ಇನ್ಮುಂದೆ ನಂಬರ್ ಪ್ಲೇಟ್‌ಗಳಲ್ಲೂ ಮಿಂಚಲಿವೆ ಇಮೋಜಿ..!

ಸ್ಮಾರ್ಟ್‌ಫೋನ್ ಯುಗದಲ್ಲಿ ಇಮೋಜಿ ಬಳಸದೇ ಇರುವ ವ್ಯಕ್ತಿಯೇ ಇಲ್ಲ ಅಂದ್ರೆ ತಪ್ಪಾಗುವುದಿಲ್ಲ. ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಮಾತಿಗಿಂತಲೂ ಹೆಚ್ಚು ಇಮೋಜಿಗಳಿಗೆಯೇ ವಿಶೇಷ ಸ್ಥಾನಮಾನವಿದ್ದು, ಇದೀಗ ವಾಹನಗಳ ನಂಬರ್ ಪ್ಲೇಟ್‌ಗಳಲ್ಲೂ ಇದರ ಬಳಕೆಗೆ ಅವಕಾಶ ನೀಡಲಾಗುತ್ತಿದೆ.

ಇನ್ಮುಂದೆ ನಂಬರ್ ಪ್ಲೇಟ್‌ಗಳಲ್ಲೂ ಮಿಂಚಲಿವೆ ಇಮೋಜಿ..!

ಹೌದು, ನಾವು ಇಷ್ಟು ದಿನಗಳ ಕಾಲ ನಂಬರ್ ಪ್ಲೇಟ್‌ಗಳಲ್ಲಿ ಯಾವುದೋ ಸಂಘಟನೆಯ ಅಧ್ಯಕ್ಷರು, ಉಪಾಧ್ಯಕ್ಷರು ಅಂತೆಲ್ಲಾ ದೊಡ್ಡ ಅಕ್ಷರಗಳಲ್ಲಿ ನಮೂದಿಸಿರುವುದನ್ನು ನೋಡಿದ್ದೆವೆ. ಆದ್ರೆ ಮುಂಬರುವ ದಿನಗಳಲ್ಲಿ ಇದು ಕೂಡಾ ಬ್ಯಾನ್ ಆಗಲಿದ್ದು, ಆಯ್ದ ಇಲಾಖೆಯ ಕೆಲವು ಅಧಿಕಾರಿಗಳನ್ನು ಹೊರತುಪಡಿಸಿ ಯಾರು ಕೂಡಾ ಹುದ್ದೆಯನ್ನು ನಂಬರ್ ಪ್ಲೇಟ್‌ನಲ್ಲಿ ಬಳಸುವಂತಿಲ್ಲ ಎನ್ನುವ ನಿಯಮ ಜಾರಿಗೆ ಬರುತ್ತಿದೆ. ಹೀಗಿರುವಾಗ ಆಸ್ಟ್ರೇಲಿಯಾದಲ್ಲಿ ಕಾರುಗಳ ನಂಬರ್ ಪ್ಲೇಟ್‌ನಲ್ಲಿ ಇಮೋಜಿ ಬಳಕೆಗೆ ಅವಕಾಶ ನೀಡಲಾಗಿದೆ.

ಇನ್ಮುಂದೆ ನಂಬರ್ ಪ್ಲೇಟ್‌ಗಳಲ್ಲೂ ಮಿಂಚಲಿವೆ ಇಮೋಜಿ..!

ಜನರು ತಮ್ಮ ಭಾವನೆಗಳಿಗೆ ಅನುಗುಣವಾಗಿ ಕಾರಿನ ನಂಬರ್‌ ಪ್ಲೇಟ್‌ನಲ್ಲಿ ಇಮೋಜಿಗಳನ್ನು ಬಳಸಬಹುದಾಗಿದ್ದು, ಕಾರಿನ ನೋಂದಣಿ ಸಂಖ್ಯೆ ಮತ್ತು ಇಮೋಜಿ ಹೊರತವಾಗಿ ಯಾವುದೇ ರೀತಿಯ ಅಕ್ಷರಗಳನ್ನು ಬಳಸಿಕೊಳ್ಳುವಂತಿಲ್ಲ ಎನ್ನಲಾಗಿದೆ.

ಇನ್ಮುಂದೆ ನಂಬರ್ ಪ್ಲೇಟ್‌ಗಳಲ್ಲೂ ಮಿಂಚಲಿವೆ ಇಮೋಜಿ..!

ಆಸ್ಟ್ರೇಲಿಯಾದ ಕ್ವಿನ್ಸ್‌ಲ್ಯಾಂಡ್ ರಾಜ್ಯದಲ್ಲಿ ಈ ಹೊಸ ಮಾದರಿಯ ನಿಯಮವನ್ನು ಪರಿಚಯಿಸಲಾಗಿದ್ದು, ಇಮೋಜಿ ಬಳಕೆಗೆ ಅವಕಾಶ ನೀಡಿರುವ ಟ್ರಾಫಿಕ್ ಪೊಲೀಸರು ಹೊಸ ನಿಯಮ ಜಾರಿಯ ಹಿಂದಿನ ಉದ್ದೇಶ ಏನು ಅನ್ನುವುದನ್ನ ಬಹಿರಂಗಪಡಿಸಿಲ್ಲ.

ಇನ್ಮುಂದೆ ನಂಬರ್ ಪ್ಲೇಟ್‌ಗಳಲ್ಲೂ ಮಿಂಚಲಿವೆ ಇಮೋಜಿ..!

ಒಟ್ಟಿನಲ್ಲಿ ವಾಹನ ಮಾಲೀಕರು ತಮ್ಮ ಇಷ್ಟದ ಇಮೋಜಿ ಬಳಕೆಗೆ ಅವಕಾಶ ಒದಗಿಸಿರುವ ಕ್ವಿನ್ಸ್‌ಲ್ಯಾಂಡ್ ಪೊಲೀಸರು, ವಾಹನಗಳ ನೋಂದಣಿಯ ಸಂದರ್ಭದಲ್ಲಿ ಮಾಲೀಕರು ಸೂಚಿಸುವ ಇಮೋಜಿಯನ್ನು ನಂಬರ್ ಪ್ಲೇಟ್ ನಮೂದಿಸುತ್ತಾರೆ.

ಇನ್ಮುಂದೆ ನಂಬರ್ ಪ್ಲೇಟ್‌ಗಳಲ್ಲೂ ಮಿಂಚಲಿವೆ ಇಮೋಜಿ..!

ಇನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಇಮೋಜಿಗಳಂತೂ ಸಖತ್‌ ಫೇಮಸ್‌. ನಗು, ಅಳು, ಕೋಪ, ಬೇಜಾರು, ಉತ್ಸಾಹ, ಆಶ್ವರ್ಯ, ವ್ಯಂಗ್ಯ, ನಾಚಿಕೆ ಇನ್ನಿತರ ಎಲ್ಲಾ ಭಾವನೆಗಳನ್ನು ಪುಟ್ಟ ಇಮೋಜಿಗಳ ಮೂಲಕ ವ್ಯಕ್ತಪಡಿಸಬಹುದಾಗಿದ್ದು, ಇನ್ನು ಕಾರಿನ ನಂಬರ್ ಪ್ಲೇಟ್‌ಗಳನ್ನು ಇವುಗಳ ಹಾವಳಿ ಹೆಚ್ಚಾಗಲಿದೆ.

ಇನ್ಮುಂದೆ ನಂಬರ್ ಪ್ಲೇಟ್‌ಗಳಲ್ಲೂ ಮಿಂಚಲಿವೆ ಇಮೋಜಿ..!

ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಮೂಲಕ ಚಾಟ್‌ ಮಾಡುವಾಗಲೆಲ್ಲ ಟೆಕ್ಟ್ಸ್ ಜತೆ ಭಾವನೆಗಳನ್ನೂ ಅಭಿವ್ಯಕ್ತಿಸಲು ನೆರವಾಗುವ ಇಮೋಜಿಗಳು ಮನಸ್ಸಿಗೆ ಒಂದು ರೀತಿಯಲ್ಲಿ ಸಮಧಾನ, ಬೇಸರ ಉಂಟು ಮಾಡಬಲ್ಲ ಅದ್ಭುತ ಶಕ್ತಿಯಿದ್ದು, ಇವುಗಳ ಬಳಕೆಯ ಹಿಂದೆ ಒಂದು ಇತಿಹಾಸವೇ ಇದೆ.

ಇನ್ಮುಂದೆ ನಂಬರ್ ಪ್ಲೇಟ್‌ಗಳಲ್ಲೂ ಮಿಂಚಲಿವೆ ಇಮೋಜಿ..!

ಅಂದಹಾಗೆ ಈ ಇಮೋಜಿಗಳು ಮೊದಲು ಪರಿಚಯವಾಗಿದ್ದು ಜಪಾನ್‌ ದೇಶದಲ್ಲಿ. 1990ರ ದಶಕದಲ್ಲಿ ಎನ್‌ಟಿಟಿ ಡೊಕೊಮೊ ಸಂಸ್ಥೆ ಯಲ್ಲಿ ಕೆಲಸ ಮಾಡುತ್ತಿದ್ದ ತಂಡದಲ್ಲಿದ್ದ ಶಿಗೇತಾಕ ಕುರಿಟಾ ಎಂಬಾತ ಮೊದಲ ಬಾರಿಗೆ ಇಮೋಜಿಗಳನ್ನು ರಚಿಸಿ ಅವುಗಳನ್ನು ಬಳಕೆ ಮಾಡಲು ಶುರು ಮಾಡಿದ್ದನಂತೆ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಇನ್ಮುಂದೆ ನಂಬರ್ ಪ್ಲೇಟ್‌ಗಳಲ್ಲೂ ಮಿಂಚಲಿವೆ ಇಮೋಜಿ..!

ಹೀಗಾಗಿ ಶಿಗೇತಾಕ ಅವರನ್ನು ಇಮೋಜಿಗಳ ಪಿತಾಮಹಾ ಎಂದು ಕರೆಯಲಾಗಿದ್ದು, ನಂತರದ ದಿನಗಳಲ್ಲಿ ಇಮೋಜಿಗಳನ್ನು ಹೆಚ್ಚು ಬಳಕೆಗೆ ತಂದ ಕೀರ್ತಿ ಎನ್‌ಟಿಟಿ ಡೊಕೊಮೊ, ವೊಡಾಫೋನ್‌ನಂಥ ಕಂಪೆನಿಗಳಿಗೆ ಸಲ್ಲುತ್ತದೆ. 2000ನೇ ಇಸವಿಯಲ್ಲಿ 1,000ಕ್ಕೂ ಹೆಚ್ಚು ಗ್ರಾಫಿಕಲ್‌ ಸ್ಮೈಲಿಗಳನ್ನು ಪರಿಚಯಿಸಲಾಯಿದ್ದು, ಈಗ ಕಾಲಕಾಲಕ್ಕೆ ಹೊಸ ಹೊಸ ಇಮೋಜಿಗಳು ಅಭಿವೃದ್ಧಿ ಹೊಂದುತ್ತಿವೆ.

ಇನ್ಮುಂದೆ ನಂಬರ್ ಪ್ಲೇಟ್‌ಗಳಲ್ಲೂ ಮಿಂಚಲಿವೆ ಇಮೋಜಿ..!

ಜೊತೆಗೆ ಇಮೋಜಿಗಳಿಗಾಗಿಯೇ 2014ರಿಂದ ಪ್ರತಿ ವರ್ಷ ಜುಲೈ 17ರಂದು ವಿಶ್ವ ಇಮೋಜಿ ದಿನವನ್ನಾಗಿ ಆಚರಣೆ ಸಹ ಮಾಡಲಾಗುತ್ತಿದ್ದು, ವಿಶ್ವಾದ್ಯಂತ ಇದುವರೆಗೆ ಅತಿ ಹೆಚ್ಚು ಬಳಕೆಯಾಗಿರುವ ಇಮೋಜಿ ಅಂದ್ರೆ ಅದು ಅಳುಮುಂಜಿ ಇಮೋಜಿ.

MOST READ: ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಇನ್ಮುಂದೆ ನಂಬರ್ ಪ್ಲೇಟ್‌ಗಳಲ್ಲೂ ಮಿಂಚಲಿವೆ ಇಮೋಜಿ..!

ಹೀಗೆ ಇಮೋಜಿಗಳ ಬಳಕೆಯ ಹಿಂದೆ ಒಂದು ದೊಡ್ಡಇತಿಹಾಸವೇ ಇದ್ದು, ಇದೇ ಮೊದಲ ಬಾರಿಗೆ ಕಾರಿನ ನಂಬರ್ ಪ್ಲೇಟ್ ಮೇಲೂ ಕಮಾಲ್ ಮಾಡುತ್ತಿವೆ. ಒಂದು ವೇಳೆ ನಮ್ಮಲ್ಲೂ ಇಂತದೊಂದು ನಿಯಮ ಜಾರಿಗೆ ಬಂದ್ರೆ ಹೇಗಿರುತ್ತೆ? ಹಾಗಾದ್ರೆ ಇದಕ್ಕೆ ನಿಮ್ಮ ಅಭಿಪ್ರಾಯ ಏನು ಅಂತಾ ಕಮೆಂಟ್ ಮಾಡಿ.

Most Read Articles

Kannada
English summary
Number Plates With Emojis In Australia: New Personalised Number Plates In Queensland. Read in Kannada.
Story first published: Monday, February 25, 2019, 18:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X