Just In
- 5 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 5 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 6 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 8 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡ್ರೀಮ್ ಕಾರಿನಲ್ಲಿ ಡಿ ಬಾಸ್ ಜೊತೆ ನಟ ರಿಷಬ್ ಶೆಟ್ಟಿ ಜಾಲಿ ಡ್ರೈವ್
ಸ್ಯಾಂಡಲ್ವುಡ್ನ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಐಷಾರಾಮಿ ಬೈಕ್ ಮತ್ತು ಕಾರುಗಳ ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಹೊಂದಿರುವ ನಟ. ನಟ ದರ್ಶನ್ ಅವರು ಹಲವಾರು ದುಬಾರಿ ಮತ್ತು ಐಷಾರಾಮಿ ಬೈಕ್ ಮತ್ತು ಕಾರು ಮಾದರಿಗಳನ್ನು ಹೊಂದಿದ್ದಾರೆ.
ನಿನ್ನೆ ಸಂಜೆ ಮೈಸೂರಿನಲ್ಲಿ ನಟ ದರ್ಶನ್ ಅವರ ಐಷಾರಾಮಿ ಫೋರ್ಡ್ ಮಸ್ಟಾಂಗ್ ಜಿಟಿ ಕಾರಿನಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಒಂದು ಡ್ರೈವ್ ಹೋಗಿ ಬಂದಿದ್ದಾರೆ. ರಿಷಬ್ ಶೆಟ್ಟಿ ಅವರು ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಜೊತೆ ತಮ್ಮ ಕನಸಿನ ಕಾರು ಫೋರ್ಡ್ ಮಸ್ಟಾಂಗ್ ಜಿಟಿಯಲ್ಲಿ ಡ್ರೈವ್ ತೆರಳಿರುವ ಸಂತಸದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ 'ನನ್ನ ಡ್ರೀಮ್ ಕಾರು ಫೋರ್ಡ್ ಮಸ್ಟಾಂಗ್ ನಲ್ಲಿ ಒಂದು ಡ್ರೈವ್ ಕರೆದುಕೊಂಡು ಹೋದಾಗ ಆದ ಖುಷಿ ಅಷ್ಟಿಷ್ಟಲ್ಲ, ಧನ್ಯವಾದಗಳು ದರ್ಶನ್ ಸರ್' ಎಂದು ಟ್ವಿಟ್ ಮಾಡಿದ್ದಾರೆ.
MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್
ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸದ್ಯ ಮೈಸೂರಿನಲ್ಲಿ 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ನಿನ್ನೆ ಸಂಜೆ ದರ್ಶನ್ ಹಾಗೂ ರಿಷಬ್ ಶೆಟ್ಟಿ ಮೈಸೂರಿನಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಫೋರ್ಡ್ ಮಸ್ಟಾಂಗ್ ಜಿಟಿ ಕಾರಿನಲ್ಲಿ ಡ್ರೈವ್ ಹೋಗಿದ್ದಾರೆ.
ಇನ್ನು ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಬಳಿ ಜಾಗ್ವಾರ್, ಆಡಿ ಕ್ಯೂ7, ರೇಂಜ್ ರೋವರ್, ಟೊಯೊಟಾ ಫಾರ್ಚೂನರ್, ಮಿನಿ ಕೂಪರ್, ಮಹೀಂದ್ರಾ ಸ್ಕಾರ್ಪಿಯೋ ಜೊತೆಗೆ ದುಬಾರಿ ಮತ್ತು ಐಕಾನಿಕ್ ಹಮ್ಮರ್ ಎಸ್ಯುವಿಯನ್ನು ಹೊಂದಿದ್ದಾರೆ. ಇದರೊಂದಿಗೆ ಈ ಫೋರ್ಡ್ ಮಸ್ಟಾಂಗ್ ಜಿಟಿ ಕಾರನ್ನು ಹೊಂದಿದ್ದಾರೆ.
MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ
ಇನ್ನು ಫೋರ್ಡ್ ಮಸ್ಟಾಂಗ್ ಜಿಟಿ ಕಾರಿನ ಬಗ್ಗೆ ಹೇಳುವುದಾದರೆ, ಈ ದುಬಾರಿ ಕಾರಿನಲ್ಲಿ 5.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 415-ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುತ್ತದೆ.
ಫೋರ್ಡ್ ಕಂಪನಿಯು ಮಸ್ಟಾಂಗ್ ಜಿಟಿ ಮಾದರಿಯನ್ನು ಅಪ್ಡೇಟ್ ಮಾಡಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ನ್ಯೂ ಜನರೇಷನ್ ಫೋರ್ಡ್ ಮಸ್ಟಾಂಗ್ ಜಿಟಿ ಕಾರಿನ ಎಂಜಿನ್ ಅನ್ನು ಅಪ್ಡೇಟ್ ಮಾಡಲಾಗುತ್ತದೆ. ಈ ಎಂಜಿನ್ ಪ್ರಸ್ತುತ ಮಾದರಿಗಿಂತ 35 ಬಿಹೆಚ್ಪಿ ಪವರ್ ಹೆಚ್ಚು ಉತ್ಪಾದಿಸುತ್ತದೆ.
MOST READ: ಗ್ಲೋಬಲ್ ಎನ್ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು
ಹೊಸ ಫೋರ್ಡ್ ಮಸ್ಟಾಂಗ್ನಲ್ಲಿ ಎಂಜಿನ್ನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಅಳವಡಿಸುವ ಸಾಧ್ಯತೆಗಳಿವೆ. ಪ್ರಸ್ತುತ ಮಾದರಿಯಲ್ಲಿ ಎಂಜಿನ್ನೊಂದಿಗೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ.
ಫೋರ್ಡ್ ಮಸ್ಟಾಂಗ್ ಜಿಟಿ ವಿಶ್ವದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಫೋರ್ಡ್ ಕಂಪನಿಯು ವರ್ಷಗಳಲ್ಲಿ ಹಲವಾರು ನವೀಕರಗಳನ್ನು ಪರಿಚಯಿಸುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಕೆಲವು ವರ್ಷಗಳ ಹಿಂದೆ ಫೋರ್ಡ್ ಮಸ್ಟಾಂಗ್ ಕಾರ್ ಅನ್ನು ಬಿಡುಗಡೆಗೊಳಿಸಿತ್ತು. ಈ ಕಾರು ಭಾರತೀಯರ ಗಮನಸೆಳೆಯುವಲ್ಲಿ ಯಶ್ವಸಿಯಾಗಿದೆ.