ಅಯ್ಯಪ್ಪ ದರ್ಶನಕ್ಕೆ ಹೋಗುವವರಿಗೆ ಸಿಗಲಿದೆ ಬಾಡಿಗೆ ಬೈಕ್‍

ಶಬರಿಮಲೆ ಯಾತ್ರೆಗೆ ತೆರಳುವವರು ಚೆಂಗಾನೂರ್ ರೈಲ್ವೆ ನಿಲ್ದಾಣದಿಂದ ಪಂಪಾವರೆಗೆ ಬೈಕ್ ಅನ್ನು ಬಾಡಿಗೆಗೆ ಪಡೆದು ಪ್ರಯಾಣಿಸಬಹುದು. ಈ ಯೋಜನೆಯನ್ನು ದಕ್ಷಿಣ ರೈಲ್ವೆಯ ತಿರುವನಂತಪುರ ವಿಭಾಗವು ಶಬರಿಮಲೆಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಆರಂಭಿಸಿದೆ.

ಅಯ್ಯಪ್ಪ ದರ್ಶನಕ್ಕೆ ಹೋಗುವವರಿಗೆ ಸಿಗಲಿದೆ ಬಾಡಿಗೆ ಬೈಕ್‍

ಈ ಯೋಜನೆಗೆ ಕಳೆದ ಗುರುವಾರ ಚಾಲನೆ ನೀಡಲಾಗಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ ತಿರುವನಂತಪುರ ಹಾಗೂ ಪಲಕ್ಕಾಡ್ ವಿಭಾಗದಲ್ಲಿ ಬರುವ ಎಲ್ಲಾ ಪ್ರಮುಖ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ನೀಡಲಾಗುವುದು.

ಅಯ್ಯಪ್ಪ ದರ್ಶನಕ್ಕೆ ಹೋಗುವವರಿಗೆ ಸಿಗಲಿದೆ ಬಾಡಿಗೆ ಬೈಕ್‍

ರೈಲ್ವೆ ಇಲಾಖೆಯು ಇದೇ ಮೊದಲ ಬಾರಿಗೆ ಈ ಯೋಜನೆಯನ್ನು ಆರಂಭಿಸಿದೆ. ತಿರುವನಂತಪುರ ವಿಭಾಗದ ಕಮರ್ಶಿಯಲ್ ಮ್ಯಾನೇಜರ್ ಎಂ ಬಾಲಮುರಳಿರವರು ಮಾತನಾಡಿ, ಈ ಸೇವೆಯನ್ನು ಕೊಚ್ಚಿ ಮೂಲದ ಕೆಫೆ ರೈಡರ್ಸ್ ಬೈಕ್ ಸೇವಾ ಸಂಸ್ಥೆಯು ನೀಡಲಿದೆ ಎಂದು ಹೇಳಿದರು.

ಅಯ್ಯಪ್ಪ ದರ್ಶನಕ್ಕೆ ಹೋಗುವವರಿಗೆ ಸಿಗಲಿದೆ ಬಾಡಿಗೆ ಬೈಕ್‍

ಶಬರಿಮಲೆ ಯಾತ್ರೆಗೆ ತೆರಳುವ ಯಾತ್ರಿಗಳ ಅನುಕೂಲಕ್ಕಾಗಿ ಚೆಂಗಾನೂರ್ ಅನ್ನು ಮೊದಲ ನಿಲ್ದಾಣವನ್ನಾಗಿ ಆಯ್ಕೆ ಮಾಡಲಾಯಿತು ಎಂದು ಅವರು ಹೇಳಿದರು. ಯಾತ್ರಿಗಳು ಈ ಯೋಜನೆಯಡಿಯಲ್ಲಿ ರಾಯಲ್ ಎನ್‍‍ಫೀಲ್ಡ್ ಬುಲೆಟ್ ಹಾಗೂ ಹಾರ್ಲೆ ಡೇವಿಡ್‍‍ಸನ್ ಬೈಕ್‍‍ಗಳನ್ನು ಬಾಡಿಗೆಗೆ ಪಡೆಯಬಹುದು.

ಅಯ್ಯಪ್ಪ ದರ್ಶನಕ್ಕೆ ಹೋಗುವವರಿಗೆ ಸಿಗಲಿದೆ ಬಾಡಿಗೆ ಬೈಕ್‍

ಆರಂಭಿಕ ಹಂತದಲ್ಲಿ 10 ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳನ್ನು ಈ ಯೋಜನೆಗಾಗಿ ಬಳಸಲಾಗುವುದು. ಈ ಎಲ್ಲಾ ಬೈಕ್‍‍ಗಳೂ ಚೆಂಗಾನೂರ್ ರೈಲ್ವೆ ನಿಲ್ದಾಣದಲ್ಲಿ ಬಾಡಿಗೆಗೆ ದೊರೆಯಲಿವೆ. ಈ ಬೈಕ್‍‍ಗಳ ಬಾಡಿಗೆಯನ್ನು ಪ್ರತಿದಿನಕ್ಕೆ 200 ಕಿ.ಮೀಗಳವರೆಗೆ ರೂ.1,200 ಎಂದು ನಿಗದಿಪಡಿಸಲಾಗಿದೆ.

ಅಯ್ಯಪ್ಪ ದರ್ಶನಕ್ಕೆ ಹೋಗುವವರಿಗೆ ಸಿಗಲಿದೆ ಬಾಡಿಗೆ ಬೈಕ್‍

ನಿಗದಿತ ಸಮಯವನ್ನು ಮೀರಿದರೆ ಪ್ರತಿ ಗಂಟೆಗೆ ರೂ.100 ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ. ನಿಗದಿಪಡಿಸಲಾಗಿರುವ 200 ಕಿ.ಮೀ ದೂರವನ್ನು ಮೀರಿದರೆ ಪ್ರತಿ ಕಿ.ಮೀಗೆ ರೂ.6 ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.

ಅಯ್ಯಪ್ಪ ದರ್ಶನಕ್ಕೆ ಹೋಗುವವರಿಗೆ ಸಿಗಲಿದೆ ಬಾಡಿಗೆ ಬೈಕ್‍

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಎರ್ನಾಕುಲಂ, ತಿರುವನಂತಪುರಂ, ಕೊಟ್ಟಾಯಂ, ಆಲಾಪುಲ ಹಾಗೂ ತ್ರಿಶೂರ್‍‍ಗಳಲ್ಲಿ ಈ ಬೈಕ್ ಸೇವೆಯನ್ನು ಆರಂಭಿಸುವುದಾಗಿ ಬಾಲಮುರಳಿರವರು ತಿಳಿಸಿದರು.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಅಯ್ಯಪ್ಪ ದರ್ಶನಕ್ಕೆ ಹೋಗುವವರಿಗೆ ಸಿಗಲಿದೆ ಬಾಡಿಗೆ ಬೈಕ್‍

ಹಲವು ಕಂಪನಿಗಳು ಪ್ರಯಾಣಿಕರಿಗೆ ತೊಂದರೆರಹಿತ ಸೇವೆಯನ್ನು ನೀಡುವ ಉದ್ದೇಶದಿಂದ ಟೆಂಡರ್‍‍ಗಳನ್ನು ಸಲ್ಲಿಸಿವೆ ಎಂದು ಅವರು ತಿಳಿಸಿದರು. ರೈಲ್ವೆ ಇಲಾಖೆಯು ಸದ್ಯದಲ್ಲೇ ಪ್ರಯಾಣಿಕರಿಗೆ ಕಾರುಗಳನ್ನು ಬಾಡಿಗೆಗೆ ನೀಡುವ ಯೋಜನೆಯನ್ನು ಆರಂಭಿಸುವ ಯೋಜನೆಯನ್ನು ಹೊಂದಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಅಯ್ಯಪ್ಪ ದರ್ಶನಕ್ಕೆ ಹೋಗುವವರಿಗೆ ಸಿಗಲಿದೆ ಬಾಡಿಗೆ ಬೈಕ್‍

ಈ ಸೇವೆಯನ್ನು ನೀಡುವ ಕಂಪನಿಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದ್ದು, ಸದ್ಯದಲ್ಲೇ ಯೋಜನೆಯು ಶುರುವಾಗಲಿದೆಯೆಂದು ಬಾಲಮುರಳಿರವರು ಹೇಳಿದರು. ರೈಲ್ವೆ ಇಲಾಖೆಯು ತ್ರಿಶೂರ್, ಎರ್ನಾಕುಲಂ ಹಾಗೂ ಕೊಟ್ಟಾಯಂಗಳಿಗಾಗಿ ಟೆಂಡರ್‍‍ಗಳನ್ನು ಸ್ವೀಕರಿಸಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಅಯ್ಯಪ್ಪ ದರ್ಶನಕ್ಕೆ ಹೋಗುವವರಿಗೆ ಸಿಗಲಿದೆ ಬಾಡಿಗೆ ಬೈಕ್‍

ಈ ಯೋಜನೆಯ ಬಗ್ಗೆ ಮಾತನಾಡಿದ, ಕೆಫೆ ರೈಡ್ಸ್ ಮ್ಯಾನೇಜಿಂಗ್ ಪಾರ್ಟ್‍‍ನರ್ ಸನೀಶ್ ರಾಜಪ್ಪನ್‍‍‍ರವರು ನಾವು ಈಗ ಚೆಂಗಾನೂರ್‍ ರೈಲ್ವೆ ನಿಲ್ದಾಣದಲ್ಲಿ 500 ಸಿಸಿಯ ರಾಯಲ್ ಎನ್‍‍ಫೀಲ್ಡ್ ಬೈಕುಗಳನ್ನು ಬಾಡಿಗೆಗೆ ನೀಡುತ್ತಿದ್ದೇವೆ ಎಂದು ಹೇಳಿದರು.

ಅಯ್ಯಪ್ಪ ದರ್ಶನಕ್ಕೆ ಹೋಗುವವರಿಗೆ ಸಿಗಲಿದೆ ಬಾಡಿಗೆ ಬೈಕ್‍

ಹಾರ್ಲೆ ಡೇವಿಡ್‍‍ಸನ್ ಕಂಪನಿಯು ಎಷ್ಟು ಸಂಖ್ಯೆಯ ಬೈಕ್‍‍ಗಳನ್ನು ನೀಡಲಿದೆ ಎಂಬುದು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ ತಿಳಿದು ಬರಲಿದೆ ಎಂದು ಅವರು ತಿಳಿಸಿದರು.

Image Courtesy: Sujith Viswanath, Chengannur

Most Read Articles

Kannada
English summary
Rent a royal enfield bullet from chengannur to sabarimala - Read in Kannada
Story first published: Tuesday, December 3, 2019, 18:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X