ಎಲ್ಲಾ ಕಂಪನಿಯ ಬೈಕುಗಳನ್ನು ಬಾಡಿಗೆಗೆ ನೀಡುತ್ತದೆ ಈ ಕಂಪನಿ

ಐಟಿ ಸಿಟಿ ಎಂದೇ ಖ್ಯಾತವಾಗಿರುವ ನಮ್ಮ ಬೆಂಗಳೂರು ಜನರನ್ನು ತನ್ನತ್ತ ಸೆಳೆಯುತ್ತದೆ. ದೇಶಾದ್ಯಂತವಿರುವವರು ಉದ್ಯೋಗ ಅರಸಿ ಬೆಂಗಳೂರಿಗೆ ಬರುತ್ತಾರೆ. ಬೆಂಗಳೂರು ಕೇವಲ ಐಟಿ ಕಂಪನಿಗಳನ್ನು ಮಾತ್ರವಲ್ಲದೇ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಸಹ ಹೊಂದಿದೆ.

ಎಲ್ಲಾ ಕಂಪನಿಯ ಬೈಕುಗಳನ್ನು ಬಾಡಿಗೆಗೆ ನೀಡುತ್ತದೆ ಈ ಕಂಪನಿ

ಈ ಕಾರಣಕ್ಕೆ ಬೆಂಗಳೂರು ಪ್ರವಾಸಿಗರನ್ನೂ ಸಹ ತನ್ನತ್ತ ಆಕರ್ಷಿಸುತ್ತದೆ. ಈ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಯೊಂದು ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಬಾಡಿಗೆ ವಾಹನ ಸೇವೆಯನ್ನು ಆರಂಭಿಸಿದೆ. ಕಂಪನಿಯು ವಿಮಾನ ನಿಲ್ದಾಣದಿಂದಲೇ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಸೇವೆಯನ್ನು ಆರಂಭಿಸಿದೆ.

ಎಲ್ಲಾ ಕಂಪನಿಯ ಬೈಕುಗಳನ್ನು ಬಾಡಿಗೆಗೆ ನೀಡುತ್ತದೆ ಈ ಕಂಪನಿ

ಈ ಸೇವೆಯಲ್ಲಿ ಹಾರ್ಲೆ ಡೇವಿಡ್ಸನ್ ಕಂಪನಿಯ ಬೈಕುಗಳಿಂದ ರಾಯಲ್ ಎನ್‌ಫೀಲ್ಡ್ ಬೈಕುಗಳವರೆಗೆ ಹಲವು ಕಂಪನಿಗಳ ಬೈಕುಗಳನ್ನು ಬಾಡಿಗೆಗೆ ನೀಡಲಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎಲ್ಲಾ ಕಂಪನಿಯ ಬೈಕುಗಳನ್ನು ಬಾಡಿಗೆಗೆ ನೀಡುತ್ತದೆ ಈ ಕಂಪನಿ

ಬಾಡಿಗೆ ಕಾರು ಸೇವಾ ಕಂಪನಿಯಾದ ರಾಯಲ್ ಬ್ರದರ್ಸ್ ಈ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದೆ. ಇದಕ್ಕಾಗಿ ಕಂಪನಿಯು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿರುವ ಪ್ರವೇಶ ದ್ವಾರ 11ರ ಬಳಿ ಕಚೇರಿಯನ್ನು ಸ್ಥಾಪಿಸಿದೆ.

ಎಲ್ಲಾ ಕಂಪನಿಯ ಬೈಕುಗಳನ್ನು ಬಾಡಿಗೆಗೆ ನೀಡುತ್ತದೆ ಈ ಕಂಪನಿ

ವಿಮಾನದಿಂದ ಹೊರಬರುವ ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ಕಂಪನಿಯ ಕಚೇರಿಯನ್ನು ನೇರವಾಗಿ ಪ್ರವೇಶದ್ವಾರದ ಎದುರಿನಲ್ಲಿಯೇ ಸ್ಥಾಪಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಎಲ್ಲಾ ಕಂಪನಿಯ ಬೈಕುಗಳನ್ನು ಬಾಡಿಗೆಗೆ ನೀಡುತ್ತದೆ ಈ ಕಂಪನಿ

ಈ ಸೇವೆಯನ್ನು ಪಡೆಯಬಯಸುವ ಗ್ರಾಹಕರು ನೇರವಾಗಿ ಇಲ್ಲಿಗೆ ಭೇಟಿ ನೀಡಿ ಇಷ್ಟವಾಗುವ ಬೈಕ್ ಅನ್ನು ಬುಕ್ಕಿಂಗ್ ಮಾಡಬಹುದು. ಈ ಬಾಡಿಗೆ ವಾಹನಗಳನ್ನು ರಾಯಲ್ ಬ್ರದರ್ಸ್ ಕಂಪನಿಯ ಅಧಿಕೃತ ವೆಬ್‌ಸೈಟ್ (www.royalbrothers.com) ಮೂಲಕವೂ ಬುಕ್ಕಿಂಗ್ ಮಾಡಬಹುದು.

ಎಲ್ಲಾ ಕಂಪನಿಯ ಬೈಕುಗಳನ್ನು ಬಾಡಿಗೆಗೆ ನೀಡುತ್ತದೆ ಈ ಕಂಪನಿ

ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿದ ಕೂಡಲೇ ಬೈಕ್ ಅನ್ನು ನೀಡಲಾಗುವುದು ಎಂದು ರಾಯಲ್ ಬ್ರದರ್ಸ್ ಕಂಪನಿ ತಿಳಿಸಿದೆ. ಈ ಕಂಪನಿಯು ವಿಮಾನ ನಿಲ್ದಾಣದಲ್ಲಿ ಗ್ಯಾರೇಜ್ ಅನ್ನು ಹೊಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಎಲ್ಲಾ ಕಂಪನಿಯ ಬೈಕುಗಳನ್ನು ಬಾಡಿಗೆಗೆ ನೀಡುತ್ತದೆ ಈ ಕಂಪನಿ

ಈ ಕಾರಣಕ್ಕೆ ಬಾಡಿಗೆ ವಾಹನಗಳನ್ನು ಅಲ್ಲಿಗೆ ಮರಳಿ ತರುವ ಅವಶ್ಯಕತೆಯಿದೆ. ಕೆಲವು ದಿನಗಳ ಅವಧಿಗೆ ಮಾತ್ರ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ಈ ಸೇವೆಯಿಂದ ಖಂಡಿತವಾಗಿಯೂ ಪ್ರಯೋಜನವಾಗುತ್ತದೆ ಎಂದು ಕಂಪನಿ ಹೇಳಿದೆ.

ಎಲ್ಲಾ ಕಂಪನಿಯ ಬೈಕುಗಳನ್ನು ಬಾಡಿಗೆಗೆ ನೀಡುತ್ತದೆ ಈ ಕಂಪನಿ

ಈ ಬಗ್ಗೆ ಮಾತನಾಡಿರುವ ರಾಯಲ್ ಬ್ರದರ್ಸ್ ಕಂಪನಿಯ ಸಿಇಒ ಚಂದ್ರ ಸೆಹಗರ್, ಗ್ರಾಹಕರಿಗೆ ಬೈಕುಗಳನ್ನು ಮಾತ್ರವಲ್ಲದೆ ಜಾಕೆಟ್, ಹೆಲ್ಮೆಟ್, ಹ್ಯಾಂಡ್ ಗ್ಲೌಸ್ ಸೇರಿದಂತೆ ಹಲವು ಸುರಕ್ಷಾ ಪರಿಕರಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಎಲ್ಲಾ ಕಂಪನಿಯ ಬೈಕುಗಳನ್ನು ಬಾಡಿಗೆಗೆ ನೀಡುತ್ತದೆ ಈ ಕಂಪನಿ

ಈ ಸೇವೆಯನ್ನು ಆರಂಭಿಸಿದ ಕೆಲವೇ ದಿನಗಳಲ್ಲಿ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ರಾಯಲ್ ಬ್ರದರ್ಸ್ ಕಂಪನಿ ಹೇಳಿದೆ. ಮುಂಬರುವ ದಿನಗಳಲ್ಲಿ ರಾಯಲ್ ಬ್ರದರ್ಸ್ ಸೇವೆಯು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Most Read Articles

Kannada
English summary
Royal Brothers company starts new service at Kempegowda international airport. Read in Kannada.
Story first published: Tuesday, March 9, 2021, 10:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X