ಭಾರೀ ಪ್ರಮಾಣದ ದಂಡ ತೆತ್ತ ರಾಯಲ್ ಎನ್‍‍ಫೀಲ್ಡ್ ಬೈಕ್ ಸವಾರ

ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುವಂತಾಗಲು ಹಾಗೂ ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ ಕಳೆದ ವರ್ಷದ ಸೆಪ್ಟೆಂಬರ್‍‍ನಿಂದ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ಭಾರೀ ಪ್ರಮಾಣದ ದಂಡ ತೆತ್ತ ರಾಯಲ್ ಎನ್‍‍ಫೀಲ್ಡ್ ಬೈಕ್ ಸವಾರ

ಈ ಹೊಸ ಕಾಯ್ದೆಯನ್ವಯ ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತದೆ. ಈ ಮೊದಲು ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸಿದರೆ ರೂ.100 ದಂಡ ವಿಧಿಸಲಾಗುತ್ತಿತ್ತು. ಹೊಸ ಮೋಟಾರು ವಾಹನ ಕಾಯ್ದೆಯ ಪ್ರಕಾರ ಈಗ ರೂ.1,000 ದಂಡ ವಿಧಿಸಲಾಗುತ್ತದೆ.

ಭಾರೀ ಪ್ರಮಾಣದ ದಂಡ ತೆತ್ತ ರಾಯಲ್ ಎನ್‍‍ಫೀಲ್ಡ್ ಬೈಕ್ ಸವಾರ

ಇದೇ ರೀತಿ ನಿಯಮಗಳ ಉಲ್ಲಂಘನೆಗಾಗಿ ವಿಧಿಸಲಾಗುವ ದಂಡವನ್ನು ಹತ್ತು ಪಟ್ಟು ಹೆಚ್ಚಿಸಲಾಗಿದೆ. ದಂಡವನ್ನು ಹೆಚ್ಚಿಸಲಾಗಿದ್ದರೂ ಸಹ ವಾಹನ ಸವಾರರು ಇನ್ನೂ ನಿಯಮಗಳನ್ನು ಉಲ್ಲಂಘಿಸುತ್ತಲೇ ಇದ್ದಾರೆ. ಪೊಲೀಸರೂ ಸಹ ದುಬಾರಿ ದಂಡವನ್ನು ವಿಧಿಸುತ್ತಿದ್ದಾರೆ.

ಭಾರೀ ಪ್ರಮಾಣದ ದಂಡ ತೆತ್ತ ರಾಯಲ್ ಎನ್‍‍ಫೀಲ್ಡ್ ಬೈಕ್ ಸವಾರ

ಈಗ ರಾಯಲ್ ಎನ್‍‍ಫೀಲ್ಡ್ ಬೈಕ್ ಸವಾರನ ಸರದಿ. ಈ ಬೈಕ್ ಚಾಲನೆ ಮಾಡುತ್ತಿದ್ದ ಯುವಕನು ಹಲವು ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ರೂ.23,000 ದಂಡ ವಿಧಿಸಲಾಗಿದೆ. ಈ ಘಟನೆ ನಡೆದಿರುವುದು ಹರಿಯಾಣದಲ್ಲಿ.

ಭಾರೀ ಪ್ರಮಾಣದ ದಂಡ ತೆತ್ತ ರಾಯಲ್ ಎನ್‍‍ಫೀಲ್ಡ್ ಬೈಕ್ ಸವಾರ

ಪೊಲೀಸರು ವಿಧಿಸಿರುವ ಈ ಭಾರೀ ಪ್ರಮಾಣದ ದಂಡದಿಂದಾಗಿ ಬೈಕ್ ಸವಾರನು ಕಂಗಾಲಾಗಿದ್ದಾನೆ. ಈ ಯುವಕನು ತನ್ನ ರಾಯಲ್ ಎನ್‍‍ಫೀಲ್ಡ್ ಬೈಕಿನಲ್ಲಿ ಆಫ್ಟರ್ ಮಾರ್ಕೆಟ್ ಸೈಲೆನ್ಸರ್ ಅನ್ನು ಅಳವಡಿಸಿದ್ದೇ ಈ ಭಾರೀ ಪ್ರಮಾಣದ ದಂಡಕ್ಕೆ ಕಾರಣ.

ಭಾರೀ ಪ್ರಮಾಣದ ದಂಡ ತೆತ್ತ ರಾಯಲ್ ಎನ್‍‍ಫೀಲ್ಡ್ ಬೈಕ್ ಸವಾರ

ಹಲವು ರಾಜ್ಯಗಳ ಪೊಲೀಸರು ಈ ಹಿಂದೆಯೂ ಆಫ್ಟರ್ ಮಾರ್ಕೆಟ್ ಸೈಲೆನ್ಸರ್‍‍ಗಳನ್ನು ಬಳಸಿದ್ದ ಬೈಕ್‍‍ಗಳಿಗೆ ದಂಡವನ್ನು ವಿಧಿಸುವುದರ ಜೊತೆಗೆ ಸೈಲೆನ್ಸರ್‍‍ಗಳನ್ನು ನಾಶಪಡಿಸಿದ್ದರು. ಆದರೆ ಈಗ ದಂಡ ವಿಧಿಸಿರುವುದರ ಘಟನೆಯಲ್ಲಿ ಬೈಕ್ ಅನ್ನು ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಭಾರೀ ಪ್ರಮಾಣದ ದಂಡ ತೆತ್ತ ರಾಯಲ್ ಎನ್‍‍ಫೀಲ್ಡ್ ಬೈಕ್ ಸವಾರ

ಈ ಬೈಕ್‍‍ನಲ್ಲಿ ಕಿವಿ ತಮಟೆ ಹೊಡೆದು ಹೋಗುವಷ್ಟು ಶಬ್ದ ಮಾಡುವ ಸೈಲೆನ್ಸರ್ ಅನ್ನು ಅಳವಡಿಸಲಾಗಿತ್ತು. ಬೈಕ್ ಅನ್ನು ತಡೆದು ನಿಲ್ಲಿಸಿದ ಪೊಲೀಸರು ಬೈಕಿನ ದಾಖಲೆಗಳನ್ನು ನೀಡುವಂತೆ ಕೇಳಿದ್ದಾರೆ. ಆದರೆ ಯುವಕನು ಬೈಕಿಗೆ ಸಂಬಂಧಪಟ್ಟ ಯಾವುದೇ ದಾಖಲೆಗಳನ್ನು ನೀಡಿಲ್ಲ.

ಆಫ್ಟರ್ ಮಾರ್ಕೆಟ್ ಸೈಲೆನ್ಸರ್ ಅಳವಡಿಸಿಕೊಂಡಿದ್ದ ಕಾರಣಕ್ಕೆ ರೂ.23,000 ದಂಡ ವಿಧಿಸಿ, ಬೈಕಿನ ದಾಖಲೆಗಳು ಇಲ್ಲದ ಕಾರಣಕ್ಕೆ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಬೈಕಿಗೆ ಸಂಬಂಧಪಟ್ಟ ದಾಖಲೆಗಳನ್ನು ತೋರಿಸಿ ಬೈಕ್ ಅನ್ನು ವಾಪಸ್ ಪಡೆಯುವಂತೆ ಸೂಚಿಸಲಾಗಿದೆ.

ಭಾರೀ ಪ್ರಮಾಣದ ದಂಡ ತೆತ್ತ ರಾಯಲ್ ಎನ್‍‍ಫೀಲ್ಡ್ ಬೈಕ್ ಸವಾರ

ಸೈಲೆನ್ಸರ್ ಮಾತ್ರವಲ್ಲದೇ ಬೇರೆ ಯಾವುದೇ ಆಫ್ಟರ್ ಮಾರ್ಕೆಟ್ ಉಪಕರಣಗಳನ್ನು ಅಳವಡಿಸಿಕೊಳ್ಳುವುದು ಸಹ ಮೋಟಾರು ವಾಹನ ಕಾಯ್ದೆಯ ಪ್ರಕಾರ ಅಪರಾಧವಾಗಿದೆ. ಈ ಕಾರಣಕ್ಕೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತದೆ.

Most Read Articles

Kannada
English summary
Royal Enfield rider gets hefty fine for loud exhaust. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X