವುದೇ ಸಮಸ್ಯೆ ಕಂಡು ಬಂದರೆ ತಕ್ಷಣ ಸರಿಪಡಿಸಿ. ಇಲ್ಲದಿದ್ದರೆ ಪ್ರಯಾಣದ ವೇಳೆ ಇದ್ದಕ್ಕಿದ್ದಂತೆ ಮಳೆಯಾದರೆ ತೊಂದರೆಯಾಗುವುದು ಖಚಿತ.

Most Read Articles

Kannada
English summary
Reasons for rising windshield wipers when cars are parked. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X