ಕೇರಳಕ್ಕೆ ಎಂಟ್ರಿ ಕೊಟ್ಟ ವಿಶಿಷ್ಟ ಡಸ್ಟರ್ ಲೈಫ್ ಸ್ಟೈಲ್ ಗಾಡಿ

By Nagaraja

ಕೇರಳದ ಕೊಟ್ಟಾಯಂ ಜಿಲ್ಲೆ ಐಷಾರಾಮಿ ಕಾರುಗಳಿಗೆ ಸುಪ್ರಸಿದ್ಧವಾಗಿದೆ. ಬಿಳಿ ಪಂಚೆ ಮತ್ತು ಅಂಗಿಯನ್ನು ತೊಟ್ಟ ರಬ್ಬರ್ ಉದ್ಯಮಿಗಳು ಇಲ್ಲಿ ಐಷಾರಾಮಿ ಕಾರುಗಳಲ್ಲಿ ರಾರಾಜಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

ಇಂತಹ ಹೆಸರಾಂತ ಕೋಟ್ಟಾಯಂ ಜಿಲ್ಲೆಯಲ್ಲೀಗ ವಿಶಿಷ್ಟ ಡಸ್ಟರ್ ಕಾರೊಂದರ ಪ್ರವೇಶವಾಗಿದೆ. ಕೆಳಗಡೆ ಕೊಟ್ಟಿರುವ ಚಿತ್ರವನ್ನು ಗಮನಿಸಿದಾಗ ರೆನೊ ಲೈಫ್ ಸ್ಟೈಲ್ ಪಿಕಪ್ ಗಾಡಿ ಭಾರತಕ್ಕೆ ಎಂಟ್ರಿ ಕೊಟ್ಟಿತೇ ಎಂಬ ಸಂಶಯ ಮೂಡಬಹುದು. ಈ ಸಂಬಂಧ ನಿಮ್ಮ ಅನುಮೂನಗಳಿಗೆ ಚಿತ್ರಪುಟದಲ್ಲಿ ಉತ್ತರ ಕೊಡಲಾಗಿದೆ.

ಕೇರಳಕ್ಕೆ ಎಂಟ್ರಿ ಕೊಟ್ಟ ವಿಶಿಷ್ಟ ಡಸ್ಟರ್ ಲೈಫ್ ಸ್ಟೈಲ್ ಗಾಡಿ

ಹೇಳಿ ಕೇಳಿ ಇದು ಡಸ್ಟರ್ ಆವೃತ್ತಿಯಾಗಿದ್ದು, ಅಲ್ಲಿನ ವ್ಯಕ್ತಿಯೊಬ್ಬರು ವಿಶಿಷ್ಟವಾಗಿ ಪಿಕಪ್ ಶೈಲಿಯಲ್ಲಿ ವಿನ್ಯಾಸಗೊಳಿಸಿರುತ್ತಾರೆ.

ಕೇರಳಕ್ಕೆ ಎಂಟ್ರಿ ಕೊಟ್ಟ ವಿಶಿಷ್ಟ ಡಸ್ಟರ್ ಲೈಫ್ ಸ್ಟೈಲ್ ಗಾಡಿ

ಅಮೆರಿಕದಂತಹ ಹೊರ ದೇಶಗಳಲ್ಲಿ ಜೀವನ ಶೈಲಿಯ ಕಾರುಗಳು ಹೆಚ್ಚು ಜನಪ್ರಿಯವಾಗಿದ್ದು, ಭಾರತದಲ್ಲಿ ಕಾಣಸಿಗುವುದು ಅತ್ಯಂತ ವಿರಳವಾಗಿದೆ. ಹಾಗಿರುವಾಗ ಕೇರಳದಲ್ಲಿ ಪಿಕಪ್ ವಾಹನಕ್ಕೆ ಹೆಚ್ಚಿನ ಪ್ರೀತಿ ವ್ಯಕ್ತವಾಗಿದೆ.

ಕೇರಳಕ್ಕೆ ಎಂಟ್ರಿ ಕೊಟ್ಟ ವಿಶಿಷ್ಟ ಡಸ್ಟರ್ ಲೈಫ್ ಸ್ಟೈಲ್ ಗಾಡಿ

ಡಸ್ಟರ್ ಕಾರಿನ ಹಿಂಬದಿಯ ಭಾಗಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ. ಅಂದರೆ ಮೊದಲಿನ ಕ್ಯಾಬಿನ್ ಜಾಗ ಅದೇ ರೀತಿ ಉಳಿಸಿಕೊಳ್ಳಲಾಗಿದ್ದು, ಹಿಂಬದಿಯಲ್ಲಿ ಮರು ವಿನ್ಯಾಸಗೊಳಿಸಲಾಗಿದೆ.

ಕೇರಳಕ್ಕೆ ಎಂಟ್ರಿ ಕೊಟ್ಟ ವಿಶಿಷ್ಟ ಡಸ್ಟರ್ ಲೈಫ್ ಸ್ಟೈಲ್ ಗಾಡಿ

ಹಾಗಿದ್ದರೂ ಟೈಲ್ ಲ್ಯಾಂಪ್ ಮತ್ತು ಹಿಂಬದಿ ಡೋರ್ ಗಳನ್ನು ಅದೇ ರೀತಿ ಉಳಿಸಲಾಗಿದ್ದು, ಢಿಕ್ಕ ಜಾಗವಾಗಿ ಬದಲಾಯಿಸಲಾಗಿದೆ.

ಕೇರಳಕ್ಕೆ ಎಂಟ್ರಿ ಕೊಟ್ಟ ವಿಶಿಷ್ಟ ಡಸ್ಟರ್ ಲೈಫ್ ಸ್ಟೈಲ್ ಗಾಡಿ

ಹಿಂಬದಿಯ ವಿಂಡ್ ಶೀಲ್ಡ್ ಕಾರಿಗೆ ಪ್ರೀಮಿಯಂ ನೋಟ ಪ್ರದಾನ ಮಾಡುತ್ತಿದೆ. ಪಿಯಾನೊ ಬ್ಲ್ಯಾಕ್ ವರ್ಣದ ಫ್ರಂಟ್ ಗ್ರಿಲ್, ಎಲ್ ಇಡಿ ಲೈಟಿಂಗ್ ಇಂತರ ಪ್ರಮುಖ ಪ್ರಮುಖ ಆಕರ್ಷಣೆಯಾಗಿದೆ.

ಕೇರಳಕ್ಕೆ ಎಂಟ್ರಿ ಕೊಟ್ಟ ವಿಶಿಷ್ಟ ಡಸ್ಟರ್ ಲೈಫ್ ಸ್ಟೈಲ್ ಗಾಡಿ

ಡಸ್ಟರ್ ಪಿಕಪ್ ಆವೃತ್ತಿಯಾಗಿರುವ ಓರುಚ್ ಬ್ರೆಜಿಲ್ ನಲ್ಲಿ ಮಾರಾಟದಲ್ಲಿ ಭಾರತೀಯ ರುಪಾಯಿ ಪ್ರಕಾರ 12 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ಇದು ನಿಕಟ ಭವಿಷ್ಯದಲ್ಲಿ ಭಾರತವನ್ನು ಪ್ರವೇಶಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಕೇರಳಕ್ಕೆ ಎಂಟ್ರಿ ಕೊಟ್ಟ ವಿಶಿಷ್ಟ ಡಸ್ಟರ್ ಲೈಫ್ ಸ್ಟೈಲ್ ಗಾಡಿ

ಭಾರತೀಯ ಮಾರುಕಟ್ಟೆಯಲ್ಲಿರುವ ಟಾಟಾ ಕ್ಸೆನಾನ್ ಮತ್ತು ಮಹೀಂದ್ರ ಕ್ಸೆನಾನ್ ಗಳಂತಹ ಪಿಕಪ್ ವಾಹನಗಳನ್ನು ವಾಣಿಜ್ಯ ಬಳಕೆಗಾಗಿ ಬಳಕೆ ಮಾಡಲಾಗುತ್ತದೆ. ಇಲ್ಲಿ ಆಫ್ ರೋಡ್ ಅಥವಾ ವೈಯಕ್ತಿಕ ಖಾಸಗಿ ಬಳಕೆಯು ಅತ್ಯಂತ ಕಡಿಮೆಯಾಗಿದೆ.

Most Read Articles

Kannada
Read more on ಡಸ್ಟರ್ duster
English summary
The Mallus Are Back! Renault Duster Modified Inside Out In Kerala
Story first published: Friday, April 22, 2016, 11:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X