Just In
Don't Miss!
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Finance
ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ
- News
ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ
- Movies
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಕಿಂಗ್ ಸ್ಟಾರ್ ಯಶ್ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?
ಕೆಜಿಎಫ್ ಸಿನಿಮಾ ನಂತರ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ನಟ ಯಶ್ ಸದ್ಯ ದೇಶದ 50 ಪ್ರಭಾವಿ ಯುವಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಅದ್ಬುತವಾದ ನಟನೆ ಮೂಲಕ ಬಾಲಿವುಡ್ ನಟರಿಗೆ ಸಮನಾಗಿ ಮಿಂಚುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ 'ರಾಕಿಂಗ್ ಸ್ಟಾರ್' ಎಂದೇ ಪ್ರೀತಿಯಿಂದ ಕರೆಯಲ್ಪಡುವ ಯಶ್ ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಅಗಿ ಗುರುತಿಸಿ ಕೊಂಡಿದ್ದು, ತಮ್ಮ ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದಾಗಿ ಭಾರತಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. 'ನಂದಗೋಕುಲ' ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ನಟನೆಯನ್ನೇ ವೃತ್ತಿಯನ್ನಾಗಿಸಿಕೊಂಡ ಯಶ್ ಅವರು 2007ರಲ್ಲಿ 'ಜಂಬದ ಹುಡುಗಿ' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು .

2008ರಲ್ಲಿ ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದ ನಟ ಯಶ್ ಅವರಿಗೆ 2011ರಲ್ಲಿ ತೆರೆಗೆ ಬಂದ 'ಕಿರಾತಕ' ಚಿತ್ರವು ಬಿಗ್ ಬ್ರೇಕ್ ನೀಡಿತು.

ತದನಂತರ ತೆರೆಗೆ ಬಂದ 'ಲಕ್ಕಿ', 'ಡ್ರಾಮಾ' ,'ಗೂಗ್ಲಿ', 'ರಾಜಾಹುಲಿ', 'ಗಜಕೇಸರಿ', 'Mr & Mrs ರಾಮಾಚಾರಿ' ಚಿತ್ರಗಳು ಭರ್ಜರಿ ಪ್ರದರ್ಶನ ಕಾಣುವ ಮೂಲಕ ಯಶ್ ರನ್ನು ಕನ್ನಡ ಚಿತ್ರರಂಗದ ಪ್ರಮುಖ ನಟರ ಸಾಲಿನಲ್ಲಿ ನಿಲ್ಲಿಸಿದ್ದಲ್ಲದೆ ಕೆಜಿಎಫ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಚ್ಚರಿಯ ಗಳಿಕೆ ಕಾಣುವ ಮೂಲಕ ಚಿತ್ರರಂಗದಲ್ಲೇ ಹೊಸಪರ್ವಕ್ಕೆ ನಾಂದಿ ಹಾಡಿತು.

ಈ ಮೂಲಕ ದೇಶದ 50 ಪ್ರಭಾವಿ ಯುವಕರಲ್ಲಿ ಒಬ್ಬರಾಗಿ ಮಿಂಚುತ್ತಿರುವ ನಟ ಯಶ್ ಬಳಿ ಹಲವಾರು ಹೊಸ ಮಾದರಿಯ ಕಾರುಗಳ ಸಂಗ್ರವಿದೆ. ಹಾಗಾದ್ರೆ ಯಶ್ ಅವರ ಕಾರ್ ಕಲೆಕ್ಷನ್‌ನಲ್ಲಿ ಯಾವೆಲ್ಲಾ ಕಾರುಗಳಿಗೆ ಮತ್ತು ಅವುಗಳ ವಿಶೇಷತೆ ಏನು ಎಂಬುವುದನ್ನು ಈ ಲೇಖನದಲ್ಲಿ ತಿಳಿಯೋಣ.

ಬೆಂಝ್ ಕಾರುಗಳದ್ದೆ ಕಾರುಬಾರು..!
ನಟ ಯಶ್ ಅವರ ಕಾರುಗಳ ಪಟ್ಟಿಯಲ್ಲಿ ಮರ್ಸಿಡಿಸ್ ಬೆಂಝ್ ಕಾರುಗಳ ದೊಡ್ಡ ಪಟ್ಟಿ ಇದೆ. ಸಂದರ್ಭಗಳಿಗೆ ಅನುಗುಣವಾಗಿ ವಿವಿಧ ಕಾರು ಮಾದರಿಗಳ ಬಳಕೆಯನ್ನು ಇಷ್ಟಪಡುವ ಯಶ್ ಅವರು ಐಷಾರಾಮಿ ಕಾರುಗಳ ಜೊತೆಗೆ ಆಫ್-ರೋಡ್ ಕಾರುಗಳನ್ನು ಸಹ ಹೆಚ್ಚು ಇಷ್ಟಪಡುತ್ತಾರೆ.

ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಒಟ್ಟು ಮೂರು ಬೆಂಝ್ ನಿರ್ಮಾಣದ ಕಾರುಗಳನ್ನು ಖರೀಸಿದ್ದರು. ಐಷಾರಾಮಿ ಸೌಲಭ್ಯದ ಇ-ಕ್ಲಾಸ್ ಸೆಡಾನ್ ಮತ್ತು ಜಿಎಲ್‌ಸಿ ಎಸ್‌ಯುವಿ ಖರೀದಿಸಿದ್ದರು.

ಜೊತೆಗೆ ತಮ್ಮ ವ್ಯಯಕ್ತಿಕ ಬಳಕೆಗಾಗಿ ಸ್ಪೋರ್ಟಿ ವಿನ್ಯಾಸದ ಬೆಂಝ್ ಜಿಎಲ್‌ಸಿ ಎಎಮ್‌ಜಿ ಕೂಪೆ ಖರೀದಿಸಿದ್ದರು. ಬೆಂಝ್ ಕಾರುಗಳು ಕ್ರಮವಾಗಿ ಬೆಂಗಳೂರು ಆನ್‌ರೋಡ್ ಪ್ರಕಾರ ಆರಂಭಿಕವಾಗಿ ರೂ.75.39 ಲಕ್ಷ(ಇ-ಕ್ಲಾಸ್ ಸೆಡಾನ್), ರೂ.94.10 ಲಕ್ಷ(ಜಿಎಲ್‌ಇ ಎಸ್‌ಯುವಿ) ಮತ್ತು ರೂ.79.97 ಲಕ್ಷ (ಜಿಎಲ್‌ಸಿ ಎಎಮ್‌ಜಿ ಕೂಪೆ) ಬೆಲೆ ಹೊಂದಿವೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಐಷಾರಾಮಿ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ಸಾಂಪ್ರಾದಾಯಿಕ ಕಾರು ಮಾದರಿಗಳ ಜೊತೆಗೆ ಸ್ಪೋರ್ಟಿ ಕಾರು ಮಾದರಿಗಳನ್ನು ಮಾರಾಟ ಮಾಡುವ ಎಲ್ಲಾ ವರ್ಗದ ಐಷಾರಾಮಿ ಕಾರು ಖರೀದಿದಾರರನ್ನು ಸೆಳೆಯುವ ಮುಂಚೂಣಿ ಕಾರು ಮಾರಾಟ ಕಂಪನಿಯಾಗಿದೆ.

ಇ-ಕ್ಲಾಸ್ ಸೆಡಾನ್ ಕಾರು ಮಾದರಿಯು 2.0-ಲೀಟರ್ ಪೆಟ್ರೋಲ್, 3.0-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ, ಜಿಎಲ್‌ಸಿ ಎಎಮ್‌ಜಿ ಕೂಪೆ ಕಾರು 2.0-ಲೀಟರ್ ಪೆಟ್ರೋಲ್, 2.0-ಲೀಟರ್ ಡೀಸೆಲ್ ಎಂಜಿನ್ ಮತ್ತು ಜಿಎಲ್ಇ ಕಾರು 2.-0-ಲೀಟರ್ ಪೆಟ್ರೋಲ್, 3.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿವೆ.

ಆಡಿ ಕ್ಯೂ7 ಎಸ್‌ಯುವಿ
ಯಶ್ ಕಾರು ಸಂಗ್ರಹದಲ್ಲಿ ಮತ್ತೊಂದು ಆಕರ್ಷಣೆಯಾಗಿರುವ ಕ್ಯೂ7 ಎಸ್‌ಯುವಿ ಕಾರು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಿಂದ ಸ್ಥಗಿತಗೊಂಡಿದ್ದರೂ ಐಷಾರಾಮಿ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿಯಲ್ಲಿತ್ತು. ಸುಮಾರು 10 ವರ್ಷಗಳ ಕಾಲ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿದ್ದ ಕ್ಯೂ7 ಕಾರು 2.0-ಲೀಟರ್ ಡೀಸೆಲ್ ಮತ್ತು 3.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ರೂ.1 ಕೋಟಿ ಅಧಿಕ ಆನ್‌ರೋಡ್ ಬೆಲೆ ಹೊಂದಿತ್ತು.

ಆಡಿ ಎ4 ಸೆಡಾನ್
ಎ4 ಸೆಡಾನ್ ಕೂಡಾ ಯಶ್ ಕಾರು ಸಂಗ್ರಹದಲ್ಲಿ ಪ್ರಮಖ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಸದ್ಯ ಮಾರಾಟದಿಂದ ಸ್ಥಗಿತಗೊಂಡಿದ್ದರೂ ಸೆಡಾನ್ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆಯ ಕಾರು ಮಾದರಿಯಾಗಿತ್ತು. ಈ ಕಾರು 1.4-ಲೀಟರ್ ಪೆಟ್ರೋಲ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ರೂ.53 ಲಕ್ಷದಿಂದ ರೂ.60 ಲಕ್ಷ ಬೆಲೆ ಹೊಂದಿತ್ತು.

ರೇಂಜ್ ರೋವರ್ ಇವೋಕ್ ಎಸ್‌ಯುವಿ
ಐಷಾರಾಮಿ ಎಸ್‌ಯುವಿ ಕಾರುಗಳಲ್ಲಿ ಜನಪ್ರಿಯ ಮಾದರಿಯಾದ ರೇಂಜ್ ರೋವರ್ ಇವೋಕ್ ಕಾರು ಯಶ್ ಕಾರು ಸಂಗ್ರಹದಲ್ಲಿ ಸ್ಥಾನ ಪಡೆದುಕೊಂಡಿದ್ದು, ಈ ಕಾರು 2.0-ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ.72 ಲಕ್ಷದಿಂದ 78 ಲಕ್ಷ ಆನ್ ರೋಡ್ ಬೆಲೆ ಹೊಂದಿದೆ.

ಆದರೆ ಯಶ್ ಅವರ ಕಾರು ಸಂಗ್ರಹದಲ್ಲಿರುವ ಬಹುತೇಕ ಕಾರುಗಳ ವೆರಿಯೆಂಟ್ ಕುರಿತಾಗಿ ಅಷ್ಟಾಗಿ ಮಾಹಿತಿ ಇಲ್ಲವಾದರೂ ಪೆಟ್ರೋಲ್ ಕಾರುಗಳ ಸಂಖ್ಯೆ ಹೆಚ್ಚಿದ್ದು, ಪರ್ಫಾಮೆನ್ಸ್ ಮತ್ತು ಐಷಾರಾಮಿ ಪ್ರಯಾಣಕ್ಕಾಗಿ ಪೆಟ್ರೋಲ್ ಮಾದರಿಗಳನ್ನೇ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

ಮಿಟ್ಸುಬಿಷಿ ಪಜೆರೊ ಸ್ಪೋರ್ಟ್ಸ್
ಕೆಲವು ವರ್ಷಗಳ ಹಿಂದಷ್ಟೇ ಆಫ್-ರೋಡ್ ಎಸ್‌ಯುವಿ ಕಾರುಗಳಲ್ಲೇ ಅತಿಹೆಚ್ಚು ಬೇಡಿಕೆ ಕಾರು ಮಾದರಿಯಾಗಿದ್ದ ಮಿಟ್ಸುಬಿಷಿ ಪಜೆರೊ ಸ್ಪೋರ್ಟ್ಸ್ ಇತ್ತೀಚೆಗೆ ಬೇಡಿಕೆ ಕಳೆದುಕೊಂಡಿದ್ದರು ಮಾರುಕಟ್ಟೆಯಲ್ಲಿ ಕೆಲವು ಹೊಸ ಬದಲಾವಣೆಗಳೊಂದಿಗೆ ಮಾರಾಟಕ್ಕೆ ಲಭ್ಯವಿದೆ.

2.5-ಲೀಟರ್ ಇಂಟರ್‌ಕೂಲರ್ ಟರ್ಬೋಚಾಜ್ಡ್ ಡೀಸೆಲ್ ಎಂಜಿನ್‌ನೊಂದಿಗೆ 176-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲ ಪಜೆರೊ ಸ್ಪೋರ್ಟ್ಸ್ ಕಾರು ಆಲ್ ವೀಲ್ಹ್ ಡ್ರೈವ್ ಸೌಲಭ್ಯದೊಂದಿಗೆ ಆರಂಭಿಕವಾಗಿ ರೂ.35.47 ಲಕ್ಷದೊಂದಿಗೆ ಹೈ ಎಂಡ್ ಮಾದರಿಯು ರೂ. 37.75 ಲಕ್ಷ ಬೆಲೆ ಹೊಂದಿದೆ.