ಸೈನಿಕರಿಂದ ಬಚಾವ್ ಆದ್ರು ಹಿಮಾಲಯಕ್ಕೆ ಹೋಗಿದ್ದ ಬೈಕ್ ರೈಡರ್ಸ್

ಅಧಿಕ ಪರ್ಫಾರ್ಮೆನ್ಸ್ ಹೊಂದಿರುವ ಬೈಕ್ ಬಹುತೇಕ ಮಾಲೀಕರು ಒಮ್ಮೆಯಾದರೂ ತಾವು ಲಡಾಕ್ ಮತ್ತು ಸ್ಪಿತಿಯಂತಹ ಪ್ರದೇಶಗಳಿಗೆ ತಮ್ಮ ಬೈಕಿನಲ್ಲಿ ಪ್ರಯಾಣಿಸಲು ಬಯಕೆಯನ್ನು ಹೊಂದಿರುತ್ತಾರೆ. ಹಾಗೆಯೇ ಕ್ಷಣಕ್ಷಣಕ್ಕೂ ವಾತಾವರಣ ಬದಲಾಗುವ ಅಂತಹ ಪ್ರದೇಶಗಳಿಗೆ ರೈಡಿಂಗ್ ಹೋಗುವ ಮುನ್ನ ಎಚ್ಚರಿಕೆ ವಹಿಸದೆ ಇದ್ದಲ್ಲಿ ಏನೆಲ್ಲಾ ಅನಾಹುತ ಆಗುತ್ತವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಸೈನಿಕರಿಂದ ಬಚಾವ್ ಆದ್ರು ಹಿಮಾಲಯಕ್ಕೆ ಹೋಗಿದ್ದ ಬೈಕ್ ರೈಡರ್ಸ್

ಹಿಮಾಚಲ ಪ್ರದೇಶದ ಲಹೌಲ್ ಮತ್ತು ಸ್ಪಿಟಿ ಪ್ರದೇಶಕ್ಕೆ ಹಿಮಾಲಯನ್ ರೈಡರ್ಸ್ ಗುಂಪಿನ ಭಾಗವಾಗಿ ಅನುರಾಗ್ ದೀಕ್ಷಿತ್ ಅವರು ಕೂಡಾ ತಂಡದೊಂದಿಗೆ ರೈಡಿಂಗ್ ಅನುಭವ ಪಡೆಯಲು ತೆರಳಿದರು. ಆದರೆ ಹೋದ ಘಳಿಗೆಯಲ್ಲಿ ಸತತವಾಗಿ ಮೂರು ದಿನಗಳ ಕಾಲ ಮಂಜು ಸುರಿದ ಪರಿಣಾಮ ಬೈಕ್ ರೈಡರ್ಸ್ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ.

ಸೈನಿಕರಿಂದ ಬಚಾವ್ ಆದ್ರು ಹಿಮಾಲಯಕ್ಕೆ ಹೋಗಿದ್ದ ಬೈಕ್ ರೈಡರ್ಸ್

ಅಂತಹ ವಾತಾವರಣದಲ್ಲಿ ಬೈಕ್ ಸವಾರಿ ಕಷ್ಟಕರವೆಂದು ಭಾವಿಸಿದ ಆ ತಂಡ ಅಲ್ಲಿಯೆ ನಿಂತು ಹೋದರು. ಸುಮಾರು 6 ರಿಂದ 7 ಅಡಿ ಮಂಜು ಸುತ್ತುವರಿದ ಕಾರಣ ಅಲ್ಲಿದ್ದ ದೀಕ್ಷಿತ್ ಮತ್ತು ಇನ್ನಿತರರು ಮೂರು ದಿನಗಳ ಕಾಲ ಅಲ್ಲಿಯೆ ಉಳಿದುಕೊಳ್ಳುವ ಪರಿಸ್ಥಿತಿ ಎದುರಾಯಿತು.

ಸೈನಿಕರಿಂದ ಬಚಾವ್ ಆದ್ರು ಹಿಮಾಲಯಕ್ಕೆ ಹೋಗಿದ್ದ ಬೈಕ್ ರೈಡರ್ಸ್

ಕೊನೆಗು ಸೂರ್ಯ ಮರಳಿದಾಗ ದೀಕ್ಷಿತ್ ಮತ್ತು ಇನ್ನಿತರೆ ಸವಾರರು ಅಲ್ಲಿಂದ ಹೊರಬರಲು ಪ್ರಯತ್ನಿಸಿದರು. ಆದ್ರೆ ಪ್ರಯತ್ನವು ವಿಫಲವಾದ ಎರಡು ದಿನಗಳ ನಂತರ ಭಾರತೀಯ ಸೇನಾಪಡೆಯ ಮುಖಾಂತರ ರಕ್ಷಿಸಲ್ಪಟ್ಟರು. ಆದಾಗ್ಯೂ ಆ ಘಳಿಗೆಯಲ್ಲಿ ಅವರು ಬಚಾವ್ ಆದ್ರೂ ಅವರ ರಾಯಲ್‍ ಎನ್‍ಫೀಲ್ಡ್ ಬೈಕ್‍‍ಗಳನ್ನು ಮಂಜಿನಿಂದ ಹೊರತೆರೆಯಲು ಕೊಂಚ ಸಮಯವು ಕಾಯಬೇಕಾಯ್ತು.

ಸೈನಿಕರಿಂದ ಬಚಾವ್ ಆದ್ರು ಹಿಮಾಲಯಕ್ಕೆ ಹೋಗಿದ್ದ ಬೈಕ್ ರೈಡರ್ಸ್

ದೀಕ್ಷಿತ್‍ರವರ ಈ ಪ್ರಯಾಣದ ಅನುಭವವು ಹಿಮಾಲಯಗಳಲ್ಲಿನ ಸಾಮನ್ಯವಾದ ಅಪಾಯಗಳನ್ನು ನಮಗೆ ತೋರಿಸುತ್ತದೆ. ಹವಾಮಾನದ ಪರವಾಗಿ ಇಂತಹ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮಳೆಯಾಗುವಿಕೆಯು ಮಂಜಿನ ಮಳೆಯಾಗಿ ಪರಿವರ್ತನೆಯಾಗಬಹುದು.

ಸೈನಿಕರಿಂದ ಬಚಾವ್ ಆದ್ರು ಹಿಮಾಲಯಕ್ಕೆ ಹೋಗಿದ್ದ ಬೈಕ್ ರೈಡರ್ಸ್

ನೆರವಿಗೆ ಬಂದ ಭಾರತೀಯ ಸೇನೆಯ ಕುರಿತಾಗಿ ಮತ್ತು ಘಟನೆಯ ಕುರಿತಾಗಿ ದೀಕ್ಷಿತ್ ಅವರು "ಭಯಾನಕ ಮಂಜಿನ ಮಳೆಯಲ್ಲಿ ಸತತವಾಗಿ 6 ದಿನಗಳ ಕಾಲ ನಾವು ಕಷ್ಟ ಪಟ್ಟಿದ್ದೇವೆ. 6 ರಿಂದ 7 ಅಡಿ ತುಂಬಿರುವ ಮಂಜಿನಲ್ಲಿ 5 ವರ್ಷದವರಿಂದ ಹಿಡಿದು ಮಧ್ಯವಯಸ್ಕರ ಹಾಗು ಎಕ್ಸ್-ಆರ್ಮಿ ಸಹೋದರನ ಜೊತೆಗೆ ಬಹುತೇಕ ಸಂದರ್ಭಗಳಲ್ಲಿ ನಾವು ಪರಸ್ಪರ ಸಹಾಯಕರಾಗಿ ಬದುಕಿದೆವು.

ಸೈನಿಕರಿಂದ ಬಚಾವ್ ಆದ್ರು ಹಿಮಾಲಯಕ್ಕೆ ಹೋಗಿದ್ದ ಬೈಕ್ ರೈಡರ್ಸ್

ಅದೃಷ್ಟವಶಾತ್ ಒಂದೇ ಊಟದಲ್ಲಿ ಅಲ್ಲಿದ್ದ ನಾವೆಲ್ಲರು ನಮ್ಮ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿತು. ನಂತದ ರಾತ್ರಿ ಸಮಯದಲ್ಲಿ ಆಲಿನ ವಾತಾವರಣ ಸುಮಾರು 16 ಡಿಗ್ರಿಗೆ ಇಳಿದಿರಬಹುದು. ಸತತ ಮೂರು ದಿನಗಳ ಭಾರೀ ಮಳೆ ಮತ್ತು ಗಾಳಿಗಳ ನಡುವೆ ನಾವು ನಡುಗಿದೆವು.

ಸೈನಿಕರಿಂದ ಬಚಾವ್ ಆದ್ರು ಹಿಮಾಲಯಕ್ಕೆ ಹೋಗಿದ್ದ ಬೈಕ್ ರೈಡರ್ಸ್

ಕೊನೆಗು 6 ದಿನಗಳ ನಂತರ ನಮ್ಮ ರಕ್ಷಣೆಗಾಗಿ ಲಹೌಲ್ ಮತ್ತು ಸ್ಪಿಟಿ ಪ್ರಾಂತ್ಯದಲ್ಲಿ ಭಾರತೀಯ ಸೇನೆಯ ಗುಂಪೊಂದು ನಮ್ಮನ್ನು ಅಲ್ಲಿಂದ ಪಾರು ಮಾಡಲು ಮುಂದಾಯಿತು. ಕೊನೆಗು ನಮ್ಮನ್ನು ಕಾಪಾಡಿದ ಇಂಡಿಯನ್ ಏರ್‍‍ಫೋರ್ಸ್‍‍ರವರಿಗೆ ನನ್ನ ನಮನಗಳು ಎಂದು ಹೇಳಿಕೊಂಡಿದ್ದಾರೆ.

ಸೈನಿಕರಿಂದ ಬಚಾವ್ ಆದ್ರು ಹಿಮಾಲಯಕ್ಕೆ ಹೋಗಿದ್ದ ಬೈಕ್ ರೈಡರ್ಸ್

ಆದ್ದರಿಂದ ಇಂತಹ ಪ್ರದೇಶಗಳಿಗೆ ಬೈಕ್ ರೈಡಿಂಗ್ ಮಾಡುವುದು, ಅತೀ ಕಷ್ಟಕರವಾದ ಪ್ರಯಾಣ. ಈ ನಿಟ್ಟಿನಲ್ಲಿ ನಿಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮುನ್ನವೇ ಅಂತಹ ವಾತಾವರಣಕ್ಕೆ ಸಿದ್ಧವಾಗಿದ್ದರೆ ಮಾತ್ರ ಮುನ್ನುಗ್ಗಿ. ಇಲ್ಲವಾದರೆ ಅಪಾಯ ಕಟ್ಟಿಟ್ಟಬುತ್ತಿ.

ಸೈನಿಕರಿಂದ ಬಚಾವ್ ಆದ್ರು ಹಿಮಾಲಯಕ್ಕೆ ಹೋಗಿದ್ದ ಬೈಕ್ ರೈಡರ್ಸ್

ವಾರಕ್ಕಿಂತ ಹೆಚ್ಚು ದಿನಗಳ ಕಾಲ ಪ್ರಯಾಣಿಸಬೇಕಾದ ಪ್ರದೇಶಗಳಿಗೆ ನೀವು ರೈಡಿಂಗ್ ಹೋಗಲು ಯೋಜನೆ ಇದ್ದರೆ, ಆಗ ಒಂದು ವಾರಕ್ಕೆ ಸರಿತೂಗಬಲ್ಲ ಅವಶ್ಯಕ ವಸ್ತುಗಳನ್ನು ಕೊಂಡೊಯ್ಯುವುದು ಉತ್ತಮ ಎಕೆಂದರೆ ಇಂತಹ ಅನಾಹುತಗಳು ಅಕಸ್ಮಾತಾಗಿ ಸಂಭವಿಸಬಹುದು.

ಬಹುತೇಕರು ಇಂತಹ ರೈಡಿಂಗ್‍‍ಗಳಿಗೆ ಗುಂಪಾಗಿ ತೆರಳಿದರು, ಕೆಲವರು ಒಂಟಿಯಾಗಿ ಪ್ರಯಾಣಿಸಲು ಇಚ್ಛಿಸುತ್ತಾರೆ. ಅದರೆ ಅದು ಕೆಲ ಸಂದರ್ಭಗಳಲ್ಲಿ ತಪ್ಪಾಗುತ್ತದೆ ಈ ನಿಟ್ಟಿನಲ್ಲಿ ನಿಮ್ಮ ಸಹಪ್ರಯಾಣಿಕರ ಜೊತೆ ಬೈಕ್ ಸವಾರಿ ಮಾಡುವುದು ಉತ್ತಮ.

Most Read Articles

Kannada
Read more on royal enfield indian army
English summary
Royal Enfield Himalayan riders gets stuck in snow: Indian Air Force rescues riders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X