ಸಂಚಾರಿ ಜಾಗೃತಿಗೆ ಮುಂದಾದ ಯುವಕ ಮಾಡಿದ್ದೇನು ಗೊತ್ತಾ?

ಆಗಾಗ್ಗೆ ನೀವು ದ್ವಿ ಚಕ್ರ ಸವಾರಿ ಮಾಡುತ್ತಿರುವವರ ದುಪಟ್ಟಾ ಅಥವಾ ಹಿಂಬದಿ ಸವಾರರ ದುಪಟ್ಟಾ ದ್ವಿಚಕ್ರ ವಾಹನದ ಟಯರಿಗೆ ಸಿಲುಕುವುದನ್ನು ನೋಡಿರುತ್ತೀರಿ. ಇದರಿಂದಾಗಿ ಪ್ರಾಣಪಾಯವಾಗುವ ಸಾಧ್ಯತೆಗಳಿರುತ್ತವೆ. ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಭಾರತದಲ್ಲಿ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ.

ಸಂಚಾರಿ ಜಾಗೃತಿಗೆ ಮುಂದಾದ ಯುವಕ ಮಾಡಿದ್ದೇನು ಗೊತ್ತಾ?

ಹೆಲ್ಮೆಟ್ ಧರಿಸುವ ವಿಷಯದಿಂದ ಹಿಡಿದು, ಕುಡಿದು ವಾಹನ ಚಲಾಯಿಸುವುದು, ರಾಂಗ್ ಸೈಡಿನಲ್ಲಿ ವಾಹನ ಚಲಾಯಿಸುವಂತಹ ವಿಷಯಗಳವರೆಗೆ ಯಾರೂ ಗಂಭೀರವಾಗಿ ಯೋಚಿಸುವುದೇ ಇಲ್ಲ. ಸಂಚಾರಿ ನಿಯಮಗಳನ್ನು ನಮ್ಮ ಸುರಕ್ಷತೆಗಾಗಿ ಮಾಡಲಾಗಿದ್ದರೂ ಸಹ, ಈ ನಿಯಮಗಳ ಬಗೆಗಿನ ನಿರ್ಲಕ್ಷ ಮನೋಭಾವದಿಂದಾಗಿ ಅನೇಕರು ತಮ್ಮ ಪ್ರಾಣ ಕಳೆದು ಕೊಂಡಿದ್ದಾರೆ.

ಸಂಚಾರಿ ಜಾಗೃತಿಗೆ ಮುಂದಾದ ಯುವಕ ಮಾಡಿದ್ದೇನು ಗೊತ್ತಾ?

ಸರ್ಕಾರವು ಯಾವುದೇ ಕಾನೂನನ್ನು ಜಾರಿಗೆ ತಂದರೂ, ಎಷ್ಟೇ ಪ್ರಮಾಣದ ದಂಡವನ್ನು ವಿಧಿಸಿದರೂ ಯಾವುದೇ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ನಿಯಮಗಳನ್ನು ಉಲ್ಲಂಘಿಸುತ್ತಿರುವುದರಿಂದ ಯಾರೋ ಮಾಡುವ ತಪ್ಪಿಗೆ ಅಮಾಯಕರು ಸಾಯುತ್ತಿದ್ದಾರೆ.

ಸಂಚಾರಿ ಜಾಗೃತಿಗೆ ಮುಂದಾದ ಯುವಕ ಮಾಡಿದ್ದೇನು ಗೊತ್ತಾ?

ಕೇರಳದ ಕೊಚ್ಚಿಯ ಹಫೀಜ್ ಸಜೀವ್ ಎಂಬ 19 ವರ್ಷದ ಯುವಕ ಫೋಟೊಗ್ರಫಿಯ ಮೂಲಕ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ತನ್ನ ಸ್ನೇಹಿತ ಅನಸ್ ಹಾಗೂ ತಂಗಿ ಹಸ್ನಾಳನ್ನು ಒಳಗೊಂಡ, ಹಫೀಜ್ ಸಜೀವ್ ಅವರ ಫೋಟೊಗಳು ಮಾರಣಾಂತಿಕ ಸನ್ನಿವೇಶಗಳ ಮೇಲೆ ಬೆಳಕು ಚೆಲ್ಲುತ್ತವೆ.

ಸಂಚಾರಿ ಜಾಗೃತಿಗೆ ಮುಂದಾದ ಯುವಕ ಮಾಡಿದ್ದೇನು ಗೊತ್ತಾ?

ಟಯರ್‌ಗಳಲ್ಲಿ ಸಿಲುಕಿಕೊಳ್ಳಬಹುದಾದ ದುಪ್ಪಟ್ಟಾ ಅಥವಾ ರಾಂಗ್ ಸೈಡಿನಲ್ಲಿ ಕಾರಿನ ಡೋರ್ ತೆಗೆಯುವುದರಿಂದ ಯಾವ ರೀತಿಯ ಅವಘಡಗಳು ಸಂಭವಿಸುತ್ತವೆ ಎಂಬುದನ್ನು ಈ ಫೋಟೋಗಳಲ್ಲಿ ಕಾಣಬಹುದು. ಕೊಚ್ಚಿಯಲ್ಲಿನ ಅನಿಮೇಷನ್ ಅಂಡ್ ವಿಷುಯಲ್ ಎಫೆಕ್ಟ್ಸ್ ಸಂಸ್ಥೆಯಲ್ಲಿ ವಿಎಫ್‌ಎಕ್ಸ್ ಮತ್ತು ಆನಿಮೇಷನ್ ಕೋರ್ಸ್ ಕಲಿಯುತ್ತಿರುವ ಹಫೀಜ್‌ಗೆ ಫೋಟೊಗ್ರಫಿ ಒಂದು ಪ್ಯಾಷನ್ ಆಗಿದೆ.

ಸಂಚಾರಿ ಜಾಗೃತಿಗೆ ಮುಂದಾದ ಯುವಕ ಮಾಡಿದ್ದೇನು ಗೊತ್ತಾ?

ಯೂಟ್ಯೂಬ್ ಟ್ಯುಟೋರಿಯಲ್‍‍ನಿಂದ ಹಾಗೂ ಫೋಟೊಗಳನ್ನು ತೆಗೆಯುತ್ತಾ ಹಫೀಜ್‍‍ರವರು ಫೋಟೋಗ್ರಫಿ ಕೌಶಲ್ಯಗಳನ್ನು ಕಲಿತಿದ್ದಾರೆ. ತಮ್ಮ ಫೋಟೊಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳಲು, ಇನ್‌ಸ್ಟಾಗ್ರಾಮ್ ಖಾತೆಯನ್ನು ತೆರೆಯಲು ಅವರ ಗರ್ಲ್ ಫ್ರೆಂಡ್ ಹೇಳಿದ ಕಾರಣಕ್ಕೆ ಇನ್‌ಸ್ಟಾಗ್ರಾಮ್‍‍ನಲ್ಲಿ ಖಾತೆಯನ್ನು ತೆರೆದರು. ತಮ್ಮ ಖಾತೆಗೆ ಆಕರ್ಷಕವಾದ ಹೆಸರನ್ನು ಸಹ ಇಟ್ಟಿದ್ದಾರೆ.

ಸಂಚಾರಿ ಜಾಗೃತಿಗೆ ಮುಂದಾದ ಯುವಕ ಮಾಡಿದ್ದೇನು ಗೊತ್ತಾ?

ಅಂದ ಹಾಗೆ ಅವರ ಇನ್‌ಸ್ಟಾಗ್ರಾಮ್ ಖಾತೆಯ ಹೆಸರು ತ್ರಿಕ್ಕಣ್ಣನ್, ಅಂದರೆ, ಮೂರು ಕಣ್ಣುಗಳು. ತಮ್ಮ ಫೋಟೊಗಳ ಬಗ್ಗೆ ಮಾತನಾಡಿರುವ ಹಫೀಜ್‍‍ರವರು, ನಾನು 12ನೇ ತರಗತಿಯನ್ನು ಮುಗಿಸಿದ ನಂತರ, ಇನ್ಸ್ ಟ್ಯೂಟ್‍‍ನಲ್ಲಿ ತರಗತಿಗಳಿಗೆ ಹೋಗಲು ಪ್ರಾರಂಭಿಸಿದಾಗ, ಜನರು ವಾಹನ ಸವಾರಿ ಮಾಡುವಾಗ ಏನೆಲ್ಲಾ ತಪ್ಪುಗಳನ್ನು ಮಾಡುತ್ತಾರೆ ಎಂಬುದನ್ನು ಗಮನಿಸಲು ಪ್ರಾರಂಭಿಸಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಸಂಚಾರಿ ಜಾಗೃತಿಗೆ ಮುಂದಾದ ಯುವಕ ಮಾಡಿದ್ದೇನು ಗೊತ್ತಾ?

ಹಾರುವ ದುಪಟ್ಟಾ ಒಂದು ಸಣ್ಣ ವಿಷಯವಾದರೂ, ಇದರಿಂದ ಅಪಘಾತಗಳಾಗಿ ಈ ಸಣ್ಣ ವಿಷಯವು ಒಂದು ಜೀವವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ನಾನು ಗಮನಿಸಿದ ಮತ್ತೊಂದು ಸಂಗತಿಯೆಂದರೆ, ತಮ್ಮ ಕಾರುಗಳನ್ನು ರಾಂಗ್ ಸೈಡಿನಲ್ಲಿ ನಿಲ್ಲಿಸುವ ಜನರು ತಮ್ಮ ಹಿಂದೆ ಬರುವವರನ್ನು ಗಮನಿಸದೆ ಹೇಗೆ ಬಾಗಿಲು ತೆರೆಯುತ್ತಾರೆ ಎಂಬುದು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸಂಚಾರಿ ಜಾಗೃತಿಗೆ ಮುಂದಾದ ಯುವಕ ಮಾಡಿದ್ದೇನು ಗೊತ್ತಾ?

ಇದರಿಂದಾಗಿ ಅವರು ತಮ್ಮ ಪ್ರಾಣಕ್ಕೆ ಅಪಾಯವನ್ನು ತಂದು ಕೊಳ್ಳುವುದು ಮಾತ್ರವಲ್ಲದೇ, ಅಮಾಯಕ ಜನರ ಸಾವಿಗೂ ಕಾರಣರಾಗುತ್ತಾರೆ ಎಂದು ಹೇಳಿದರು. ನಾವು ಈ ಫೋಟೊಗಳಲ್ಲಿ ತೋರಿಸಿರುವ ದೃಶ್ಯಗಳು ಅಂತಹ ಅಪಘಾತಗಳ ಫಲಿತಾಂಶಗಳು. ಈ ರೀತಿಯ ಅಪಘಾತಗಳಲ್ಲಿ ಯಾರದೋ ತಪ್ಪಿಗೆ ಇನ್ನ್ಯಾರೋ ಬಲಿಪಶುಗಳಾಗಿದ್ದಾರೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಸಂಚಾರಿ ಜಾಗೃತಿಗೆ ಮುಂದಾದ ಯುವಕ ಮಾಡಿದ್ದೇನು ಗೊತ್ತಾ?

ಈ ಫೋಟೊಗಳು ಜನರ ಗಮನವನ್ನು ಸೆಳೆಯುವುದರ ಜೊತೆಗೆ ನಿಯಮಗಳನ್ನು ಅನುಸರಿಸಲು ಜನರನ್ನು ಜಾಗರೂಕರನ್ನಾಗಿ ಮಾಡುತ್ತವೆ ಎಂಬ ನಂಬಿಕೆಯಿದೆ ಎಂದು ಅವರು ಹೇಳುತ್ತಾರೆ. ಪ್ರತಿಭಾವಂತ ಫೋಟೋಗ್ರಾಫರ್ ಆದ, ಹಫೀಜ್ ಅಲಪ್ಪಾಡ್‍‍ನಲ್ಲಿರುವ ಮರಳು ಗಣಿಗಾರಿಕೆಯ ಬಗ್ಗೆ ಹಾಗೂ ದೀನದಲಿತ ಮಕ್ಕಳ ಶಿಕ್ಷಣಕ್ಕಾಗಿ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಅರಣ್ಯನಾಶದ ಬಗ್ಗೆ ಮತ್ತು ಅದರಿಂದ ಬೇಸಿಗೆಯಲ್ಲಿ ಉಂಟಾಗುವ ಪರಿಣಾಮಗಳ ಬಗ್ಗೆ ಕೆಲಸ ಮಾಡುತ್ತಿದ್ದಾರೆ.

Image Courtesy: Thrikkannan/Instagram

Most Read Articles

Kannada
English summary
Kerala Boy’s Powerful Road Safety Photos Will Compel You To Follow The Rules - Read in Kannada
Story first published: Tuesday, October 8, 2019, 18:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X