Just In
Don't Miss!
- Lifestyle
ರಾತ್ರಿ ವೇಳೆ ಬೇಳೆಕಾಳು ತಿನ್ನಬೇಕೋ ಬೇಡವೋ, ಆಯುರ್ವೇದ ಏನು ಹೇಳುತ್ತದೆ?
- Finance
ಮಾರ್ಚ್ 04ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ
- Sports
ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್, Live ಸ್ಕೋರ್, ಪ್ಲೇಯಿಂಗ್ XI
- News
ಮಗಳ ಶಿರಚ್ಛೇದ ಮಾಡಿ, ರುಂಡದೊಂದಿಗೆ ಪೊಲೀಸರಿಗೆ ಶರಣಾದ ತಂದೆ
- Movies
ಮೊದಲ ವಾರವೇ ಹೊರಹೋಗ್ತಾರಾ ಶುಭಾ ಪೂಂಜಾ: ನಾಮಿನೇಟ್ ಆಗಿದ್ದು ಹೇಗೆ?
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ
ಮನುಷ್ಯನ ಜೀವಕ್ಕೆ ನೂರಕ್ಕೆ ನೂರರಷ್ಟು ಗ್ಯಾರಂಟಿ ನೀಡುವ ಯಾವುದೇ ಕಾರು ಈ ಜಗತ್ತಿನಲ್ಲಿ ಇಲ್ಲ. ಕಾರುಗಳ ಸುರಕ್ಷತೆಗೆ ಪ್ರಾಮುಖ್ಯತೆ ನೀಡಬಾರದು ಹಾಗೂ ಅಸುರಕ್ಷಿತ ಕಾರುಗಳನ್ನು ಖರೀದಿಸಬಾರದು ಎಂಬುದು ಇದರರ್ಥವಲ್ಲ.

ಕಾರು ಖರೀದಿಸುವಾಗ ಸುರಕ್ಷತಾ ರೇಟಿಂಗ್‌ನಲ್ಲಿ ಉತ್ತಮವಾಗಿರುವ ಹಾಗೂ ಅತ್ಯುತ್ತಮ ನಿರ್ಮಾಣ ಗುಣಮಟ್ಟವನ್ನು ಹೊಂದಿರುವ ಕಾರುಗಳನ್ನು ಖರೀದಿಸುವುದು ಸೂಕ್ತ. ಟೊಯೊಟಾ ಇನೋವಾ ಕ್ರಿಸ್ಟಾ ದೇಶಿಯ ಮಾರುಕಟ್ಟೆಯಲ್ಲಿರುವ ಶಕ್ತಿಶಾಲಿ ಕಾರುಗಳಲ್ಲಿ ಒಂದಾಗಿದೆ. ಟೊಯೊಟಾ ಕಂಪನಿಯ ಮೇಲಿರುವ ವಿಶ್ವಾಸಾರ್ಹತೆಯಿಂದಾಗಿ ಇನೋವಾ ಕ್ರಿಸ್ಟಾ ಭಾರತದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನ ಪವರ್ ಕೂಡ ಅದರ ಜನಪ್ರಿಯತೆಗೆ ಕಾರಣವಾಗಿದೆ.

ಇಷ್ಟೆಲ್ಲಾ ಹೆಗ್ಗಳಿಕೆಯನ್ನು ಹೊಂದಿರುವ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಭೀಕರ ಅಪಘಾತಕ್ಕೆ ಸಿಲುಕಿದೆ. ಹಿಮಾಚಲ ಪ್ರದೇಶದ ಸಾಂಗ್ಲಾ ಕಣಿವೆಯಲ್ಲಿ ಈ ದುರ್ಘಟನೆ ನಡೆದಿದೆ. ಸಣ್ಣ ಬಂಡೆಯೊಂದು ಎತ್ತರದಿಂದ ಟೊಯೊಟಾ ಇನೋವಾ ಕ್ರೆಸ್ಟಾ ಕಾರಿನ ರೂಫ್ ಮೇಲೆ ಬಿದ್ದಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಈ ಬಂಡೆ ಎಷ್ಟು ಜೋರಾಗಿ ಅಪ್ಪಳಿಸಿದೆಯೆಂದರೆ ರೂಫ್ ಮೇಲೆ ಬಿದ್ದು, ಕಾರಿನ ಹಿಂಭಾಗದ ಬಲ ಸೀಟಿನ ಮೇಲೆ ಬಿದ್ದಿದೆ. ಇದರಿಂದಾಗಿ ಕಾರಿನ ರೂಫ್ ನಲ್ಲಿ ರಂಧ್ರ ಉಂಟಾಗಿದೆ. ಬಂಡೆ ಬಿದ್ದಾಗ ಅದೃಷ್ಟವಶಾತ್ ಆ ಸೀಟಿನಲ್ಲಿ ಯಾರೂ ಇರಲಿಲ್ಲ. ಘಟನೆ ನಡೆದ 10 ನಿಮಿಷಕ್ಕೂ ಮುನ್ನ ಅಲ್ಲಿದ್ದವರು ಕೆಳಗಿಳಿದಿದ್ದಾರೆ.

ಒಂದು ವೇಳೆ ಘಟನೆ ನಡೆದಾಗ ಅವರು ಅಲ್ಲಿಯೇ ಕುಳಿತಿದ್ದರೆ ಭೀಕರವಾಗಿ ಗಾಯಗೊಳ್ಳುವ ಅಥವಾ ಬೇರೆ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿದ್ದವು. ಅದೃಷ್ಟವಶಾತ್ ಅಂತಹ ದುರಂತ ಸಂಭವಿಸಿಲ್ಲ. ಬಂಡೆ ಕಾರಿನೊಳಗೆ ಬಿದ್ದಾಗ ಕಾರಿನ ಬೇರೆ ಬೇರೆ ಸೀಟುಗಳಲ್ಲಿ ಜನರು ಕುಳಿತಿದ್ದರು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಬಂಡೆ ಬಿದ್ದ ನಂತರ ಬೇರೆ ಸೀಟುಗಳಲ್ಲಿದ್ದವರು ಕಾರಿನಿಂದ ಕೆಳಗಿಳಿದಿದ್ದಾರೆ. ಬಂಡೆ ಬಿದ್ದ ರಭಸಕ್ಕೆ ಸೀಟು ಹರಿದುಹೋಗಿದೆ. ಇದರ ಜೊತೆಗೆ ಕಾರಿನ ಡೋರಿಗೂ ಹಾನಿಯಾಗಿದೆ. ಮುಂಭಾಗದ ವಿಂಡ್ ಷೀಲ್ಡ್ ನಲ್ಲಿಯೂ ಬಿರುಕು ಉಂಟಾಗಿದೆ.

ಬಂಡೆ ಎಲ್ಲಿಂದ ಬಂದು ಬಿತ್ತು ಎಂಬುದು ಇನ್ನೂ ತಿಳಿದು ಬಂದಿಲ್ಲ. ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ಮೇಲೆ ಬಂಡೆ ಬೀಳುವ ವೀಡಿಯೊವನ್ನುಅರುಣ್ ಪನ್ವಾರ್ ಎಂಬುವವರು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು
ಘಟನೆ ನಡೆದ ತಕ್ಷಣ ಕಾರಿನ ಮಾಲೀಕರು ಟೊಯೊಟಾ ಡೀಲರ್ ಬಳಿ ಧಾವಿಸಿದ್ದಾರೆ. ಡೀಲರ್ ಕಾರಿನ ಹಾನಿಗೊಳಗಾದ ಭಾಗಗಳ ಫೋಟೋಗಳನ್ನು ತೆಗೆದು ನೈಸರ್ಗಿಕ ಅಪಘಾತದಡಿಯಲ್ಲಿ ವಿಮೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಹಾನಿಗೊಳಗಾದ ಎಲ್ಲಾ ಭಾಗಗಳನ್ನು ಬದಲಿಸಬಹುದೆಂದು ಟೊಯೊಟಾ ಡೀಲರ್ ಹೇಳಿದ್ದಾರೆ. ಟೊಯೊಟಾ ಕಂಪನಿಯು ತನ್ನ ಗ್ರಾಹಕರಿಗೆ ತಕ್ಷಣವೇ ನೆರವಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಟೊಯೊಟಾ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಲು ಇದು ಸಹ ಕಾರಣವಾಗಿದೆ.