ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಸೈಫ್ ಅಲಿ ಖಾನ್-ಕರೀನಾ ಕಪೂರ್ ದಂಪತಿ

ಬಾಲಿವುಡ್ ಎಂಬ ಕಲರ್‍‍‍ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳನ್ನು ಹೊಂದಿರುತ್ತಾರೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಬಾಲಿವುಡ್ ನಟ-ನಟಿಯರು ಪೈಪೋಟಿಗೆ ಬಿದ್ದ ರೀತಿಯಲ್ಲಿ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತಿ ದುಬಾರಿ ಕಾರುಗಳನ್ನು ಖರೀದಿಸುತ್ತಾರೆ.

ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಸೈಫ್ ಅಲಿ ಖಾನ್-ಕರೀನಾ ಕಪೂರ್

ಸಿನಿಮಾ ರಂಗದ ನಟರಿಗೆ ಮಾತ್ರವಲ್ಲದೇ ನಟಿಯರಿಗೂ ಕೂಡ ಕಾರು ಕ್ರೇಜ್ ಹೆಚ್ಚು ಇರುತ್ತದೆ. ಸಿನಿಮಾ ನಟಿಯರು ಕೂಡ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ನಟಿಯರು ಮೆಚ್ಚಿನ ಐಷಾರಾಮಿ ಬ್ರ್ಯಾಂಡ್‌ನ ಕಾರುಗಳನ್ನು ಖರೀದಿಸುತ್ತಾರೆ. ಬಾಲಿವುಡ್ ಸೆಲಬ್ರಿಟಿಗಳಿಗೆ ಮರ್ಸಿಡಿಸ್ ಬೆಂಝ್ ಕಾರುಗಳ ಮೇಲೆ ಪ್ರೀತಿ ಹೆಚ್ಚು. ಕರೀನಾ ಕಪೂರ್ ಖಾನ್ ಅವರು ಕೂಡ ಮರ್ಸಿಡಿಸ್ ಬೆಂಝ್ ಕಾರುಗಳ ಅಭಿಮಾನಿಯಾಗಿದ್ದಾರೆ. ಇತ್ತೀಚೆಗೆ ನಟಿ ಕರೀನಾ ಕಪೂರ್ - ಸೈಫ್ ಅಲಿ ಖಾನ್ ದಂಪತಿಯು ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ.

ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಸೈಫ್ ಅಲಿ ಖಾನ್-ಕರೀನಾ ಕಪೂರ್

ಕರೀನಾ ಕಪೂರ್ ಅವರ ಕಿರಿಯ ಮಗ ಜೆಹ್ ಅನ್ನು ಹಿಡಿದುಕೊಂಡು ಕಾರನ್ನು ಅನಾವರಣಗೊಳಿಸುತ್ತಿರುವ ಚಿತ್ರಗಳು ಮತ್ತು ವೀಡಿಯೊಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಈ ಹೊಸ ಕಾರಿನಲ್ಲಿ ಕರೀನಾ ಕಪೂರ್ - ಸೈಫ್ ಅಲಿ ಖಾನ್ ದಂಪತಿ ತಮ್ಮ ಕಿರಿಯ ಮಗನೊಂದಿಗೆ ರೈಡ್ ತೆರಳುವ ದೃಶ್ಯಗಳು ವೈರಲ್ ಆಗಿದೆ.

ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಸೈಫ್ ಅಲಿ ಖಾನ್-ಕರೀನಾ ಕಪೂರ್

ಸೈಫ್ ಅಲಿ ಖಾನ್-ಕರೀನಾ ಕಪೂರ್ ದಂಪತಿ ಮೊದಲನೇ ಪುತ್ರನಿಗೆ 'ತೈಮೂರ್' ಎಂಬ ಹೆಸರನ್ನಿಟ್ಟಾಗ ನೆಟ್ಟಿಗರು ವಿರೋಧಿಸಿದ್ದರು. ಭಾರತದ ಮೇಲೆ ಆಕ್ರಮಣ ಮಾಡಿ, ಲೂಟಿ ಮಾಡಿದ ದಾಳಿಕೋರ ಟರ್ಕಿಶ್ ಚಕ್ರವರ್ತಿ 'ತೈಮೂರ್' ಹೆಸರನ್ನು ನಾಮಕರಣ ಮಾಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿತ್ತು. ಎರಡನೇ ಮಗ ಜಿಹ್ (ಜೆಹಾಂಗೀರ್) ಹೆಸರನ್ನಿಟ್ಟಿರುವುದಕ್ಕೂ ನೆಟ್ಟಿಗರು ಟ್ರೋಲ್ ಮಾಡಿದ್ರು.

ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಸೈಫ್ ಅಲಿ ಖಾನ್-ಕರೀನಾ ಕಪೂರ್

ಸೈಫ್ ಅಲಿ ಖಾನ್-ಕರೀನಾ ಕಪೂರ್ ದಂಪತಿ ಖರೀದಿಸಿದ ಈ ಹೊಸ ಕಾರು ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ S350d ಆಗಿದೆ, ಈ ಕಾರಿನ ಆನ್-ರೋಡ್ ಬೆಲೆಯು ಸುಮಾರು ರೂ 1.95 ಕೋಟಿ ಆಗಿದೆ. ಈ ಐಷಾರಾಮಿ ಸೆಡಾನ್ ಕಾರ್ ಅನ್ನು S Class 350 D ಹಾಗೂ S Class S 450 ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ,

ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಸೈಫ್ ಅಲಿ ಖಾನ್-ಕರೀನಾ ಕಪೂರ್

ಈ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಆಕರ್ಷವಾಗಿದ್ದು, ಹೆಚ್ಚು ಫೀಚರ್ ಗಳನ್ನು ಹೊಂದಿದೆ. ಜೊತೆಗೆ ಹಳೆಯ ಮಾದರಿಗಿಂತ ಹೆಚ್ಚು ಸುರಕ್ಷಿತವಾಗಿದೆ. ವಿನ್ಯಾಸ ಹಾಗೂ ಸ್ಟೈಲಿಂಗ್ ಬಗ್ಗೆ ಹೇಳುವುದಾದರೆ ಈ ಕಾರಿನ ಮುಂಭಾಗದ ಗ್ರಿಲ್ ಕಪ್ಪು ಬಣ್ಣವನ್ನು ಹೊಂದಿದ್ದು, ಹಲವು ಭಾಗಗಳಲ್ಲಿ ನಯವಾದ ರೇಖೆ ಹಾಗೂ ಕ್ರೋಮ್ ಅಂಶಗಳನ್ನು ನೀಡಲಾಗಿದೆ.

ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಸೈಫ್ ಅಲಿ ಖಾನ್-ಕರೀನಾ ಕಪೂರ್

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಹೊಸ ಡಿಜಿಟಲ್ ಎಲ್ಇಡಿ ಹೆಡ್‌ಲೈಟ್‌ ಹಾಗೂ 20 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಈ ಕಾರಿನಲ್ಲಿರುವ ಫ್ಲಶ್ ಅಳವಡಿಸಿದ ಡೋರ್ ಹ್ಯಾಂಡಲ್‌, ಕಾರಿನ ಬಳಿ ಕೀಲಿಯನ್ನು ಚಲಿಸಿದ ನಂತರವೇ ಹೊರ ಬರುತ್ತದೆ. ಇದರ ಜೊತೆಗೆ ಈ ಫೀಚರ್ ಕಾರಿನ ಏರೋ ಡೈನಾಮಿಕ್ ಸಾಮರ್ಥ್ಯವನ್ನು ಸುಧಾರಿಸುತ್ತದೆ.

ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಸೈಫ್ ಅಲಿ ಖಾನ್-ಕರೀನಾ ಕಪೂರ್

ಇನ್ನು ಈ ಕಾರಿನ ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ - ವೈಟ್, ಸಿಯೆನ್ನಾ ಬ್ರೌನ್ ಹಾಗೂ ಬ್ಲಾಕ್ ಎಂಬ ಮೂರು ಅಪ್ ಹೊಲೆಸ್ಟರಿ ಆಯ್ಕೆಗಳನ್ನು ನೀಡಲಾಗಿದೆ. ಈ ಹೊಸ ಕಾರಿನಲ್ಲಿ 12.8-ಇಂಚಿನ ಒಎಲ್‌ಇಡಿ ಟಚ್‌ಸ್ಕ್ರೀನ್, 12.3 ಇಂಚಿನ ಡಿಜಿಟಲ್ ಎಂಐ‌ಡಿ ಹಾಗೂ ಎರಡನೇ ತಲೆಮಾರಿನ MBUX ವಾಯ್ಸ್ ಕಂಟ್ರೋಲ್ ಗಳನ್ನು ಹೊಂದಿದೆ.

ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಸೈಫ್ ಅಲಿ ಖಾನ್-ಕರೀನಾ ಕಪೂರ್

ಇದರ ಜೊತೆಗೆ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನಲ್ಲಿ ಫಿಂಗರ್ ಪ್ರಿಂಟ್ ಐಡೆಂಟಿಫಿಕೇಶನ್, ಎರಡನೇ ಸಾಲಿನಲ್ಲಿ ವೆಂಟಿಲೇಟೆಡ್ ಸೀಟ್, ಮಸಾಜ್ ಫಂಕ್ಷನ್, ಸೆಂಟ್ರಲ್ ಆರ್ಮ್ ರೆಸ್ಟ್ ಮೇಲೆ ಟ್ಯಾಬ್ಲೆಟ್, 64 ಕಲರ್ ಆಂಬಿಯೆಂಟ್ ಲೈಟಿಂಗ್ ಹಾಗೂ ಬರ್ಮಿಸ್ಟರ್ 4 ಡಿ ಸರೌಂಡ್ ಸೌಂಡ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗಿದೆ.

ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಸೈಫ್ ಅಲಿ ಖಾನ್-ಕರೀನಾ ಕಪೂರ್

ಮರ್ಸಿಡಿಸ್ ಬೆಂಝ್ ಕಂಪನಿಯು ಈ ಎಸ್-ಕ್ಲಾಸ್ ಕಾರಿನಲ್ಲಿ ಹಲವು ಸುರಕ್ಷತಾ ಫೀಚರ್ ಗಳನ್ನು ನೀಡಲಾಗಿದೆ. ಇವುಗಳಲ್ಲಿ 10 ಏರ್‌ಬ್ಯಾಗ್‌ಗಳು, ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್‌, 360 ಡಿಗ್ರಿ ಕ್ಯಾಮೆರಾ, ಸ್ಟೆಬಿಲಿಟಿ ಕಂಟ್ರೋಲ್, ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಸೈಡ್ ಡಿಕ್ಕಿಂಗ್ ಮಾನಿಟರಿಂಗ್ ಹಾಗೂ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸೇರಿದಂತೆ ಹಲವಾರು ಫೀಚರ್ ಗಳು ಸೇರಿವೆ.

ಈ ಕಾರ್ ಅನ್ನು 3.0 ಲೀಟರ್ ಪೆಟ್ರೋಲ್ ಹಾಗೂ 3.0 ಲೀಟರ್ ಡೀಸೆಲ್ ಎಂಜಿನ್ ಎಂಬ ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಪೆಟ್ರೋಲ್ ಎಂಜಿನ್ 367 ಬಿಹೆಚ್‌ಪಿ ಪವರ್ ಹಾಗೂ 500 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 286 ಬಿಹೆಚ್‌ಪಿ ಪವರ್ ಹಾಗೂ 600 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್ ಎಂಜಿನ್‌ನೊಂದಿಗೆ 48 ವೋಲ್ಟ್ ಮೈಲ್ಡ್ ಹೈಬ್ರಿಡ್ ಸಿಸ್ಟಂ ನೀಡಲಾಗಿದೆ.

ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಸೈಫ್ ಅಲಿ ಖಾನ್-ಕರೀನಾ ಕಪೂರ್

ಇನ್ನು ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಇಕ್ಯೂಎಸ್ 580 4 ಮ್ಯಾಟಿಕ್ ಎಲೆಕ್ಟ್ರಿಕ್ ಸೆಡಾನ್ ಮಾದರಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿತು. ಈ ಹೊಸ ಇವಿ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 1.55 ಕೋಟಿ ಬೆಲೆ ಹೊಂದಿದೆ. ವಿಶ್ವಾದ್ಯಂತ ಎಲೆಕ್ಟ್ರಿಕ್ ಸರಣಿ ಕಾರುಗಳ ಸಂಖ್ಯೆ ಹೆಚ್ಚಿಸಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಎರಡನೇ ಕಾರು ಮಾದರಿಯಾಗಿ ಇಕ್ಯೂಎಸ್ 580 ಬಿಡುಗಡೆ ಮಾಡಿದ್ದು, ಹೊಸ ಕಾರು ಹಲವಾರು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

Most Read Articles

Kannada
English summary
Saif ali khan and kareena buys new mercedes benz s class sedan details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X