ಕಾರಿನಲ್ಲಿ ಪ್ರಜ್ಞೆತಪ್ಪಿದ ಚಾಲಕನನ್ನು ಯಾರ ಸಹಾಯವಿಲ್ಲದೇ 25 ಕಿ.ಮೀ ಹೊತ್ತೊಯ್ದ ರೆನಾಲ್ಟ್ ಕ್ಲಿಯೊ

ಚಾಲನೆಯಲ್ಲಿದ್ದ ಕಾರಿನಲ್ಲಿ ಚಾಲಕ ಪ್ರಜ್ಞೆತಪ್ಪಿ ಸ್ಟೀರಿಂಗ್ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಎಡಿಎಎಸ್ (ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಮ್) ತಂತ್ರಜ್ಞಾನವು ಸಹಾಯಕ್ಕೆ ಬಂದಿದೆ.

ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಮ್ ಹೊಂದಿದ್ದ ರೆನಾಲ್ಟ್ ಕ್ಲಿಯೊ ಕಾರು ಚಾಲಕನನ್ನು ಸುಮಾರು 25 ಕಿ.ಮೀ ವರೆಗೆ ಸುರಕ್ಷಿತವಾಗಿ ಹೊತ್ತೊಯ್ದು ಜೀವ ಉಳಿಸಿದೆ.

ಕಾರಿನಲ್ಲಿ ಪ್ರಜ್ಞೆತಪ್ಪಿದ ಚಾಲಕನನ್ನು ಯಾರ ಸಹಾಯವಿಲ್ಲದೇ 25 ಕಿ.ಮೀ ಹೊತ್ತೊಯ್ದ ರೆನಾಲ್ಟ್ ಕ್ಲಿಯೊ

ಹೆಚ್ಚು ಒತ್ತಡಕ್ಕೆ ಒಳಗಾದವರು, ನಿದ್ದೆಗೆಟ್ಟು ಕೆಲಸ ಮಾಡುವವರು ಕಾರನ್ನು ಓಡಿಸದೇ ಇರುವುದೇ ಉತ್ತಮ. ಏಕೆಂದರೆ ಹೆಚ್ಚು ಒತ್ತಡ ಹಾಗೂ ನಿದ್ದೆಯಿಲ್ಲದೇ ಡ್ರೈವ್ ಮಾಡುವುದರಿಂದ ಅಪಘಾತಗಳು ನಡೆಯುವ ಸಂಭವ ಹೆಚ್ಚಾಗಿರುತ್ತದೆ. ಇದಕ್ಕಾಗಿಯೇ ಚಾಲಕರಿಗೆ ಓವರ್ ಡ್ಯೂಟಿ ನೀಡಬಾರದು ಎಂದು ಕೆಲವು ನಿಯಮಗಳು ಹೇಳುತ್ತವೆ. ಅಲ್ಲದೆ ನಿದ್ದೆಯ ಸಮಯದಲ್ಲಿ ವಾಹನ ಚಲಾಯಿಸದಂತೆ ಸೂಚಿಸಲಾಗುತ್ತದೆ.

ಕಾರಿನಲ್ಲಿ ಪ್ರಜ್ಞೆತಪ್ಪಿದ ಚಾಲಕನನ್ನು ಯಾರ ಸಹಾಯವಿಲ್ಲದೇ 25 ಕಿ.ಮೀ ಹೊತ್ತೊಯ್ದ ರೆನಾಲ್ಟ್ ಕ್ಲಿಯೊ

ಆದರೂ ಕೆಲವರು ಹೆಚ್ಚಿನ ಹಣ ಸಂಪಾದನೆ ಮಾಡಲು ಅಥವಾ ಅನಿವಾರ್ಯ ಪರಿಸ್ಥಿತಿಗಳಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರದಿದ್ದರೂ ಕಾರು ಚಾಲನೆ ಮಾಡುತ್ತಾರೆ. ಇಂತಹ ಪರಿಸ್ಥಿತಿಗಳನ್ನು ನಿಭಾಯಿಸಲು ಹಾಗೂ ಚಾಲಕರಿಗೆ ಸಹಾಯಕವಾಗಿರಲು ಕೆಲ ವಾಹನ ತಯಾರಕರು ಎಡಿಎಎಸ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದಾರೆ.

ಕಾರಿನಲ್ಲಿ ಪ್ರಜ್ಞೆತಪ್ಪಿದ ಚಾಲಕನನ್ನು ಯಾರ ಸಹಾಯವಿಲ್ಲದೇ 25 ಕಿ.ಮೀ ಹೊತ್ತೊಯ್ದ ರೆನಾಲ್ಟ್ ಕ್ಲಿಯೊ

ಇದೇ ತಂತ್ರಜ್ಞಾನ ಬೆಲ್ಜಿಯಂನಲ್ಲಿ ಚಾಲಕನ ಜೀವ ಉಳಿಸಿದೆ. ಚಾಲಕ ಪ್ರಜ್ಞೆ ತಪ್ಪಿ ಸ್ಟೀರಿಂಗ್ ಮೇಲೆ ಬಿದ್ದರೂ ವಾಹನ ಸುರಕ್ಷಿತವಾಗಿ 25 ಕಿ.ಮೀ ಕ್ರಮಿಸಿ ಆತನನ್ನು ಕರೆದೊಯ್ದಿದೆ. ಈ ವಿಚಿತ್ರ ಘಟನೆ ಆಗಸ್ಟ್ 14 ರಂದು ಬೆಲ್ಜಿಯಂನಲ್ಲಿ ನಡೆದಿದೆ. ಆಧುನಿಕ ಕಾರುಗಳಲ್ಲಿ ನೀಡಲಾಗುವ ಪ್ರಮುಖ ವೈಶಿಷ್ಟ್ಯವೆಂದರೆ ಸ್ವಯಂಚಾಲಿತ ವೈಶಿಷ್ಟ್ಯ (ಎಡಿಎಎಸ್).

ಕಾರಿನಲ್ಲಿ ಪ್ರಜ್ಞೆತಪ್ಪಿದ ಚಾಲಕನನ್ನು ಯಾರ ಸಹಾಯವಿಲ್ಲದೇ 25 ಕಿ.ಮೀ ಹೊತ್ತೊಯ್ದ ರೆನಾಲ್ಟ್ ಕ್ಲಿಯೊ

ಈ ವೈಶಿಷ್ಟ್ಯವು ಚಾಲಕನ ಸಹಾಯವಿಲ್ಲದೆ ಕೆಲವು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇದು ತುರ್ತು ಸಂದರ್ಭಗಳಲ್ಲಿ ಸ್ವಯಂಚಾಲಿತ ಬ್ರೇಕಿಂಗ್, ಮುಂಬರುವ ವಾಹನಗಳ ಎಚ್ಚರಿಕೆ, ಪಾದಚಾರಿ ಪತ್ತೆ ಮತ್ತು ಬ್ಲೈಂಡ್ ಸ್ಪಾಟ್ ಪತ್ತೆಯಂತಹ ಸುರಕ್ಷತಾ ಕಾರ್ಯಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ.

ಕಾರಿನಲ್ಲಿ ಪ್ರಜ್ಞೆತಪ್ಪಿದ ಚಾಲಕನನ್ನು ಯಾರ ಸಹಾಯವಿಲ್ಲದೇ 25 ಕಿ.ಮೀ ಹೊತ್ತೊಯ್ದ ರೆನಾಲ್ಟ್ ಕ್ಲಿಯೊ

ಇಷ್ಟೇ ಅಲ್ಲ, ಈ ವೈಶಿಷ್ಟ್ಯವು ಚಾಲಕನ ಸಹಾಯವಿಲ್ಲದೆ ಕಾರು ಲೇನ್‌ಗೆ ಹೊಂದಿಕೊಳ್ಳಲು ಅನುಮತಿಸುತ್ತದೆ. ಇದೇ ರೀತಿಯ ವೈಶಿಷ್ಟ್ಯದಿಂದಾಗಿ ಬೆಲ್ಜಿಯಂನಲ್ಲಿ ಚಾಲಕನೊಬ್ಬ ಮೂರ್ಛೆ ಹೋದಾಗಲೂ ಕಾರು ತಾನೇ ಚಾಲನೆ ಮಾಡಿತು. ಈ 25 ಕಿ.ಮೀ ಪ್ರಯಾಣದಲ್ಲಿ ವಾಹನಕ್ಕೆ ಯಾವುದೇ ಹಾನಿಯಾಗಿಲ್ಲ. ಅದರಲ್ಲೂ ಸಣ್ಣಪುಟ್ಟ ಅಪಘಾತಕ್ಕೂ ಕಾರಣವಾಗಲಿಲ್ಲ.

ಕಾರಿನಲ್ಲಿ ಪ್ರಜ್ಞೆತಪ್ಪಿದ ಚಾಲಕನನ್ನು ಯಾರ ಸಹಾಯವಿಲ್ಲದೇ 25 ಕಿ.ಮೀ ಹೊತ್ತೊಯ್ದ ರೆನಾಲ್ಟ್ ಕ್ಲಿಯೊ

ರೆನಾಲ್ಟ್ ಕ್ಲಿಯೊವನ್ನು 41 ವರ್ಷದ ವ್ಯಕ್ತಿ ಓಡಿಸಿದ್ದು, ಮೂರ್ಛೆ ಹೋಗಿದ್ದರೂ 25 ಕಿಮೀ ಸುರಕ್ಷಿತವಾಗಿ ಓಡಿಸುವಲ್ಲಿ ಯಶಸ್ವಿಯಾಗಿದೆ. ಮೊದಲು ಈ ಕಾರು ನಿಧಾನವಾಗಿ ಒಂದೇ ಸ್ಪೀಡ್‌ನಲ್ಲಿ ಹೋಗುತ್ತಿದ್ದದ್ದನ್ನು ನೋಡಿದ ಸಹ ವಾಹನ ಸವಾರರು ಯಾವುದೋ ಕಾರಣಕ್ಕೆ ಚಾಲಕ ನಿಧಾನವಾಗಿ ಹೋಗುತ್ತಿದ್ದಾರೆ ಎಂದು ಭಾವಿಸಿದ್ದರು.

ಕಾರಿನಲ್ಲಿ ಪ್ರಜ್ಞೆತಪ್ಪಿದ ಚಾಲಕನನ್ನು ಯಾರ ಸಹಾಯವಿಲ್ಲದೇ 25 ಕಿ.ಮೀ ಹೊತ್ತೊಯ್ದ ರೆನಾಲ್ಟ್ ಕ್ಲಿಯೊ

ಆದರೆ, ಕೂಲಂಕುಷವಾಗಿ ಪರಿಶೀಲಿಸಿದಾಗ ಚಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಬಳಿಕ ಕಾರನ್ನು ನಿಲ್ಲಿಸಿ ಪ್ರಜ್ಞಾಹೀನ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಆತನನ್ನು ಸುರಕ್ಷಿತವಾಗಿ ರಕ್ಷಿಸಿದ ಸಾರಿಗೆ ಅಧಿಕಾರಿಗಳು, ವ್ಯಕ್ತಿಗೆ ಸಣ್ಣಪುಟ್ಟ ಗಾಯವೂ ಆಗಿಲ್ಲ ಎಂದು ತಿಳಿಸಿದ್ದಾರೆ. ರೆನಾಲ್ಟ್ ಕ್ಲಿಯೊ ಕಾರನ್ನು UK ನಂತಹ ಪ್ರಪಂಚದ ಕೆಲವು ಮಾರುಕಟ್ಟೆಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ.

ಕಾರಿನಲ್ಲಿ ಪ್ರಜ್ಞೆತಪ್ಪಿದ ಚಾಲಕನನ್ನು ಯಾರ ಸಹಾಯವಿಲ್ಲದೇ 25 ಕಿ.ಮೀ ಹೊತ್ತೊಯ್ದ ರೆನಾಲ್ಟ್ ಕ್ಲಿಯೊ

ಕಾರು ದೊಡ್ಡ ಟಚ್ ಸ್ಕ್ರೀನ್ ಸಂಪರ್ಕವನ್ನು ಹೊಂದಿದೆ. ಇದಲ್ಲದೇ ನ್ಯಾವಿಗೇಶನ್ ಮತ್ತು ಗೂಗಲ್ ಪ್ಲೇಸ್‌ಗಳಂತಹ ವಿವಿಧ ವೈಶಿಷ್ಟ್ಯಗಳನ್ನು ಈ ಕಾರಿನಲ್ಲಿ ನೀಡಲಾಗಿದೆ. ಈ ಕಾರಿನಲ್ಲಿ 9.3 ಇಂಚಿನ ಸ್ಕ್ರೀನ್ ನೀಡಲಾಗಿದೆ. ಇದು ಸುಧಾರಿತ ಮಲ್ಟಿಮೀಡಿಯಾ ವ್ಯವಸ್ಥೆಯಾಗಿದ್ದು, ಪರದೆಯು ಬ್ಲೂಟೂತ್, ಸ್ಮಾರ್ಟ್‌ಫೋನ್ ಸಂಪರ್ಕ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ವೈಶಿಷ್ಟ್ಯಗಳನ್ನು ಹೊಂದಿದೆ.

ಕಾರಿನಲ್ಲಿ ಪ್ರಜ್ಞೆತಪ್ಪಿದ ಚಾಲಕನನ್ನು ಯಾರ ಸಹಾಯವಿಲ್ಲದೇ 25 ಕಿ.ಮೀ ಹೊತ್ತೊಯ್ದ ರೆನಾಲ್ಟ್ ಕ್ಲಿಯೊ

ರೆನಾಲ್ಟ್ ಕ್ಲಿಯೊ ಇನ್ನೂ ಹಲವು ವಿಶೇಷತೆಗಳನ್ನು ಹೊಂದಿರುವ ಕಾರಣ ಯುರೋಪಿಯನ್ನರಲ್ಲಿ ಉತ್ತಮ ಸ್ವಾಗತವನ್ನು ಪಡೆಯುತ್ತಿದೆ. ಅಲ್ಲದೆ, ಇದು ಬಹು ಪ್ರಶಸ್ತಿ ವಿಜೇತ ವಾಹನವಾಗಿದೆ. ಅಂತೆಯೇ ಈ ವಾಹನವು ವರ್ಷದ ಸೂಪರ್‌ಮಿನಿ 2021, ಅತ್ಯುತ್ತಮ ಮೊದಲ ಕಾರು 2021, ಅತ್ಯುತ್ತಮ ಸಣ್ಣ ಕಾರು 2021 ಮತ್ತು ವರ್ಷದ ಸಣ್ಣ ಕಾರು 2021 ಪ್ರಶಸ್ತಿಗಳನ್ನು ಗೆದ್ದಿದೆ.

ಕಾರಿನಲ್ಲಿ ಪ್ರಜ್ಞೆತಪ್ಪಿದ ಚಾಲಕನನ್ನು ಯಾರ ಸಹಾಯವಿಲ್ಲದೇ 25 ಕಿ.ಮೀ ಹೊತ್ತೊಯ್ದ ರೆನಾಲ್ಟ್ ಕ್ಲಿಯೊ

ಕ್ಲಿಯೊ ನಾಲ್ಕು ವಿಭಿನ್ನ ಟ್ರಿಮ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರೊಂದಿಗೆ ಈ ವಾಹನದಲ್ಲಿ ಪೆಟ್ರೋಲ್-ಹೈಬ್ರಿಡ್ ಆಯ್ಕೆಗಳನ್ನು ಸಹ ನೀಡಲಾಗಿದೆ. ಟಾಪ್-ಎಂಡ್ ವೇರಿಯಂಟ್‌ನಲ್ಲಿನ ಸುರಕ್ಷತಾ ವೈಶಿಷ್ಟ್ಯಗಳು ಇಕೋಮೋಡ್ ಫಂಕ್ಷನ್, ಸ್ವಯಂಚಾಲಿತ ತುರ್ತು ಬ್ರೇಕಿಂಗ್ ಸಿಸ್ಟಮ್, ಟ್ರಾಫಿಕ್ ಸಿಗ್ನಲ್ ಸಮಯದಲ್ಲಿ ಸ್ಪೀಡ್ ಅಲರ್ಟ್, ರಿಯರ್ ವ್ಯೂ ಪಾರ್ಕಿಂಗ್ ಕ್ಯಾಮೆರಾ, ಟೈರ್ ಇನ್ಫ್ಲೇಶನ್ ಕಿಟ್, ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್, ಗೇರ್ ಶಿಫ್ಟ್ ಇಂಡಿಕೇಟರ್, ಆಟೋ ಹೈ-ಲೋ ಬೀಮ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪ್ರಮಾಣಿತವಾಗಿ ನೀಡಲಾಗಿದೆ.

ಕಾರಿನಲ್ಲಿ ಪ್ರಜ್ಞೆತಪ್ಪಿದ ಚಾಲಕನನ್ನು ಯಾರ ಸಹಾಯವಿಲ್ಲದೇ 25 ಕಿ.ಮೀ ಹೊತ್ತೊಯ್ದ ರೆನಾಲ್ಟ್ ಕ್ಲಿಯೊ

ಇವುಗಳ ಜೊತೆಗೆ ಕ್ರೂಸ್ ಕಂಟ್ರೋಲ್, ಫ್ರಂಟ್ ಮತ್ತು ಸೈಡ್ ಏರ್‌ಬ್ಯಾಗ್‌ಗಳು, ಲೇನ್ ಕೀಪ್ ಅಸಿಸ್ಟ್ ಮತ್ತು ಲೇನ್ ಡಿಪಾರ್ಚರ್ ವಾರ್ನಿಂಗ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳು ರೆನಾಲ್ಟ್ ಕ್ಲಿಯೊದಲ್ಲಿ ಲಭ್ಯವಿದೆ. ಈ ವೈಶಿಷ್ಟ್ಯಗಳೇ ಬೆಲ್ಜಿಯಂ ವ್ಯಕ್ತಿ ಮೂರ್ಛೆ ಹೋದರೂ ಸುರಕ್ಷಿತವಾಗಿ ಪ್ರಯಾಣಿಸಲು ಸಹಾಯ ಮಾಡಿದೆ.

ಕಾರಿನಲ್ಲಿ ಪ್ರಜ್ಞೆತಪ್ಪಿದ ಚಾಲಕನನ್ನು ಯಾರ ಸಹಾಯವಿಲ್ಲದೇ 25 ಕಿ.ಮೀ ಹೊತ್ತೊಯ್ದ ರೆನಾಲ್ಟ್ ಕ್ಲಿಯೊ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಪ್ರಸ್ತುತ ಭಾರತದಲ್ಲಿ ಮಾರಾಟದಲ್ಲಿರುವ ಕೆಲವು ಕಾರುಗಳಲ್ಲಿ ಈ ವೈಶಿಷ್ಟ್ಯವನ್ನು ಸಹ ನೀಡಲಾಗುತ್ತದೆ. ಮಹೀಂದ್ರಾ XUV 700, ಹುಂಡೈ ಟ್ಯೂಸಾನ್, MG ಗ್ಲೋಸ್ಟರ್ ಮತ್ತು ಆಸ್ಟರ್ ಸೇರಿದಂತೆ ಕೆಲವು ಕಾರು ಮಾದರಿಗಳನ್ನು ಎಡಿಎಎಸ್ (ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಮ್) ಎಂದು ಕರೆಯಲ್ಪಡುವ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಯ ಅಡಿಯಲ್ಲಿ ನೀಡಲಾಗುತ್ತದೆ.

Most Read Articles

Kannada
English summary
Renault Clio carried unconscious driver for 25 km without anyones help
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X