ಐಷಾರಾಮಿ ಬಿಎಂಡಬ್ಲ್ಯು ಕೆ 1600 ಜಿಟಿ ಬೈಕಿನಲ್ಲಿ ಕಾಣಿಸಿಕೊಂಡ ಸದ್ಗುರು

ಇಶಾ ಫೌಂಡೇಶನ್ ಮೂಲಕ ಸದ್ಗುರು ಜಗ್ಗಿ ವಾಸುದೇವ್ ಅವರು ಹಲವಾರು ವರ್ಷಗಳಿಂದ ನಾನಾ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇವರು ಆಧ್ಯಾತ್ಮ, ಯೋಗ, ನದಿಗಳ ಸಂರಕ್ಷಣೆ, ಶಿಕ್ಷಣ, ಅರಣ್ಯ ರಕ್ಷಣೆ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಐಷಾರಾಮಿ ಬಿಎಂಡಬ್ಲ್ಯು ಕೆ 1600 ಜಿಟಿ ಬೈಕಿನಲ್ಲಿ ಕಾಣಿಸಿಕೊಂಡ ಸದ್ಗುರು

ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಬ್ರೆಕ್ ಅಂದರೆ ಅವರಿಗೆ ಪ್ರೀತಿ ಹೆಚ್ಚು. ಸದ್ಗುರು ಹಲವಾರು ಬಾರಿ ದುಬಾರಿ ಅಡ್ವೆಂಚರ್ ಬೈಕಿಗಳನ್ನು ರೈಡ್ ಮಾಡುವಾಗ ಕಾಣಿಸಿಕೊಂಡಿದ್ದಾರೆ. ಇಶಾ ಫೌಂಡೇಶನ್‌ನ ಸಂಸ್ಥಾಪಕರಾಗಿರುವ ಸದ್ಗುರುರವರು ಕಾವೇರಿ ಕಾಲಿಂಗ್ ಅಭಿಯಾನವನ್ನು ಕಳೆದ ವರ್ಷ ಪ್ರಾರಂಭಿಸಿದ್ದರು. ಇದರ ಭಾಗವಾಗಿ ನಡೆದ ಬೈಕ್ ರೈಲಿಯಲ್ಲಿ ಕಸ್ಟಮೈಸ್ ಮಾಡಿದ ಹೋಂಡಾ ವಿಎಫ್‌ಆರ್ ಎಕ್ಸ್ ಬೈಕ್ ಅನ್ನು ರೈಡ್ ಮಾಡಿದ್ದರು.

ಐಷಾರಾಮಿ ಬಿಎಂಡಬ್ಲ್ಯು ಕೆ 1600 ಜಿಟಿ ಬೈಕಿನಲ್ಲಿ ಕಾಣಿಸಿಕೊಂಡ ಸದ್ಗುರು

ಇನ್ನು ಇತ್ತೀಚೆಗೆ ಜನಪ್ರಿಯ ಹಾಲಿವುಡ್ ನಟ ವಿಲ್ ಸ್ಮಿತ್ ಅವರನ್ನು ಭೇಟಿಯಾಗಲು ಸದ್ಗುರು ಈಗ ದೈತ್ಯಾಕಾರದ ಬಿಎಂಡಬ್ಲ್ಯು ಕೆ 1600 ಜಿಟಿ ಬೈಕಿನಲ್ಲಿ ತೆರಳಿದ್ದಾರೆ. ಸದ್ಯ ಸದ್ಗುರು ಅವರು ಅಮೆರಿಕಾದಲಿದ್ದಾರೆ. ಅಲ್ಲಿ ಅವರು ‘ಎಕ್ಸ್‌ಪ್ಲೋರಿಂಗ್ ಸ್ಪಿರಿಚುವಲ್ ಅಮೇರಿಕಾ ಡ್ರೈವ್' ಭಾಗವಾಗಿ 16,093 ಕಿ.ಮೀ ವರೆಗೂ ಬೈಕ್ ರೈಡ್ ಮಾಡಲಿದ್ದಾರೆ.

MOST READ: ಐಷಾರಾಮಿ ಫೋಕ್ಸ್‌ವ್ಯಾಗನ್ ಎಸ್‍ಯುವಿಯನ್ನು ಖರೀದಿಸಿದ ಜನಪ್ರಿಯ ಬಾಲಿವುಡ್ ನಟ

ಐಷಾರಾಮಿ ಬಿಎಂಡಬ್ಲ್ಯು ಕೆ 1600 ಜಿಟಿ ಬೈಕಿನಲ್ಲಿ ಕಾಣಿಸಿಕೊಂಡ ಸದ್ಗುರು

ಜಗ್ಗಿ ವಾಸುದೇವ್ ಅಥವಾ ಸದ್ಗುರು ಅವರು ಅಮೆರಿಕಾದಲ್ಲಿ ‘ಎಕ್ಸ್‌ಪ್ಲೋರಿಂಗ್ ಸ್ಪಿರಿಚುವಲ್ ಅಮೇರಿಕಾ ಡ್ರೈವ್'ನಲ್ಲಿ ಅದೇ ಬಿಎಂಡಬ್ಲ್ಯು ಕೆ 1600 ಜಿಟಿ ಬೈಕ್ ಅನ್ನು ರೈಡ್ ಮಾಡಲಿದ್ದಾರೆ. ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿಲ್ಲ.

ಐಷಾರಾಮಿ ಬಿಎಂಡಬ್ಲ್ಯು ಕೆ 1600 ಜಿಟಿ ಬೈಕಿನಲ್ಲಿ ಕಾಣಿಸಿಕೊಂಡ ಸದ್ಗುರು

ಈ ಬಿಎಂಡಬ್ಲ್ಯು ಕೆ 1600 ಜಿಟಿ ಟೂರಿಂಗ್ ಬೈಕ್ ಆಗಿರುವುದರಿಂದ ಹೆದ್ದಾರಿಗಳಲ್ಲಿ ಸವಾರಿ ಮಾಡಲು ಉತ್ತಮ ಸ್ಥಿರತೆ ಮತ್ತೆ ಹೆಚ್ಚಿನ ಫನ್ ಅನುಭವನ್ನು ನೀಡುತ್ತದೆ. ಈ ಬೈಕಿನಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಮೈಲುಗಳಷ್ಟು ಪ್ರಯಾಣ ಮಾಡಬಹುದು.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಐಷಾರಾಮಿ ಬಿಎಂಡಬ್ಲ್ಯು ಕೆ 1600 ಜಿಟಿ ಬೈಕಿನಲ್ಲಿ ಕಾಣಿಸಿಕೊಂಡ ಸದ್ಗುರು

ಅವರು ಸವಾರಿ ಮಾಡುತ್ತಿರುವ ಅತ್ಯಂತ ಐಷಾರಾಮಿ ಮತ್ತು ಭಾರವಾದ ಬೈಕುಗಳಲ್ಲಿ ಇದು ಕೂಡ ಒಂದಾಗಿದೆ. ಬಿಎಂಡಬ್ಲ್ಯು ಕೆ 1600 ಜಿಟಿ 350 ಕೆಜಿ ತೂಕವಿರುತ್ತದೆ. ಇದು ಕ್ರಾಸ್ ಕಂಟ್ರಿ ಸವಾರಿಗಳಿಗೆ ಸೂಕ್ತ ಆಯ್ಕೆಯಾಗಿದೆ.

ಐಷಾರಾಮಿ ಬಿಎಂಡಬ್ಲ್ಯು ಕೆ 1600 ಜಿಟಿ ಬೈಕಿನಲ್ಲಿ ಕಾಣಿಸಿಕೊಂಡ ಸದ್ಗುರು

ಸದ್ಗುರು ಜಗ್ಗಿ ವಾಸುದೇವ್ ಸವಾರಿ ಮಾಡುತ್ತಿರುವ ಬೈಕು ಭಾರತೀಯ ರೂಪಾಯಿಗಳಲ್ಲಿ ಸುಮಾರು 17 ಲಕ್ಷ ಬೆಲೆಯನ್ನು ಹೊಂದಿದೆ. ಆದರೆ ಭಾರತಕ್ಕೆ ಆಮದು ಮಾಡಿಕೊಳ್ಳುವುದರಿಂದ ತೆರಿಗೆಯಿಂದಾಗಿ ದುಪ್ಪಟ್ಟು ವೆಚ್ಚ ಹೆಚ್ಚಾಗುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಐಷಾರಾಮಿ ಬಿಎಂಡಬ್ಲ್ಯು ಕೆ 1600 ಜಿಟಿ ಬೈಕಿನಲ್ಲಿ ಕಾಣಿಸಿಕೊಂಡ ಸದ್ಗುರು

ಬಿಎಂಡಬ್ಲ್ಯು ಕೆ 1600 ಜಿಟಿ ಬೈಕಿನಲ್ಲಿ 1.6-ಲೀಟರ್, 6-ಸಿಲಿಂಡರ್, ಇನ್-ಲೈನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 160 ಬಿಹೆಚ್‍ಪಿ ಮತ್ತು 174 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕಿನಲ್ಲಿ ರೈಡ್-ಬೈ-ವೈರ್ ಸಿಸ್ಟಂನೊಂದಿಗೆ ಫ್ಯಿಯೂಲ್ ಇಂಜೆಕ್ಷನ್ ಮುಂತಾದ ಫೀಚರ್ ಗಳನ್ನು ಹೊಂದಿದೆ.

ಇದು ಗಂಟೆಗೆ ಗರಿಷ್ಠ 200 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಡ್ಯುಯಲ್-ಫ್ಲೋಟಿಂಗ್ ಡಿಸ್ಕ್ ಬ್ರೇಕ್‌ಗಳಿಂದ ನಾಲ್ಕು ಪಿಸ್ಟನ್ ಫಿಕ್ಸ್ಡ್-ಪೊಸಿಷನ್ ಕಾಲಿಪರ್‌ಗಳನ್ನು ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಸಿಂಗಲ್-ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

ಐಷಾರಾಮಿ ಬಿಎಂಡಬ್ಲ್ಯು ಕೆ 1600 ಜಿಟಿ ಬೈಕಿನಲ್ಲಿ ಕಾಣಿಸಿಕೊಂಡ ಸದ್ಗುರು

ಇನ್ನು ಸದ್ಗುರು ಅವರು ಸಂದರ್ಶನವೊಂದರಲ್ಲಿ, ಅವರು ತಮ್ಮ ಕಾಲೇಜು ದಿನಗಳಲ್ಲಿ ಯಮಹಾ ಆರ್ಡಿ 350 ಹೊಂದಿದ್ದರು ಮತ್ತು ಆ ಬೈಕಿನಲ್ಲಿ ಮೇಲೆ ಭಾರತದಾದ್ಯಂತ ಸವಾರಿ ಮಾಡುತ್ತಿದ್ದರು ಎಂದು ಹೇಳಿದರು. ಸದ್ಗುರು ಅವರು 200 ಜಿಎಸ್ ಮತ್ತು ಪ್ರಪಂಚದಾದ್ಯಂತ ಇರುವ ಐಷಾರಾಮಿ ಅಡ್ವೆಂಚರ್ ಬೈಕುಗಳಲ್ಲಿ ಕೂಡ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.

Most Read Articles

Kannada
English summary
Sadhguru Jaggi Vasudev ride a massive, 350 KG BMW K 1600 GT. Read In Kannada.
Story first published: Thursday, October 22, 2020, 16:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X