ತನ್ನ ತಂದೆಗೆ ಸ್ಕಾರ್ಪಿಯೊ ಗಿಫ್ಟ್ ನೀಡಿದ ಪ್ಯಾರಾಗ್ಲೈಡರ್

ಈ ವರ್ಷದ ಆರಂಭದಲ್ಲಿ ಹಿಮಾಚಲ ಪ್ರದೇಶದ ಪ್ಯಾರಾಗ್ಲೈಡಿಂಗ್ ವಿಡಿಯೋವೊಂದರಲ್ಲಿ ಕಾಣಿಸಿಕೊಂಡ ವಿಪಿನ್ ಪವನ್ ಸಾಹುರವರ ವೀಡಿಯೊ ಸಾಕಷ್ಟು ವೈರಲ್ ಆಗಿತ್ತು. ಈ ವೀಡಿಯೊ ವೈರಲ್ ಆದ ನಂತರ ಸಾಹು ಬೆಳಕಿಗೆ ಬಂದಿದ್ದರು.

ತನ್ನ ತಂದೆಗೆ ಸ್ಕಾರ್ಪಿಯೊ ಗಿಫ್ಟ್ ನೀಡಿದ ಪ್ಯಾರಾಗ್ಲೈಡರ್

ಈಗ ತಮ್ಮ ತಂದೆಗೆ ಹೊಚ್ಚ ಹೊಸ ಮಹೀಂದ್ರಾ ಸ್ಕಾರ್ಪಿಯೋವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರು ತಮ್ಮ ತಂದೆಗೆ ಉಡುಗೊರೆಯನ್ನು ನೀಡುತ್ತಿರುವ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ.

ತನ್ನ ತಂದೆಗೆ ಸ್ಕಾರ್ಪಿಯೊ ಗಿಫ್ಟ್ ನೀಡಿದ ಪ್ಯಾರಾಗ್ಲೈಡರ್

ಸಾಹು ಅವರ ಅಧಿಕೃತ ಖಾತೆಯಿಂದ ಅಪ್‌ಲೋಡ್ ಮಾಡಲಾದ ವೀಡಿಯೊದಲ್ಲಿ ಅವರು ಕ್ಯಾಮೆರಾದೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು. ತಮ್ಮ ತಂದೆಗೆ ಸ್ಕಾರ್ಪಿಯೊವನ್ನು ಉಡುಗೊರೆಯಾಗಿ ನೀಡುತ್ತಿದ್ದು, ಇದೆಲ್ಲಾ ಜನರ ಪ್ರೀತಿಯಿಂದ ಸಾಧ್ಯವಾಗಿದೆ ಎಂದು ಅವರು ಹೇಳುತ್ತಾರೆ.

ತನ್ನ ತಂದೆಗೆ ಸ್ಕಾರ್ಪಿಯೊ ಗಿಫ್ಟ್ ನೀಡಿದ ಪ್ಯಾರಾಗ್ಲೈಡರ್

ಕ್ಯಾಮೆರಾದ ಎದುರು ಹೊಚ್ಚ ಹೊಸ ವಾಹನವನ್ನು ಓಡಿಸಲು ಹಿಂಜರಿಯುವ ಅವರ ತಂದೆ ನಂತರ ಮಹೀಂದ್ರಾ ಸ್ಕಾರ್ಪಿಯೋವನ್ನು ಚಲಾಯಿಸುತ್ತಾರೆ. ವಯಸ್ಸಾದ ತಂದೆ ತಾಯಿಯನ್ನು ಹೇಗೆ ಖುಷಿಯಾಗಿಡ ಬಹುದೆಂಬುದನ್ನು ಈ ಮೂಲಕ ಹೇಳಲಾಗಿದೆ.

ತನ್ನ ತಂದೆಗೆ ಸ್ಕಾರ್ಪಿಯೊ ಗಿಫ್ಟ್ ನೀಡಿದ ಪ್ಯಾರಾಗ್ಲೈಡರ್

ವಿಪಿನ್ ಸಾಹುರವರು ಉತ್ತರ ಪ್ರದೇಶದ ಬಾಂದಾದಲ್ಲಿರುವ ಟೈಲ್ ಶೋರೂಂ ಮಾಲೀಕರಾಗಿದ್ದಾರೆ. ಸ್ಕಾರ್ಪಿಯೋ ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ವರ್ಷಗಳಿಂದಲೂ ಇದ್ದು, ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯವಾಗಿದೆ.

ತನ್ನ ತಂದೆಗೆ ಸ್ಕಾರ್ಪಿಯೊ ಗಿಫ್ಟ್ ನೀಡಿದ ಪ್ಯಾರಾಗ್ಲೈಡರ್

ಮಹೀಂದ್ರಾ ಸ್ಕಾರ್ಪಿಯೋ ತನ್ನ ಮಸ್ಕ್ಯುಲರ್ ಲುಕ್ ಹಾಗೂ ನಿರ್ಮಾಣ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಸ್ಕಾರ್ಪಿಯೊ ತನ್ನ ಸೆಗ್‍‍ಮೆಂಟಿನಲ್ಲಿ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. 2ನೇ ಹಾಗೂ 3ನೇ ಹಂತದ ನಗರಗಳಲ್ಲಿರುವ ಬಹು ಜನರ ಮೊದಲ ಆಯ್ಕೆಯಾಗಿ ಉಳಿದಿದೆ.

ತನ್ನ ತಂದೆಗೆ ಸ್ಕಾರ್ಪಿಯೊ ಗಿಫ್ಟ್ ನೀಡಿದ ಪ್ಯಾರಾಗ್ಲೈಡರ್

ಮಹೀಂದ್ರಾ ಸ್ಕಾರ್ಪಿಯೋದಲ್ಲಿರುವ ಲ್ಯಾಡರ್ ಫ್ರೇಮ್ ಚಾಸಿಸ್ ಒರಟು ರಸ್ತೆಗಳಿಗೆ ಹೇಳಿ ಮಾಡಿಸಿದಂತಿದೆ. ಮಹೀಂದ್ರಾ ಸ್ಕಾರ್ಪಿಯೋದಲ್ಲಿರುವ ಸರಳವಾದ ಮೆಕಾನಿಕಲ್ ಅಂಶವು ಅದನ್ನು ಸುಲಭವಾಗಿ ಸರಿಪಡಿಸುವಂತೆ ಮಾಡುತ್ತದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ತನ್ನ ತಂದೆಗೆ ಸ್ಕಾರ್ಪಿಯೊ ಗಿಫ್ಟ್ ನೀಡಿದ ಪ್ಯಾರಾಗ್ಲೈಡರ್

ಮಹೀಂದ್ರಾ ಸ್ಕಾರ್ಪಿಯೋವನ್ನು ರಸ್ತೆಬದಿಯ ಮೆಕ್ಯಾನಿಕ್ ಸಹ ರಿಪೇರಿ ಮಾಡಬಹುದಾದಷ್ಟು ಸರಳವಾಗಿದೆ. ಸ್ಕಾರ್ಪಿಯೊ ಎಲ್ಲಾ ಕಾಲಕ್ಕೂ ವಾಹನ ಅಗತ್ಯವಿರುವ ಗ್ರಾಹಕರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಮಹೀಂದ್ರಾ ಕಂಪನಿಯು ಸದ್ಯಕ್ಕೆ ತನ್ನ ಹೊಸ ಸ್ಕಾರ್ಪಿಯೋವನ್ನು ಅಭಿವೃದ್ಧಿಪಡಿಸುತ್ತಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ತನ್ನ ತಂದೆಗೆ ಸ್ಕಾರ್ಪಿಯೊ ಗಿಫ್ಟ್ ನೀಡಿದ ಪ್ಯಾರಾಗ್ಲೈಡರ್

ಈ ಹೊಸ ವಾಹನವನ್ನು ಹಲವು ದಿನಗಳಿಂದ ಸ್ಪಾಟ್ ಟೆಸ್ಟ್ ಮಾಡುತ್ತಿದೆ. ಹೊಸ ಸ್ಕಾರ್ಪಿಯೋ ಮಾರುಕಟ್ಟೆಯಲ್ಲಿರುವ ಮಾದರಿಗಿಂತ ಭಿನ್ನವಾಗಿ ಕಾಣುತ್ತದೆ. ಹೊಸ ಸ್ಕಾರ್ಪಿಯೋ ಪ್ರಸ್ತುತ ಆವೃತ್ತಿಗಿಂತ ಹೆಚ್ಚು ದೊಡ್ಡದಾಗಿದ್ದು, ವಿಭಿನ್ನವಾಗಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ತನ್ನ ತಂದೆಗೆ ಸ್ಕಾರ್ಪಿಯೊ ಗಿಫ್ಟ್ ನೀಡಿದ ಪ್ಯಾರಾಗ್ಲೈಡರ್

ಸೋರಿಕೆಯಾಗಿದ್ದ ಸ್ಪೈ ಚಿತ್ರಗಳು ಹೊಸ ಸ್ಕಾರ್ಪಿಯೊ ಟಾಟಾ ಹ್ಯಾರಿಯರ್‌ನಷ್ಟು ದೊಡ್ಡದಾಗಿದೆ ಎಂದು ತೋರಿಸುತ್ತವೆ. ಇದರಿಂದಾಗಿ ಸ್ಕಾರ್ಪಿಯೊ ಈ ಸೆಗ್‍‍ಮೆಂಟಿನಲ್ಲಿ ಮೇಲಿನ ಸ್ಥಾನದಲ್ಲಿರಲಿದ್ದು, ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ.

ಹೊಸ ಸ್ಕಾರ್ಪಿಯೋವು ಹೊಸ 2.0 ಲೀಟರಿನ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ ಅನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ವಾಹನಗಳಲ್ಲಿ ಅಳವಡಿಸಲಾಗುವುದು.

ಹೊಸ ಡೀಸೆಲ್ ಎಂಜಿನ್ ಬಿಎಸ್ 6 ಆಗಿರಲಿದೆ. ಮಾರುಕಟ್ಟೆಯಲ್ಲಿರುವ 2.2 ಲೀಟರಿನ ಎಂಹಾಕ್ ಎಂಜಿನ್‍‍ಗಿಂತ ಹೆಚ್ಚು ಬಲಶಾಲಿಯಾಗಿರಲಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಖರೀದಿದಾರರನ್ನು ಆಕರ್ಷಿಸಲು ಹೊಸ ಸ್ಕಾರ್ಪಿಯೊದಲ್ಲಿ ಹೊಸ ಫೀಚರ್‍‍ಗಳನ್ನು ಅಳವಡಿಸುವ ನಿರೀಕ್ಷೆಗಳಿವೆ.

ತನ್ನ ತಂದೆಗೆ ಸ್ಕಾರ್ಪಿಯೊ ಗಿಫ್ಟ್ ನೀಡಿದ ಪ್ಯಾರಾಗ್ಲೈಡರ್

2020ರ ಫೆಬ್ರವರಿಯಲ್ಲಿ ನಡೆಯಲಿರುವ 2020ರ ಆಟೋ ಎಕ್ಸ್‌ಪೋದಲ್ಲಿ ಮಹೀಂದ್ರಾ ಹೊಸ ಸ್ಕಾರ್ಪಿಯೋ ಉತ್ಪಾದನಾ ಆವೃತ್ತಿಯನ್ನು ಪ್ರದರ್ಶಿಸುವ ನಿರೀಕ್ಷೆಗಳಿವೆ.

Most Read Articles

Kannada
English summary
Scared paragliding man buys dad mahindra scorpio - Read in Kannada
Story first published: Thursday, November 21, 2019, 10:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X