ಪಂಕ್ಚರ್ ಆದಾಗ ನೆರವಿಗೆ ಬರುವ ಸ್ಪೇರ್ ಟಯರ್‌ಗಳ ಗಾತ್ರ ಚಿಕ್ಕದಾಗಿರಲು ಕಾರಣಗಳಿವು

ಕಾರು ಪ್ರಯಾಣದ ಇದ್ದಕ್ಕಿದ್ದಂತೆ ಕಾರಿನ ಟಯರ್‌ನಲ್ಲಿ ಸಮಸ್ಯೆ ಉಂಟಾದರೆ ತಕ್ಷಣವೇ ಕಾರ್ ಅನ್ನು ನಿಲ್ಲಿಸಿ ಏನು ಸಮಸ್ಯೆಯಾಗಿದೆ ಎಂದು ಪರಿಶೀಲಿಸುತ್ತೇವೆ. ನಂತರ ಕಾರಿನ ಬೂಟ್'ನಲ್ಲಿರುವ ಸ್ಪೇರ್ ಟಯರ್ ತೆಗೆದು ಟಯರ್ ಬದಲಿಸುತ್ತೇವೆ. ಗಮನಿಸ ಬೇಕಾದ ಸಂಗತಿಯೆಂದರೆ ಸ್ಪೇರ್ ಟಯರ್, ಕಾರಿನ ಇತರ ಟಯರ್‌ಗಳಿಗಿಂತ ಚಿಕ್ಕದಾಗಿರುತ್ತದೆ.

ಪಂಕ್ಚರ್ ಆದಾಗ ನೆರವಿಗೆ ಬರುವ ಸ್ಪೇರ್ ಟಯರ್‌ಗಳ ಗಾತ್ರ ಚಿಕ್ಕದಾಗಿರಲು ಕಾರಣಗಳಿವು

ಕಾರಿನ ಇತರ ಟಯರ್‌ಗಳಿಗೆ ಹೋಲಿಸಿದರೆ ಸ್ಪೇರ್ ಟಯರ್ ಏಕೆ ಚಿಕ್ಕದಾಗಿರುತ್ತದೆ. ಇತರ ಟಯರ್‌ಗಳಂತೆಯೇ ಸ್ಪೇರ್ ಟಯರ್‌ಗಳನ್ನು ಏಕೆ ಒಂದೇ ಪ್ರಮಾಣದಲ್ಲಿ ನೀಡಲಾಗುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಪಂಕ್ಚರ್ ಆದಾಗ ನೆರವಿಗೆ ಬರುವ ಸ್ಪೇರ್ ಟಯರ್‌ಗಳ ಗಾತ್ರ ಚಿಕ್ಕದಾಗಿರಲು ಕಾರಣಗಳಿವು

ಕಾರಿನ ಮೇಲೆ ಹೆಚ್ಚು ತೂಕ ಬೀಳದಿರಲಿ ಎಂಬ ಕಾರಣಕ್ಕೆ ಸ್ಪೇರ್ ಟಯರ್‌ಗಳನ್ನು ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲಿ ನೀಡಲಾಗುತ್ತದೆ. ಸ್ಪೇರ್ ಟಯರ್‌ಗಳು ಕಡಿಮೆ ತೂಕ ಹೊಂದಿದ್ದರೆ ಹಾಗೂ ಚಿಕ್ಕದಾಗಿದ್ದರೆ ಪ್ರತಿಯೊಬ್ಬರೂ ಅವುಗಳನ್ನು ಸುಲಭವಾಗಿ ಎತ್ತಬಹುದು. ಇದರಿಂದ ಟಯರ್ ಬದಲಿಸುವ ಸಂದರ್ಭ ಬಂದಾಗ ಸುಲಭವಾಗಿ ಬದಲಾಯಿಸಬಹುದು.

ಪಂಕ್ಚರ್ ಆದಾಗ ನೆರವಿಗೆ ಬರುವ ಸ್ಪೇರ್ ಟಯರ್‌ಗಳ ಗಾತ್ರ ಚಿಕ್ಕದಾಗಿರಲು ಕಾರಣಗಳಿವು

ಜೊತೆಗೆ ಸ್ಪೇರ್ ಟಯರ್‌ಗಳನ್ನು ಚಿಕ್ಕದಾಗಿಸುವುದರಿಂದ ಉತ್ಪಾದನಾ ಕಂಪನಿಗಳಿಗೆ ವೆಚ್ಚವೂ ಕಡಿಮೆಯಾಗುತ್ತದೆ. ಇದರಿಂದ ಕಾರಿನ ಬೆಲೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಸಾಮಾನ್ಯವಾಗಿ ಕಾರು ತಯಾರಕ ಕಂಪನಿಗಳು ಕಾರಿನ ಬೆಲೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನಿಸುತ್ತವೆ. ಕಾರಿನ ಬೆಲೆ ಕಡಿಮೆಯಿದ್ದರೆ ಮಾತ್ರ ಗ್ರಾಹಕರು ಕಾರ್ ಅನ್ನು ಖರೀದಿಸಲು ಮುಂದಾಗುತ್ತಾರೆ.

ಪಂಕ್ಚರ್ ಆದಾಗ ನೆರವಿಗೆ ಬರುವ ಸ್ಪೇರ್ ಟಯರ್‌ಗಳ ಗಾತ್ರ ಚಿಕ್ಕದಾಗಿರಲು ಕಾರಣಗಳಿವು

ಕಾರು ತಯಾರಕ ಕಂಪನಿಗಳು ಕಾರುಗಳ ಬೆಲೆ ಇಳಿಸಲು ಮಾಡುವ ವಿವಿಧ ತಂತ್ರಗಳಲ್ಲಿ ಇದೂ ಒಂದು. ಸಾಮಾನ್ಯವಾಗಿ ಕಾರಿನ ನಿಯಮಿತ ಟಯರ್‌ ಗಳನ್ನು ದೀರ್ಘಾವಧಿವರೆಗೂ ಬಳಸಬಹುದು. ಆದರೆ ಅದಕ್ಕಿಂತ ಚಿಕ್ಕ ಪ್ರಮಾಣದಲ್ಲಿರುವ ಸ್ಪೇರ್ ಟಯರ್‌ಗಳನ್ನು ಹಾಗೆ ಬಳಸಲು ಸಾಧ್ಯವಿಲ್ಲ. ಸಣ್ಣ ಗಾತ್ರದ ಸ್ಪೇರ್ ಟಯರ್‌ಗಳಲ್ಲಿ ಹೆಚ್ಚು ಎಂದರೆ 150 ಕಿ.ಮೀಗಳವರೆಗೆ ಚಲಿಸಬಹುದು.

ಪಂಕ್ಚರ್ ಆದಾಗ ನೆರವಿಗೆ ಬರುವ ಸ್ಪೇರ್ ಟಯರ್‌ಗಳ ಗಾತ್ರ ಚಿಕ್ಕದಾಗಿರಲು ಕಾರಣಗಳಿವು

ಜೊತೆಗೆ ಈ ಟಯರ್ ಹೊಂದಿರುವ ಕಾರುಗಳನ್ನು ಪ್ರತಿ ಗಂಟೆಗೆ 80 ಕಿ.ಮೀಗಳಿಗಿಂತ ಕಡಿಮೆ ವೇಗದಲ್ಲಿ ಚಾಲನೆ ಮಾಡಬೇಕಾಗುತ್ತದೆ. ಕಾರಿನಲ್ಲಿ ಸಣ್ಣ ಸ್ಪೇರ್ ಟಯರ್‌ಗಳನ್ನು ಅಳವಡಿಸುವಾಗ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಾಮಾನ್ಯವಾಗಿ ಸ್ಪೇರ್ ಟಯರ್‌ಗಳನ್ನು ಕಾರಿನ ಟ್ರಂಕ್ ಪ್ರದೇಶದಲ್ಲಿ, ಅಂದರೆ ಬೂಟ್ ಪ್ರದೇಶದಲ್ಲಿ ಇರಿಸಲಾಗುತ್ತದೆ.

ಪಂಕ್ಚರ್ ಆದಾಗ ನೆರವಿಗೆ ಬರುವ ಸ್ಪೇರ್ ಟಯರ್‌ಗಳ ಗಾತ್ರ ಚಿಕ್ಕದಾಗಿರಲು ಕಾರಣಗಳಿವು

ಒಂದು ವೇಳೆ ಸ್ಪೇರ್ ಟಯರ್‌ ಕಾರಿನ ಇತರ ಟಯರ್‌ ಗಳಷ್ಟು ದೊಡ್ಡದಾಗಿದ್ದರೆ, ಹೆಚ್ಚಿನ ಸ್ಥಳಾವಕಾಶ ಬೇಕಾಗುತ್ತದೆ. ಸ್ಪೇರ್ ಟಯರ್‌ ಚಿಕ್ಕದಾಗಿದ್ದರೆ, ಅದು ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತದೆ. ಜೊತೆಗೆ ಈಗಾಗಲೇ ಹೇಳಿದಂತೆ ಕಾರಿನ ಒಟ್ಟಾರೆ ತೂಕವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಜಾಗವನ್ನು ಸಹ ನೀಡುತ್ತದೆ. ಇದರಿಂದ ಹೆಚ್ಚು ಲಗೇಜ್ ಸಂಗ್ರಹಿಸಲು ಸಾಧ್ಯವಾಗುತ್ತದೆ.

ಪಂಕ್ಚರ್ ಆದಾಗ ನೆರವಿಗೆ ಬರುವ ಸ್ಪೇರ್ ಟಯರ್‌ಗಳ ಗಾತ್ರ ಚಿಕ್ಕದಾಗಿರಲು ಕಾರಣಗಳಿವು

ಸಣ್ಣ ಸ್ಪೇರ್ ಟಯರ್‌ ಅಳವಡಿಸಿ ದೂರದ ಪ್ರಯಾಣ ಮಾಡುವುದು ಸರಿಯಲ್ಲ. ಇತರ ಟಯರ್‌‌ಗಳಿಗೆ ಹೋಲಿಸಿದರೆ ಸ್ಪೇರ್ ಟಯರ್‌‌ನ ಗಾತ್ರವು ವಿಭಿನ್ನವಾಗಿರುವುದರಿಂದ ಜೋಡಣೆ ಹಾಗೂ ನಿರ್ವಹಣೆಗೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ. ಅಂದ ಹಾಗೆ ಕಾರು ತಯಾರಕ ಕಂಪನಿಗಳು ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಕಾರುಗಳಲ್ಲಿ ಪೂರ್ಣ ಗಾತ್ರದ ಬಿಡಿ ಟಯರ್‌ಗಳಿಗೆ ಬದಲಿಗೆ ಸಣ್ಣ ಗಾತ್ರದ ಟಯರ್‌ಗಳನ್ನು ನೀಡುತ್ತಿವೆ.

ಪಂಕ್ಚರ್ ಆದಾಗ ನೆರವಿಗೆ ಬರುವ ಸ್ಪೇರ್ ಟಯರ್‌ಗಳ ಗಾತ್ರ ಚಿಕ್ಕದಾಗಿರಲು ಕಾರಣಗಳಿವು

ಈ ಟಯರ್‌ಗಳನ್ನು ಸ್ಪೇಸ್ ಸೇವರ್ ಟಯರ್ ಅಥವಾ ಡೋನಟ್ ಟಯರ್ ಎಂದು ಸಹ ಕರೆಯಲಾಗುತ್ತದೆ. ಸ್ಪೇರ್ ಟಯರ್‌ಗಳಿಂದಾಗುವ ಅನುಕೂಲ ಹಾಗೂಅನಾನುಕೂಲಗಳೇನು ಎಂಬುದನ್ನು ನೋಡುವುದಾದರೆ, ಸಾಮಾನ್ಯ ಸ್ಪೇರ್ ಟಯರ್ ಕಾರಿನ ಬೂಟ್ ಸ್ಪೇಸ್'ನಲ್ಲಿ ಹೆಚ್ಚು ಜಾಗವನ್ನು ಪಡೆಯುತ್ತದೆ. ಆದರೆ ಸ್ಪೇಸ್ ಸೇವರ್ ಟಯರ್‌ಗಳು ಸಣ್ಣದಾಗಿರುವುದರಿಂದ ಹೆಚ್ಚು ಜಾಗವನ್ನು ಪಡೆಯುವುದಿಲ್ಲ. ಈ ಕಾರಣಕ್ಕಾಗಿಯೇ ಈ ಟಯರ್‌ಗಳನ್ನು ಸ್ಪೇಸ್ ಸೇವರ್ ಟಯರ್ ಎಂದು ಕರೆಯಲಾಗುತ್ತದೆ.

ಪಂಕ್ಚರ್ ಆದಾಗ ನೆರವಿಗೆ ಬರುವ ಸ್ಪೇರ್ ಟಯರ್‌ಗಳ ಗಾತ್ರ ಚಿಕ್ಕದಾಗಿರಲು ಕಾರಣಗಳಿವು

ಸ್ಪೇರ್ ಟಯರ್‌ಗಳ ತೂಕ ಕಡಿಮೆ ಇರುವುದರಿಂದ, ಕಾರಿನ ಒಟ್ಟಾರೆ ತೂಕವೂ ಕಡಿಮೆಯಾಗುತ್ತದೆ. ಜೊತೆಗೆ ಕಾರಿನ ಹೊರಸೂಸುವಿಕೆಯು ಕಡಿಮೆಯಾಗುತ್ತದೆ. ಜೊತೆಗೆ ಕಾರಿನ ಮೈಲೇಜ್ ಹೆಚ್ಚುತ್ತದೆ. ಕಾರು ಹೆಚ್ಚು ತೂಕ ಹೊಂದಿದ್ದರೆ ಮೈಲೇಜ್ ಕಡಿಮೆಯಾಗುತ್ತದೆ ಎಂಬುದು ಗಮನಾರ್ಹ. ಸ್ಪೇರ್ ಟಯರ್‌ಗಳ ಮೇಲೆ ಸಾಮಾನ್ಯವಾಗಿ ಕಿತ್ತಳೆ, ಹಳದಿ, ಕೆಂಪು ಬಣ್ಣಗಳಿಂದ ಗುರುತು ಹಾಕಿರಲಾಗುತ್ತದೆ. ಸ್ಪೇರ್ ಟಯರ್ ಎಂಬುದನ್ನು ಸೂಚಿಸಲು ಈ ರೀತಿ ಗುರುತು ಹಾಕಲಾಗಿರುತ್ತದೆ. ಸ್ಪೇರ್ ಟಯರ್‌ನಲ್ಲಿ ಚಲಿಸುತ್ತಿದ್ದರೆ ಆದಷ್ಟು ಬೇಗ ಸಾಮಾನ್ಯ ಟಯರ್‌ಗೆ ಬದಲಿಸಿಕೊಳ್ಳುವುದು ಸೂಕ್ತ.

ಪಂಕ್ಚರ್ ಆದಾಗ ನೆರವಿಗೆ ಬರುವ ಸ್ಪೇರ್ ಟಯರ್‌ಗಳ ಗಾತ್ರ ಚಿಕ್ಕದಾಗಿರಲು ಕಾರಣಗಳಿವು

ಇನ್ನು ಸ್ಪೇರ್ ಟಯರ್‌ಗಳಿಂದಾಗುವ ಅನಾನುಕೂಲಗಳನ್ನು ನೋಡುವುದಾದರೆ ಸ್ಪೇರ್ ಟಯರ್‌ಗಳು ಸಾಮಾನ್ಯ ಟಯರ್‌ಗಳಂತೆ ಕಾರ್ಯನಿರ್ವಹಿಸುವುದಿಲ್ಲ. ಸ್ಪೇರ್ ಟಯರ್‌ಗಳ ಮೂಲಕ ಚಾಲನೆ ಮಾಡುವುದು ಸುರಕ್ಷಿತವಲ್ಲ. ಬ್ರೇಕ್ ಹಾಕಿದಾಗ ಸ್ಪೇಸ್ ಸೇವರ್ ಟಯರ್‌ಗಳು ಕಾರಿನ ನಿಲುಗಡೆ ದೂರವನ್ನು ಹೆಚ್ಚಿಸುತ್ತವೆ. ಸ್ಪೇರ್ ಟಯರ್ ಅಳವಡಿಸಿ ನಡೆಸಲಾದ ಪರೀಕ್ಷೆಗಳಲ್ಲಿ ಕಾರುಗಳು 50%ನಷ್ಟು ದೂರ ನಿಲ್ಲುವುದು ಕಂಡು ಬಂದಿದೆ.

ಪಂಕ್ಚರ್ ಆದಾಗ ನೆರವಿಗೆ ಬರುವ ಸ್ಪೇರ್ ಟಯರ್‌ಗಳ ಗಾತ್ರ ಚಿಕ್ಕದಾಗಿರಲು ಕಾರಣಗಳಿವು

ಕಾರಿನ ಬ್ರೇಕ್ ಹಿಡಿದರೆ ಕಾರು ತಕ್ಷಣ ನಿಲ್ಲುವುದಿಲ್ಲ. ಕಾರು ನಿಲ್ಲುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದು ಸ್ಪೇರ್ ಟಯರ್‌ನ ಪ್ರಮುಖ ಸಮಸ್ಯೆಯಾಗಿದೆ. ಸ್ಪೇರ್ ಟಯರ್‌ಗಳು ಕಾರಿನ ಕಾರ್ನರ್ ಗ್ರಿಪ್ ಅನ್ನು 13%ನಷ್ಟು ಕಡಿಮೆಗೊಳಿಸುತ್ತವೆ. ಕಾರಿನಲ್ಲಿ ಸ್ಪೇರ್ ಟಯರ್ ಅಳವಡಿಸಿದ್ದಾಗ ಕಾರನ್ನು ಎಚ್ಚರಿಕೆಯಿಂದ ಚಾಲನೆ ಮಾಡುವುದು ಅವಶ್ಯಕ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Reasons for spare tyres smaller than standard tyres details
Story first published: Wednesday, October 13, 2021, 10:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X