ಅಪಘಾತದಲ್ಲಿ ಗಾಯಾಳುಗಳ ನೆರವಿಗೆ ಧಾವಿಸುವವರಿಗೆ ಸಿಗಲಿದೆ ಭರ್ಜರಿ ಬಹುಮಾನ..!

ಅಪಘಾತಗಳ ಸಂದರ್ಭದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಮನಸ್ಸಿದ್ದರೂ ಕೋರ್ಟು, ಕಚೇರಿಗೆ ಅಲೆಯುವ ರಗಳೆ ಏಕೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಇನ್ನು ಮುಂದೆ ಮಾನವೀಯ ಕಾಳಜಿಯ ಕೆಲಸಗಳನ್ನು ಯಾವುದೇ ಭಯವಿಲ್ಲ ಮಾಡಬಹುದಾಗಿದ್ದು, ಮಾನವೀಯ ಕಾರ್ಯಕ್ಕಾಗಿ ಪುರಸ್ಕಾರದ ಜೊತೆ ಭರ್ಜರಿ ಬಹುಮಾನವು ಸಿಗಲಿದೆ.

ಅಪಘಾತದಲ್ಲಿ ಗಾಯಾಳುಗಳ ನೆರವಿಗೆ ಧಾವಿಸುವವರಿಗೆ ಸಿಗಲಿದೆ ಭರ್ಜರಿ ಬಹುಮಾನ..!

ಹೌದು, ಅಪಘಾತಗಳ ಸಂದರ್ಭದಲ್ಲಿ ಬಹುತೇಕ ಜನ ಗಾಯಾಳುಗಳ ನೆರವಿಗೆ ಬರಲು ಹಿಂದೇಟು ಹಾಕುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ಕಾರಣ, ಎಲ್ಲಿ ನಮ್ಮ ವಿರುದ್ಧ ಕೇಸ್ ದಾಖಲಾಗುತ್ತದೆಯೋ? ಎಲ್ಲಿ ಕೋರ್ಟ್, ಕಚೇರಿ ಎಂದು ತಿರುಗಾಡುವ ಪ್ರಸಂಗಗಳು ಎದುರಾಗುತ್ತವೆಯೋ ಎಂದು ಎಷ್ಟೋ ಜನ ಸಂತ್ರಸ್ತರ ನೆರವಿಗೆ ಹೋಗದೆ ಇರುವುದನ್ನು ಪ್ರತೀ ನಿತ್ಯ ನೋಡುತ್ತಿರುತ್ತೆವೆ. ಆದ್ರೆ ಇದೀಗ ಆ ಭಯ ಬೇಡವೇ ಬೇಡ.

ಅಪಘಾತದಲ್ಲಿ ಗಾಯಾಳುಗಳ ನೆರವಿಗೆ ಧಾವಿಸುವವರಿಗೆ ಸಿಗಲಿದೆ ಭರ್ಜರಿ ಬಹುಮಾನ..!

ಕಳೆದ ವರ್ಷವೇ ಸುಪ್ರೀಂಕೋರ್ಟ್ ಅಪಘಾತದಲ್ಲಿ ಸಂತ್ರಸ್ತರಿಗೆ ನೆರವಾಗುವ ಆಪತ್ಭಾಂದವರಿಗೆ ಬೆಂಬಲ ಸೂಚಿಸಿ ಹೊಸ ನಿಯಮಾವಳಿಗಳನ್ನು ಪ್ರಕಟಿಸಿದ್ದಲ್ಲದೇ, ಅಪಘಾತಗಳು ಸಂಭವಿಸಿದಾಗ ಯಾರು ಬೇಕಾದರು ಭಯವಿಲ್ಲದೆಯೇ ಸಂತ್ರಸ್ತರಿಗೆ ನೆರವಾಗಬಹುದು ಎಂದು ಹೇಳಿತ್ತು.

ಅಪಘಾತದಲ್ಲಿ ಗಾಯಾಳುಗಳ ನೆರವಿಗೆ ಧಾವಿಸುವವರಿಗೆ ಸಿಗಲಿದೆ ಭರ್ಜರಿ ಬಹುಮಾನ..!

ಅಂತೆಯೇ ಹೊಸ ನಿಯಮ ಜಾರಿ ಮಾಡಿದ್ದ ಕೇಂದ್ರ ಸರ್ಕಾರವು ಸಹ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅಪಘಾತದಲ್ಲಿ ಸಂತ್ರಸ್ತರಿಗೆ ನೆರವಾಗುವವರಿಗೆ ವಿಶೇಷ ಬಹುಮಾನ ಒಂದನ್ನು ಘೋಷಣೆ ಮಾಡಿತ್ತು.

ಅಪಘಾತದಲ್ಲಿ ಗಾಯಾಳುಗಳ ನೆರವಿಗೆ ಧಾವಿಸುವವರಿಗೆ ಸಿಗಲಿದೆ ಭರ್ಜರಿ ಬಹುಮಾನ..!

ಅಪಘಾತದಲ್ಲಿ ಗಾಯಾಳುಗಳ ನೆರವಿಗೆ ಧಾವಿಸಿ ಪ್ರಾಣ ಉಳಿಸಲು ನೆರವಾಗುವ ಆಪತ್ಭಾಂದವರಿಗೆ ಕೇಂದ್ರ ಸರ್ಕಾರವು "ಜೀವನ್ ರಕ್ಷಾ ಪದಕ" ಘೋಷಿಸಿದ್ದು, ಅಪಘಾತದಲ್ಲಿ ಸಿಲುಕಿ ಪ್ರಾಣಕಳೆದಕೊಳ್ಳುವವರ ಸಂಖ್ಯೆಯನ್ನು ತಗ್ಗಿಸವು ಇದು ನೆರವಾಗಲಿದೆ ಎನ್ನಲಾಗಿದೆ. ಇದೀಗ ಪುದಚೇರಿಯಲ್ಲೂ ಸಹ ಇಂತದ್ದೆ ಒಂದು ವಿಶೇಷ ಯೋಜನೆಯೊಂದನ್ನು ಘೋಷಣೆ ಮಾಡಿದ್ದು, ಅಪಘಾತದಲ್ಲಿ ಗಾಯಾಳುಗಳ ನೆರವಿಗೆ ಧಾವಿಸುವವರಿಗೆ ಹಣದ ರೂಪದಲ್ಲಿ ಪ್ರಶಸ್ತಿ ಘೋಷಿಸಿದೆ.

ಅಪಘಾತದಲ್ಲಿ ಗಾಯಾಳುಗಳ ನೆರವಿಗೆ ಧಾವಿಸುವವರಿಗೆ ಸಿಗಲಿದೆ ಭರ್ಜರಿ ಬಹುಮಾನ..!

2019-20ರ ಬಜೆಟ್ ಮಂಡನೆ ವೇಳೆ ಪುದಚೇರಿ ಸಿಎಂ ಎನ್ ಎ ನಾರಾಯಣ ಸ್ವಾಮಿ ಅವರು ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳ ಗಂಭೀರತೆಯನ್ನು ತಗ್ಗಿಸಲು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಅಪಘಾತಗಳಲ್ಲಿ ಗಾಯಾಳುಗಳ ನೆರವಿಗೆ ಧಾವಿಸುವವರಿಗೆ ನಗದು ಬಹುಮಾನ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.

ಅಪಘಾತದಲ್ಲಿ ಗಾಯಾಳುಗಳ ನೆರವಿಗೆ ಧಾವಿಸುವವರಿಗೆ ಸಿಗಲಿದೆ ಭರ್ಜರಿ ಬಹುಮಾನ..!

5 ಸಾವಿರ ನಗದು ಬಹುಮಾನ

ಅಪಘಾತದಲ್ಲಿ ಗಾಯಾಳುಗಳ ನೆರವಿಗೆ ಧಾವಿಸುವವರಿಗೆ ಪುದುಚೇರಿ ಸರ್ಕಾರವು ರೂ.5 ಸಾವಿರ ನಗದು ಬಹುಮಾನ ಘೋಷಿಸಿದ್ದು, ಅಪಘಾತಗಳ ಸಂದರ್ಭದಲ್ಲಿ ನಿಗದಿತ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪುವರರ ಸಂಖ್ಯೆಯನ್ನು ಇದು ಗಣನೀಯವಾಗಿ ತಗ್ಗಿಸಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಅಪಘಾತದಲ್ಲಿ ಗಾಯಾಳುಗಳ ನೆರವಿಗೆ ಧಾವಿಸುವವರಿಗೆ ಸಿಗಲಿದೆ ಭರ್ಜರಿ ಬಹುಮಾನ..!

ಈ ಹಿಂದೆ ಅಪಘಾತಗಳಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದು ಪ್ರಾಣಸಂಕಟದಿಂದ ಒದ್ದಾಡುತ್ತಿದ್ದರೂ ಕಾನೂನು ರಗಳೆಗಳಿಗೆ ಅಂಜಿ ಅಂತವರ ರಕ್ಷಣೆ ಹೋಗದಿರುವ ಪರಿಸ್ಥಿತಿಯಿತ್ತು. ಆದರೆ ಹೊಸ ಕಾನೂನುಗಳಿಂದಾಗಿ ಗಾಯಾಳುಗಳಿಗೆ ಯಾವುದೇ ಹಿಂಜರಿಕೆಯಿಲ್ಲದೇ ನೆರವಾಗಬಹುದು.

MOST READ: ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

ಅಪಘಾತದಲ್ಲಿ ಗಾಯಾಳುಗಳ ನೆರವಿಗೆ ಧಾವಿಸುವವರಿಗೆ ಸಿಗಲಿದೆ ಭರ್ಜರಿ ಬಹುಮಾನ..!

ಇನ್ನು ಈ ಹಿಂದೆ ಸುಪ್ರೀಂಕೋರ್ಟ್ ಹೊರಡಿಸಿರುವ ಹೊಸ ನಿಯಮಾವಳಿಯ ಪ್ರಕಾರ, ಅಪಘಾತ ಸಂಭವಿಸಿದ ನಂತರ ಸಂತ್ರಸ್ತನ ನೆರವಿಗೆ ಬರುವ ವ್ಯಕ್ತಿಯ ಹೆಸರು ಮತ್ತು ಸಂಪರ್ಕ ಕುರಿತ ಮಾಹಿತಿಯನ್ನು ಬಹಿರಂಗಗೊಳಿಸುವಂತೆ ಪೊಲೀಸರು ಬಲವಂತ ಮಾಡುವಂತಿಲ್ಲ ಎಂಬ ನಿಯಮವನ್ನು ಜಾರಿಗೆ ತಂದಿದೆ.

MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಅಪಘಾತದಲ್ಲಿ ಗಾಯಾಳುಗಳ ನೆರವಿಗೆ ಧಾವಿಸುವವರಿಗೆ ಸಿಗಲಿದೆ ಭರ್ಜರಿ ಬಹುಮಾನ..!

ಇದಲ್ಲದೇ ಒಂದು ವೇಳೆ ಸ್ವಯಂಪ್ರೇರಿತರಾಗಿ ಹೆಸರು ಮತ್ತು ಸಂಪರ್ಕ ಮಾಹಿತಿಯನ್ನು ಪೊಲೀಸರಿಗೆ ನೀಡಿದರೂ ಸಹ ಒಂದೇ ಹಂತದಲ್ಲಿ ವಿಚಾರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ನೆರವಿಗೆ ಬಂದ ವ್ಯಕ್ತಿಯನ್ನು ಪದೇಪದೇ ನ್ಯಾಯಾಲಯ, ಪೊಲೀಸ್ ಠಾಣೆಯೆಂದು ಅಲೆಸುವಂತಿಲ್ಲ ಎಂದು ಹೇಳಿದೆ. ಹೀಗಾಗಿ ಅಪಘಾತದಲ್ಲಿ ಗಾಯಾಳುಗಳಿಗೆ ನೀವು ಯಾವುದೇ ಭಯವಿಲ್ಲದೇ ನೆರವಿಗೆ ಧಾವಿಸಿ ಒಂದು ಜೀವವನ್ನು ಉಳಿಸಬಹುದಾಗಿದೆ.

Most Read Articles

Kannada
Read more on ಅಪಘಾತ accident
English summary
Rs.5,000 Reward For Good Samaritans Who Save Acident Victims. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X