ಅಮೆರಿಕದಲ್ಲಿ ಟ್ರಕ್ ಓಡಿಸುವ ಈ ಭಾರತೀಯನ ಆದಾಯ ಎಷ್ಟು ಗೊತ್ತಾ?

ಪ್ರಪಂಚದದ್ಯಾಂತ ಸಹಸ್ರಾರು ಜನರು ಪ್ರತಿ ವರ್ಷವೂ ಅಮೆರಿಕಾಕ್ಕೆ ಹೋಗಲು ಪ್ರಯತ್ನಿಸುತ್ತಲೇ ಇರುತ್ತಾರೆ, ಕೆಲವರು ಮಾತ್ರ ಯಶಸ್ವಿಯಾಗುತ್ತಾರೆ. ಅನೇಕ ದಶಕಗಳಿಂದ ಭಾರತೀಯರೂ ಸಹ ಅಮೆರಿಕಾಕ್ಕೆ ಹೋಗುತ್ತಲೇ ಇದ್ದಾರೆ. ಇದರಲ್ಲಿ ಪಂಜಾಬ್ ಮೂಲ ಸತ್ನಾಂ ಸಿಂಗ್ ಕೂಡ ಒಬ್ಬರು.

ಅಮೆರಿಕದಲ್ಲಿ ಟ್ರಕ್ ಓಡಿಸುವ ಈ ಭಾರತೀಯನ ಸಂಬಳ ಎಷ್ಟು ಗೊತ್ತಾ?

ಅಮೆರಿಕಕ್ಕೆ ವಲಸೆ ಹೋಗುವ ಬಹುತೇಕರು ಸಾಫ್ಟ್ ವೇರ್ ವಲಯದಲ್ಲಿ ಕೆಲಸಗಿಟ್ಟಿಸಿ ಕೊಳ್ಳಲು ಯತ್ನಿಸುವುದು ಸಾಮಾನ್ಯ. ಆದರೆ ಅದೇ ಅಮೆರಿಕದಲ್ಲಿ ಟ್ರಕ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಸತ್ನಾಂ ಸಿಂಗ್ ಸಾಫ್ಟ್ ವೇರ್ ಉದ್ಯೋಗಿಗಳಿಗಿಂತಲೂ ಹೆಚ್ಚಿನ ಸಂಪಾದನೆ ಮಾಡುತ್ತಿದ್ದು, ತಮ್ಮ ಅನುಭವವನ್ನು ಹಂಚಿ ಕೊಂಡಿದ್ದಾರೆ. ಅಲ್ ಜಜೀರಾ ನ್ಯೂಸ್ ನೆಟ್ ವರ್ಕ್ ನ ಅಂಗ ಸಂಸ್ಥೆಯಾದ ಎಜೆ ಪ್ಲಸ್ ಗೆ ನೀಡಿರುವ ಸಂದರ್ಶನದಲ್ಲಿ ಸತ್ನಾಂ ಸಿಂಗ್ ಆತನ ದೈನಂದಿನ ಜೀವನದ ಬಗ್ಗೆ ಮತ್ತು ಆತನ ದುಡಿಮೆಯ ಬಗ್ಗೆ ತಿಳಿಸಿದ್ದಾನೆ.

ಅಮೆರಿಕದಲ್ಲಿ ಟ್ರಕ್ ಓಡಿಸುವ ಈ ಭಾರತೀಯನ ಸಂಬಳ ಎಷ್ಟು ಗೊತ್ತಾ?

1970ರ ದಶಕದಲ್ಲಿ ಅಮೆರಿಕಾಕ್ಕೆ ಬಂದ ಆತ ಟ್ರಕ್ ಚಲಾಯಿಸುವ ಮುಂಚೆ ಫಾರ್ಮ್‍ಲ್ಯಾಂಡ್‍ನಲ್ಲಿ ಕೆಲಸ ಮಾಡುತ್ತಿದ್ದ. ಸತ್ನಾಂ ಸಿಂಗ್ ನಾರ್ಥ್ ಕ್ಯಾಲಿಫೋರ್ನಿಯಾದ ಯೂಬಾ ಸಿಟಿಯಲ್ಲಿ ನೆಲೆಸಿದ್ದು, ಆ ಸ್ಠಳವನ್ನು ಪಂಜಾಬಿಗಳು ಮತ್ತು ಸಿಖ್ ಜನಾಂಗದವರು ಹೆಚ್ಚಾಗಿ ನೆಲೆಸಿರುವ ಕಾರಣ ಲಿಟಲ್ ಪಂಜಾಬ್ ಎಂದೂ ಸಹ ಕರೆಯಲಾಗುತ್ತದೆ.

ಅಮೆರಿಕದಲ್ಲಿ ಟ್ರಕ್ ಓಡಿಸುವ ಈ ಭಾರತೀಯನ ಸಂಬಳ ಎಷ್ಟು ಗೊತ್ತಾ?

ಸತ್ನಾಂ ಪ್ರಕಾರ, ಆತನು ಆ ಪ್ರಾಂತ್ಯದಲ್ಲಿ ದಿನವೂ ಅನೇಕ ಗಂಟೆಗಳಷ್ಟು ಕಾಲ ಲೋಡ್ ಗಳನ್ನು ಪಿಕ್ ಅಪ್ ಮತ್ತು ಡೆಲಿವರಿ ಮಾಡುತ್ತಾನೆ. ಈ ವೀಡಿಯೋ ದಲ್ಲಿ ಆತನು ಕ್ಯಾಲಿಫೋರ್ನಿಯಾದಲ್ಲಿನ ಪಿಕ್ ಅಪ್ ಮತ್ತು ಡ್ರಾಪ್ ಬಗ್ಗೆ ಫೋನಿನಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದು.

ಸತ್ನಾಂ ಅಮೆರಿಕಾದಲ್ಲಿ ನೆಲೆಸಿ ಟ್ರಕ್ ಗಳನ್ನು ಓಡಿಸುತ್ತಿರುವ ಸಿಖ್ ವಲಸಿಗರ ಪೈಕಿ ಒಬ್ಬನಾಗಿದ್ದಾನೆ. ಎಜೆ ಪ್ಲಸ್ ನ ವೀಡಿಯೋದಲ್ಲಿ ಪಂಜಾಬಿನ ಅನೇಕ ಜನ ಅಮೆರಿಕಾದಲ್ಲಿ ಟ್ರಕ್ ಓಡಿಸುವ ಕೆಲಸದ ಬಗ್ಗೆ ಕನಸು ಕಾಣುತ್ತಿದ್ದು, ಅಲ್ಲಿನ ಟ್ರಕ್ ಗಳಲ್ಲಿ ಕಾಣ ಬರುವ ಪಂಜಾಬಿ ಹಾಡುಗಳು ಅಲ್ಲಿನ ಟ್ರಕ್ಕಿಂಗ್ ಸಂಸ್ಕೃತಿಯನ್ನು ತೋರಿಸುತ್ತವೆ. ಇನ್ನು ಸತ್ನಾಂ ಸಿಂಗ್ ನ ದುಡಿಮೆಯ ಬಗ್ಗೆ ಹೇಳುವುದಾದರೆ, ಒಬ್ಬ ಟ್ರಕ್ ಡ್ರೈವರ್ ಸಾಮಾನ್ಯವಾಗಿ ದಿನವೊಂದಕ್ಕೆ 10-12 ಗಂಟೆಗಳ ಕಾಲ ಚಾಲನೆ ಮಾಡುವುದರಿಂದ ಪ್ರತಿ ವರ್ಷ $200,000 ರಿಂದ $225,000 ಅಂದರೆ ಭಾರತೀಯ ಕರೆನ್ಸಿಯಲ್ಲಿ 1.57 ಕೋಟಿ ರೂ, ಪ್ರತಿ ತಿಂಗಳಿಗೆ ರೂ 13 ಲಕ್ಷಗಳಷ್ಟು, ಸಂಪಾದಿಸುತ್ತಾನೆ. ವರದಿಯ ಪ್ರಕಾರ ಫ್ಯೂಯಲ್, ರಿಪೇರಿ ಮತ್ತು ಮೆಂಟೆನೆನ್ಸ್ ಗಾಗಿಯೂ ಅಧಿಕ ಹಣವನ್ನು ಖರ್ಚು ಮಾಡಬೇಕಾಗುತ್ತದೆ.

ಅಮೆರಿಕದಲ್ಲಿ ಟ್ರಕ್ ಓಡಿಸುವ ಈ ಭಾರತೀಯನ ಸಂಬಳ ಎಷ್ಟು ಗೊತ್ತಾ?

ಸತ್ನಾಂ ಸಿಂಗ್ ಪ್ರತಿ ದಿನ ಮನೆಯಿಂದ ಊಟ ತರುವುದಾಗಿಯೂ, ಊಟ ತರದೇ ಇರುವ ದಿನ ಹೈವೇಯಲ್ಲಿರುವ ಯಾವುದಾದರೂ ಪಂಜಾಬಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವುದಾಗಿಯೂ ತಿಳಿಸುತ್ತಾನೆ. ದಾರಿ ಮಧ್ಯದಲ್ಲಿ ಟೀ ಮಾಡಿಕೊಳ್ಳುವ ಉದ್ದೇಶದಿಂದ ಆತನು ತನ್ನ ಜೊತೆಯಲ್ಲಿ ಒಂದು ಮಿನಿ ಸ್ಟವ್ ಸಹ ತೆಗೆದುಕೊಂಡು ಹೋಗುತ್ತಾನೆ. ಟ್ರಕ್ಕಿನ ಕ್ಯಾಬಿನ್ ದೊಡ್ಡದಾಗಿದ್ದು, ಅದರಲ್ಲಿ ಬಂಕರ್‍‍ಬೆಡ್ ಮತ್ತು ಬಟ್ಟೆಗಳನ್ನು ಇಡಲು ಸಾಕಷ್ಟು ಸ್ಥಳಾವಕಾಶ ಸಹ ಇದೆ.

ಅಮೆರಿಕದಲ್ಲಿ ಟ್ರಕ್ ಓಡಿಸುವ ಈ ಭಾರತೀಯನ ಸಂಬಳ ಎಷ್ಟು ಗೊತ್ತಾ?

ಸಿಖ್ ಆಗಿರುವ ಸತ್ನಾಂ ಸಿಂಗ್ ತಲೆಗೆ ಟರ್ಬನ್ ಧರಿಸಿ, ಉದ್ದವಾಗಿ ಗಡ್ಡ ಬಿಟ್ಟಿದ್ದಾನೆ. ಇದೇ ಕಾರಣಕ್ಕೆ ಅಲ್ಲಿರುವ ವೈಟ್ ಅಮೆರಿಕನ್ನರು ಆತ ಒಸಮಾ ಬಿನ್ ಲಾಡೆನ್ ಸಹಚರ ಆಗಿರಬಹುದೆಂದು ಆತನ ಮೇಲೆ ದಾಳಿ ಮಾಡಿದ್ದರು. ಅಲ್ಲಿರುವ ಕೆಲವು ಅಮೆರಿಕನ್ನರು, ಭಾರತೀಯರು ತಮ್ಮ ಕೆಲಸಗಳನ್ನು ಕಸಿದುಕೊಂಡರು ಎಂಬ ಭಾವನೆಯಲ್ಲಿ ಭಾರತೀಯರ ಮೇಲೆ ದ್ವೇಷ ಬೆಳೆಸಿಕೊಂಡಿದ್ದಾರೆ. ಆದರೆ ವರದಿಯ ಪ್ರಕಾರ, ಅಮೆರಿಕಾದಲ್ಲಿ ಈಗಲೂ ಟ್ರಕ್ ಡ್ರೈವರ್‍‍ಗಳ ಕೊರತೆಯಿದೆ. ಮನೆಯಿಂದ ಅನೇಕ ದಿನಗಳವರೆಗೆ ದೂರವಿಡುವ ಕಾರಣ ಅನೇಕ ಜನರು ಟ್ರಕ್ ಡ್ರೈವರ್ ಕೆಲಸ ಮಾಡಲು ಮುಂದೆ ಬರುತ್ತಿಲ್ಲ.

ಅಮೆರಿಕದಲ್ಲಿ ಟ್ರಕ್ ಓಡಿಸುವ ಈ ಭಾರತೀಯನ ಸಂಬಳ ಎಷ್ಟು ಗೊತ್ತಾ?

ಸಿಖ್ಖರನ್ನು ಒಳಗೊಂಡಂತೆ ಭಾರತೀಯ ಸಮುದಾಯವು ಅಮೇರಿಕಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆ. ಹಬ್ಬ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಭಾರತೀಯರೆಲ್ಲಾ ಜೊತೆಗೂಡಿ ಉತ್ಸವಗಳನ್ನು ಆಚರಿಸಿ ಜನರ ಸೇವೆ ಮಾಡುತ್ತಾರೆ.

ಅಮೆರಿಕದಲ್ಲಿ ಟ್ರಕ್ ಓಡಿಸುವ ಈ ಭಾರತೀಯನ ಸಂಬಳ ಎಷ್ಟು ಗೊತ್ತಾ?

ಸತ್ನಾಂ 6 ದೇಶಗಳನ್ನು ದಾಟಿ, ಮೆಕ್ಸಿಕೋ ಬಾರ್ಡರ್ ಮೂಲಕ 1972ರಲ್ಲಿ ಅಮೆರಿಕಾಕ್ಕೆ ಬಂದನು. ಆತನನ್ನು ಬಾರ್ಡರ್‍‍ನಲ್ಲಿಯೇ ಅನೇಕ ತಿಂಗಳವರೆಗೆ ಹಿಡಿದಿಟ್ಟುಕೊಳ್ಳಲಾಗಿತ್ತು, ಅಮೆರಿಕಾದ ಕಸ್ಟಮ್ಸ್ ಅಧಿಕಾರಿಗಳು ಗ್ರೀನ್ ಕಾರ್ಡ್ ಕೊಟ್ಟ ನಂತರ ಆತನನ್ನು ಬಿಡುಗಡೆಗೊಳಿಸಲಾಯಿತು. ಇದೇ ರೀತಿಯಲ್ಲಿ ಅನೇಕ ಜನರು ಪ್ರಯತ್ನಿಸುತ್ತಿದ್ದು, ಅವರು ಅಮೆರಿಕಾದೊಳಗೆ ಬರಲು ಸಾಧ್ಯವಾಗುತ್ತಿಲ್ಲ.

Most Read Articles

Kannada
Read more on ಟ್ರಕ್ truck
English summary
Sardar Truck Driver Earnings In America. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more