ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಸಚಿನ್'ಗೆ ಭರಪೂರ ಹುಟ್ಟುಹಬ್ಬದ ಶುಭಾಶಯಗಳು ಹರಿದು ಬರುತ್ತಿವೆ.ಬರ್ತ್ ಡೇ ಸ್ಪೆಷಲ್ ಹಿನ್ನೆಲೆ ಡ್ರೈವ್ ಸ್ಪಾರ್ಕ್ ತಂಡವು ಸಹ ಸಚಿನ್ ಇಷ್ಟದ ಕಾರ್ ಕಲೆಕ್ಷನ್ ಕುರಿತು ಲೇಖನ ಪ್ರಕಟಿಸಿದೆ.

By Manoj B.k

ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇಂದು 47ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟ್ ದೇವರಿಗೆ ಭರಪೂರ ಹುಟ್ಟುಹಬ್ಬದ ಶುಭಾಶಯಗಳು ಹರಿದು ಬರುತ್ತಿವೆ. ಬರ್ತ್ ಡೇ ಸ್ಪೆಷಲ್ ಹಿನ್ನೆಲೆ ಡ್ರೈವ್‌ಸ್ಪಾರ್ಕ್ ತಂಡವು ಸಹ ಸಚಿನ್ ಅವರ ಇಷ್ಟದ ಕಾರುಗಳ ಕಲೆಕ್ಷನ್ ಕುರಿತಾದ ವಿಶೇಷ ಲೇಖನವನ್ನು ಪ್ರಕಟಿಸುತ್ತಿದೆ.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಕ್ರಿಕೆಟ್‌ನಿಂದ ನಿವೃತ್ತಿ ಬಳಿಕವೂ ಒಂದಲ್ಲ ಒಂದು ವಿಶೇಷ ಕಾರ್ಯ ಚಟುವಟಿಕೆಗಳಲ್ಲಿ ಸದಾ ನಿರತರಾಗಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಕೇವಲ ಬ್ರಾಂಡ್ ಅಂಬಾಸಿಡರ್ ಆಗಿ ಅಷ್ಟೇ ಅಲ್ಲದೇ ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ತಮ್ಮ ಜನಪ್ರಿಯತೆಯಿಂದಲೇ ಹತ್ತಾರು ಬಗೆಯ ವಿಲಾಸಿ ಕಾರ್ ಕಲೆಕ್ಷನ್ ಹೊಂದಿರುವ ಸಚಿನ್ ತೆಂಡೂಲ್ಕರ್, ವಿಶ್ವದ ಇತರೆ ಕ್ರಿಕೆಟ್ ದಿಗ್ಗಜರಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ ಎಂದ್ರೆ ನೀವು ನಂಬಲೇಬೇಕು.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಅಂದರೆ ಕ್ರಿಕೆಟ್ ದೇವರು ಅನ್ನೋ ಮಾತು ಅತಿಶಯೋಕ್ತಿಯಲ್ಲ . ಹಾಗೇನೇ ಅವರು ವೇಗದ ಮತ್ತು ವಿಲಾಸಿ ಕಾರುಗಳ ಶೋಕೀವಾಲಾ ಎಂದರೂ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಅವರಿಗೆ ಐಷಾರಾಮಿ ಕಾರುಗಳನ್ನು ಓಡಿಸುವುದೇ ಒಂದು ಕ್ರೇಜ್. ಹಾಗಾದ್ರೆ ಸಚಿನ್ ಅವರ ಬಳಿ ಯಾವೆಲ್ಲಾ ಕಾರಿಗಳಿದ್ದವೂ ಇಗ ಯಾವೆಲ್ಲಾ ಕಾರುಗಳ ಸಂಗ್ರಹ ಇದೆ ನೋಡಣ ಬನ್ನಿ..

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಮಾರುತಿ 800

ಅತಿ ದುಬಾರಿ ಬೆಲೆಯ ಕಾರು ಕಲೆಕ್ಷನ್ ಹೊಂದಿರುವ ಸಚಿನ್ ಅವರಿಗೆ ಎಂಟ್ರಿ ಲೆವಲ್ ಮಾರುತಿ 800 ಮೇಲೂ ಎಲ್ಲಿಲ್ಲ ವ್ಯಾಮೊಹ. ಆದ್ರೆ ಸಚಿನ್ ನೆಚ್ಚಿನ ಮಾರುತಿ 800 ಕಾರು ಸದ್ಯಕ್ಕೆ ಅವರ ಕಾರ್ ಕಲೆಕ್ಷನ್‌ನಲ್ಲಿಲ್ಲ ಎಂಬುವುದೇ ಬೇಸರದ ಸಂಗತಿ.

MOST READ: ಧೋನಿ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ಹೊಸ ಐಷಾರಾಮಿ ಕಾರಿನ ಸ್ಪೆಷಲ್ ಏನು?

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಫೆರಾರಿ 360 ಮೊಡೆನಾ

ಫೆರಾರಿ 360 ಎಂ ಎಂಬುದಾಗಿಯೂ ಕರೆಯಲಾಗುತ್ತಿದ್ದ ಪ್ರಸ್ತುತ ಐಕಾನಿಕ್ ಕಾರನ್ನು ಸ್ವತ: ಕಾರ್ ರೇಸ್ ದಿಗ್ಗಜ ಮೈಕಲ್ ಶುಮೇಕರ್ ಅವರು ಸಚಿನ್ ಗೆ ನೀಡಿದ್ದರು. ಸುದ್ದಿ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಈ ಕಾರನ್ನು ಬಳಿಕ ಸಚಿನ್ ಅವರು ತದನಂತರದ ದಿನಗಳಲ್ಲಿ ಮಾರಾಟ ಮಾಡಿದ್ದರು.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ನಿಸ್ಸಾನ್ ಜಿಟಿಆರ್

ಬಿಎಂಡಬ್ಲ್ಯು ಹೊರತಾಗಿ ಸಚಿನ್ ತೆಂಡೂಲ್ಕರ್ ಗ್ಯಾರೇಜ್ ನಲ್ಲಿ ಇತರ ಹಲವಾರು ಐಕಾನಿಕ್ ಕಾರುಗಳು ನಿಮಗೆ ಕಾಣಸಿಗುವುದು ಕಾಮನ್, ಅವುಗಳೆನ್ನೆಲ್ಲ ಇಲ್ಲಿ ಪಟ್ಟಿ ಮಾಡುವುದು ಕಷ್ಟಸಾಧ್ಯವಾಗಿರುವುದರಿಂದ ಕೆಲವು ಐಕಾನಿಕ್ ಕಾರುಗಳ ಬಗ್ಗೆ ನಾವಿಲ್ಲಿ ಚರ್ಚಿಸಲಿದ್ದೇವೆ. ಇವುಗಳಲ್ಲಿ ಮೊದಲ ಸ್ಥಾನ ನಿಸ್ಸಾನ್ ಜಿಟಿಆರ್ ಗೆ ಸಲ್ಲುತ್ತದೆ. ಇದರಲ್ಲಿರುವ ವಿ6 ಟ್ವಿನ್ ಟರ್ಬೊ ಎಂಜಿನ್ ಬರೋಬ್ಬರಿ 545 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದು, 2.9 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಆದ್ರೆ ಇದೀಗ ಈ ಕಾರು ಕೂಡಾ ಸಚಿನ್ ಅವರು ಮಾರಾಟ ಮಾಡಿದ್ದಾರೆ.

MOST READ: ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ದುಬಾರಿ ಸೂಪರ್ ಕಾರ್ ಸೇರ್ಪಡೆ

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಬಿಎಂಡಬ್ಲ್ಯು ಎಕ್ಸ್5ಎಂ

ಬಿಎಂಡಬ್ಲ್ಯು ಶಕ್ತಿಶಾಲಿ ಎಂ ವಿಭಾಗದ ಕ್ರೀಡಾ ಬಳಕೆಯ ಕಾರುಗಳನ್ನು ಭಾರತದಲ್ಲಿ ಕೆಲವೇ ಕೆಲವು ಗಣ್ಯ ವ್ಯಕ್ತಿಗಳು ಹೊಂದಿದ್ದಾರೆ. ಅವರಲ್ಲಿ ಸಚಿನ್ ಕೂಡಾ ಒಬ್ಬರು. ಎಕ್ಸ್ ಶೋರಂ ಪ್ರಕಾರ ಬರೋಬ್ಬರಿ 2 ಕೋಟಿ ಬೆಲೆ ಬಾಳುವ ಬಿಎಂಡಬ್ಲ್ಯು ಎಕ್ಸ್5ಎಂ ಕಾರುಗಳು 3.0 ಲೀಟರ್ 6 ಸಿಲಿಂಡರ್ ಟರ್ಬೊ ಚಾರ್ಜ್ಡ್ ಎಂಜಿನ್ 740 ಎನ್ ಎಂ ತಿರುಗುಬಲದಲ್ಲಿ 381 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಕೇವಲ 5.3 ಸೆಕಂಡುಗಳಲ್ಲೇ ಗಂಟೆಗೆ ಗರಿಷ್ಠ 0-100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಬಿಎಂಡಬ್ಲ್ಯು ಎಂ5

ಸಚಿನ್ ತೆಂಡೂಲ್ಕರ್ ಬಿಎಂಡಬ್ಲ್ಯು ಪ್ರೀತಿ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಅವರು '30 ಜಾಹ್ರೆ ಎಂ5' ವಿಶೇಷ ಆವೃತ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ನಿಮ್ಮ ಮಾಹಿತಿಗಾಗಿ, ಬಿಎಂಡಬ್ಲ್ಯು ಎಂ5 ಶ್ರೇಣಿಯ 30 ವರ್ಷಾಚರಣೆಯನ್ನು ಆಚರಿಸಿಕೊಳ್ಳಲು ಸೀಮಿತ 300ರಷ್ಟು ವಿಶೇಷ ಆವೃತ್ತಿಯನ್ನು ನಿರ್ಮಿಸಲಾಗಿತ್ತು. ಭಾರತದಲ್ಲಿ ಈ ಕಾರನ್ನು ಹೊಂದಿರುವ ಏಕ ಮಾತ್ರ ವ್ಯಕ್ತಿ ಸಚಿನ್ ಅವರಾಗಿದ್ದಾರೆ. ಇದರ ವಿ8 ಟ್ವಿನ್ ಟರ್ಬೊ ಚಾರ್ಜ್ಡ್ ಎಂಜಿನ್ 700 ಎನ್ ಎಂ ತಿರುಗುಬಲದಲ್ಲಿ 600 ಅಶ್ವಶಕ್ತಿ ಉತ್ಪಾದಿಸುತ್ತಿದ್ದು, ಕೇವಲ 3.9 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

MOST READ: ಮುಖೇಶ್ ಅಂಬಾನಿ ಬಳಿಯಿರುವ ದುಬಾರಿ ಕಾರುಗಳಿವು..!

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಬಿಎಂಡಬ್ಲ್ಯು ಎಂ6 ಗ್ರ್ಯಾನ್ ಕೂಪೆ

ಕ್ರಿಕೆಟ್ ಬಳಿಕದ ಬಿಡುವಿಲ್ಲದ ನಿವೃತ್ತಿ ಜೀವನ ನಡೆಸುತ್ತಿರುವ ಸಚಿನ್ ತೆಂಡೂಲ್ಕರ್, ಬಿಎಂಡಬ್ಲ್ಯು ಅತಿ ವಿಶಿಷ್ಟ ಫ್ರಾಜನ್ ಸಿಲ್ವರ್ ಬಣ್ಣದ ಎಂ6 ಗ್ರ್ಯಾನ್ ಕೂಪೆ ಕಾರನ್ನು ಹೊಂದಿರುತ್ತಾರೆ. ಇದರಲ್ಲಿರುವ ಶಕ್ತಿಶಾಲಿ ವಿ8 ಎಂಜಿನ್ 680 ಎನ್ ಎಂ ತಿರುಗುಬಲದಲ್ಲಿ 560 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಪ್ರಸ್ತುತ ಕಾರು ದೇಶದಲ್ಲಿ 1.85 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಬಿಎಂಡಬ್ಲ್ಯು ಸಚಿನ್ ಎಡಿಷನ್

ಸ್ವತ: ತಮ್ಮ ದಿವ್ಯ ಹಸ್ತಗಳಿಂದ ಬಿಎಂಡಬ್ಲ್ಯು 530ಡಿ ವಿಶೇಷ ಆವೃತ್ತಿಯನ್ನು ನಿರ್ಮಿಸಲು ಸಚಿನ್ ತೆಂಡೂಲ್ಕರ್ ನೆರವಾಗಿದ್ದರು. ಈ ಮೂಲಕ ಚೆನ್ನೈನ ಘಟಕದಲ್ಲಿ ಶೇಕಡಾ 50ರಷ್ಟು ಸ್ಥಳೀಯವಾಗಿ ಕಾರು ಜೋಡಣೆ ಮಾಡುವ ತನ್ನ ಬದ್ಧತೆಯನ್ನು ಬಿಎಂಡಬ್ಲ್ಯು ಪ್ರದರ್ಶಿಸಿತ್ತು. ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದ ಸಚಿನ್ "ಇದು ನಿಜಕ್ಕೂ ವಿಶಿಷ್ಟ ಹಾಗೂ ಅವಿಸ್ಮರಣೀಯ" ಎಂದಿದ್ದರು.

MOST READ: ಸಚಿನ್ ತಂಡೊಲ್ಕರ್ ವೀರುಗೆ ದುಬಾರಿ ಬೆಲೆಯ ಗಿಫ್ಟ್ ಕೊಟ್ಟಿದ್ದೇಕೆ?

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಬಿಎಂಡಬ್ಲ್ಯು ಐ8

ಪ್ರಶಸ್ತಿ ವಿಜೇತ ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರು ಸಚಿನ್ ತೆಂಡೂಲ್ಕರ್ ಸಾನಿಧ್ಯದಲ್ಲಿ ಭಾರತ ಪ್ರವೇಶ ಪಡೆದಿತ್ತು ಎಂಬುದನ್ನು ನಾವು ಯಾರು ಮರೆಯಬಾರದು. ಇದು ದೇಶದಲ್ಲಿರುವ ಅತ್ಯುತ್ತಮ ಕಾರುಗಳಲ್ಲಿ ಒಂದಾಗಿದೆ. ಇದು 1.5 ಲೀಟರ್ 3 ಸಿಲಿಂಡರ್ ಜೊತೆಗೆ ಪ್ರತ್ಯೇಕ ಎಲೆಕ್ಟ್ರಿಕ್ ಮೋಟಾರನ್ನು ಪಡೆದಿದ್ದು, 570 ಎನ್ ಎಂ ತಿರುಗುಬಲದಲ್ಲಿ 357 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಪ್ರಸ್ತುತ ಕಾರು ದೇಶದಲ್ಲಿ 2.65 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಮರ್ಸಿಡಿಸ್ ಬೆಂಝ್ ಸಿ36 ಎಎಂಜಿ

ಸಚಿನ್ ಹೊಂದಿರುವ ಹಳೆಯ ಕಾರುಗಳಲ್ಲಿ ಮರ್ಸಿಡಿಸ್ ಬೆಂಝ್ ಸಿ36 ಎಎಂಜಿ ಒಂದಾಗಿತ್ತು. ಆದರೆ ಈಗ ಸಚಿನ್ ಬಳಿಯಲ್ಲಿಲ್ಲ. ಇದರ 3.6 ಲೀಟರ್ 6 ಸಿಲಿಂಡರ್ ಎಂಜಿನ್ 280 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ಸಚಿನ್ ಬರ್ತ್ ಡೇ ಸ್ಪೆಷಲ್: ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ಕೇವಲ ಇವಷ್ಟೇ ಅಲ್ಲದೇ ಸಚಿನ್ ತೆಂಡೂಲ್ಕರ್ ಇನ್ನು ಹಲವಾರು ಕಾರುಗಳ ಸಂಗ್ರಹವೇ ಇದೆ. ಅವುಗಳಲ್ಲಿ ಆಡಿ ಮತ್ತು ಪೋರ್ಷೆ ಸಹ ಇದ್ದು, ಬಹುತೇಕ ಕಾರುಗಳು ಉಡುಗೊರೆಯಾಗಿ ಸಿಕ್ಕಿವೆ ಎನ್ನಬಹುದು.

Most Read Articles

Kannada
English summary
Sachin Tendulkar’s wicked car collection. Read more in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X