ವಾಹನ ಸವಾರರೇ ಗಮನಿಸಿ: ಗಗನಕ್ಕೇರಲಿದೆ ಪೆಟ್ರೋಲ್, ಡೀಸೆಲ್ ದರ?

ಸೌದಿ ಅರೇಬಿಯಾದಲ್ಲಿರುವ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ನಡೆದಿದೆ. ಇದರಿಂದ ಭಾರತದ ತೈಲೊತ್ಪನ್ನ ಕಂಪನಿಗಳ ತೈಲ ಪೂರೈಕೆಗೆ ಸದ್ಯಕ್ಕೆ ಯಾವುದೇ ಅಡಚಣೆಯುಂಟಾಗಿಲ್ಲ. ಆದರೆ ತೈಲ ಬೆಲೆಗಳು ಏರಿಕೆಯಾಗುವ ಸಾಧ್ಯತೆಗಳಿವೆ.

ವಾಹನ ಸವಾರರೇ ಗಮನಿಸಿ: ಗಗನಕ್ಕೇರಲಿದೆ ಪೆಟ್ರೋಲ್, ಡೀಸೆಲ್ ದರ?

ಹಾನಿಗೊಳಗಾಗಿರುವ ತೈಲ ಘಟಕಗಳನ್ನು ಸರಿಪಡಿಸುತ್ತಿರುವ ಕಾರ್ಯವು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಹುಡುಕಲಾಗುತ್ತಿದೆ. ಪಶ್ಚಿಮ ಏಷ್ಯಾದ ಬಂಡುಕೋರರು ನಡೆಸಿರುವ ಈ ದಾಳಿಯಿಂದಾಗಿ ಸುಮಾರು 5.7 ಮಿಲಿಯನ್ ಬ್ಯಾರೆಲ್‍‍ನಷ್ಟು ತೈಲ ಹಾನಿಗೊಳಗಾಗಿದೆ.

ವಾಹನ ಸವಾರರೇ ಗಮನಿಸಿ: ಗಗನಕ್ಕೇರಲಿದೆ ಪೆಟ್ರೋಲ್, ಡೀಸೆಲ್ ದರ?

ಈ ಪ್ರಮಾಣವು ಸೌದಿ ಅರೇಬಿಯಾದ ಅರ್ಧದಷ್ಟು ತೈಲವನ್ನು ಪ್ರತಿನಿಧಿಸಿದರೆ, ವಿಶ್ವ ಮಾರುಕಟ್ಟೆಯ 6% ಪ್ರತಿನಿಧಿಸುತ್ತದೆ. ಇದರಿಂದಾಗಿ ಈ ತೈಲ ಘಟಕಗಳ ಮೇಲೆ ಅವಲಂಬಿತವಾಗಿದ್ದ, ಭಾರತವು ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೆ ಆತಂಕ ಎದುರಾಗಿದೆ.

ವಾಹನ ಸವಾರರೇ ಗಮನಿಸಿ: ಗಗನಕ್ಕೇರಲಿದೆ ಪೆಟ್ರೋಲ್, ಡೀಸೆಲ್ ದರ?

ಭಾರತವು ಕಳೆದ ಹಣಕಾಸು ವರ್ಷದಲ್ಲಿ ಸೌದಿ ಅರೇಬಿಯಾದಿಂದ 19%ನಷ್ಟು ತೈಲವನ್ನು ಆಮದು ಮಾಡಿಕೊಂಡಿತ್ತು. ಭಾರತದ ದೊಡ್ಡ ತೈಲೊತ್ಪನ್ನ ಕಂಪನಿಯಾದ ಇಂಡಿಯನ್ ಆಯಿಲ್ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

ವಾಹನ ಸವಾರರೇ ಗಮನಿಸಿ: ಗಗನಕ್ಕೇರಲಿದೆ ಪೆಟ್ರೋಲ್, ಡೀಸೆಲ್ ದರ?

ಈ ಘಟನೆಯಿಂದಾಗಿ ತೈಲ ಆಮದಿನ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಲಿದೆ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಿಂದೂಸ್ತಾನ್ ಪೆಟ್ರೋಲಿಯಂ ಸಹ ಪರಿಸ್ಥಿತಿಯನ್ನು ಕಾದು ನೋಡುವುದಾಗಿ ಹೇಳಿದೆ.

ವಾಹನ ಸವಾರರೇ ಗಮನಿಸಿ: ಗಗನಕ್ಕೇರಲಿದೆ ಪೆಟ್ರೋಲ್, ಡೀಸೆಲ್ ದರ?

ಈ ಬಗ್ಗೆ ಮಾತನಾಡಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಚೇರ್‍‍ಮನ್ ಎಂ ಕೆ ಸುರಾನಾರವರು, ತಮ್ಮ ಬಳಿ ಲಭ್ಯವಿರುವ ತೈಲವನ್ನು ತನ್ನ ಗ್ರಾಹಕರಿಗೆ ಸರಬರಾಜು ಮಾಡುವುದಾಗಿ ಸೌದಿ ಅರೇಬಿಯಾ ತಿಳಿಸಿದೆ. ಆದರೆ ಈಗ ದಾಳಿಯಿಂದ ಹಾನಿಗೊಳಗಾಗಿರುವ ಘಟಕಗಳನ್ನು ಸರಿಪಡಿಸಲು ಎಷ್ಟು ಸಮಯ ತಗುಲಲಿದೆ ಎಂಬುದು ತಿಳಿದುಬಂದಿಲ್ಲ.

ವಾಹನ ಸವಾರರೇ ಗಮನಿಸಿ: ಗಗನಕ್ಕೇರಲಿದೆ ಪೆಟ್ರೋಲ್, ಡೀಸೆಲ್ ದರ?

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದರು. ಸೌದಿ ಅರೇಬಿಯಾ ಸಹ ತನ್ನ ಗ್ರಾಹಕರಿಗೆ ರಫ್ತು ಮಾಡುವಷ್ಟು ತೈಲವನ್ನು ತನ್ನ ಬಳಿ ಹೊಂದಿರುವುದಾಗಿ ತಿಳಿಸಿದೆ. ತೈಲ ಉತ್ಪಾದನಾ ಘಟಕಗಳು ಮುಂದಿನ ಕೆಲವು ದಿನಗಳವರೆಗೆ ಬೇಕಾಗಿರುವ ತೈಲವನ್ನು ಹೊಂದಿರುವುದರಿಂದ ತೈಲ ಪೂರೈಕೆಗೆ ತಕ್ಷಣಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ವಾಹನ ಸವಾರರೇ ಗಮನಿಸಿ: ಗಗನಕ್ಕೇರಲಿದೆ ಪೆಟ್ರೋಲ್, ಡೀಸೆಲ್ ದರ?

ಆದರೆ ತೈಲ ಬೆಲೆಯಲ್ಲಿ ಏರಿಕೆಯಾಗುವುದೆಂದು ತೈಲ ಉದ್ಯಮದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸದ್ಯಕ್ಕೆ ತೈಲ ಪೂರೈಕೆಯ ಮೇಲೆ ಯಾವುದೇ ಪ್ರಭಾವ ಉಂಟಾಗುವುದಿಲ್ಲವೆಂದು ಸುರಾನಾರವರು ಹೇಳಿದ್ದಾರೆ. ಸೌದಿ ಅರೇಬಿಯಾದ ಮೇಲಿನ ದಾಳಿಯು ತೈಲ ಪೂರೈಕೆಯ ಮೇಲೆ ಭಾರೀ ಪ್ರಮಾಣದ ಪ್ರಭಾವವನ್ನು ಬೀರುವುದಿಲ್ಲ.

MOST READ: ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ವಾಹನ ಸವಾರರೇ ಗಮನಿಸಿ: ಗಗನಕ್ಕೇರಲಿದೆ ಪೆಟ್ರೋಲ್, ಡೀಸೆಲ್ ದರ?

ಏಕೆಂದರೆ ಸೌದಿ ಅರೇಬಿಯಾ ಈಗ ಪ್ರಪಂಚದ ಅತಿ ದೊಡ್ಡ ತೈಲ ಮಾರುಕಟ್ಟೆಯಾಗಿ ಉಳಿದಿಲ್ಲ. ಅಮೇರಿಕಾ ಹಾಗೂ ರಷ್ಯಾದಂತಹ ದೇಶಗಳೂ ಸಹ ತೈಲ ಸರಬರಾಜು ಮಾಡಲಿವೆ. ಈ ಎರಡೂ ದೇಶಗಳು ತಮ್ಮ ದೇಶದಲ್ಲಿ ಅನೇಕ ತೈಲ ನಿಕ್ಷೇಪಗಳನ್ನು ಹೊಂದಿವೆ. ಭಾರತವೂ ಸಹ ತೈಲ ನಿಕ್ಷೇಪಗಳನ್ನು ಹೊಂದಿದೆ.

MOST READ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ವಾಹನ ಸವಾರರೇ ಗಮನಿಸಿ: ಗಗನಕ್ಕೇರಲಿದೆ ಪೆಟ್ರೋಲ್, ಡೀಸೆಲ್ ದರ?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ನಾವು ಸೌದಿ ಅರೇಬಿಯಾದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಾವು ಸೌದಿ ಅಧಿಕಾರಿಗಳು, ಪ್ರಮುಖ ಉತ್ಪಾದಕ ಕಂಪನಿಗಳು ಹಾಗೂ ಗ್ರಾಹಕ ರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಸದ್ಯಕ್ಕೆ, ಮಾರುಕಟ್ಟೆಗಳಿಗೆ ಬೇಕಾಗುವಷ್ಟು ತೈಲವನ್ನು ಒದಗಿಸಲಾಗಿದೆ ಎಂದು ತಿಳಿಸಿದೆ.

ವಾಹನ ಸವಾರರೇ ಗಮನಿಸಿ: ಗಗನಕ್ಕೇರಲಿದೆ ಪೆಟ್ರೋಲ್, ಡೀಸೆಲ್ ದರ?

ಈ ದಾಳಿಯಿಂದಾಗಿ ಅರಬ್ ರಾಷ್ಟ್ರದಲ್ಲಿ ಉದ್ವಿಗ್ನ ಉಂಟಾಗಿದೆ. ತೈಲ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಯಾವುದೇ ಸಂಕಷ್ಟದ ಪರಿಸ್ಥಿತಿಯಿಲ್ಲದಿದ್ದರೂ, ಹಾನಿಯಾಗಿರುವ ತೈಲ ಘಟಕಗಳನ್ನು ಶೀಘ್ರವಾಗಿ ಸರಿಪಡಿಸದಿದ್ದರೆ, ಪರಿಸ್ಥಿತಿಯು ಹದಗೆಡಲಿದೆ ಎಂದು ಬೈಸನ್ ಇಂಟರೆಸ್ಟ್ಸ್ ಎಲ್ಎಲ್‍‍ಸಿಯ ಸಿಐಒ ಜೋಶ್ ಯಂಗ್ ಹೇಳಿದ್ದಾರೆ.

Most Read Articles

Kannada
English summary
Saudi aramco attack petrol diesel prices likely increase india - Read in kannada
Story first published: Monday, September 16, 2019, 15:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X