ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಟ್ರಾಕ್ಟರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಕೃಷಿ ಚಟುವಟಿಕೆಗಾಗಿ ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತದೆ. ಹಲವಾರು ವರ್ಷಗಳಿಂದ ಟ್ರ್ಯಾಕ್ಟರ್‌ಗಳು ಕೃಷಿ ಚಟುವಟಿಕೆಗಳ ಪ್ರಮುಖ ಭಾಗವಾಗಿ ಮಾರ್ಪಟ್ಟಿವೆ.

ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಟ್ರಾಕ್ಟರ್‌ಗಳ ಸೈಲೆನ್ಸರ್ ಗಳು ಟ್ರ್ಯಾಕ್ಟರ್‌ಗಳ ಮೇಲ್ಭಾಗದಲ್ಲಿ ಏಕಿರುತ್ತವೆ ಎಂಬುದನ್ನು ಕೆಲ ದಿನಗಳ ಹಿಂದಷ್ಟೇ ಪ್ರಕಟಿಸಲಾಗಿತ್ತು. ಈ ಲೇಖನದಲ್ಲಿ ಟ್ರ್ಯಾಕ್ಟರ್‌ಗಳಲ್ಲಿರುವ ವ್ಹೀಲ್ ಗಳ ಬಗ್ಗೆ ನೋಡೋಣ. ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ಯಾವ ಕಾರಣಕ್ಕೆ ದೊಡ್ಡ ಗಾತ್ರದ ಟಯರ್‌ಗಳನ್ನು ಅಳವಡಿಸಲಾಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಟ್ರ್ಯಾಕ್ಟರ್‌ನ ಹಿಂಭಾಗದಲ್ಲಿರುವ ಟಯರ್‌ಗಳು ಏಕೆ ದೊಡ್ಡದಾಗಿರುತ್ತವೆ ಎಂಬುದನ್ನು ತಿಳಿದುಕೊಳ್ಳುವ ಮೊದಲು, ಟ್ರಾಕ್ಟರ್ ಯಾವ ರೀತಿಯ ವಾಹನ, ಇತರ ವಾಹನಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಟ್ರ್ಯಾಕ್ಟರ್ ಪದವನ್ನು ಲ್ಯಾಟಿನ್ ಪದ ಟ್ರಾಕ್ಷನ್ ನಿಂದ ಪಡೆಯಲಾಗಿದೆ. ಟ್ರಾಕ್ಷನ್ ಎಂದರೆ ಸೆಳೆಯುವುದು ಎಂದು ಅರ್ಥ. ಈ ಪದವನ್ನು ಮೊದಲ ಬಾರಿಗೆ 1896ರಲ್ಲಿ ಬಳಸಲಾಯಿತು.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಟ್ರ್ಯಾಕ್ಟರ್ ಗಳನ್ನು ಸರಕುಗಳನ್ನು ಎಳೆಯಲು ವಿನ್ಯಾಸಗೊಳಿಸಲಾಗಿದೆ. ಈ ಕಾರಣಕ್ಕೆ ಅದರ ಮುಂಭಾಗದ ಟಯರ್‌ಗಳು ಚಿಕ್ಕದಾಗಿದ್ದು, ಹಿಂಭಾಗದ ಟಯರ್‌ಗಳು ದೊಡ್ಡದಾಗಿರುತ್ತವೆ. ಟ್ರಾಕ್ಟರ್‌ನ ಕೆಲಸವು ಹೆಚ್ಚಿನ ತೂಕವನ್ನು ಎಳೆಯುವುದಾದ ಕಾರಣ ಅದರ ಹಿಂಭಾಗದ ಟಯರ್‌ಗಳು ದೊಡ್ಡದಾಗಿರುತ್ತವೆ.

ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮುಂಭಾಗದ ಟಯರ್‌ಗಳ ರೇಡಿಯಸ್ ಚಿಕ್ಕದಾದ ಕಾರಣಕ್ಕೆ ಅವುಗಳನ್ನು ಸ್ಟೀಯರಿಂಗ್ ಸಹಾಯದಿಂದ ಸುಲಭವಾಗಿ ತಿರುಗಿಸಬಹುದು. ಈ ಕಾರಣಕ್ಕೆ ಮುಂಭಾಗದ ಟಯರ್‌ಗಳು ಚಿಕ್ಕದಾಗಿರುತ್ತವೆ. ಜೊತೆಗೆ ಇವುಗಳ ತೂಕವು ಹಗುರವಾಗಿರುವುದರಿಂದ ಸುಲಭವಾಗಿ ನಿಯಂತ್ರಿಸಬಹುದು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಟ್ರಾಕ್ಟರುಗಳನ್ನು ಸಾಮಾನ್ಯವಾಗಿ ಒರಟು ಮೇಲ್ಮೈಗಳಲ್ಲಿ, ಹೊಲಗಳಲ್ಲಿ, ಮಣ್ಣು ತುಂಬಿರುವ ಪ್ರದೇಶಗಳಲ್ಲಿ ಬಳಸಲಾಗುತ್ತದೆ. ಇದರಿಂದ ಕೃಷಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬಹುದು. ಈ ಪ್ರದೇಶಗಳಲ್ಲಿ ದೊಡ್ಡ ಗಾತ್ರದ ಟಯರ್‌ಗಳು ಮೇಲ್ಮೈ ಅಥವಾ ಮಣ್ಣಿನಲ್ಲಿ ತಿರುಗುತ್ತವೆ. ಸಣ್ಣ ಟಯರ್‌ಗಳು ಹೂತಿ ಕೊಳ್ಳುತ್ತವೆ.

ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಟಯರ್‌ಗಳ ಗಾತ್ರವು ದೊಡ್ಡದಾಗಿದ್ದರೆ ಮಣ್ಣಿನಿಂದ ಸುಲಭವಾಗಿ ಹೊರಬರುತ್ತವೆ. ದೊಡ್ಡ ಟಯರ್‌ಗಳಲ್ಲಿ ಗ್ರಿಪ್ ಗಳು ದೊಡ್ಡದಾಗಿರುತ್ತವೆ. ಇದರಿಂದ ಅವು ಸರಾಗವಾಗಿ ಮುಂದೆ ಸಾಗುತ್ತವೆ. ದೊಡ್ಡ ಗಾತ್ರದ ಟಯರ್‌ಗಳು ಹೆಚ್ಚಿನ ಹೊರೆ ಹೊರುವ ಸಾಮರ್ಥ್ಯವನ್ನು ಹೊಂದಿರುತ್ತವೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಇದರಿಂದ ದೊಡ್ಡ ಟಯರ್‌ಗಳು ಹೆಚ್ಚಿನ ತೂಕವನ್ನು ಎಳೆಯಲು ಸಾಧ್ಯವಾಗುತ್ತದೆ. ಆದರೂ ಇದು ಟಯರ್‌ಗಳ ಎತ್ತರ, ಅಗಲ ಹಾಗೂ ಗಾಳಿಯ ಒತ್ತಡವನ್ನು ಅವಲಂಬಿಸಿರುತ್ತದೆ. ಇದರಿಂದ ಮುಂಭಾಗದಲ್ಲಿರುವ ಟಯರ್‌ಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗದೆ, ಹಿಂಭಾಗದ ಟಯರ್‌ಗಳು ಸುಲಭವಾಗಿ ಹೊರೆ ಹೊರಲು ಸಾಧ್ಯವಾಗುತ್ತದೆ.

Most Read Articles

Kannada
English summary
Reasons for tractors having big tyres in rear. Read in Kannada.
Story first published: Tuesday, September 1, 2020, 14:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X