ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ರಸ್ತೆಯಲ್ಲಿ ಚಲಿಸುವ ಎಲ್ಲಾ ರೀತಿಯ ವಾಹನಗಳನ್ನು ನಿಲ್ಲಿಸಲು ಬ್ರೇಕಿಂಗ್ ತಂತ್ರಜ್ಞಾನವನ್ನು ನೀಡಲಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಡ್ರಮ್, ಡಿಸ್ಕ್, ಸಿಬಿಎಸ್ ಹಾಗೂ ಎಬಿಎಸ್'ನಂತಹ ವಿವಿಧ ತಂತ್ರಜ್ಞಾನದ ಬ್ರೇಕಿಂಗ್ ಸಿಸ್ಟಂಗಳನ್ನು ನೀಡಲಾಗುತ್ತಿದೆ.

ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಆದರೆ ಸಾಗರ ಹಾಗೂ ಸಮುದ್ರಗಳಲ್ಲಿ ಚಲಿಸುವ ಹಡಗುಗಳನ್ನು ನಿಲ್ಲಿಸಲು ಆಂಕರ್‌ಗಳನ್ನು ಬಳಸಲಾಗುತ್ತದೆ. ಆಂಕರ್‌ಗಳು ಹಡಗುಗಳನ್ನು ಒಂದು ಕಡೆ ಹಿಡಿದು ನಿಲ್ಲಿಸುವ ಕೆಲಸ ಮಾಡುತ್ತವೆ. ನಾವಿಕರು ಎಂಜಿನ್‌ಗಳಷ್ಟೇ ನೀಡುವಷ್ಟೆ ಪ್ರಾಮುಖ್ಯತೆಯನ್ನು ಆಂಕರ್‌ಗಳಿಗೂ ಸಹ ನೀಡುತ್ತಾರೆ.

ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಉಪ್ಪು ನೀರು ಕಬ್ಬಿಣದ ವಸ್ತುಗಳನ್ನು ಬಹಳ ಸುಲಭವಾಗಿ ನಾಶಪಡಿಸುತ್ತದೆ. ಆದರೂ ಕಬ್ಬಿಣದ ಆಂಕರ್‌ಗಳು ತುಕ್ಕು ಹಿಡಿಯದೇ ಹಾಳಾಗದಿರಲು ಕಾರಣಗಳೇನು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಈ ಲೇಖನದಲ್ಲಿ ಆಂಕರ್‌ಗಳು ಉಪ್ಪು ನೀರು ಹಾಗೂ ತುಕ್ಕುಗಳಿಂದ ಹೇಗೆ ರಕ್ಷಿಸಲ್ಪಡುತ್ತವೆ ಎಂಬುದನ್ನು ನೋಡೋಣ. ತುಕ್ಕು ಹಿಡಿದ ನಂತರ ಕಬ್ಬಿಣ ಯಾವುದೇ ಪ್ರಯೋಜನಕ್ಕೂ ಬಾರದಂತಾಗುತ್ತದೆ.

ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಈ ಕಾರಣಕ್ಕೆ ನಾವಿಕರು ಆಂಕರ್‌ಗಳು ತುಕ್ಕು ಹಿಡಿಯದಂತೆ ಎಚ್ಚರ ವಹಿಸುತ್ತಾರೆ. ಆಂಕರ್‌ಗಳು ದೀರ್ಘಕಾಲದವರೆಗೆ ಸಮುದ್ರದ ನೀರಿನಲ್ಲಿ ಮುಳುಗಿದಾಗ ಉಪ್ಪು ನೀರಿನೊಂದಿಗೆ ಹೆಚ್ಚು ಬೆರೆಯುತ್ತವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಉಪ್ಪು ನೀರನ್ನು ಆಂಕರ್‌ಗಳ ಮೇಲೆ ಹಾಗೇ ಬಿಟ್ಟರೆ ಅವು ತುಕ್ಕು ಹಿಡಿಯುತ್ತವೆ. ಈ ಕಾರಣಕ್ಕೆ ಆಂಕರ್‌ಗಳು ಹೆಚ್ಚು ಹೊತ್ತು ನೀರಿನಲ್ಲಿದ್ದು ಮತ್ತೆ ಮೇಲಕ್ಕೆ ಎಳೆದ ನಂತರ ಅವುಗಳನ್ನು ಸ್ವಚ್ಛವಾದ ನೀರಿನಿಂದ ತೊಳೆಯಲಾಗುತ್ತದೆ.

ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಆಂಕರ್‌ಗಳ ಮೇಲೆ ಉಪ್ಪಿನಾಂಶ ಮುಂದುವರಿದರೆ ನಾವಿಕರು ಅವುಗಳನ್ನು ಲೋಹದ ಪ್ರೆಸ್‌ಗಳಿಂದ ಸ್ವಚ್ಛಗೊಳಿಸುತ್ತಾರೆ. ಆಂಕರ್ ಹಾಗೂ ಚೈನ್'ಗಳನ್ನು ರಕ್ಷಿಸಲು ನಾವಿಕರು ತೆಗೆದುಕೊಳ್ಳುವ ಪ್ರಮುಖ ಕ್ರಮಗಳಿವು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಇದರ ಜೊತೆಗೆ ಹೆಚ್ಚು ವಿಶೇಷ ಬಣ್ಣದ ಲೇಪನಗಳನ್ನು ಆಂಕರ್‌ಗಳು ಹಾಗೂ ಚೈನ್'ಗಳಲ್ಲಿ ಬಳಸಲಾಗುತ್ತದೆ. ಈ ಲೇಪನಗಳು ಆಂಕರ್‌ಗಳನ್ನು ತುಕ್ಕು ಹಿಡಿಯದಂತೆ ಹಾಗೂ ಉಪ್ಪು ಸವೆತದಿಂದ ರಕ್ಷಿಸಲು ನೆರವಾಗುತ್ತವೆ.

ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಈ ಲೇಪನಗಳನ್ನು ವರ್ಷಕ್ಕೆ ಒಮ್ಮೆ ಇಲ್ಲವೇ ಎರಡು ವರ್ಷಕ್ಕೊಮ್ಮೆ ಬಳಿಯಲಾಗುತ್ತದೆ. ಆದರೆ ಪ್ರತಿ ಬಾರಿ ಸಮುದ್ರಕ್ಕೆ ಹೋಗಿ ಹಿಂದಿರುಗಿದ ನಂತರ ಆಂಕರ್‌ಗಳನ್ನು ನಿಯಮಿತವಾಗಿ ತೊಳೆಯಲಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಸಮುದ್ರದ ಒಂದು ಸಣ್ಣ ಕಳೆ ಅಥವಾ ಸ್ವಲ್ಪ ಪ್ರಮಾಣದ ಉಪ್ಪನ್ನು ಸಹ ನಾವಿಕರು ಆಂಕರ್‌ಗಳಲ್ಲಿ ಉಳಿಯದಂತೆ ನೋಡಿಕೊಳ್ಳುತ್ತಾರೆ. ಇದರಿಂದಾಗಿಯೇ ಆಂಕರ್‌ಗಳನ್ನು ಸಮುದ್ರಗಳಲ್ಲಿ ವರ್ಷಗಳ ಕಾಲ ಬಳಸಿದರೂ ತುಕ್ಕು ಹಿಡಿಯುವುದಿಲ್ಲ.

ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಆಂಕರ್ ಹಾಗೂ ಚೈನ್'ಗಳನ್ನು ಕಲಾಯಿ ಲೋಹದಿಂದ ತಯಾರಿಸಲಾಗಿರುತ್ತದೆ. ಇದರಿಂದ ಅವುಗಳಿಗೆ ಸುಲಭವಾಗಿ ತುಕ್ಕು ಹಿಡಿಯುವುದಿಲ್ಲ. ಆಂಕರ್‌ ಹಾಗೂ ಚೈನ್'ಗಳನ್ನು ತುಂಬಾ ದಪ್ಪವಾಗಿ ತಯಾರಿಸಲಾಗಿರುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಆಂಕರ್‌ಗಳು ತುಂಬಾ ದಪ್ಪವಾಗಿರುವ ಕಾರಣಕ್ಕೆ ಹಡಗುಗಳನ್ನು ಗಾಳಿ, ಚಂಡಮಾರುತಗಳಿಂದ ರಕ್ಷಿಸುತ್ತವೆ. ಜೊತೆಗೆ ಇವುಗಳನ್ನು ಹೆಚ್ಚು ಘರ್ಷಣೆ ಹಾಗೂ ಒತ್ತಡವನ್ನು ತಡೆದುಕೊಳ್ಳುವ ರೀತಿಯಲ್ಲಿ ತಯಾರಿಸಲಾಗಿರುತ್ತದೆ.

ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಹೆಚ್ಚು ಬಳಸಿದರೂ ಸಹ ಅವುಗಳು ಸುಲಭವಾಗಿ ಹಾಳಾಗುವುದಿಲ್ಲ. ಆಂಕರ್‌ಗಳು ಬಹುತೇಕ ಸಮಯ ಹಡಗಿನಲ್ಲಿಯೇ ಇರುತ್ತವೆ. ಗಾಳಿ ಹೆಚ್ಚಿರುವ ಸಂದರ್ಭದಲ್ಲಿ ಮಾತ್ರ ಅವುಗಳನ್ನು ಬಳಸಲಾಗುತ್ತದೆ. ಇನ್ನು ಕಮರ್ಷಿಯಲ್ ಹಡಗುಗಳು ಸತತವಾಗಿ ನೌಕಾಯಾನವನ್ನು ಮುಂದುವರೆಸುವ ಕಾರಣಕ್ಕೆ ಅವುಗಳು ಆಂಕರ್‌ಗಳನ್ನು ಅಪರೂಪಕ್ಕೆ ಬಳಸುತ್ತವೆ. ಈ ಕಾರಣಕ್ಕೆ ಕಮರ್ಷಿಯಲ್ ಹಡಗುಗಳಲ್ಲಿರುವ ಆಂಕರ್‌ಗಳು ಹೊಸದರಂತೆ ಕಾಣುತ್ತವೆ.

Most Read Articles

Kannada
English summary
Reasons for ship anchors not getting rust. Read in Kannada.
Story first published: Saturday, April 24, 2021, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X