Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು
ರೋಲ್ಸ್ ರಾಯ್ಸ್ ಕಂಪನಿಯು ವಿಶ್ವದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಉತ್ಪಾದಿಸುತ್ತದೆ. ರೋಲ್ಸ್ ರಾಯ್ಸ್ ಕಂಪನಿಯು 1973ರಿಂದ ಕಾರುಗಳನ್ನು ಉತ್ಪಾದಿಸುತ್ತಿದೆ. ರೋಲ್ಸ್ ರಾಯ್ಸ್ ಕಂಪನಿಯ ಕಾರುಗಳನ್ನು ಭಾರತವೂ ಸೇರಿದಂತೆ ವಿಶ್ವದಾದ್ಯಂತ ಕಾಣಬಹುದು.

ದುಬಾರಿ ಬೆಲೆಯ ಈ ಐಷಾರಾಮಿ ಕಾರುಗಳು ಭಾರತದ ರಸ್ತೆಗಳಲ್ಲಿ ಶೋಚನೀಯ ಸ್ಥಿತಿಯಲ್ಲಿ ನಿಂತಿವೆ. ಈ ಕಾರುಗಳ ಪೈಕಿ ಕೆಲವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದರೆ, ಇನ್ನೂ ಕೆಲವು ಕಾರುಗಳನ್ನು ಅವುಗಳ ಮಾಲೀಕರೆ ಮೂಲೆಗೆ ತಳ್ಳಿದ್ದಾರೆ. ಹೀಗೆ ಭಾರತದ ರಸ್ತೆಗಳಲ್ಲಿ ಶೋಚನೀಯ ಸ್ಥಿತಿಯಲ್ಲಿರುವ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ರೋಲ್ಸ್ ರಾಯ್ಸ್ ಘೋಸ್ಟ್
ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಬೆಂಗಳೂರು ಪೊಲೀಸರು ಕೆಲವು ತಿಂಗಳ ಹಿಂದೆ ವಶಕ್ಕೆ ಪಡೆದಿದ್ದರು. ಇನ್ನೂ ಸಹ ಪೊಲೀಸರ ವಶದಲ್ಲಿರುವ ನೀಲಿ ಬಣ್ಣದ ಈ ಕಾರನ್ನು ಮೊಹಮ್ಮದ್ ನಿಶಮ್ ಎಂಬುವವರಿಂದ ವಶಕ್ಕೆ ಪಡೆಯಲಾಯಿತು. ಮೊಹಮ್ಮದ್ ನಿಶಮ್ ಕುಡಿದು ವಾಹನ ಚಾಲನೆ ಮಾಡಿದಾಗ ಈ ಕಾರನ್ನು ವಶಕ್ಕೆ ಪಡೆಯಲಾಯಿತು.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ರೋಲ್ಸ್ ರಾಯ್ಸ್ ಫ್ಯಾಂಟಮ್
ಈ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ನಟಿ ಲೀನಾ ಮಾರಿಯಾ ಪಾಲ್ ಅವರಿಗೆ ಸೇರಿದ್ದು. ಅವರು ಕೆನರಾ ಬ್ಯಾಂಕ್ ಹಗರಣದಲ್ಲಿ ಸಿಕ್ಕಿಬಿದ್ದ ನಂತರ ಈ ಕಾರನ್ನು ದೆಹಲಿಯ ಅವರ ತೋಟದ ಮನೆಯಿಂದ ವಶಕ್ಕೆ ಪಡೆಯಲಾಗಿದೆ. ಬಿಳಿ ಬಣ್ಣದ ಈ ಫ್ಯಾಂಟಮ್ ಕಾರು ಸದ್ಯಕ್ಕೆ ಪೊಲೀಸರ ವಶದಲ್ಲಿದೆ.

ರೋಲ್ಸ್ ರಾಯ್ಸ್ ಸಿಲ್ವರ್ ಸ್ಪರ್ 2
ಈ ಕಾರು ಮಹಾರಾಷ್ಟ್ರದ ರಸ್ತೆಯೊಂದರಲ್ಲಿ ಕಂಡು ಬಂದಿದೆ. ಈ ಕಾರನ್ನು ಅದರ ಮಾಲೀಕರು ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ಆದರೆ ಇದಕ್ಕೇನು ಕಾರಣವೆಂದು ತಿಳಿದುಬಂದಿಲ್ಲ. 1980ರಲ್ಲಿ ಬಿಡುಗಡೆಯಾದ ರೋಲ್ಸ್ ರಾಯ್ಸ್ ಸಿಲ್ವರ್ ಸ್ಪರ್ ಕಾರನ್ನು ಈಗಲೂ ಸಹ ಸಾಕಷ್ಟು ಮಂದಿ ಬಳಸುತ್ತಿದ್ದಾರೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ರೋಲ್ಸ್ ರಾಯ್ಸ್ ಸಿಲ್ವರ್ ಶ್ಯಾಡೋ
ಈ ಕಾರು ಮಹಾರಾಷ್ಟ್ರದ ಖಂಡಲಾದಲ್ಲಿದೆ. ಇದು ಯಾರಿಗೆ ಸೇರಿದ ಕಾರು ಎಂದು ತಿಳಿದುಬಂದಿಲ್ಲವಾದರೂ ಭೂತದ ಕಾಟದಿಂದಾಗಿ ಈ ಕಾರಿನ ಮಾಲೀಕರು ಕಾರನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ರೋಲ್ಸ್ ರಾಯ್ಸ್ ಸಿಲ್ವರ್ ಸ್ಪಿರಿಟ್
1993 - 1996ರ ನಡುವೆ ಉತ್ಪಾದನೆಯಾದ ರೋಲ್ಸ್ ರಾಯ್ಸ್ ಸಿಲ್ವರ್ ಸ್ಪಿರಿಟ್ ಮಾರ್ಕ್ 3 ಕಾರು 6.75-ಲೀಟರಿನ ವಿ 8 ಎಂಜಿನ್ ಹೊಂದಿದೆ. ಈ ಕಾರು ಸಹ ಭಾರತದ ರಸ್ತೆಯೊಂದರಲ್ಲಿ ಶೋಚನೀಯ ಸ್ಟಿತಿಯಲ್ಲಿ ಕಂಡು ಬಂದಿದೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ರೋಲ್ಸ್ ರಾಯ್ಸ್ ಕಂಪನಿಯು ಹಲವಾರು ವರ್ಷಗಳಿಂದ ಕಾರುಗಳನ್ನು ಉತ್ಪಾದಿಸುತ್ತಿದ್ದರೂ ಸಹ ಇದುವರೆಗೂ ಯಾವುದೇ ಎಲೆಕ್ಟ್ರಿಕ್ ಕಾರನ್ನು ಉತ್ಪಾದಿಸಿಲ್ಲ. ಬ್ರಿಟನ್ ಮೂಲದ ಕಾರು ತಯಾರಕ ಕಂಪನಿಯಾದ ಲುನಾಜ್, ರೋಲ್ಸ್ ರಾಯ್ಸ್ ಕ್ಲಾಸಿಕ್ 1961 ಫ್ಯಾಂಟಮ್ ವಿ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಸಿದ್ಧಪಡಿಸಿದೆ.
ಈ ಕಾರಿನ 30 ಎಲೆಕ್ಟ್ರಿಕ್ ಮಾದರಿಗಳನ್ನು ಉತ್ಪಾದಿಸುವುದಾಗಿ ಕಂಪನಿ ಹೇಳಿದೆ. ಆದರೆ ಈ ಮಾದರಿಯನ್ನು ಆಯ್ದ ಗ್ರಾಹಕರಿಗೆ ಮಾತ್ರ ಮಾರಾಟ ಮಾಡಲಾಗುವುದು. ಈ ಕಾರು ವಿಶ್ವದ ಮೊದಲ ಎಲೆಕ್ಟ್ರಿಕ್ ರೋಲ್ಸ್ ರಾಯ್ಸ್ ಕಾರು ಎಂದು ಕಂಪನಿ ಹೇಳಿದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಲುನಾಜ್ ಕಂಪನಿಯು ರೋಲ್ಸ್ ರಾಯ್ಸ್ 1961 ಫ್ಯಾಂಟಮ್ ವಿ ಮಾದರಿಗಳನ್ನು ಎಲೆಕ್ಟ್ರಿಕ್ ಕಾರ್ ಆಗಿ ಬದಲಿಸಲು ಅವುಗಳನ್ನು ಖರೀದಿಸಿತು.