ಕರ್ಕಶ ಸೈಲೆನ್ಸರ್‌ ಹಾಕಿದ್ರೆ 3 ತಿಂಗಳು ಕಾಲ ಆರ್‌ಸಿ ಸಸ್ಪೆಂಡ್‌ ಅಂತೆ..

ಯುವ ಬೈಕ್ ಸವಾರರು ಬೈಕ್ ಮಾಡಿಫೈ ಮೇಲೆ ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಇದು ಸಾರ್ವಜನಿಕ ಜೀವನಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಇದರಿಂದಾಗಿ ಬೈಕ್ ಮಾಡಿಫೈ ಬೈಕ್ ಸವಾರರ ವಿರುದ್ಧ ಸಂಚಾರಿ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

By Praveen Sannamani

ಇತ್ತೀಚೆಗೆ ನಗರ ಪ್ರದೇಶಗಳಲ್ಲಿನ ಯುವ ಬೈಕ್ ಸವಾರರು ಬೈಕ್ ಮಾಡಿಫೈ ಮೇಲೆ ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಇದು ಸಾರ್ವಜನಿಕ ಜೀವನಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಇದರಿಂದಾಗಿ ಕಾನೂನು ಬಾಹಿರ ಬೈಕ್ ಮಾಡಿಫೈ ಬೈಕ್ ಸವಾರರ ವಿರುದ್ಧ ಸಂಚಾರಿ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಕರ್ಕಶ ಸೈಲೆನ್ಸರ್‌ ಹಾಕಿದ್ರೆ 3 ತಿಂಗಳು ಕಾಲ ಆರ್‌ಸಿ ಸಸ್ಪೆಂಡ್‌ ಅಂತೆ..

ನಿಮಗೆಲ್ಲಾ ಗೊತ್ತಿರುವ ಹಾಗೆ ಈ ಹಿಂದೆ ಹಳ್ಳಿಗಳ ಕಡೆಗೆಲ್ಲಾ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಬಂದ್ರೆ ಸಾಕು 1 ಕಿ.ಮಿ ದೂರವಿರುವಾಗಲೇ ಬೈಕ್ ಬರುತ್ತಿದೆ ಎಂಬುದು ಗೊತ್ತಾಗುತ್ತಿತ್ತು. ಆದ್ರೆ ಕಾಲ ಬದಲಾದಂತೆ ಬೈಕ್‌ಗಳ ಶಬ್ದ ಮಾಲಿನ್ಯಕ್ಕೆ ಬ್ರೇಕ್ ಹಾಕಲಾಗುತ್ತಿದ್ದು, ಎಕ್ಸಾಸ್ಟ್ ವೈಶಿಷ್ಟ್ಯತೆಗಳಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ.

ಕರ್ಕಶ ಸೈಲೆನ್ಸರ್‌ ಹಾಕಿದ್ರೆ 3 ತಿಂಗಳು ಕಾಲ ಆರ್‌ಸಿ ಸಸ್ಪೆಂಡ್‌ ಅಂತೆ..

ಆದ್ರೆ ನಗರ ಪ್ರದೇಶಗಳಲ್ಲಿನ ಯುವ ಬೈಕ್ ಸವಾರರು ಬೈಕ್ ಮಾಡಿಫೈಗೆ ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬೈಕ್ ಮೂಲವನ್ನೆ ಬದಲಿಸುವುದು ಸಾಕಷ್ಟು ಟ್ರೆಂಡ್ ಆಗುತ್ತಿದೆ.

ಕರ್ಕಶ ಸೈಲೆನ್ಸರ್‌ ಹಾಕಿದ್ರೆ 3 ತಿಂಗಳು ಕಾಲ ಆರ್‌ಸಿ ಸಸ್ಪೆಂಡ್‌ ಅಂತೆ..

ಇದರಿಂದ ಬೈಕ್ ಸವಾರನಿಗೆ ಹೆಚ್ಚಿನ ಅನುಕೂಲಕತೆಗಳಿದ್ದರು ಅದು ಸಾರ್ವಜನಿಕ ಜೀವನದಲ್ಲಿ ಹೆಚ್ಚೆಚ್ಚು ಸಮಸ್ಯೆಗಳನ್ನು ಉದ್ಭವವಾಗುವಂತೆ ಮಾಡುತ್ತಿದೆ. ಜೊತೆಗೆ ಬೈಕ್‌ಗಳ ಎಕ್ಸಾಸ್ಟ್ ಬದಲಾವಣೆಯಿಂದಾಗಿ ಹೆಚ್ಚಿನ ಶಬ್ದ ಮಾಲಿನ್ಯಕ್ಕೆ ಎಡೆಮಾಡುಕೊಡುತ್ತಿದೆ.

ಕರ್ಕಶ ಸೈಲೆನ್ಸರ್‌ ಹಾಕಿದ್ರೆ 3 ತಿಂಗಳು ಕಾಲ ಆರ್‌ಸಿ ಸಸ್ಪೆಂಡ್‌ ಅಂತೆ..

ಹೀಗಾಗಿ ಸಾರ್ವಜನಿಕರು ದಾಖಲಿಸುತ್ತಿರುವ ಪ್ರಕರಣಗಳ ಆಧಾರದ ಮೇಲೆ ವಿಶೇಷ ಕಾರ್ಯಾಚರಣೆ ಆರಂಭಿಸಿರುವ ಕೇರಳ ಟ್ರಾಫಿಕ್ ಪೊಲೀಸರು ಬೆಂಗಳೂರು ಪೊಲೀಸರ ಮಾದರಿಯಲ್ಲೇ ಈಗಾಗಲೇ 500 ಕ್ಕೂ ಹೆಚ್ಚು ಕಾನೂನು ಬಾಹಿರ ಬೈಕ್ ಎಕ್ಸಾಸ್ಟ್ ಮಾದರಿಗಳನ್ನು ವಶಕ್ಕೆ ಪಡೆದು ಸೂಕ್ತ ಕ್ರಮ ಜರುಗಿಸಿದ್ದಾರೆ.

ಕರ್ಕಶ ಸೈಲೆನ್ಸರ್‌ ಹಾಕಿದ್ರೆ 3 ತಿಂಗಳು ಕಾಲ ಆರ್‌ಸಿ ಸಸ್ಪೆಂಡ್‌ ಅಂತೆ..

ಆದರೂ ಮಾಡಿಫೈ ಎಕ್ಸಾಸ್ಟ್ ಬೈಕ್ ಹಾವಳಿ ಹೆಚ್ಚಾಗುತ್ತಿದ್ದು, ಮಾಡಿಫೈ ಎಕ್ಸಾಸ್ಟ್ ಮಾಡಿಸುವ ಬೈಕ್ ಸವಾರರ ಆರ್‌ಸಿ (ರಿಜಿಸ್ಟ್ರೇಷನ್ ಸರ್ಟಿಫಿಕೇಟ್)ಯನ್ನು 3 ತಿಂಗಳು ಕಾಲ ರದ್ದುಗೊಳಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಕರ್ಕಶ ಸೈಲೆನ್ಸರ್‌ ಹಾಕಿದ್ರೆ 3 ತಿಂಗಳು ಕಾಲ ಆರ್‌ಸಿ ಸಸ್ಪೆಂಡ್‌ ಅಂತೆ..

ಈ ಬಗ್ಗೆ ಕೇರಳ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದ್ದು, ಕಾನೂನು ಬಾಹಿರ ಎಕ್ಸಾಸ್ಟ್ ಹೊಂದಿರುವ ಬೈಕ್ ಸವಾರರ ಆರ್‌ಸಿ ಅನ್ನು ಮೂರು ತಿಂಗಳು ಕಾಲ ರದ್ದು ಮಾಡಲಾಗುತ್ತಲ್ಲದೇ ಅಂತವರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕರ್ಕಶ ಸೈಲೆನ್ಸರ್‌ ಹಾಕಿದ್ರೆ 3 ತಿಂಗಳು ಕಾಲ ಆರ್‌ಸಿ ಸಸ್ಪೆಂಡ್‌ ಅಂತೆ..

ಇನ್ನು ದೆಹಲಿ ಮತ್ತು ಗುರುಗ್ರಾಮ್ ಪೊಲೀಸರು ಕೂಡಾ ಮಾಡಿಫೈ ಎಕ್ಸಾಸ್ಟ್ ಮಾಡುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿದ್ದು, ಬೆಂಗಳೂರು ಮತ್ತು ಕೇರಳ ಪೊಲೀಸಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಎಕ್ಸಾಸ್ಟ್ ಮಾಡಿಫೈ ಮಾಡುವವರನ್ನು ಜೈಲಿಗೆ ಅಟ್ಟುತ್ತಿದ್ದಾರೆ.

ಕರ್ಕಶ ಸೈಲೆನ್ಸರ್‌ ಹಾಕಿದ್ರೆ 3 ತಿಂಗಳು ಕಾಲ ಆರ್‌ಸಿ ಸಸ್ಪೆಂಡ್‌ ಅಂತೆ..

ಒಟ್ಟಿನಲ್ಲಿ ಕಾನೂನು ಬಾಹಿರವಾಗಿ ಮಾಡಿಫೈ ಮಾಡಿಸುವುದಲ್ಲದೇ ಸಾರ್ವಜನಿಕರಿಗೂ ಕಿರಿಕಿರಿ ಉಂಟು ಮಾಡುತ್ತಿರುವ ಮಾಡಿಫೈ ಬೈಕ್ ಪ್ರಿಯರಿಗೆ ಚಳಿ ಬಿಡಿಸುತ್ತಿರುವ ಪೊಲೀಸರ ಕ್ರಮ ಸ್ವಾಗತಾರ್ಹವಾಗಿದ್ದು, ಇದರ ಜೊತೆಗೆ ಕಾನೂನು ಬಾಹಿರವಾಗಿ ಮಾಡಿಫೈ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಕರ್ಕಶ ಸೈಲೆನ್ಸರ್‌ ಹಾಕಿದ್ರೆ 3 ತಿಂಗಳು ಕಾಲ ಆರ್‌ಸಿ ಸಸ್ಪೆಂಡ್‌ ಅಂತೆ..

ಒಂದು ವೇಳೆ ನೀವು ಕೂಡಾ ರಾಯಲ್ ಬೈಕ್ ಅಥವಾ ಇತರೆ ಸೂಪರ್ ಬೈಕ್‌ಗಳನ್ನು ಹೊಂದಿದ್ದರೆ ಕಾನೂನು ಬಾಹಿರ ಬೈಕ್ ಮಾಡಿಫೈ ಮಾಡಿಸುವ ಮತ್ತೊಮ್ಮೆ ಯೋಚಿಸಿ. ಇಲ್ಲವಾದ್ರೆ ಭಾರೀ ಪ್ರಮಾಣದ ದಂಡ ಬೀಳುವುದಲ್ಲದೇ ನಿಮ್ಮ ಚಾಲನಾ ಪರವಾನಿಗೆ ಸೀಸ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ಕರ್ಕಶ ಸೈಲೆನ್ಸರ್‌ ಹಾಕಿದ್ರೆ 3 ತಿಂಗಳು ಕಾಲ ಆರ್‌ಸಿ ಸಸ್ಪೆಂಡ್‌ ಅಂತೆ..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ? ಇದು ನಿಜವೇ?

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

Most Read Articles

Kannada
Read more on traffic rules
English summary
RTO To Suspend The Registration Certificate Of Bikes With Modified Silencers.
Story first published: Monday, May 7, 2018, 13:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X