ಸಿಂಗಲ್ ಸೀಟರ್ ಎಲೆಕ್ಟ್ರಿಕ್ ವಿಮಾನವನ್ನು ತಯಾರಿಸಿದ ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್ ಬ್ರಿಟಿಷ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾಗಿದೆ. ಈ ಕಂಪನಿಯು ಜರ್ಮನಿ ಮೂಲದ ಬಿ‍ಎಂ‍‍ಡಬ್ಲ್ಯು ಕಂಪನಿಯ ಅಂಗಸಂಸ್ಥೆಯಾಗಿದೆ. ಈ ಕಂಪನಿಯನ್ನು 1998ರಲ್ಲಿ ಸ್ಥಾಪಿಸಲಾಯಿತು.

ಸಿಂಗಲ್ ಸೀಟರ್ ಎಲೆಕ್ಟ್ರಿಕ್ ವಿಮಾನವನ್ನು ತಯಾರಿಸಿದ ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್ ಕಂಪನಿಯ ಕೇಂದ್ರ ಕಚೇರಿಯು ಇಂಗ್ಲೆಂಡ್‍‍ನ ಸಸೆಕ್ಸ್ ನಲ್ಲಿರುವ ಗುಡ್‍ವುಡ್‍‍ನಲ್ಲಿದೆ. ರೋಲ್ಸ್ ರಾಯ್ಸ್ ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲಿಯೂ ತನ್ನ ಐಷಾರಾಮಿ ಕಾರುಗಳನ್ನು ಮಾರಾಟ ಮಾಡುತ್ತದೆ. ಈ ಕಂಪನಿಯ ಕಾರುಗಳನ್ನು ಖರೀದಿಸಲು ಹಲವಾರು ಷರತ್ತುಗಳನ್ನು ಪೂರೈಸಬೇಕಾಗುತ್ತದೆ.

ಸಿಂಗಲ್ ಸೀಟರ್ ಎಲೆಕ್ಟ್ರಿಕ್ ವಿಮಾನವನ್ನು ತಯಾರಿಸಿದ ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್ ಕಂಪನಿಯು ಫ್ಯಾಂಟಮ್, ಕಲಿನನ್, ಘೋಸ್ಟ್, ವ್ರೆಥ್ ಹಾಗೂ ಡಾನ್ ಎಂಬ ಮಾದರಿಯ ಕಾರುಗಳನ್ನು ಮಾರಾಟ ಮಾಡುತ್ತದೆ. ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಮಾತ್ರವಲ್ಲದೇ, ರೋಲ್ಸ್ ರಾಯ್ಸ್ ವಿಮಾನಗಳ ಬಿಡಿಭಾಗಗಳನ್ನು ತಯಾರಿಸಲು ಸಹ ಹೆಸರುವಾಸಿಯಾಗಿದೆ.

ಸಿಂಗಲ್ ಸೀಟರ್ ಎಲೆಕ್ಟ್ರಿಕ್ ವಿಮಾನವನ್ನು ತಯಾರಿಸಿದ ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್ ಕಂಪನಿಯ ಎಂಜಿನ್‍‍ಗಳನ್ನು ಹಲವಾರು ಕಂಪನಿಯ ವಿಮಾನಗಳಲ್ಲಿ ಬಳಸಲಾಗಿದೆ. ಇದರ ಜೊತೆಗೆ ರೋಲ್ಸ್ ರಾಯ್ಸ್ ತನ್ನ ವಿಮಾನದ ಬಿಡಿಭಾಗಗಳ ತಯಾರಿಕೆಯ ಅನುಭವದ ಹಿನ್ನೆಲೆಯಲ್ಲಿ ಚಿಕ್ಕ ಗಾತ್ರದ ಎಲೆಕ್ಟ್ರಿಕ್ ವಿಮಾನವನ್ನು ಸಹ ತಯಾರಿಸಿದೆ.

ಸಿಂಗಲ್ ಸೀಟರ್ ಎಲೆಕ್ಟ್ರಿಕ್ ವಿಮಾನವನ್ನು ತಯಾರಿಸಿದ ರೋಲ್ಸ್ ರಾಯ್ಸ್

ಈ ಬಗ್ಗೆ ರೋಲ್ಸ್ ರಾಯ್ಸ್ ಒಂದು ಚಿತ್ರವನ್ನು ಬಿಡುಗಡೆಗೊಳಿಸುವ ಮೂಲಕ ಮಾಹಿತಿಯನ್ನು ಬಹಿರಂಗಪಡಿಸಿದೆ. ರೋಲ್ಸ್ ರಾಯ್ಸ್ ತಯಾರಿಸಿರುವ ಈ ವಿಮಾನವು ಒಂದೇ ಒಂದು ಸೀಟ್ ಅನ್ನು ಹೊಂದಿರಲಿದೆ.

ಸಿಂಗಲ್ ಸೀಟರ್ ಎಲೆಕ್ಟ್ರಿಕ್ ವಿಮಾನವನ್ನು ತಯಾರಿಸಿದ ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್ ಈ ಎಲೆಕ್ಟ್ರಿಕ್ ವಿಮಾನವನ್ನು ವೈಯಕ್ತಿಕ ಬಳಕೆಗಾಗಿ ತಯಾರಿಸಿದೆ. ಈ ವಿಮಾನ ತಯಾರಿಕೆಯ ಯೋಜನೆಯನ್ನು ಆಕ್ಸೆಲ್ ಎಂದು ಕರೆಯಲಾಗಿದೆ. ಈ ಯೋಜನೆಗೆ ಬ್ರಿಟಿಷ್ ಸರ್ಕಾರವು ಹಣಕಾಸಿನ ನೆರವನ್ನು ನೀಡುತ್ತಿದೆ.

ಸಿಂಗಲ್ ಸೀಟರ್ ಎಲೆಕ್ಟ್ರಿಕ್ ವಿಮಾನವನ್ನು ತಯಾರಿಸಿದ ರೋಲ್ಸ್ ರಾಯ್ಸ್

ರೋಲ್ಸ್ ರಾಯ್ಸ್ ಈ ಎಲೆಕ್ಟ್ರಿಕ್ ವಿಮಾನವನ್ನು ಎಲೆಕ್ಟ್ರಿಕ್ ವಿಮಾನಯಾನದಲ್ಲಿ ಅನುಭವವನ್ನು ಹೊಂದಿರುವ ಯಾಸಾ ಹಾಗೂ ಎಲೆಕ್ಟ್ರೊ ಫ್ಲೈಟ್ ಸೇರಿದಂತೆ ಹಲವಾರು ಕಂಪನಿಗಳ ಜೊತೆಗೆ ಸೇರಿ ಅಭಿವೃದ್ಧಿಪಡಿಸಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸಿಂಗಲ್ ಸೀಟರ್ ಎಲೆಕ್ಟ್ರಿಕ್ ವಿಮಾನವನ್ನು ತಯಾರಿಸಿದ ರೋಲ್ಸ್ ರಾಯ್ಸ್

ಈ ಎಲೆಕ್ಟ್ರಿಕ್ ವಿಮಾನದಲ್ಲಿ ಭಾರೀ ಪ್ರಮಾಣದ ಟೆಕ್ನಾಲಜಿಯನ್ನು ಬಳಸಲಾಗಿದ್ದು, ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯನ್ನು ಒಂದು ಬಾರಿಗೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ 320 ಕಿ.ಮೀ ದೂರದವರೆಗೂ ಚಲಿಸುತ್ತದೆ.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಸಿಂಗಲ್ ಸೀಟರ್ ಎಲೆಕ್ಟ್ರಿಕ್ ವಿಮಾನವನ್ನು ತಯಾರಿಸಿದ ರೋಲ್ಸ್ ರಾಯ್ಸ್

ಇದರ ಜೊತೆಗೆ ಈ ಎಲೆಕ್ಟ್ರಿಕ್ ವಿಮಾನವು 482 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ರೋಲ್ಸ್ ರಾಯ್ಸ್ ಕಂಪನಿಯು ಈ ಎಲೆಕ್ಟ್ರಿಕ್ ವಿಮಾನವನ್ನು ಹೆಚ್ಚಿನ ಸುರಕ್ಷತಾ ಫೀಚರ್‍‍ಗಳೊಂದಿಗೆ ಅಭಿವೃದ್ಧಿಪಡಿಸಿದೆ.

MOST READ: 500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಸಿಂಗಲ್ ಸೀಟರ್ ಎಲೆಕ್ಟ್ರಿಕ್ ವಿಮಾನವನ್ನು ತಯಾರಿಸಿದ ರೋಲ್ಸ್ ರಾಯ್ಸ್

ಈ ಎಲೆಕ್ಟ್ರಿಕ್ ವಿಮಾನವನ್ನು ರೋಲ್ಸ್ ರಾಯ್ಸ್ ಕಂಪನಿಯ ಎಂಜಿನಿಯರ್‍‍ಗಳು ಪರೀಕ್ಷಿಸುತ್ತಿದ್ದು, ಮುಂದಿನ ವರ್ಷದ ಮಾರ್ಚ್ ಹಾಗೂ ಮೇ ತಿಂಗಳ ಅವಧಿಯಲ್ಲಿ ಹಾರಾಟ ನಡೆಸಲಿದ್ದಾರೆ. ಏರ್‍‍ಬಸ್ ಹಾಗೂ ಬೋಯಿಂಗ್ ವಿಮಾನಯಾನ ಕಂಪನಿಗಳೂ ಸಹ ಎಲೆಕ್ಟ್ರಿಕ್ ವಿಮಾನಗಳನ್ನು ಅಭಿವೃದ್ಧಿಪಡಿಸುತ್ತಿವೆ.

Kannada
English summary
Rolls Royce Reveals one seater all electric aircraft - Read in Kannada
Story first published: Saturday, December 21, 2019, 13:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X