ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು- ಇದಕ್ಕೆ ಕಾರಣ ಏನು..?

By Rahul Ts

ಭಾರತದಲ್ಲಿ ಬಜಾಜ್ ಸಂಸ್ಥೆಯು ತನ್ನ ಪಲ್ಸರ್ ದ್ವಿಚಕ್ರ ವಾಹನ ಮಾರಾಟದಲ್ಲಿ ಬ್ರ್ಯಾಂಡ್ ಖ್ಯಾತಿ ಪಡೆದುಕೊಂಡಿರುವ ಬಹುತೇಕರಿಗೆ ಗೊತ್ತಿರುವ ವಿಚಾರ ತನ್ನ ವಿಶಿಷ್ಟ ವಿನ್ಯಾಸ, ಆಕರ್ಷಕ ನೋಟದಿಂದಲೇ ಎಲ್ಲರನ್ನು ಸೆಳೆದುಕೊಂಡಿರುವ ಪಲ್ಸರ್ ಉತ್ಪನ್ನಗಳು ಗ್ರಾಹಕರಲ್ಲಿ ಕುತೂಹಲ ಹುಟ್ಟುಹಾಕಿರುವುದಲ್ಲದೇ ಬೈಕ್ ಮಾರಾಟದಲ್ಲೂ ಮುಂಚೂಣಿ ಸಾಧಿಸಿದೆ.

ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು- ಇದಕ್ಕೆ ಕಾರಣ ಏನು..?

ಹತ್ತು ಹಲವು ವೈಶಿಷ್ಟ್ಯತೆಯನ್ನು ಹೊಂದಿರುವ ಜನಪ್ರಿಯ ಬ್ರ್ಯಾಂಡ್ ಪಲ್ಸರ್ ಬೈಕ್ ಟೊಕಿಯೊ ಆರ್ & ಡಿ ಸಹಯೋಗದೊಂದಿಗೆ ಬಜಾಜ್ ಆಟೊ ಸಂಸ್ಥೆಯ ಎಂಜಿನಿಯರಿಂಗ್ ವಿಭಾಗ ಈ ದ್ವಿಚಕ್ರ ವಾಹನವನ್ನು ಅಭಿವೃದ್ಧಿಪಡಿಸಿದ್ದು, ಪಲ್ಸರ್ ಮೋಟಾರ್ ಸೈಕಲ್ ಬಗೆಗಿನ ಮತ್ತಷ್ಟು ಇಂಟ್ರಸ್ಟಿಂಗ್ ಮಾಹಿತಿಗಳು ಇಲ್ಲಿವೆ ನೋಡಿ.

Recommended Video - Watch Now!
[Kannada] Maruti Swift 2018 - Full Specifications, Features, Price, Mileage, Colours - DriveSpark
ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು- ಇದಕ್ಕೆ ಕಾರಣ ಏನು..?

ತನ್ನ ವ್ಯಾಪಕ ಶ್ರೇಣಿಯನ್ನು ಹೊಂದಿರುವುದೇ ಪಲ್ಸರ್ ಬ್ರ್ಯಾಂಡ್‌ಗೆ ಪ್ಲಸ್ ಪಾಯಿಂಟ್ ಎನ್ನಬಹುದು. ಕಡಿಮೆ ಬಜೆಟ್‌‌ನಿಂದ ಹಿಡಿದು ಬಿಗ್ ಬಜೆಟ್‌ವರೆಗೆ ಪಲ್ಸರ್ ಬೈಕ್‌ಗಳು ಲಭ್ಯವಿದ್ದು, ನಿಮಗೆ ಬೇಕಾದ ರೂಪಾಂತರವನ್ನು ಆಯ್ದುಕೊಳ್ಳಬಹುದಾಗಿದೆ.

ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು- ಇದಕ್ಕೆ ಕಾರಣ ಏನು..?

ಪಲ್ಸರ್ 135 ಎಲ್ಎಸ್ ನಿಂದ ಹಿಡಿದು ಪಲ್ಸರ್ ಆರ್‍ಎಸ್ 200ವರೆಗೆ ಪಲ್ಸರ್ ಬೈಕ್ ನಿಮಗೆ ಸೇವೆ ಒದಗಿಸಲಿದೆ. ಕಡಿಮೆ ಬಜೆಟ್‌ನಲ್ಲಿ ಹೆಚ್ಚು ಮೈಲೇಜ್ ನೀಡುವ ಮತ್ತು ವಿಶಿಷ್ಟ ಶೈಲಿಯ ಬೈಕ್ ಬೇಕೆಂದರೆ ಪಲ್ಸರ್ 135 ಎಲ್ಎಸ್ ಬೈಕ್ ಕೊಳ್ಳಲು ಗ್ರಾಹಕರಿಗೆ ಅವಕಾಶವಿದೆ.

ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು- ಇದಕ್ಕೆ ಕಾರಣ ಏನು..?

ಅದೇ ರೀತಿ, ಮಧ್ಯಂತರ ಗ್ರಾಹಕರು ಪಲ್ಸರ್ 150 ಅಥವಾ 180ರ ಆವೃತಿಯನ್ನು ಆಯ್ಕೆ ಮಾಡುತ್ತಾರೆ ಹಾಗೂ ಬಲಿಷ್ಠ ಎಂಜಿನ್, ಅತ್ಯಾಕರ್ಷಕ ವಿನ್ಯಾಸ ಮತ್ತು ಮೈಲೇಜ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಇರುವವರು ಉನ್ನತ ಆವೃತಿಯ ಬೈಕ್ ಅನ್ನು ಆಯ್ಕೆ ಮಾಡಬಹುದಾಗಿದೆ.

ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು- ಇದಕ್ಕೆ ಕಾರಣ ಏನು..?

ಬಜಾಜ್ ಪಲ್ಸರ್ ಶ್ರೇಣಿಯ ವೈಶಿಷ್ಟ್ಯತೆಗಳ ಪಟ್ಟಿ ಬಹಳಷ್ಟಿವೆ ಎನ್ನಬಹುದು. ಎಲ್ಲಾ ಪಲ್ಸರ್ ಮಾದರಿಗಳಲ್ಲೂ ಮುಂಭಾಗದ ಡಿಸ್ಕ್ ಬ್ರೇಕ್, ಟ್ಯೂಬ್‌ಲೆಸ್ ಟೈರುಗಳು, ಎಂಜಿನ್ ಕಿಕ್ ಸ್ವಿಚ್ ಮತ್ತು ಅಲಾಯ್ ಚಕ್ರಗಳನ್ನು ನೋಡಹುದಾಗಿದೆ.

ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು- ಇದಕ್ಕೆ ಕಾರಣ ಏನು..?

ಸ್ವಯಂಚಾಲಿತ ತಿರುವಿನ ಸೂಚಕಗಳು, ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು ಮತ್ತು ಆಯಿಲ್ ಕೂಲರ್ ಹೊಂದಿವೆ. ಹೆಚ್ಚು ವೈಶಿಷ್ಟ್ಯತೆಗಳ ದೀರ್ಘ ಪಟ್ಟಿಯನ್ನು ಪಡೆದುಕೊಂಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಪಲ್ಸರ್ ಬ್ರಾಂಡ್ ಯುವ ರೈಡರ್‍‍ಗಳನ್ನು ಆಕರ್ಷಿಸುತ್ತದೆ.

ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು- ಇದಕ್ಕೆ ಕಾರಣ ಏನು..?

ಕೊಟ್ಟ ಹಣಕ್ಕೆ ಮೋಸ ಇಲ್ಲ

ಭಾರತವು 'ಬೆಲೆ ಸೂಕ್ಷ್ಮ' ಮಾರುಕಟ್ಟೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಕೈಗೆಟುಕುವ ಬೆಲೆಯ ವಾಹನಗಳ ಬಗ್ಗೆ ಮಾತ್ರ ನಾವು ಹೆಚ್ಚು ಗಮನ ಹರಿಸುತ್ತೇವೆ ಎನ್ನುವುದು ಸತ್ಯ ಸಂಗತಿ.

ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು- ಇದಕ್ಕೆ ಕಾರಣ ಏನು..?

ಎಲ್ಲಾ ಪಲ್ಸರ್ ಬ್ರ್ಯಾಂಡಿನ ಮೋಟಾರ್ ಸೈಕಲ್‌ಗಳೂ ಸಹ ಉತ್ತಮ ಶಕ್ತಿ, ಉತ್ತಮ ನೋಟ ಮತ್ತು ವೈಶಿಷ್ಟ್ಯತೆವನ್ನು ಪಡೆದುಕೊಂಡಿದ್ದು, ಕೊಟ್ಟ ಹಣಕ್ಕೆ ಯೋಗ್ಯವಾದ ಸೇವೆ ನೀಡಲಿದೆ ಎನ್ನುವುದು ಪಲ್ಸರ್ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು- ಇದಕ್ಕೆ ಕಾರಣ ಏನು..?

ಮೊದಲ ಬಾರಿಗೆ ಪಲ್ಸರ್ ಬೈಕ್ 2003ರಲ್ಲಿ ಪ್ರಾರಂಭವಾಯಿತು. ಅಲ್ಲಿಂದ ಕಂಪನಿಯು ಹೊಸ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಪಲ್ಸರ್ ಬೈಕ್‌ನಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ತರಲಾಗುತ್ತಿದ್ದು, ಹೊಸ ಬಣ್ಣದ ಯೋಜನೆಗಳೊಂದಿಗೆ ಉತ್ಪನ್ನಗಳನ್ನು ಶ್ರೀಮಂತಗೊಳಿಸುತ್ತಿರುವುದು ಈ ಬೈಕಿನ ಖ್ಯಾತಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಿದೆ.

ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು- ಇದಕ್ಕೆ ಕಾರಣ ಏನು..?

ಬಜಾಜ್ ಬಿಡಿ ಭಾಗಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದ್ದು, ಬಿಡಿ ಭಾಗಗಳೂ ಸಹ ಬಹಳ ದುಬಾರಿ ಆಗಿರುವುದಿಲ್ಲ. ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೂ ಸಹ ಸುಲಭವಾಗಿ ಲಭ್ಯವಾಗುವಂತಹ ನಿರ್ವಹಣೆಯನ್ನು ಪಲ್ಸರ್ ಬೈಕ್ ಪಡೆದುಕೊಂಡಿದೆ.

ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು- ಇದಕ್ಕೆ ಕಾರಣ ಏನು..?

ಇಷ್ಟೆಲ್ಲಾ ಕಾರಣಗಳಿದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಈಗಲೂ ಸಹ ಹಾಟ್ ಕೇಕ್‌ನಂತೆ ಮಾರಾಟವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬಲಿಷ್ಠತೆ, ವಿನ್ಯಾಸ ಹಾಗು ಗ್ರಾಹಕ ಸ್ನೇಹಿ ವಿಶೇಷತೆಗಳನ್ನು ಪಡೆದುಕೊಳ್ಳಲಿರುವುದಂತೂ ಖಂಡಿತ.

Source : cartoq

Most Read Articles

Kannada
Read more on pulsar
English summary
REAL reasons why everyone’s buying the Bajaj Pulsar.
Story first published: Saturday, March 3, 2018, 13:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more