ಶೋರುಂನಿಂದ ಟೆಸ್ಟ್ ಡ್ರೈವ್‍ಗೆಂದು ಹೋದವನು ವಾಪಸ್ ಬರಲೇ ಇಲ್ಲ..!

ಕಾರು ಅಥವಾ ಬೈಕ್ ಕಳ್ಳತನವಾಗುವುದು ಹೊಸತೇನಲ್ಲ ಇದನ್ನು ನಾವು ದಿನನಿಯ್ತ ಕೇಳುತ್ತಿರುತ್ತೇವೆ ಮತ್ತೆ ನಮಗೆ ಕೂಡಾ ಅನುಭವ ಆಗಿರುತ್ತೆ ಅಂತ ನೀವು ಅಂದುಕೊಳ್ಳಬಹುದು. ಆದರೆ ನಾವಿಂದು ಹೇಳಲು ಹೊರಟಿರುವ ವಿಚಾರ ಏನಪ್ಪ ಆಂದ್ರೆ ಅದು ಶೋರುಂನಿಂದಲೇ ಟೆಸ್ಟ್ ಡ್ರೈವ್‍ಗೆಂದು ತೆಗೆದುಕೊಂಡು ಹೋದ ಬೈಕ್ ಮತ್ತೆ ವಾಪಸ್ ಬಂದೇ ಇಲ್ಲವಂತೆ.

ಶೋರುಂನಿಂದ ಟೆಸ್ಟ್ ಡ್ರೈವ್‍ಗೆಂದು ಕೊಂಡು ಹೋದ ಬೈಕ್ ವಾಪಸ್ ಬಂದೇ ಇಲ್ಲ...

ಹೌದು, ಇಂಥ ನೈಜ ಘಟನೆ ಚೆನ್ನೈ ನಗರದಲ್ಲಿ ನಡೆದಿದ್ದು, ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್ ಅನ್ನು ಟೆಸ್ಟ್ ಡ್ರೈವ್‍ಗೆಂದು ತೆಗೆದುಕೊಂಡು ಹೋಗಿ ಮತ್ತೆ ವಾಪಸ ಬಂದೇ ಇಲ್ಲವಂತೆ. ಈ ಕುರಿತಾಗಿ ಶೋರುಂನವರು ಪೊಲೀಸರಿಗೆ ದೂರನ್ನು ನೀಡಲಾಗಿದ್ದು, ಅವರಿ ಖದೀಮನನ್ನು ಹುಡುಕುವ ಕಾರ್ಯದಲ್ಲಿದ್ದಾರೆ ಎನ್ನಲಾಗಿದೆ.

ಮೊದಲಿಗೆ ಈ ವ್ಯಕ್ತಿ ಚೆನ್ನೈ ನಗರದ ಜಪ್ಫರ್‍‍ಖಾನ್‍ಪೇಟ್ ಏರಿಯಾದಲ್ಲಿನ ರಾಯಲ್ ಎನ್‍ಫೀಲ್ಡ್ ಶೋರುಂ‍ಗೆ ಹೋಗಿ ಅಲ್ಲಿ ತನ್ನ ಗೆಳೆಯನೊಂದಿಗೆ ಬೈಕ್ ಕದಿಯಲು ಪ್ಲಾನ್ ಪ್ರಕಾರ ಹೋದರೆ, ಗೆಳೆಯ ಸಹಕರಿಸದ ಕಾರಣ ಪ್ಲಾನ್ ಫೇಲ್ ಆಯ್ತು. ಆದರೆ ಎರಡನೆಯ ಬಾರಿ ಅದೇ ಚೆನ್ನೈನ ಕ್ರೋಮ್‍ಪೇಟ್‍ ಏರಿಯಾದಲ್ಲಿನ ರಾಯಲ್ ಎನ್‍ಫೀಲ್ಡ್ ಶೋರುಂನಲ್ಲಿ ಒಬ್ಬನೇ ಹೋಗಿ ಬೈಕ್ ಕದ್ದಿದ್ದಾನೆ.

ಇವೆಲ್ಲಾ ದೃಶ್ಯಗಳು ರಾಯಲ್ ಎನ್‍ಫೀಲ್ಡ್ ಶೋರುಂನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕದೀಮ ಯಾವ ತರಹ ಶೋರುಂ ಸಿಬ್ಬಂದಿಗೆ ಚಳ್ಳೆಹಣ್ಣು ತಿಸಿದ್ದಾನೆ ಅಂತ ಈ ವಿಡಿಯೋ ನೋಡಿ ನಿಮಗೇ ತಿಳಿಯುತ್ತೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಶೋರುಂನಿಂದ ಟೆಸ್ಟ್ ಡ್ರೈವ್‍ಗೆಂದು ಕೊಂಡು ಹೋದ ಬೈಕ್ ವಾಪಸ್ ಬಂದೇ ಇಲ್ಲ...

ಟೆಸ್ಟ್ ಡ್ರೈವ್‍ಗೆಂದು ತೆಗೆದುಕೊಂಡು ಹೋಗುವ ಮೊದಲು ಶೋರುಂ ಸಿಬ್ಬಂದಿಯು ಖದೀಮನ ಹತ್ತಿರ ಬೇಕಾದ ಡಾಕ್ಯುಮೆಂಟ್‍ಗಳನ್ನು ಪಡೆದಿದ್ದಾರೊ ಇಲ್ಲವೋ ಎಂಬುದು ಇನ್ನು ಖಚಿತವಾಗಲಿಲ್ಲ. ಇದರಿಂದ ಶೋರುಂ ಸಿಬ್ಬಂದಿಯವರ ನಿರ್ಲಕ್ಷ್ಯವು ಕಾಣಿಸಿತ್ತದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಅಷ್ಟಕ್ಕು ಈ ಖದೀಮ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳನ್ನೆ ಕದಿಯಲು ಕಾರಣವಾದ್ರು ಏನು? ರಾಯಲ್ ಎನ್‍ಫೀಲ್ಡ್ ಸಂಸ್ಥೆಯಲ್ಲಿನ ಹಲವಾರು ಬೈಕ್‍ಗಳನ್ನು ಬಿಟ್ಟು ಆ ಬೈಕ್‍ಗಳನ್ನೆ ಯಾಕೆ ಕದಿಬೇಕು ಎಂಬುದು ನಿಮ್ಮ ಪ್ರಶ್ನೆ ಇರ್ಬೋದು. ಆ ಕಾರಣ ನಮಗು ಗೊತ್ತಿಲ್ಲ ಆದರೆ ರಾಯಲ್ ಎನ್‍‍ಫೀಲ್ಡ್ 650 ಟ್ವಿನ್ ಬೈಕ್‍ಗಳು ಹೆಚ್ಚು ಜನಪ್ರೀಯತೆಯನ್ನು ಪಡೆದುಕೊಳ್ಳುತ್ತಿದ್ದು, ಈ ಬೈಕ್‍ಗಳ ಬಗ್ಗೆ ತಿಳಿಯಲು ಮುಂದಕ್ಕೆ ಓದಿರಿ...

ಹೊಸದಾಗಿ ಬಿಡುಗಡೆಯಾದ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2.50 ಲಕ್ಷ ಮತ್ತು ಕಾಂಟಿನೆಂಟಲ್ ಜಿಟಿ 650 ರೂ. 2.65 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಕವಾಸಕಿ ನಿಂಜಾ 300 ಬೈಕ್‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಶೋರುಂನಿಂದ ಟೆಸ್ಟ್ ಡ್ರೈವ್‍ಗೆಂದು ಕೊಂಡು ಹೋದ ಬೈಕ್ ವಾಪಸ್ ಬಂದೇ ಇಲ್ಲ...

ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನಗಳ ಸರಣಿಯಲ್ಲಿ ಈ ಎರಡೂ ಬೈಕ್‍‍ಗಳು ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಎರಡೂ ಬೈಕ್‍ಗಳು ಆಧುನಿಕ ಕ್ಲಾಸಿಕ್ ನೋಟವನ್ನು ಪಡೆದುಕೊಂಡಿದೆ. ಕಾಂಟಿನೆಂಟಲ್ ಜಿಟಿ 650 ಕೆಫ್ ರೇಸರ್ ವಿನ್ಯಾಸವನ್ನು ಆಧರಿಸಿದರೆ ಇನ್ನು ಇಂಟರ್‍‍ಸೆಪ್ಟರ್ 650 ಸ್ಕ್ರ್ಯಾಂಬ್ಲರ್ ಶೈಲಿಯ ವಿನ್ಯಾಸವನ್ನು ಆಧರಿಸಿದೆ.

ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳು ಹೊಸ 649ಸಿಸಿ ಏರ್ ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಸಹಾಯದಿಂದ 47ಬಿಹೆಚ್‍ಪಿ ಮತ್ತು 52ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಶೋರುಂನಿಂದ ಟೆಸ್ಟ್ ಡ್ರೈವ್‍ಗೆಂದು ಕೊಂಡು ಹೋದ ಬೈಕ್ ವಾಪಸ್ ಬಂದೇ ಇಲ್ಲ...

ಎರಡು ಬೈಕ್‍ಗಳು 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್ ಮತ್ತು ಪಿರೆಲ್ಲಿ ಪ್ಯಾಂಥಂ ಸ್ಪೋರ್ಟ್‍‍ಕಾಂಪ್ ಟೈ‍‍ರ್‍‍ಗಳನ್ನು ಅಳವಡಿಸಲಾಗಿದೆ.

ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಲ್ಲಿ ಬೈಬ್ರೆ (ಬೈ ಬ್ರೆಂಬೊ) ಸಂಸ್ಥೆಯಿಂದ ಪಡೆದ 320ಎಂಎಂ ಮತ್ತು 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

Source: Polimer News

Most Read Articles

Kannada
English summary
Royal Enfield 650 stolen by thief acting as customer from showroom. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X